ನಾನು ಹೋಗುವ ದಾರಿಯಲ್ಲೇ ಅವಳ ವಿಮಾನ ಬಂದಾಗ…!
Team Udayavani, Sep 1, 2018, 10:22 AM IST
ಮಂಗಳೂರು: ಮುಂಬಯಿಯಿಂದ ಜೈಪುರಕ್ಕೆ ಹಾರುವ ಇಂಡಿಗೊ ವಿಮಾನದಲ್ಲಿ ಕುಳಿತಿದ್ದೆ. ಮುಖ್ಯ ಪೈಲಟ್ ರೊಹಿನಾ ಮಾರಿಯಾ ತನ್ನನ್ನು ಪರಿಚಯಿಸಿಕೊಂಡಾಗ ಭಾವಪರವಶನಾದೆ. ಅದು ನಮ್ಮ ಬಾಳಯಾನದ ಅಪೂರ್ವ ಕ್ಷಣ…
ಪತ್ನಿ ಕ್ಯಾಪ್ಟನ್ ಆಗಿ ಮೊದಲ ಬಾರಿಗೆ ವಿಮಾನ ಹಾರಾಟ ನಡೆಸಿದಾಗ ಸಾಕ್ಷಿಯಾದ ಪತಿಯೊಬ್ಬರ ಮಾತಿದು. ಇವರು ಮಂಗಳೂರು ಮೂಲದ ಅಭಿತ್ ಭಂಡಾರಿ. ಅಭಿತ್ ಕೂಡ ಗೋ ಏರ್ ನಲ್ಲಿ ಸೀನಿಯರ್ ಕ್ಯಾಪ್ಟನ್. ಇವರು ಬಂಟ್ವಾಳ ತಾಲೂಕಿನ ಸಾಲೆತ್ತೂರು ಗ್ರಾಮದ ಗಿರೀಶ್ ಭಂಡಾರಿ-ಶಾಂಭವಿಯವರ ಪುತ್ರ. ಅಭಿತ್ 2 ವರ್ಷಗಳ ಹಿಂದೆ ಪಂಜಾಬ್ ಮೂಲದ ರೊಹಿನಾ ಮಾರಿಯಾ ಅವರನ್ನು ಮದುವೆಯಾದರು. ಈಗ ರೊಹಿನಾ ಕ್ಯಾಪ್ಟನ್ ಹುದ್ದೆಗೇರಿದ್ದಾರೆ. ಅಪರೂಪದ ಪೈಲಟ್ ಜೋಡಿ ಇದು. ರೊಹಿನಾ, ಮಂಗಳೂರು ವಿಮಾನ
ನಿಲ್ದಾಣದಿಂದಲೂ ವಿಮಾನ ಚಲಾಯಿಸುತ್ತಾರೆ.
ಸಹ ಪೈಲಟ್ ಆಗಿದ್ದ ನಾನು ಜು.27ರಂದು ಕ್ಯಾಪ್ಟನ್ ಆದೆ. ಮೊದಲ ಹಾರಾಟವಾಗಿ ಜು.31ರಂದು ಮುಂಬಯಿ- ಜೈಪುರ ವಿಮಾನ ಚಲಾಯಿಸಬೇಕಿತ್ತು. ಪ್ರಥಮ ಟೇಕಾಫ್ ಆದ ಕಾರಣ ಸಣ್ಣದೊಂದು ಭಯವಿತ್ತು. ಅಭಿತ್‌ಗೆ ಹೇಳಿದಾಗ, ಧೈರ್ಯವಾಗಿರು; ಪ್ರಯಾಣಿಕನಾಗಿ ನಾನೂ ಇರುತ್ತೇನೆ ಎಂದರು. ಅದರ ಹಿಂದಿನ ದಿನ ಮುಂಬಯಿಯಿಂದ ಅಹಮದಾಬಾದಿಗೆ ಅವರು ವಿಮಾನ ಚಲಾಯಿಸಿದ್ದರು. ಕಂಪೆನಿಯ ಅನುಮತಿ ಪಡೆದು ನನಗೋಸ್ಕರ ಮುಂಬಯಿಗೆ ಮರಳಿ ನನ್ನ ವಿಮಾನದಲ್ಲಿ ಕುಳಿತಿದ್ದರು. ಕ್ಯಾಪ್ಟನ್ ಪತಿಯೇ ನನ್ನ ಹಿಂದೆ ಇರುವುದಕ್ಕಿಂತ ದೊಡ್ಡ ಆತ್ಮಬಲ ಬೇರೇನು! ಆ ದಿನ ಯಶಸ್ವಿಯಾಗಿ ಟೇಕಾಫ್-ಲ್ಯಾಂಡಿಂಗ್ ಮಾಡಿದೆ. ಅದು ಅವಿಸ್ಮರಣೀಯ ದಿನ ಎಂದರು ರೊಹಿನಾ.
