ಬಡ್ಡಿ ನೀಡುವಂತೆ ಕಿರುಕುಳ; ದೂರು ನೀಡಿದರೆ ಕ್ರಮ: ಡಿಸಿಪಿ ಹನುಮಂತರಾಯ


Team Udayavani, Jul 14, 2018, 2:05 AM IST

phone-mlore-13-7.jpg

ಮಹಾನಗರ: ಬಡ್ಡಿಗೆ ಹಣ ನೀಡಿ ದುಬಾರಿ ಬಡ್ಡಿ ನೀಡುವಂತೆ ಕಿರುಕುಳ ನೀಡುವವರ ವಿರುದ್ಧ ಸಾರ್ವಜನಿಕರು ದೂರು ನೀಡಿದ್ದಲ್ಲಿ ಸೂಕ್ತ ಕ್ರಮ ಜರಗಿಸಲಾಗುವುದು ಎಂದು ಡಿಸಿಪಿ ಹನುಮಂತರಾಯ ಹೇಳಿದ್ದಾರೆ. ಮಂಗಳೂರು ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಶುಕ್ರವಾರ ನಡೆದ 83ನೇ ಪೊಲೀಸ್‌ ಫೋನ್‌ ಇನ್‌ ಕಾರ್ಯ ಕ್ರಮದಲ್ಲಿ ಮಹಿಳೆಯೊಬ್ಬರ ಸಮಸ್ಯೆಗೆ ಸ್ಪಂದಿಸಿ, ಅವರು ಭರವಸೆ ನೀಡಿದರು. ಅನಿವಾರ್ಯ ಸಂದರ್ಭ ಬಡ್ಡಿಗಾಗಿ ಹಣ ತೆಗೆದುಕೊಂಡಿದ್ದೆವು. ಈಗ ಬಡ್ಡಿ ಕಟ್ಟಿ ಸಾಕಾಗಿದೆ. ಬಡ್ಡಿ ಕಟ್ಟಲು ಸಾಧ್ಯವಾಗದಿದ್ದ ವೇಳೆ ಮಾನಸಿಕ ಕಿರುಕುಳ ನೀಡುತ್ತಾರೆ. ಅವರ ವಿರುದ್ಧ ದೂರು ನೀಡಲು ಭಯವಾಗುತ್ತದೆ ಎಂದು ಮಹಿಳೆಯೊಬ್ಬರು ತಮ್ಮ ನೋವನ್ನು ಹಂಚಿಕೊಂಡರು. ಇದಕ್ಕೆ ಸ್ಪಂದಿಸಿದ ಡಿಸಿಪಿ, ನೀವು ನೇರವಾಗಿ ಕಚೇರಿಗೆ ಬಂದು ಮಾಹಿತಿ ನೀಡಿ. ಬಳಿಕ ನಾವು ಕ್ರಮ ಜರಗಿಸುತ್ತೇವೆ ಎಂದರು.

ನೋ ಪಾರ್ಕಿಂಗ್‌ ಫಲಕ ಮಾಯ
ಕೊಟ್ಟಾರಚೌಕಿ ಸರ್ವೀಸ್‌ ರಸ್ತೆಯಲ್ಲಿ ನೋ ಪಾರ್ಕಿಂಗ್‌ ಫ‌ಲಕ ಕಾಣುತ್ತಿಲ್ಲ. ಹಾಗಾಗಿ ರಸ್ತೆ ಬದಿಯಲ್ಲಿ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಇದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಕೊಟ್ಟಾರ ಚೌಕಿ ಬಸ್‌ ಬೇನಲ್ಲಿ ಲಾರಿ ಪಾರ್ಕಿಂಗ್‌ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರೊಬ್ಬರು ದೂರಿದರು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಡಿಸಿಪಿ ಭರವಸೆ ನೀಡಿದರು.

