ತುಳುನಾಡೋಚ್ಚಯಕ್ಕೆ ಪಿಲಿಕುಳ ಸಂಸ್ಕೃತಿ ಗ್ರಾಮ ಸಿದ್ಧ 


Team Udayavani, Dec 21, 2017, 9:50 AM IST

21-Dec-2.jpg

ಮಹಾನಗರ : ಸಾಂಪ್ರದಾಯಿಕ, ಸಾಂಸ್ಕೃತಿಕ ಆಚರಣೆಗಳನ್ನು ತಿಳಿಸಿಕೊಡುವುದ ರೊಂದಿಗೆ ಜನಮೈತ್ರಿ ಬೆಸುಗೆ, ಈಗಷ್ಟೇ ರಂಗೇರು ತ್ತಿರುವ ಕೋಸ್ಟಲ್‌ವುಡ್‌ ಸಿನೆಮಾ ಹಬ್ಬಕ್ಕೆ ವೇದಿಕೆ, ತುಳು ನೆಲದ ಶ್ರೀಮಂತಿಕೆ ಸಾರಲು ಭರದ ಸಿದ್ಧತೆ… ಇದು ಡಿ. 23, 24ರಂದು ಪಿಲಿಕುಳದಲ್ಲಿ ನಡೆಯುವ ತುಳುನಾಡೋಚ್ಚಯದ ಹೈಲೈಟ್ಸ್‌.

 ವಿಶ್ವ ತುಳುವೆರೆ ಆಯನೊ ಕೂಟ ಹಾಗೂ ಡಾ| ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಕಾರ್ಯಕ್ರಮ ಜರಗಲಿದೆ. ‘ಕರಾವಳಿ ಜಿಲ್ಲೆಗಳ ಪರಿಸ್ಥಿತಿಯಲ್ಲಿ ಭಾವೈಕ್ಯವನ್ನುಂಟು ಮಾಡುವುದು ಮತ್ತು ತುಳು ಭಾಷಾ ಸಂಸ್ಕೃತಿಯನ್ನು ಬಲಪಡಿಸುವುದು ಕಾರ್ಯಕ್ರಮದ ಉದ್ದೇಶ’ ಎಂದು ತುಳುನಾಡೋಚ್ಚಯ ಗುರ್ಕಾರ ಡೇವಿಡ್‌ ಫ್ರಾಂಕ್‌ ಫೆರ್ನಾಂಡಿಸ್‌ ತಿಳಿಸಿದ್ದಾರೆ.

23ರಂದು ಬೆಳಗ್ಗೆ 9 ಗಂಟೆಗೆ ಧ್ವಜಾರೋಹಣ, ಅನಂತರ ತುಳುನಾಡಿನ ಸಂಸ್ಕೃತಿ, ಸಂಪ್ರದಾಯವನ್ನು ಬಿಂಬಿಸುವ ಆಹಾರೋತ್ಸವ, ವಸ್ತು ಪ್ರದರ್ಶನ, ಕುಲ ಕಸುಬು, ಪುಸ್ತಕ, ಸಂಸ್ಕೃತಿ, ವ್ಯಾಪಾರ ಮಳಿಗೆ, ಚಿತ್ರ, ಛಾಯಾಚಿತ್ರ, ನಾಡಮದ್ದು, ಯಂತ್ರೋಪಕರಣ, ಪುಷ್ಪೋದ್ಯಾನಗಳ ಪ್ರದರ್ಶನವಿರುತ್ತದೆ. 

ತುಳುನಾಡ ಜನಮೈತ್ರಿ ಜನಪದ ಸಿರಿ
ವಾಮಂಜೂರಿನಿಂದ ಪಿಲಿಕುಳದವರೆಗೆ ಬೆಳಗ್ಗೆ 10ಕ್ಕೆ ವಿವಿಧ ಸಮುದಾಯದ ಸಂಸ್ಕೃತಿ, ಉಡುಗೆ-ತೊಡುಗೆ ಪ್ರದರ್ಶನ, ಜನಪದ ಕುಣಿತ, ತುಳುನಾಡಿನ ವಾದ್ಯೋಪಕರಣಗಳ ವಾದನ, ಸ್ತಬ್ಧಚಿತ್ರ, ಗೊಂಬೆಯಾಟ, ಸಿಂಗಾರಿಮೇಳ, ಚೆಂಡೆಮೇಳ, ಪೂಕಾವಡಿ, ಪಂಚವಾದ್ಯಮೇಳ, ನಾನಾ ರಾಜ್ಯಗಳ ಜನಪದ ಪ್ರದರ್ಶನದೊಂದಿಗೆ ತುಳುನಾಡ ಜನಮೈತ್ರಿ ಜನಪದ ಸಿರಿ ಮೆರವಣಿಗೆ ನಡೆಯಲಿದೆ.

