ಫುಟ್‌ಪಾತ್‌ನಲ್ಲೇ ಪೈಪ್ ರಾಶಿ; ಪಾದಚಾರಿಗಳಿಗೆ ಸಂಕಷ್ಟ
ಲಾಲ್‌ಬಾಗ್‌ನಿಂದ ಬಿಜೈ, ಬಲ್ಲಾಳ್‌ಬಾಗ್, ಕಾಪಿಕಾಡ್, ಕೊಟ್ಟಾರ ಕ್ರಾಸ್
Team Udayavani, Jan 28, 2021, 5:40 AM IST
ಮಹಾನಗರ: ಪಾದಚಾರಿ ಗಳಿಗೆ ಅನುಕೂಲವಾಗಲೆಂದು ರಸ್ತೆ ಬದಿಗಳಲ್ಲಿ ಫುಟ್‌ಪಾತ್ ನಿರ್ಮಾಣ ಮಾಡಲಾಗುತ್ತದೆ. ಆದರೆ ನಗರದ ಬಹುತೇಕ ಫುಟ್‌ಪಾತ್‌ಗಳು ಪಾದಚಾರಿ ಗಳಿಗೆ ಸೂಕ್ತವಾಗಿಲ್ಲ ಎಂಬ ಆರೋಪವಿದೆ. ಹೀಗಿರುವಾಗಲೇ ನಗರದ ಬಹುತೇಕ ಫುಟ್‌ಪಾತ್‌ಗಳಲ್ಲಿ ಪೈಪ್ ರಾಶಿ ಹಾಕಲಾಗಿದ್ದು, ಸಾರ್ವಜನಿಕರಿಗೆ ಮತ್ತೆ ತೊಂದರೆಯಾಗುತ್ತಿದೆ.
ಮಹಾನಗರ ಪಾಲಿಕೆಯ ಎದುರು ಲಾಲ್‌ಬಾಗ್‌ನಿಂದ ಬಿಜೈವರೆಗೆ ಇತ್ತೀಚೆಗೆಯಷ್ಟೇ ವ್ಯವಸ್ಥಿತ ಫುಟ್‌ಪಾತ್ ಕಾಮಗಾರಿ ನಡೆದಿತ್ತು. ರಸ್ತೆ ವಿಸ್ತರಣೆ ಜತೆಗೆ ಫುಟ್‌ಪಾತ್‌ಗೆ ಇಂಟರ್‌ಲಾಕ್ ಕೂಡ ಅಳವಡಿಸಲಾಗಿತ್ತು. ಆದರೆ ಇದರ ಪ್ರಯೋಜನ ಮಾತ್ರ ಸಾರ್ವಜನಿಕರಿಗೆ ಇಲ್ಲದಂತಾಗಿದೆ. ಈ ಭಾಗದ ಫುಟ್‌ಪಾತ್ ಬದಿಯಲ್ಲಿ ಸದ್ಯ ಪೈಪ್‌ಗ್ಳನ್ನು ರಾಶಿ ಹಾಕಲಾಗಿದ್ದು, ಇದರಿಂದಾಗಿ ಸಾರ್ವಜನಿಕರು ನಡೆದಾಡಲು ಪರದಾಡುವಂತಾಗಿದೆ. ಅದೇರೀತಿ ಬಲ್ಲಾಳ್‌ಬಾಗ್, ಕಾಪಿಕಾಡ್, ಕೊಟ್ಟಾರ ಕ್ರಾಸ್ ಸಹಿತ ಅನೇಕ ಕಡೆಗಳಲ್ಲಿ ಫುಟ್‌ಪಾತ್ ಬಳಿ ಪೈಪ್ ರಾಶಿ ಇದೆ.
ನಗರದ ಮನೆ ಮನೆಗೆ ಗ್ಯಾಸ್ ತಲುಪಿಸಲು ಗೈಲ್ ಸಂಸ್ಥೆ ಇತ್ತೀಚೆಗೆಷ್ಟೇ ಕಾಮಗಾರಿ ಕೈಗೆತ್ತಿಕೊಂಡಿದೆ. ಈ ಉದ್ದೇಶದಿಂದಾಗಿ ಮೊದಲನೇ ಹಂತದಲ್ಲಿ ನಗರದಲ್ಲಿ ಪೈಪ್‌ಲೈನ್ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ. ಇದೇ ಕಾರಣಕ್ಕೆ ಸದ್ಯ ನಗರದ ಹಲವು ಕಡೆಗಳಲ್ಲಿ ಪೈಪ್ ರಾಶಿ ಹಾಕಲಾಗಿದೆ. ವಿಪರ್ಯಾಸ ಅಂದರೆ, ಈ ಪೈಪ್‌ಗ್ಳನ್ನು ರಾಶಿ ಹಾಕಲು ಫುಟ್‌ಪಾತ್‌ಗಳನ್ನೇ ಆಯ್ಕೆ ಮಾಡಲಾಗಿದೆ.
