ಪಿಣರಾಯಿ ವಿಜಯನ್‌ಗೆ ಮತ್ತೆ ಲಾವ್ಲಿನ್ ಸಂಕಷ್ಟ
Team Udayavani, Mar 16, 2017, 2:53 PM IST
ಕೊಚ್ಚಿ : 20 ವರ್ಷ ಹಿಂದಿನ ಲಾವ್ಲಿನ್ ಹಗರಣ ಮತ್ತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಕಾಡಲಾರಂಭಿಸಿದೆ. ಕೆನಡದ ಎಸ್‌ಎನ್‌ಸಿ ಲಾವ್ಲಿನ್ ಕಂಪೆನಿ ಜತೆಗೆ ಜಲ ವಿದ್ಯುತ್ ಸ್ಥಾವರಗಳನ್ನು ನವೀಕರಿಸಲು ಒಪ್ಪಂದ ಮಾಡಿಕೊಳ್ಳುವಾಗ ಪಿಣರಾಯಿ ಮಾಡಿದ ತಪ್ಪುಗಳನ್ನು ಸಿಬಿಐ ಪಟ್ಟಿ ಮಾಡಿದ್ದು, ರಾಜ್ಯ ರಾಜಕೀಯದಲ್ಲಿ ಈ ಹಗರಣ ಮತ್ತೆ ಬಿರುಗಾಳಿ ಎಬ್ಬಿಸುವ ಸಾಧ್ಯತೆ ಗೋಚರಿಸಿದೆ.
ಲಾವ್ಲಿನ್ ಕೇಸಿಗೆ ಸಂಬಂಧಿಸಿದಂತೆ ಪಿಣರಾಯಿ ವಿಜಯನ್ ಮತ್ತಿತರ ಆರೋಪಿಗಳನ್ನು ಖುಲಾಸೆಗೊಳಿಸಿರುವ ತೀರ್ಪಿನ ವಿರುದ್ಧ ಸಿಬಿಐ ಸಲ್ಲಿಸಿದ ಮೇಲ್ಮನವಿಯ ವಿಚಾರಣೆ ಹೈಕೋರ್ಟಿನಲ್ಲಿ ನಡೆಯುತ್ತಿದೆ. ಲಾವ್ಲಿನ್ ಕಂಪೆನಿ ಜತೆಗೆ ಒಪ್ಪಂದ ಮಾಡಿಕೊಳ್ಳುವಾಗ ಎಲ್‌ಡಿಎಫ್ ಸರಕಾರದಲ್ಲಿ ವಿದ್ಯುತ್ ಸಚಿವರಾಗಿದ್ದ ಪಿಣರಾಯಿ ವಿಜಯನ್ ಕೆಲವು ಮಹತ್ವದ ಅಂಶಗಳನ್ನು ಸಂಪುಟದಲ್ಲಿ ಬಹಿರಂಗಪಡಿಸದೆ ಮುಚ್ಚಿ ಹಾಕಿದ್ದರು ಎಂದು ಸಿಬಿಐ ಆರೋಪಿಸಿದೆ.
ವಿದ್ಯುತ್ ವಿತರಣೆಗೆ ಸಂಬಂಧಿಸಿದಂತೆ ಕಂಪೆನಿ ಜತೆಗೆ ಮಾಡಿಕೊಂಡ ಒಪ್ಪಂದ ಸಂಪುಟ ಸದಸ್ಯರಿಗೆ ಗೊತ್ತಿರಲಿಲ್ಲ. ವಿದ್ಯುತ್ ಮಂಡಳಿಯ ಉನ್ನತಾಧಿಕಾರಿಗಳು ಈ ಯೋಜನೆಯ ವಿರುದ್ಧ ಎತ್ತಿದ ಆಕ್ಷೇಪಗಳನ್ನು ವಿಜಯನ್ ತನ್ನ ಅಧಿಕಾರ ಬಳಸಿ ದಮನಿಸಿದ್ದರು. ಕಂಪೆನಿ ಜತೆಗೆ ಮಾಡಿಕೊಂಡ ವಿದ್ಯುತ್ ವಿತರಣೆ ಒಪ್ಪಂದ ಕಾನೂನು ಪ್ರಕಾರ ಅಸಿಂಧುವಾಗಿತ್ತು ಎಂದು ಸಿಬಿಐ ನ್ಯಾಯಾಲಯಕ್ಕೆ ತಿಳಿಸಿದೆ.
ಲಾವ್ಲಿನ್ ಕಂಪೆನಿಯ ಅಧಿಕಾರಿಗಳ ಕುರಿತು ವಿಜಯನ್ ವಿಶೇಷ ಕಾಳಜಿ ವಹಿಸಿದ್ದರು. ಮಲಬಾರ್ ಕ್ಯಾನ್ಸರ್ ಸೆಂಟರ್ ಅವರದ್ದೇ ಯೋಜನೆಯಾಗಿತ್ತು. ಜಲ ವಿದ್ಯುತ್ ಯೋಜನೆಗಳನ್ನು ಸಂಪೂರ್ಣವಾಗಿ ನವೀಕರಿಸುವುದು ಅಗತ್ಯವಿಲ್ಲ ಎನ್ನುವುದು ವಿಜಯನ್‌ಗೆ ಗೊತ್ತಿತ್ತು. ಇದಕ್ಕೆ ಸಂಬಂಧಿಸಿದ ವರದಿಯೂ ಅವರ ಬಳಿಯಿತ್ತು. ಆದರೂ ನವೀಕರಣ ಒಪ್ಪಂದಕ್ಕೆ ಅಂಕಿತ ಹಾಕಿದ್ದರು. ಇಡೀ ಯೋಜನೆಯೇ ಪಿತೂರಿಯ ಒಂದು ಭಾಗವಾಗಿತ್ತು ಎಂದು ಸಿಬಿಐ ಹೇಳಿದೆ.
