ಪಿಂಕ್ ಮತಗಟ್ಟೆ
Team Udayavani, May 11, 2018, 12:51 PM IST
ಮಹಿಳೆಯರನ್ನು ಸಬಲೀಕರಣಗೊಳಿಸಿ ಮತದಾನ ಪ್ರಕ್ರಿಯೆಯಲ್ಲಿ ಅವರ ಭಾಗವಹಿಸುವಿಕೆ ಹೆಚ್ಚಿಸುವ ಉದ್ದೇಶದಿಂದ ರಾಜ್ಯ ಚುನಾವಣ ಆಯೋಗ ಈ ಬಾರಿ ಪಿಂಕ್ ಮತಗಟ್ಟೆಗಳನ್ನು ಅನುಷ್ಠಾನಿಸುತ್ತಿದೆ. ಗುಲಾಬಿ ಬಣ್ಣದ ಮತಗಟ್ಟೆಗಳಿಗೂ ಗುಲಾಬಿ ಬಣ್ಣ ಬಳಿಯಲಾಗುತ್ತದೆ. ಮತಗಟ್ಟೆ ಅಧಿಕಾರಿ, ಚುನಾವಣ ಸಿಬಂದಿ, ಭದ್ರತಾ ಸಿಬಂದಿ ಕೂಡ ಗುಲಾಬಿ ಬಣ್ಣದ ವಸ್ತ್ರಗಳನ್ನು ಧರಿಸುವುದು ಇದರ ವಿಶೇಷ.
.ಮೂಡಬಿದಿರೆಯ ಪೆರೋಕಿಯಾಲ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಬಜಪೆ (ಪಶ್ಚಿಮ)
.ಪುತ್ತೂರಿನ ಕೋಡಿಂಬಾಡಿ ಜಿ.ಪ್ರಾ. ಶಾಲೆಯ (ಪೂರ್ವ ಭಾಗ)
.ಬೆಳ್ತಂಗಡಿಯ ಚರ್ಚ್ ಹಿರಿಯ ಪ್ರಾಥಮಿಕ ಶಾಲೆ ಬೆಳ್ತಂಗಡಿ (ಪೂರ್ವ)
.ಬಂಟ್ವಾಳ ಕ್ಷೇತ್ರದ ದ.ಕ. ಜಿ.ಪಂ.ಹಿ.ಪ್ರಾ.ಶಾಲೆ ಕೆರೆಬೈಲ್ ಸಂಗಬೆಟ್ಟು (ದಕ್ಷಿಣ)
.ಪುತ್ತೂರು ದ.ಕ. ಜಿ.ಪಂ.ಹಿ.ಪ್ರಾ. ಶಾಲೆ ಕೋಡಿಂಬಾಡಿ (ಪೂರ್ವ)
.ಸುಳ್ಯ ಕ್ಷೇತ್ರದ ದ.ಕ. ಜಿ.ಪಂ. ಮಾದರಿ ಹಿ.ಪ್ರಾ. ಶಾಲೆ ಗುತ್ತಿಗಾರು (ಪೂರ್ವ)
ಮಂಗಳೂರಿನಲ್ಲಿ ಗರಿಷ್ಠ ಪಿಂಕ್ ಮತಗಟ್ಟೆ
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಬೂತ್ ಸಂಖ್ಯೆ 23ರಲ್ಲಿರುವ ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಕಾಟಿಪಳ್ಳ 2ನೇ ಬ್ಲಾಕ್, ಬೂತ್ ಸಂಖ್ಯೆ 27ರಲ್ಲಿರುವ ಶ್ರಿ ನಾರಾಯಣಗುರು ಆಂಗ್ಲ ಮಾಧ್ಯಮ ಶಾಲೆ 3ನೇ ಬ್ಲಾಕ್ ಕಾಟಿಪಳ್ಳ, ಬೂತ್ ಸಂಖ್ಯೆ 89ರಲ್ಲಿರುವ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಮರಕಡ, ಬೂತ್ ಸಂಖ್ಯೆ168ರಲ್ಲಿರುವ ದ.ಕ.ಜಿ.ಪಂ.ಮಾದರಿ ಹಿ.ಪ್ರಾ.