ಛಾಯಾಗ್ರಾಹಕ “ಸುಬ್ಬು ಮೂಡುಬಿದಿರೆ’ ನಿಧನ
Team Udayavani, Jul 26, 2023, 11:30 PM IST
ಮೂಡುಬಿದಿರೆ: ಸುಷ್ಮಾ ಸ್ಟುಡಿಯೋ ವೀಡಿಯೋ ಮಾಲಕ ಸುಬ್ರಹ್ಮಣ್ಯ ಯಾನೆ ಸುಬ್ಬು (55) ಜು. 26ರಂದು ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಹನ್ನೊಂದರ ಬಾಲಕನಾಗಿರುವಾಗಲೇ “ಪದ್ಮಶ್ರೀ ಸ್ಟುಡಿಯೋ’ದಲ್ಲಿ ಅರವಿಂದ ಕುಮಾರ್ ಅವರ ಶಿಷ್ಯರಾಗಿ, ಬಳಿಕ “ನವ್ಯ ಸ್ಟುಡಿಯೋ’ದ ಪಾಲುದಾರರಾಗಿ, 16 ವರ್ಷಗಳಿಂದ ತಮ್ಮದೇ ಆದ “ಸುಷ್ಮಾ ಸ್ಟುಡಿಯೋ’ ನಡೆಸತೊಡಗಿದ್ದ ಅವರು “ಸುಬ್ಬು ಮೂಡುಬಿದಿರೆ’ ಎಂದೇ ಪರಿಚಿತರು.
ಪತ್ರಿಕೆಗಳಿಗೆ ಹವ್ಯಾಸಿ ಛಾಯಾಚಿತ್ರಗ್ರಾಹಕರಾಗಿ, ಸಚಿತ್ರ ಕಥೆಗಳಿಗೆ ಹೊಂದುವ ಮಾಡೆಲ್ ಚಿತ್ರಗಳನ್ನು ಒದಗಿಸುತ್ತಿದ್ದ ಸುಬ್ಬು, ಓರ್ವ ಹವ್ಯಾಸಿ ರಂಗ ಕಲಾವಿದರೂ ಆಗಿದ್ದರು. ಎರಡೂವರೆ ದಶಕಗಳ ಹಿಂದೆ ಮೂಡುಬಿದಿರೆಯಲ್ಲಿ ಮೊದಲ ಕೇಬಲ್ ಟೀವಿ ಸುದ್ದಿಜಾಲ ಆಡ್ಲಾ ನ್ಯೂಸ್ ಆರಂಭವಾದಾಗ ಛಾಯಾಚಿತ್ರಗ್ರಾಹಕರಾಗಿ ಕರ್ತವ್ಯ ನಿರ್ವಹಿಸಿದ್ದರು.
ಬನ್ನಂಜೆ ಉಪನ್ಯಾಸ ರೆಕಾರ್ಡಿಂಗ್
“ಈ ಟೀವಿ’ಯಲ್ಲಿ ಬನ್ನಂಜೆ ಗೋವಿಂದಾಚಾರ್ಯರ ಸುಪ್ರಭಾತ ಕಾರ್ಯಕ್ರಮಕ್ಕಾಗಿ ನಿರಂತರ ಐದು ವರ್ಷಗಳ ಅವಧಿಗೆ ಬನ್ನಂಜೆಯವರ ನಿವಾಸದಲ್ಲಿ ತಾವೊಬ್ಬರೇ ಪ್ರವಚನಗಳ ರೆಕಾರ್ಡಿಂಗ್ ಅನ್ನು ನಡೆಸಿದ್ದರು.
ಅವರ ನಿಧನಕ್ಕೆ ದ.ಕ. ಜಿಲ್ಲಾ ಕಾರ್ಯನಿರತ ಛಾಯಾಚಿತ್ರಗ್ರಾಹಕರ ಸಂಘದ ಅಧ್ಯಕ್ಷ ರಾಜೇಶ್ ಶಾನುಭಾಗ್ ಮತ್ತಿತರ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.