ಸೂಚನ ಫಲಕ ಇಲ್ಲ :
ಅದೇ ರೀತಿ ನಗರದಲ್ಲಿ ಕೆಲವು ಕಡೆಗಳಲ್ಲಿ ಫುಟ್‌ಪಾತ್ ಕಾಮಗಾರಿ ನಡೆಯುತ್ತಿದೆ. ಇನ್ನೂ ಕೆಲವೆಡೆ ಅರ್ಧದಲ್ಲಿಯೇ ಕಾಮಗಾರಿ ನಿಂತಿದೆ. ಇಲ್ಲಿ ಸಮರ್ಪಕ ಸೂಚನ ಫಲಕ ವ್ಯವಸ್ಥೆಯನ್ನು ಅಳವಡಿಸದೇ ಸಾರ್ವಜನಿಕರಿಗೆ ಅಪಾಯ ಸೂಚಿಸುತ್ತಿದೆ. ನಗರದ ಪಿ.ವಿ.ಎಸ್. ಜಂಕ್ಷನ್ ಬಳಿ ಕಳೆದ ಕೆಲವು ತಿಂಗಳುಗಳ ಹಿಂದೆ ರಸ್ತೆ ವಿಸ್ತರಣೆ, ವ್ಯವಸ್ಥಿತ ಫುಟ್‌ಪಾತ್ ವ್ಯವಸ್ಥೆಗಳ ಸ್ಮಾರ್ಟ್‌ಸಿಟಿ ಕಾಮಗಾರಿ ಆರಂಭಗೊಂಡಿತ್ತು. ಕಾಮಗಾರಿ ಅರ್ಧದಲ್ಲಿ ಇರುವಾಗ ಹೈಕೋರ್ಟ್‌ನಿಂದ ತಡೆಯಾಜ್ಞೆ ಬಂತು. ಒಂದು ತಿಂಗಳಿನಿಂದ ಕಾಮಗಾರಿ ನಿಂತಿದೆ. ಸದ್ಯ ಈ ಪ್ರದೇಶ ಅಪಾಯದ ಸ್ಥಿತಿಯಲ್ಲಿದೆ. ರಸ್ತೆ ಬದಿ ಸುಮಾರು 5-6 ಅಡಿಗೂ ಹೆಚ್ಚಿನ ಆಳ ಇದ್ದು, ಈ ಪ್ರದೇಶದಲ್ಲಿ ಕಾಮಗಾರಿ ಆರಂಭವಾಗುವವರೆಗೆ ಮುನ್ನೆಚ್ಚರಿಕೆ ಉದ್ದೇಶದಿಂದ ಯಾವುದೇ ಸೂಚನ ಫಲಕ ಕೂಡ ಅಳವಡಿಸಲಿಲ್ಲ. ರಾತ್ರಿ ವೇಳೆ ವಾಹನಗಳು, ಸಾರ್ವಜನಿಕರು ಆಯತಪ್ಪಿ ಬೀಳುವ ಅಪಾಯ ಇದೆ.
ಫುಟ್‌ಪಾತ್‌ನಲ್ಲೇ ಬಸ್ ತಂಗುದಾಣ :
ನಗರದ ಕೆಲವು ಕಡೆಗಳಲ್ಲಿ ಬಸ್ ತಂಗುದಾಣಗಳನ್ನು ರಸ್ತೆ ವಿಸ್ತರಣೆ ಉದ್ದೇಶದಿಂದ ಕೆಡಹಲಾಗಿದೆ. ಇನ್ನು ಸದ್ಯ ಕೆಲವು ಬಸ್ ತಂಗುದಾಣಗಳು ಫುಟ್‌ಪಾತ್‌ಗಳಲ್ಲಿಯೇ ಇವೆ. ಇದರಿಂದಾಗಿ ನಾಗರಿಕರು ನಡೆದುಕೊಂಡು ಹೋಗಲು ಕಷ್ಟವಾಗುತ್ತಿದೆ. ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಗಮನಹರಿಸಬೇಕು ಎನ್ನುತ್ತಾರೆ ಸಾರ್ವಜನಿಕರು.
ಮನೆ ಮನೆಗೆ ಗ್ಯಾಸ್ ಕಾಮಗಾರಿಯ ಉದ್ದೇಶದಿಂದ ನಗರದ ಅನೇಕ ಕಡೆಗಳಲ್ಲಿ ಫುಟ್‌ಪಾತ್‌ಗಳಲ್ಲಿ ಪೈಪ್‌ಗ್ಳನ್ನು ರಾಶಿ ಹಾಕಲಾಗಿದೆ. ಈ ಕುರಿತು ಈಗಾಗಲೇ ಸಂಬಂಧಪಟ್ಟವರಅಞಜತೆ ಸಭೆ ನಡೆಸಿ ತೆರವು ಮಾಡುವಂತೆ ಸೂಚನೆ ನೀಡಿದ್ದೇವೆ. ಒಂದು ವೇಳೆ ತತ್‌ಕ್ಷಣ ಕಾಮಗಾರಿ ನಡೆಸದೇ ಇದ್ದರೆ ಫುಟ್‌ಪಾತ್‌ನಲ್ಲಿ ರಾಶಿ ಹಾಕಿದ್ದ ಪೈಪ್ ತೆಗೆಯಲು ಮತ್ತೂಮ್ಮೆ ಸೂಚನೆ ನೀಡುತ್ತೇನೆ. -ದಿವಾಕರ್ ಪಾಂಡೇಶ್ವರ, ಮನಪಾ ಮೇಯರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.