ಶಾಲೆ ಎಡಪದವು(ದಕ್ಷಿಣ), ಬೂತ್ ಸಂಖ್ಯೆ 226ರಲ್ಲಿರುವ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ವಳಚ್ಚಿಲ್(ಪಶ್ಚಿಮ) ಹಾಗೂ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಬೂತ್ ಸಂಖ್ಯೆ 12ರಲ್ಲಿರುವ ಸ್ರೆಂಟ್ ವಿಕ್ಟೋರಿಯಾ ಹೆಣ್ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ಲೇಡಿಹಿಲ್(ಉತ್ತರ), ಬೂತ್ ಸಂಖ್ಯೆ 16ರಲ್ಲಿರುವ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಬಿಜೈ ಕಾಪಿಕಾಡ್(ದಕ್ಷಿಣ), ಬೂತ್ ಸಂಖ್ಯೆ 74ರಲ್ಲಿರುವ ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ಗಾಂಧಿನಗರ (ದಕ್ಷಿಣ), ಬೂತ್ ಸಂಖ್ಯೆ 78ರಲ್ಲಿರುವ ಸ್ಯೆಂಟ್ ಅಲೋಶಿಯಸ್ ಹಿರಿಯ ಪ್ರಾಥಮಿಕ ಶಾಲೆ ಉರ್ವ(ಪಶ್ಚಿಮ), ಬೂತ್ ಸಂಖ್ಯೆ 117ರಲ್ಲಿರುವ ಹೆಣ್ಮಕ್ಕಳ ಸರಕಾರಿ ಕಾಲೇಜು ಬಲ್ಮಠ(ಪಶ್ಚಿಮ), ಮಂಗಳೂರು ವಿಧಾನ ಸಭಾ ಕ್ಷೇತ್ರದ ಬೂತ್ ಸಂಖ್ಯೆ 4ರಲ್ಲಿರುವ ಅನುದಾನಿತ ಬೆಸೆಲ್ ಮಿಶನ್ ಹಿರಿಯ ಪ್ರಾಥಮಿಕ ಶಾಲೆ ಉಳ್ಳಾಲ, ಬೂತ್ ಸಂಖ್ಯೆ 16ರಲ್ಲಿರುವ ಮೊಗವೀರ ಅನುದಾನಿತ ಹಿ.ಪ್ರಾ.ಶಾಲೆ ಉಳ್ಳಾಲ, ಬೂತ್ ಸಂಖ್ಯೆ 23ರಲ್ಲಿರುವ ಭಾರತ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಉಳ್ಳಾಲ, ಬೂತ್ ಸಂಖ್ಯೆ 34ರಲ್ಲಿರುವ ಸ್ಯೆಂಟ್ ಸೆಬಾಸ್ಟಿಯನ್ ಆಂಗ್ಲ ಮಾಧ್ಯಮ ಶಾಲೆ ತೊಕ್ಕೊಟ್ಟು, ಬೂತ್ ಸಂಖ್ಯೆ 200ರಲ್ಲಿರುವ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಹೂಹಾಕುವ ಕಲ್ಲು ಬಾಳೆಪುಣಿ(ದಕ್ಷಿಣ) ಸಹಿತ ಒಟ್ಟು 17 ಕಡೆ ಪಿಂಕ್ ಮತಗಟ್ಟೆಗಳಿವೆ. ಸುಳ್ಯದಲ್ಲಿ ಸ.ಹಿ.ಪ್ರಾ.ಶಾಲೆ ಗುತ್ತಿಗಾರು (ಪೂ.ಭಾ) ಪಿಂಕ್ ಮತಗಟ್ಟೆಯಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.