![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Aug 3, 2021, 3:30 AM IST
ಮಹಾನಗರ: ನಗರದ ಕಂಕನಾಡಿ ಭಾಗದಲ್ಲಿ ಪಾದಚಾರಿಗಳು ಹೋಗುವಾಗ ಎಚ್ಚರ ವಹಿಸುವುದು ಅಗತ್ಯ; ಒಂದು ವೇಳೆ ಎಚ್ಚರ ವಹಿಸದಿದ್ದರೆ ಗುಂಡಿಗೆ ಬೀಳುವುದು ಗ್ಯಾರಂಟಿ!
ಕಂಕನಾಡಿ ಸರ್ಕಲ್ ಅಭಿವೃದ್ಧಿ ಹಿನ್ನೆಲೆಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ರಸ್ತೆಗೆ ಇನ್ನಷ್ಟು ಸ್ಥಳಾವಕಾಶ ನೀಡುವುದು ಈ ಯೋಜನೆಯ ಆಶಯ. ಇದಕ್ಕೆ ಪೂರಕವಾಗಿ ಇದರ ವ್ಯಾಪ್ತಿಯ ಚರಂಡಿ, ಫುಟ್‌ಪಾತ್ ಅಭಿವೃದ್ಧಿಗೊಳಿಸಲಾಗುತ್ತಿದೆ. ಹಲವು ತಿಂಗಳುಗಳಿಂದ ಈ ಕಾಮಗಾರಿ ಆರಂಭವಾಗಿದ್ದು, ಸದ್ಯ ನಿಧಾನವಾಗಿದೆ.
ಪಂಪ್‌ವೆಲ್‌ನಿಂದ ಕಂಕನಾಡಿ ಮಾರು ಕಟ್ಟೆ ಕಡೆಗೆ ತಿರುಗುವ (ಉದಯ ಕಿಚನ್ ನೆಕ್ಸ್ r ಮುಂಭಾಗ) ಭಾಗದಲ್ಲಿ ಚರಂಡಿ ಕೆಲಸ ಮಾಡಿದ್ದರೂ ಅದನ್ನು ಪೂರ್ಣವಾಗಿ ಮುಚ್ಚಲಿಲ್ಲ. ಕೆಲವೆಡೆ ಮಾತ್ರ ಸ್ಲಾ$Âಬ್ ಅಳವಡಿಸಲಾಗಿದೆ. ಅಲ್ಲಲ್ಲಿ ಖಾಲಿ ಬಿಟ್ಟು ಹೊಂಡ ಕಾಣುತ್ತಿದೆ. ಪಾದಚಾರಿಗಳ ಗಮನ ಕೊಂಚ ತಪ್ಪಿದರೂ ಹೊಂಡಕ್ಕೆ ಬೀಳುವ ಪರಿಸ್ಥಿತಿಯಿದೆ. ಈ ಮಧ್ಯೆ ಗಣೇಶ್ ಮೆಡಿಕಲ್ ಭಾಗದಲ್ಲಿಯೂ ಚರಂಡಿ ಕೆಲಸ ಅರ್ಧದಲ್ಲಿಯೇ ಇದೆ. ಇತ್ತ ರಾಧಾ ಮೆಡಿಕಲ್ ಭಾಗದಲ್ಲಿಯೂ ಚರಂಡಿ , ಫುಟ್‌ಪಾತ್ ಕೆಲಸ ಶುರುವಾಗಿ ಕೆಲವು ತಿಂಗಳುಗಳು ಕಳೆದರೂ ಇನ್ನೂ ಮುಗಿಯುವ ಲಕ್ಷಣ ಕಾಣುತ್ತಿಲ್ಲ.
ಮುಂಜಾಗ್ರತೆ ಕ್ರಮ ವಹಿಸಿಲ್ಲ :
ಸ್ಥಳೀಯರಾದ ದಯಾನಂದ ಪಯ್ಯಡೆ ಅವರು ” ಉದಯವಾಣಿ ಸುದಿನ’ ಜತೆಗೆ ಮಾತನಾಡಿ, “ಕಂಕನಾಡಿಯಲ್ಲಿ ಕೆಲವು ಸಮಯದಿಂದ ಚರಂಡಿ, ಫುಟ್‌ಪಾತ್ ಕೆಲಸ ಆರಂಭವಾಗಿದೆ. ಆದರೆ ಇನ್ನೂ ಅದು ಮುಗಿದಿಲ್ಲ. ಕಾಮಗಾರಿ ನಡೆಸುವ ಸ್ಥಳದಲ್ಲಿ ಸಾರ್ವಜನಿಕರಿಗೆ ಯಾವುದೇ ಸಮಸ್ಯೆ ಆಗದಂತೆ ಮುಂಜಾಗ್ರತೆ ಕ್ರಮವನ್ನೂ ಕೈಗೊಂಡಿಲ್ಲ. ಹೀಗಾಗಿ ಫುಟ್‌ಪಾತ್‌ಗಳ ಅರೆ ಬರೆ ಕಾಮಗಾರಿಯಿಂದಾಗಿ ಪಾದಚಾರಿಗಳು ಗುಂಡಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವು ಜನರಿಗೆ ಇದರಿಂದ ಸಮಸ್ಯೆ ಆಗಿದೆ’ ಎನ್ನುತ್ತಾರೆ.
ಕಂಕನಾಡಿಯಲ್ಲಿ ಸರ್ಕಲ್ ಅಭಿವೃದ್ಧಿ ಸಂಬಂಧಿಸಿ ಕಾಮಗಾರಿ ಪಾಲಿಕೆ ವತಿಯಿಂದ ಕೈಗೆತ್ತಿಕೊಳ್ಳಲಾಗಿದೆ. ಕೆಲವು ಸಮಸ್ಯೆಯಿಂದ ಕಾಮಗಾರಿ ತಡವಾಗಿದೆ. ಶೀಘ್ರ ಮುಗಿಸಲು ಸಂಬಂಧಪಟ್ಟವರಿಗೆ ತಿಳಿಸಲಾಗುವುದು. ಪಾದಚಾರಿಗಳಿಗೆ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು. -ನವೀನ್ ಡಿ’ಸೋಜಾ, ಪಾಲಿಕೆ ಸ್ಥಳೀಯ ಸದಸ್ಯರು
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.