“ಯೋಜನೆ ಮಾಹಿತಿ ಅರ್ಹರಿಗೆ ಸಿಗಲಿ’: ಶೀಲಾವತಿ ಮಾಧವ
Team Udayavani, Mar 25, 2017, 3:38 PM IST
ಸುಳ್ಯ: ಸರಕಾರದ ಹಲವಾರು ಯೋಜನೆಗಳಿವೆ. ಅದು ಅರ್ಹರಿಗೆ ತಲಪಬೇಕು. ಈ ನಿಟ್ಟಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳು ಅವರಿಗೆ ಮಾಹಿತಿ ನೀಡಬೇಕು ಎಂದು ನ.ಪಂ. ಅಧ್ಯಕ್ಷೆ ಶೀಲಾವತಿ ಮಾಧವ ತಿಳಿಸಿದರು.
ನ.ಪಂ. ವತಿಯಿಂದ ಅಂಗವಿಕಲರಿಗೆ ಸೌಲಭ್ಯ ನೀಡುವ, ಮಾಹಿತಿ ಒದಗಿಸುವ ಜನಜಾಗೃತಿ ಕಾರ್ಯಕ್ರಮವನ್ನು ಶುಕ್ರವಾರ ಸುಳ್ಯದ ಪುರಭವನದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ನ.ಪಂ.ಗೆ ಬರುವ ಎಲ್ಲ ಅನುದಾನಗಳಲ್ಲಿ ಶೇ. 3 ಅಂಶ ಅಂಗವಿಕಲರಿಗೆ ಮೀಸಲಾಗಿಡುತ್ತದೆ. ಸರಕಾರ ಅಭಿವೃದ್ಧಿಗೆ ಹೆಚ್ಚು ಅನುದಾನ ಒದಗಿಸಿದಲ್ಲಿ ಅವರಿಗೆ ಹೆಚ್ಚಿನ ಸೌಲಭ್ಯಗಳನ್ನು ನೀಡಲು ಸಾದ್ಯವಾಗುತ್ತದೆ ಎಂದರು. ಸಭಾಧ್ಯಕ್ಷತೆಯನ್ನು ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ ಅವರು ವಹಿಸಿ, ಸವಲತ್ತುಗಳು ಅರ್ಹರಿಗೆ ತಲುಪಿಸುವಲ್ಲಿ ಕಾಳಜಿ ವಹಿಸಿ ಎಂದರು.
ನೋಂದಣಿ ಮಾಡಿಸಿಕೊಳ್ಳಿ
ನ.ಪಂ. ಮುಖ್ಯಾಧಿಕಾರಿ ಚಂದ್ರ ಕುಮಾರ್ ಮಾಹಿತಿ ನೀಡಿ, ಸುಳ್ಯ ನಗರದಲ್ಲಿರುವ ಅಂಗವಿಕಲರ ನೋಂದಣಿ ಆಗಿದ್ದು, 118 ಮಂದಿ ಅರ್ಹ ಫಲಾನುಭವಿಗಳು ಹೆಸರನ್ನು ದಾಖಲಿಸಿಕೊಂಡಿದ್ದಾರೆ. ನಗರದಲ್ಲಿ ಇಷ್ಟೇ ಮಂದಿ ಅಂಗವಿಕಲರು ಇರುವುದಿಲ್ಲ. ಮಾಹಿತಿ ಸಿಗದೆ ಅವರು ಮುಂದೆ ಬಂದಿಲ್ಲ. ವಿದ್ಯಾರ್ಥಿ ವೇತನ, ಪ.ಜಾತಿ, ಪ.ಪಂ.ದವರಿಗೆ ಸಾಕಷ್ಟು ಸೌಲಭ್ಯಗಳಿವೆ. ಇದರ ಸದುಪಯೋಗ ಪಡೆದುಕೊಳ್ಳಿ. ಫಲಾನುಭವಿಗಳಲ್ಲಿ ಯಾರಾದರೂ ಮೃತರಾಗಿದ್ದರೆ ಅವರನ್ನುಪಟ್ಟಿಯಿಂದ ತೆಗೆಸುವಲ್ಲಿ ಅವರ ಮನೆಯವರು ಸಹಕರಿಸಬೇಕೆಂದರು.
ಸುಳ್ಯ ನ.ಪಂ.ನಿಂದ ಪುನರ್ವಸತಿ ಕೇಂದ್ರ ನಿರ್ಮಿಸುವ ಬೇಡಿಕೆ ಬಂದಿದ್ದು, ಈ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ ಎಂದರು.
ಅನುಪಾತ 3ರಿಂದ 5ಕ್ಕೆ ಏರಿಸಿ
ಸದಸ್ಯ ಕೆ.ಎಂ. ಮುಸ್ತಾಫ ಮಾತನಾಡಿ, ಅಂಗವಿಕಲರಿಗೆ ಸೌಲಭ್ಯ ನೀಡುವ ಅನುಪಾತ ಶೇ. 3ರಿಂದ 5ಕ್ಕೆ ಹೆಚ್ಚಿಸಬೇಕು. ಇಂದಿನ ಬೆಲೆ ಏರಿಕೆಯ ಕಾಲದಲ್ಲಿ ನೀಡುವ ಅನುದಾನ ಏನೇನೂ ಸಾಲದು. ಈ ಬಗ್ಗೆ ಸರಕಾರ ಗಮನ ಸೆಳೆಯುವಲ್ಲಿ ಪ್ರಯತ್ನಿಸುತ್ತೇವೆ ಎಂದರು.