ಹರೀಶ್ ಸಾಳ್ವೆ ವಕೀಲ
ಲಾವ್ಲಿನ್ ಪ್ರಕರಣದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪರವಾಗಿ ಸುಪ್ರೀಂ ಕೋರ್ಟಿನ ಖ್ಯಾತ ವಕೀಲ ಹರೀಶ್ ಸಾಳ್ವೆ ವಾದಿಸಲಿದ್ದಾರೆ. ಇಂದು ಹೈಕೋರ್ಟಿನಲ್ಲಿ ಕೇಸ್ ವಿಚಾರಣೆಗೆ ಬಂದಾಗ ವಿಜಯನ್ ವಕೀಲ ಎನ್. ಕೆ. ದಾಮೋದರನ್ ಮುಖ್ಯಮಂತ್ರಿಯ ಪರವಾಗಿ ಸಾಳ್ವೆ ವಾದಿಸಲಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಕೇಸಿನ ಕುರಿತು ಅಧ್ಯಯನ ಮಾಡಲು ಸಾಳ್ವೆಗೆ ತುಸು ಕಾಲಾವಶಕಾಶ ಬೇಕೆಂದು ದಾಮೋದರನ್ ಹೇಳಿದ ಬಳಿಕ ವಿಚಾರಣೆಯನ್ನು ಮಾ. 17ಕ್ಕೆ ಮುಂದೂಡಲಾಯಿತು.
ಸಾಳ್ವೆ ದೇಶದ ದುಬಾರಿ ವಕೀಲರಲ್ಲಿ ಒಬ್ಬರು. ಅವರು ಒಂದು ಹಿಯರಿಂಗ್‌ಶುಲ್ಕ ಲಕ್ಷದಲ್ಲಿರುತ್ತದೆ. ಸಲ್ಮಾನ್ ಖಾನ್, ಲಲಿತ್ ಮೋದಿ, ಮುಕೇಶ್ ಅಂಬಾನಿ, ರತನ್ ಟಾಟಾ ಮುಂತಾದ ಕಾರ್ಪೊರೇಟ್ ದಿಗ್ಗಜರು ಮತ್ತು ಸೆಲೆಬ್ರಿಟಿಗಳ ಪರವಾಗಿ ಸಾಳ್ವೆ ವಾದಿಸಿದ್ದಾರೆ.
ಏನಿದು ಲಾವ್ಲಿನ್ ಹಗರಣ ?
ಪಣ್ಣಿಯೂರು, ಚೆಂಗುಲಂ ಮತ್ತು ಪಳ್ಳಿವಸಲ್ ಜಲ ವಿದ್ಯುತ್ ಸ್ಥಾವರದ ಮೂರು ಜನರೇಟರ್‌ಗಳನ್ನು ದುರಸ್ತಿ ಪಡಿಸಲು ಕೆನಡ ಮೂಲದ ಎಸ್‌ಎನ್‌ಸಿ ಲಾವ್ಲಿನ್ ಕಂಪೆನಿ ಜತೆಗೆ ಆಗ ವಿದ್ಯುತ್ ಸಚಿವರಾಗಿದ್ದ ವಿಜಯನ್ ಒಪ್ಪಂದ ಮಾಡಿಕೊಂಡಿದ್ದರು. 374.5 ಕೋ. ರೂ. ಒಪ್ಪಂದದಿಂದಾಗಿ ವಿದ್ಯುತ್ ಮಂಡಳಿಗೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಒಪ್ಪಂದದಲ್ಲಿ ವಿಜಯನ್ ಕಿಕ್‌ಬ್ಯಾಕ್ ಪಡೆದುಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದ ಬಳಿಕ ಸಿಬಿಐ ತನಿಖೆಗೆ ವಹಿಸಲಾಗಿತ್ತು. ಆದರೆ ಸಿಬಿಐ ಅವರನ್ನು 7ನೇ ಆರೋಪಿ ಎಂದು ಹೆಸರಿಸಿದ್ದು ಭಾರೀ ಟೀಕೆಗೆ ಗುರಿಯಾಗಿತ್ತು. 2013ರಲ್ಲಿ ತಿರುವನಂತಪುರದ ಸಿಬಿಐ ನ್ಯಾಯಾಲಯ ಅವರನ್ನು ದೋಷಮುಕ್ತಿಗೊಳಿಸಿದೆ. ಈ ತೀರ್ಪಿನ ವಿರುದ್ಧ ಸಿಬಿಐ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
Kasaragod: ರಸ್ತೆಯಲ್ಲಿ ಬಿಯರ್ ಬಾಟ್ಲಿ ಎಸೆದು ಘರ್ಷಣೆಗೆ ಯತ್ನ; ಕೇಸು ದಾಖಲು
Kasaragod ಅಪರಾಧ ಸುದ್ದಿಗಳು; ತಂಬಾಕು ಉತ್ಪನ್ನಗಳ ಸಹಿತ ಇಬ್ಬರ ಬಂಧನ
Order: ಗ್ಯಾಸ್ ಸೋರಿಕೆ ಅವಘಡ: ಪೋಷಕರ ಕಳೆದುಕೊಂಡ ಪುತ್ರಿಗೆ 28 ಲಕ್ಷ ರೂ.ಪರಿಹಾರ
Kasaragod: ಮುಖವಾಡ ಧರಿಸಿದ ವ್ಯಕ್ತಿಯಿಂದ ವಿದ್ಯಾರ್ಥಿಗೆ ಇರಿತ; ಪ್ರಕರಣ ದಾಖಲು
MUST WATCH
ಹೊಸ ಸೇರ್ಪಡೆ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ
BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.