ದೇಶ-ವಿದೇಶದ ತುಳುವರನ್ನು ಒಂದೇ ವೇದಿಕೆಗೆ ತರುವ ‘ತುಳುವರ ಮಿನದನ’ವಿದೆ. ‘ದ್ರಾವಿಡೋತ್ಸವ’ದಲ್ಲಿ ತುಳು, ಕನ್ನಡ, ಮಲಯಾಳ, ತಮಿಳು, ತೆಲುಗು ಭಾಷೆಗಳ ಜನಪದ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಬಳಿಕ ಸುಮನಸ ಕೊಡವೂರು ತಂಡದಿಂದ ‘ಕೋಟಿಚೆನ್ನಯೆ’ ತುಳು ನಾಟಕ ಪ್ರದರ್ಶನಗೊಳ್ಳಲಿದೆ.

ಎಸಳ್‌ದ ತಾಮರೆ..
24ರಂದು ದೈವಾರಾಧನೆಯನ್ನು ಪರಿಚಯಿಸುವ ‘ದೈವಾರಾಧಕೆರೆ ಕೂಟ’ ಕಾರ್ಯಕ್ರಮವಿದೆ. ಅನಂತರ ತುಳುಭಾಷಾ ಪ್ರಾದೇಶಿಕ ವೈವಿಧ್ಯಗಳ ಬಗ್ಗೆ ‘ಎಸಳ್‌ದ ತಾಮರೆ’ ವಿಚಾರಗೋಷ್ಠಿಯಿದೆ. ಕುಂದಾಪುರ, ಶಿವಳ್ಳಿ, ಉಡುಪಿ, ಮೂಡಬಿದಿರೆ, ಬೆಳ್ತಂಗಡಿ, ಮಂಗಳೂರು, ಬಂಟ್ವಾಳ, ಸುಳ್ಯ, ಮಡಿಕೇರಿ, ಮಹಾರಾಷ್ಟ್ರ, ಕಾಸರಗೋಡು ಭಾಗಗಳಲ್ಲಿ ತಾವರೆಯ ಎಸಳಿನಂತೆ ಅರಳಿರುವ ತುಳು ಭಾಷೆಯ ಬಗ್ಗೆ ವಿಚಾರ ವಿಮರ್ಶೆ ನಡೆಯುತ್ತದೆ.

8ನೇ ಪರಿಚ್ಛೇದಕ್ಕೆ ತುಳು: ಅಭಿಪ್ರಾಯ ಅವಲೋಕನ
ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ಬಗ್ಗೆ ವಿಚಾರಗೋಷ್ಠಿ ಹಾಗೂ ಅಭಿಪ್ರಾಯ ಅವಲೋಕನ ಜರಗಲಿದೆ. ತುಳು ಸಾಹಿತ್ಯ ಐಸಿರಿ, ಪ್ರಾಚೀನ ತುಳುನಾಡ ಪರಂಪರಾಗತ ತುಳುನಾಡ ಕಳರಿ ಕುರಿತು ಪ್ರಾತ್ಯಕ್ಷಿಕೆ, ಪಾಡªನ ಮೇಳ, ತುಳುಲಿಪಿ ಪ್ರಾತ್ಯಕ್ಷಿಕೆ, ಕಲಿಕಾ ಮಾಹಿತಿ ಮುಂತಾದವು ಕಾರ್ಯಕ್ರಮದ ಹೈಲೈಟ್ಸ್‌. ಎರಡೂ ದಿನಗಳಲ್ಲಿ ತುಳುನಾಡಿನ ಸಾಂಸ್ಕೃತಿಕ ಸಿರಿವಂತಿಕೆ ಪ್ರದರ್ಶನವೂ ನಡೆಯಲಿದೆ.

ಟಾಪ್ ನ್ಯೂಸ್

maharstra

Election Results: ಮಹಾರಾಷ್ಟ್ರ, ಝಾರ್ಖಂಡ್‌ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

BYV-yathnal

BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?

Vikram-Naxal-Mud

Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!

peethabailu-1

Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ

Egg-Students

Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!

Naxal-encounter-Vikram-1

Naxal Activity: ಮಲೆನಾಡಿನವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವಿಕ್ರಂ ಗೌಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrest

Ullala: ತ್ರಿವಳಿ ತಲಾಖ್‌ ಪ್ರಕರಣ: ಆರೋಪಿಯ ಸೆರೆ

Ullala-Balepuni

Ullala: 3ರ ಬಾಲಕಿಗೆ 70ರ ವೃದ್ಧನಿಂದ ಲೈಂಗಿಕ ಕಿರುಕುಳ

Kishor-Kodgi-Campco

Mangaluru: ಅಡಿಕೆ ಕ್ಯಾನ್ಸರ್‌ ಕಾರಕ ಎಂಬ ಡಬ್ಲ್ಯುಎಚ್‌ಒ ವಾದಕ್ಕೆ ಕ್ಯಾಂಪ್ಕೊ ಆಕ್ಷೇಪ

Suside-Boy

Mudubidre: ಅಂತಿಮ ಬಿಬಿಎಂ ವಿದ್ಯಾರ್ಥಿ ಆತ್ಮಹತ್ಯೆ

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

maharstra

Election Results: ಮಹಾರಾಷ್ಟ್ರ, ಝಾರ್ಖಂಡ್‌ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

BYV-yathnal

BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?

Vikram-Naxal-Mud

Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!

peethabailu-1

Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.