ರಾ.ಹೆದ್ದಾರಿ ಬ್ಲಾಕ್‌
ತೊಕ್ಕೊಟ್ಟು ಮತ್ತು ಬೈಕಂಪಾಡಿ ಬಳಿ ಹಾಲ್‌ ಗ‌ಳಲ್ಲಿ ಸಮಾರಂಭ ಇರುವಾಗ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ದಟ್ಟಣೆ ಉಂಟಾಗುತ್ತಿದೆ. ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರೊಬ್ಬರು ತಿಳಿಸಿದರು. ಹಾಲ್‌ನ ಆವರಣದಲ್ಲೇ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲು ಮಾಲಕರಿಗೆ ಸೂಚಿಸಲಾಗುವುದು ಎಂದು ಡಿಸಿಪಿ ಹೇಳಿದರು. ಕಾಟಿಪಳ್ಳ ಕೈಕಂಬ ಬಳಿ ನೆರೆ ಮನೆಯ ಸೇಫ್ಟಿ ಟ್ಯಾಂಕ್‌ ತುಂಬಿ ಹರಿದು ಮನೆಯ ಆವರಣಕ್ಕೆ ಬರುತ್ತಿದೆ. ನಾಲ್ಕು ವರ್ಷಗಳಿಂದ ಸಮಸ್ಯೆ ಅನುಭವಿಸುತ್ತಿದ್ದೇವೆ ಎಂದು ಮಹಿಳೆಯೊಬ್ಬರು ದೂರಿದರು. ಈ ಬಗ್ಗೆ ಮನಪಾ ಆಯುಕ್ತರನ್ನು ಭೇಟಿ ಮಾಡಿ ದೂರು ನೀಡಲು ಡಿಸಿಪಿ ಸೂಚಿಸಿದರು.

ಕಟೀಲಿಗೆ ನರ್ಮ್ ಬಸ್‌ ಬೇಕು
ಮಂಗಳೂರು- ಕಟೀಲು ಬಸ್‌ನವರು ಟಿಕೆಟ್‌ ನೀಡುತ್ತಿಲ್ಲ. ಕಟೀಲಿಗೆ ನರ್ಮ್ ಬಸ್‌ ವ್ಯವಸ್ಥೆ ಕಲ್ಪಿಸಬೇಕು ಎಂದು ಸಾರ್ವಜನಿಕರೊಬ್ಬರು ತಿಳಿಸಿದರು. ಡಿಸಿಪಿ ಉಮಾ ಪ್ರಶಾಂತ್‌, ಇನ್‌ಸ್ಪೆಕ್ಟರ್‌ಗಳಾದ ಅಮಾನುಲ್ಲಾ, ಕುಮಾರಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

ಇತರ ದೂರುಗಳು
– ಬಿಜೈ ಭಾರತ್‌ ಮಾಲ್‌, ಮನಪಾ ಕಚೇರಿ ಎದುರು ನೀರು ನಿಲ್ಲುತ್ತಿದೆ.

– ಸೈಂಟ್‌ ಆ್ಯನ್ಸ್‌  ಕಾಲೇಜು ಬಳಿ ಹುಡುಗರು ಹೆಲ್ಮೆಟ್‌ ಹಾಕದೆ ವೇಗವಾಗಿ ಬೈಕ್‌ ಚಲಾಯಿಸುತ್ತಿದ್ದಾರೆ.

– ಕೈಕಂಬ ಪೊಂಪೈ ಶಾಲಾ ವಾಹನದವರು ಮಗುವನ್ನು ರಸ್ತೆ ದಾಟಿಸಿ ಮನೆ ತನಕ ಕರೆ ತರದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ.

– ಕಾವೂರಿನಲ್ಲಿ ನೆರೆ ಮನೆಯವರ ತೆಂಗಿನ ಮರ ತನ್ನ ಮನೆಗೆ ವಾಲಿ ನಿಂತಿದೆ ಎಂದು ವ್ಯಕ್ತಿಯೊಬ್ಬರು ದೂರಿದ್ದಾರೆ.

– ಮೂಡುಬಿದಿರೆ ಪ್ರಾರ್ಥನ ಮಂದಿರದ ಬಳಿ ವಾಹನ ಪಾರ್ಕಿಂಗ್‌ ನಿಂದ ಸಮಸ್ಯೆಯಾಗುತ್ತಿದೆ.