ಅಂಗವಿಕಲರು ಮಾನಸಿಕವಾಗಿ ಸಬಲರಾದರೆ ಸಾಧನೆ ಮಾಡಲು ಸಾಧ್ಯ ಎಂಬುದನ್ನು ಅನೇಕ ಅಂಗವಿಕಲರು ಮಾಡಿತೋರಿಸಿ ಮಾದರಿ ಆಗಿದ್ದಾರೆ ಎಂದರು. ಅಂಗವಿಕಲರು ಉದ್ಯೋಗಕ್ಕಾಗಿ ಮಂಗಳೂರಿನ ಉದ್ಯೋಗ ವಿನಿಮಯ ಕೇಂದ್ರ ದಲ್ಲಿ ನೋಂದಾಯಿಸಿಕೊಳ್ಳುವಂತೆ ಸಲಹೆ ನೀಡಿದರು.
ಸಹಾಯ ಹಸ್ತ ನೀಡಿ
ನ.ಪಂ. ಸದಸ್ಯ ಎನ್.ಎ. ರಾಮಚಂದ್ರ ಮಾತನಾಡಿ, ಅಂಗವಿಕಲರ ಮೇಲೆ ಅನುಕಂಪ ಬೇಡ. ಅವರಿಗೆ ಸಾಧ್ಯವಾದಷ್ಟು ಸಹಾಯ ಹಸ್ತ ನೀಡಿ ಎಂದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುಕನ್ಯಾ ಮತ್ತು ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರದ ನೋಡಲ್ ಅಧಿಕಾರಿ ಸುಬ್ರಹ್ಮಣಿ ಮತ್ತು ವಿ. ಪುಟ್ಟಣ್ಣ ಮಾಹಿತಿ ನೀಡಿದರು. ನ.ಪಂ. ಉಪಾಧ್ಯಕ್ಷೆ ಹರಿಣಾಕ್ಷಿ ನಾರಾಯಣ, ಸ್ಥಾಯಿ ಸಮಿತಿ ಅಧ್ಯಕ್ಷೆ ಮೋಹಿನಿ ನಾಗರಾಜ್, ಸದಸ್ಯರಾದ ಗೋಪಾಲ ನಡುಬೈಲು, ಪ್ರಕಾಶ್ ಹೆಗ್ಡೆ, ಜಾನಕಿ ನಾರಾಯಣ, ಮೀನಾಕ್ಷಿ ಡಿ., ಸುನೀತಾ ಡಿ’ಸೋಜಾ, ಗಿರೀಶ ಕಲ್ಲುಗದ್ದೆ, ಕಿರಣ್ ಕುರುಂಜಿ , ಶಿವಕುಮಾರ್, ಶ್ರೀಲತಾ ಪ್ರಸನ್ನ, ಬಿ. ಉಮ್ಮರ್, ಕೆ. ಗೋಕುಲದಾಸ್, ಯು. ಪ್ರೇಮಾ ಉಪಸ್ಥಿತರಿದ್ದರು. ಪ್ರವೀಣ್ ನಾಯಕ್ ಸ್ವಾಗತಿಸಿ, ಆರೋಗ್ಯ ನಿರೀಕ್ಷಕ ರವಿಕೃಷ್ಣ ನಿರೂಪಿಸಿದರು. ಜಯಲಕ್ಷಿ$¾à ಸಹಕರಿಸಿದರು.
ಫಲಾನುಭವಿಗಳನ್ನು ಗುರುತಿಸಿ
ಈಗಾಗಲೇ ಅಂಗವಿಕಲರಿಗೆ ವಸತಿ ಸೌಲಭ್ಯ, ಉಚಿತ ನಳ್ಳಿ ನೀರು ಮೊದಲಾದವುಗಳನ್ನು ಪೂರೈಸಲಾಗಿದೆ. ಸೌಲಭ್ಯ ದಿಂದ ವಂಚಿತರಾದ ಫಲಾನುಭವಿಗಳ ಗುರುತಿಸುವ ಕೆಲಸ ಸಾರ್ವಜನಿಕರಿಂದ, ಅಧಿಕಾರಿ ಗಳಿಂದ ಆಗಬೇಕಾಗಿದೆ
-ಶೀಲಾವತಿ ಮಾಧವ, ನ.ಪಂ. ಅಧ್ಯಕ್ಷೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Sullia: ಬಿಎಸ್ಸೆನ್ನೆಲ್ ಟವರ್‌ಗೆ ಸೋಲಾರ್ ಪವರ್!
Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ
ಧರ್ಮಾಧಿಕಾರಿ ಡಾ| ಹೆಗ್ಗಡೆ ಸರ್ವಜನರ ವಿಕಾಸಕ್ಕೆ ಸಾಕ್ಷಿ
MUST WATCH
ಹೊಸ ಸೇರ್ಪಡೆ
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
Mangaluru: ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.