“ಪಿಲಿಬೈಲ್ ಯಮುನಕ್ಕ’ ದಾಖಲೆ 50ನೇ ದಿನದ ಸಂಭ್ರಮ
Team Udayavani, Jan 27, 2017, 8:26 AM IST
ಮಂಗಳೂರು: ಗಳಿಕೆಯಲ್ಲಿ ಕೋಸ್ಟಲ್ವುಡ್ನ ಎಲ್ಲ ದಾಖಲೆಗಳನ್ನು ಮುರಿದು ಮುನ್ನುಗ್ಗುತ್ತಿರುವ ತುಳುಚಿತ್ರ “ಪಿಲಿಬೈಲ್ ಯಮುನಕ್ಕ’ ಪ್ರಸ್ತುತ 50ನೇ ದಿನದ ಸಂಭ್ರಮದಲ್ಲಿದೆ. ತುಳುನಾಡು ಸೇರಿದಂತೆ ದೂರದ ಮುಂಬಯಿಯಲ್ಲೂ ಅಬ್ಬರ ಸೃಷ್ಟಿಸಿದ್ದ ಚಿತ್ರ ಮುಂದಿನ ತಿಂಗಳು ಗಲ್ಫ್ ರಾಷ್ಟ್ರಗಳಲ್ಲಿ ತೆರೆಗೆ ಬರಲಿದೆ.
ಕಿಶೋರ್ ಡಿ. ಶೆಟ್ಟಿ ಮಾಲಕತ್ವದ ಲಕುಮಿ ಸಿನಿ ಕ್ರಿಯೇಷನ್ ಬ್ಯಾನರ್ನಡಿ ಸಿದ್ಧಗೊಂಡ ಈ ಚಿತ್ರ ದ.ಕ. ಹಾಗೂ ಉಡುಪಿಯಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಮುಂಬಯಿಯಲ್ಲಿ ಈ ತನಕ ತೆರೆಕಂಡ ಎಲ್ಲ 15 ಪ್ರದರ್ಶನಗಳು ಹೌಸ್ಫುಲ್ ಆಗಿದ್ದವು. ಚಿತ್ರ 50 ದಿನಗಳಲ್ಲಿ 2.5 ಕೋ.ರೂ. ಗಳಿಸಿದೆ ಎಂದು ನಿರ್ಮಾಪಕ ರೋಹನ್ ಶೆಟ್ಟಿ ತಿಳಿಸಿದ್ದಾರೆ.
ಪ್ರಸ್ತುತ ಸಕಲೇಶಪುರ, ಮೂಡಿಗೆರೆ, ಕೊಪ್ಪ, ಮಡಿಕೇರಿಯಲ್ಲೂ ತೆರೆಕಂಡಿದೆ. ಫೆಬ್ರವರಿಯಲ್ಲಿ ಬೆಂಗಳೂರು ಹಾಗೂ ಮೈಸೂರಿನಲ್ಲಿ ತೆರೆಗೆ ಬರಲಿದೆ. ಫೆ. 24ರಂದು ಇಸ್ರೇಲ್ನಲ್ಲಿ ಬಿಡುಗಡೆಗೊಳ್ಳುತ್ತಿದ್ದು, ಬಳಿಕ ದುಬಾೖ, ಬಹ್ರೈನ್, ಕುವೈಟ್, ಮಸ್ಕತ್, ಕತಾರ್ ಮೊದಲಾದೆಡೆ ಬಿಡುಗಡೆಗೊಳ್ಳಲಿದೆ. ಎಪ್ರಿಲ್ನಲ್ಲಿ ಆಸ್ಟ್ರೇಲಿಯಾ, ಯುಕೆ ಹಾಗೂ ಯುಎಸ್ಎಯಲ್ಲೂ ತೆರೆ ಕಾಣಲಿದೆ.