– ಬಂಟ್ಸ್‌ ಹಾಸ್ಟೆಲ್‌ ಬಳಿ ರಸ್ತೆ ದಾಟಲು ತೊಂದರೆಯಾಗುತ್ತಿದೆ.

ಟಾಪ್ ನ್ಯೂಸ್

Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹತ್ಯೆ

Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ

Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್‌ ಸೃಷ್ಟಿ!

Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್‌ ಸೃಷ್ಟಿ!

Canada-India: ಕಾನ್ಸುಲರ್‌ ಕ್ಯಾಂಪ್‌ ರದ್ದು; ಕೆನಡಾಗೆ ಭಾರತ ತಿರುಗೇಟು

Canada-India: ಕಾನ್ಸುಲರ್‌ ಕ್ಯಾಂಪ್‌ ರದ್ದು; ಕೆನಡಾಗೆ ಭಾರತ ತಿರುಗೇಟು

Price-Hike

Electricity Price: ರಾಜ್ಯದ ಜನತೆಗೆ ಈ ಬಾರಿಯೂ ವಿದ್ಯುತ್‌ ದರ ಏರಿಕೆ ಶಾಕ್‌?

JPC-Pal–BJP

Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್‌ ರಾಜ್ಯ ಭೇಟಿ: ಕಾಂಗ್ರೆಸ್‌ ಕೆಂಡ

School-Chikki

Injustice: ಮೊಟ್ಟೆ ಕೇಳಿದ ಶಾಲಾ ವಿದ್ಯಾರ್ಥಿಗಳಿಗೆ ಸಿಕ್ಕಿದ್ದು ಚಿಕ್ಕ ಚಿಕ್ಕಿ!

Rangavaibhava

Golden Jubliee: ಕರುನಾಡ ರಂಗವೈಭವ ಮತ್ತೆ ಮರಳಿ ತರಬೇಕಿದೆ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2

Mangaluru: ತಾಯಿ-ಮಗಳು ನಾಪತ್ತೆ

1

Mangalore: ವಂಚನೆ ಪ್ರಕರಣದಲ್ಲಿ ಭಾಗಿ ಆರೋಪಿಸಿ 30.65 ಲಕ್ಷ ರೂ. ಹಣ ವರ್ಗಾಯಿಸಿ ವಂಚನೆ

arest

Mangaluru: ಮಾದಕ ವಸ್ತು ಗಾಂಜಾ ಸೇವನೆ ಪ್ರತ್ಯೇಕ ಪ್ರಕರಣದಲ್ಲಿ ಮೂವರು ವಶಕ್ಕೆ

12

Mangaluru: ಅಕ್ರಮ ಮರಳುಗಾರಿಕೆ; ದೋಣಿಗಳು ವಶಕ್ಕೆ

15

Kinnigoli-ಹೊಸಕಾವೇರಿ: ಆಟೋರಿಕ್ಷಾ-ಲಾರಿ ಢಿಕ್ಕಿ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹತ್ಯೆ

Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ

Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್‌ ಸೃಷ್ಟಿ!

Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್‌ ಸೃಷ್ಟಿ!

Canada-India: ಕಾನ್ಸುಲರ್‌ ಕ್ಯಾಂಪ್‌ ರದ್ದು; ಕೆನಡಾಗೆ ಭಾರತ ತಿರುಗೇಟು

Canada-India: ಕಾನ್ಸುಲರ್‌ ಕ್ಯಾಂಪ್‌ ರದ್ದು; ಕೆನಡಾಗೆ ಭಾರತ ತಿರುಗೇಟು

Price-Hike

Electricity Price: ರಾಜ್ಯದ ಜನತೆಗೆ ಈ ಬಾರಿಯೂ ವಿದ್ಯುತ್‌ ದರ ಏರಿಕೆ ಶಾಕ್‌?

JPC-Pal–BJP

Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್‌ ರಾಜ್ಯ ಭೇಟಿ: ಕಾಂಗ್ರೆಸ್‌ ಕೆಂಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.