ಸದ್ಯ ದಂಪತಿ ಮುಂಬಯಿಯಲ್ಲಿದ್ದಾರೆ. ಗೋ ಏರ್‌ನಲ್ಲಿರುವ ಅಭಿತ್ ಮುಂಬಯಿ, ದಿಲ್ಲಿ, ಚೆನ್ನೈ ಮುಂತಾದೆಡೆಗೆ ಹಾರಾಟ ನಡೆಸುತ್ತಾರೆ. ರೊಹಿನಾ ಮುಂಬಯಿ, ಕೊಲ್ಕೊತಾ, ಬೆಂಗಳೂರು, ಮಂಗಳೂರುಗಳಿಗೆ ವಿಮಾನ ಚಲಾಯಿಸುತ್ತಾರೆ.
ಆಕಾಶ ಸಂವಾದ
ನಾವಿಬ್ಬರೂ ಮುಖ್ಯ ಪೈಲಟ್ ಆಗಿರುವುದಕ್ಕೆ ಹೆಮ್ಮೆಯಿದೆ. ಇಂಥ ಅವಕಾಶ-ಅದೃಷ್ಟ ಪಡೆದವರು ಹೆಚ್ಚು ಮಂದಿಯಿಲ್ಲ ಎಂಬುದು ನನ್ನ ಭಾವನೆ. ತಿಂಗಳಿಗೆ 20 ದಿನ ಹಾರಾಟ ನಡೆಸುವೆ. ಕೆಲವೊಮ್ಮೆ ಇಬ್ಬರೂ ಒಂದೇ ಏರ್‌ಪೋರ್ಟ್‌ಗೆ ಬಂದಿರುತ್ತೇವೆ. ಆಗ ಅಲ್ಲೇ ಸ್ವಲ್ಪ ಹೊತ್ತು ನಮ್ಮಿಬ್ಬರ ಭೇಟಿ, ಕುಶಲೋಪರಿ. ಅನೇಕ ಸಲ ನನ್ನ ಮಾರ್ಗದಲ್ಲೇ ಅವಳ ವಿಮಾನವೂ ಹಾದು ಹೋಗುತ್ತಿರುತ್ತದೆ. ಆಗ ಏರ್ ಟ್ರಾಫಿಕ್ ಕಂಟ್ರೋಲ್ ಲೈನ್‌ನಲ್ಲಿ ರೋಹಿನಾಳ ಧ್ವನಿ ಕೇಳಿಸುತ್ತದೆ. ಕೆಲವೊಮ್ಮೆ ಮೂರ್‍ನಾಲ್ಕು ದಿನ ನಮ್ಮ ಮುಖಾಮುಖೀ ಇರದು. ಅಂಥ ಸನ್ನಿವೇಶದಲ್ಲಿ ಅವಳ ಧ್ವನಿ ಕೇಳಿಸಿದಾಗ ಆಗುವ ಖುಷಿ ಅಷ್ಟಿಷ್ಟಲ್ಲ. ಆಗ ನಾನು “ಹಾಯ್ ರೊಹಿನಾ’ ಅನ್ನುತ್ತೇನೆ, ಅತ್ತಕಡೆಯಿಂದ “ಹಲೋ ಅಭಿ’ ಎನ್ನುತ್ತಾಳೆ. ಪಯಣ ಮುಂದುವರಿಯುತ್ತದೆೆ ಎಂದು ಅಭಿತ್ ತಮ್ಮ “ಆಕಾಶ ಸಂವಾದ’ದ ಬಗ್ಗೆ ವಿವರಿಸುತ್ತಾರೆ.
ತವರಿಗೆ ಬಂದಂತೆ
ಮಂಗಳೂರು ಏರ್‌ಪೋರ್ಟ್‌ಗೆ ಬರುವುದೆಂದರೆ ನನ್ನ ಮನೆಗೆ ಬಂದಂತೆ. ಜತೆಗೆ ಕರಾವಳಿಯ ಸಮುದ್ರ ಕಿನಾರೆ, ಪಕ್ಕದಲ್ಲೇ ಹರಿಯುವ ನದಿಯನ್ನು ದಾಟಿ ಬೆಟ್ಟದ ಮೇಲಿರುವ ಟೇಬಲ್ ಟಾಪ್ ಏರ್‌ಪೋರ್ಟ್‌ನಲ್ಲಿ ವಿಮಾನ ಇಳಿಸುವುದೇ ಅದ್ಭುತ ಅನುಭವ. ಪೈಲಟ್ ಆಗಿ ನನ್ನ ಪಾಲಿಗೆ ಇದು ಬೆಸ್ಟ್ ಡೆಸ್ಟಿನೇಷನ್ ಎನ್ನುತ್ತಾರೆ ನೌಕಾಪಡೆಯ ನಿವೃತ್ತ ಕ್ಯಾಪ್ಟನ್ ಪುತ್ರಿ ರೊಹಿನಾ ಮಾರಿಯಾ.
*ಸುರೇಶ್ ಪುದುವೆಟ್ಟು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.