ಮುಕ್ತ ಫಿಲ್ಮ್ ಅವಾರ್ಡ್
ಮಲ್ಪೆಯಲ್ಲಿ ನಡೆಯುವ ಮುಕ್ತ ಫಿಲ್ಮ್ ಅವಾರ್ಡ್ನ 21 ವಿಭಾಗಗಳಲ್ಲಿ 12ರಲ್ಲಿ ಆಯ್ಕೆಯಾಗಿದ್ದು, ಇದರಲ್ಲಿ ಬಹುತೇಕ ಅವಾರ್ಡ್ಗಳನ್ನು ಪಿಲಿಬೈಲ್ ಯಮುನಕ್ಕ ತನ್ನದಾಗಿಸಿಕೊಳ್ಳುವ ಸಾಧ್ಯತೆ ಇದೆ. ಈ ಚಿತ್ರದ ಯಶಸ್ಸಿನ ಬಳಿಕ ಮುಂದೆ ಇದೇ ತಂಡದಿಂದ “ಎಕ್ಕಸಕ-2′, “ಮೈ ನೇಮ್ ಈಸ್ ಅಣ್ಣಪ್ಪ’, “ಇಂಗ್ಲಿಷ್’ ತುಳುಚಿತ್ರಗಳನ್ನು ನಿರ್ಮಾಣ ಮಾಡಲಾಗುವುದು ಎಂದು ನಿರ್ಮಾಪಕರು ತಿಳಿಸಿದ್ದಾರೆ.
ಯುವ ಭಾಗವತ ಪಟ್ಲ ಸತೀಶ್ ಶೆಟ್ಟಿ ಸಹಿತ ಬಾಲಿವುಡ್ನ ಜನಪ್ರಿಯ ಗಾಯಕರು ಚಿತ್ರದ ಹಾಡುಗಳನ್ನು ಹಾಡಿದ್ದು, ಚಿತ್ರದ ಮೆರುಗು ಹೆಚ್ಚಿಸಿದೆ. ಕೆ. ಸೂರಜ್ ಶೆಟ್ಟಿ ನಿರ್ದೇಶನದ ಜವಾಬ್ದಾರಿ ನಿರ್ವಹಿಸಿದ್ದಾರೆ. ಹರೀಶ್ ರಾವ್ ಮತ್ತು ಸಂದೇಶ್ರಾಜ್ ಬಂಗೇರ ಸಹನಿರ್ಮಾಪಕರಾಗಿ ದುಡಿದಿದ್ದು, ಕಿಶೋರ್ ಕುಮಾರ್ ಶೆಟ್ಟಿ ಸಂಗೀತ ಒದಗಿಸಿದ್ದಾರೆ. ಸಾಹಿತ್ಯ ಹಾಗೂ ಸಹ ನಿರ್ದೇಶನದ ಜವಾಬ್ದಾರಿಯನ್ನು ಮಯೂರ್ ಆರ್. ಶೆಟ್ಟಿ ನಿರ್ವಹಿಸಿದ್ದಾರೆ. ಕೀರ್ತನ್ ಪೂಜಾರಿ ಕೆಮರಾದಲ್ಲಿ ಸಹಕರಿಸಿದ್ದಾರೆ.
ಯಮುನಕ್ಕನ ಪಾತ್ರದಲ್ಲಿ ಕಿರುತೆರೆ ಖ್ಯಾತಿಯ ಚಂದ್ರಕಲಾ ಮೋಹನ್ ಕಾಣಿಸಿಕೊಂಡಿದ್ದು, ನಾಯಕನಾಗಿ ಪೃಥ್ವಿ ಅಂಬರ್ ಹಾಗೂ ನಾಯಕಿಯಾಗಿ ಸೋನಾಲ್ ಮೊಂತೆರೊ ಅಭಿನಯಿಸಿದ್ದಾರೆ. ನವೀನ್ ಡಿ.ಪಡೀಲ್, ಅರವಿಂದ ಬೋಳಾರ, ಭೋಜರಾಜ್ ವಾಮಂಜೂರು, ಮಂಜು ರೈ ಮೂಳೂರು, ವಿಸ್ಮಯ ವಿನಾಯಕ್, ಉಮೇಶ್ ಮಿಜಾರ್, ದೀಪಕ್ ರೈ, ಮೋಹನ್ ಕೊಪ್ಪಲ ತಾರಾಗಣದಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.