ಸಸ್ಯ ಸಂಪತ್ತು: ಬೀಜದುಂಡೆ ಬಿತ್ತನೆ, ಸಸಿ ನಾಟಿಗೆ ಉತ್ತೇಜನ
Team Udayavani, Jul 10, 2018, 2:35 AM IST
ನರಿಮೊಗರು: ಸಾಮಾಜಿಕ ಅರಣ್ಯ ವಿಭಾಗದ ಮುಕ್ವೆ ಸಸ್ಯ ಕ್ಷೇತ್ರದಲ್ಲಿ ನಾಟಿಗಾಗಿ 2017-18ನೇ ಸಾಲಿನಲ್ಲಿ ಒಟ್ಟು 43 ಬಗೆಯ 76,338 ಗಿಡಗಳು ಸಿದ್ಧವಾಗಿವೆ. ಇದರಲ್ಲಿ ಸಾರ್ವಜನಿಕ ವಿತರಣೆಗೆ 40,000, ಸಾಮಾಜಿಕ ಅರಣ್ಯ ಯೋಜನೆಯಲ್ಲಿ 34,500, ಉದ್ಯೋಗ ಖಾತರಿ ಯೋಜನೆಯಡಿ 1,100 ಹಾಗೂ 2016-17ನೇ ಸಾಲಿನಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಮೀಸಲಿರಿಸಿದ ಉಳಿಕೆ ಸಸಿಗಳು 1,188 ಹೀಗೆ ಒಟ್ಟು 76,338 ಸಸಿಗಳನ್ನು ಬೆಳೆಸಲಾಗಿದೆ. ಜತೆಗೆ ಬಿತ್ತನೆಗಾಗಿ ಬೀಜದುಂಡೆಗಳು ತಯಾರಾಗುತ್ತಿವೆ.
ಈ ಸಸ್ಯಕ್ಷೇತ್ರದಲ್ಲಿ ಒಟ್ಟು 43 ಬಗೆಯ ಸಸಿಗಳು ಇವೆೆ. ಕರಿ ನೇರಳೆ 390, ಮಂತು ಹುಳಿ 1,325, ಮಹಾಗನಿ 3,827, ಜಂಬು ನೇರಳೆ 380, ನೇರಳೆ 1,291,ಪುನರ್ಪುಳಿ 1,303, ಕಹಿಬೇವು 425, ಮಾವು 1,429, ಕಾಯಿದೂಪ 500, ಬಾದಾಮ್ 952, ಉಂಡೆಹುಳಿ 212, ರೆಂಜೆ 750, ಹೆಬ್ಬಲಸು 2,954, ಮದ್ದಿನ ಅಶೋಕ 115, ಬೊಲ್ಪಾಲೆ 45, ಮುತ್ತುಗ 20, ನಾಗ ಸಂಪಿಗೆ 80, ಕಿರಾಲ್ ಬೋಗಿ 829,ನಾಗಲಿಂ ಪುಷ್ಪ 465, ಬಿಲ್ವಪತ್ರೆ 1907,ರಕ್ತ ಚಂದನ 1,010, ಹೆಬ್ಬೇವು 165, ಸಂಪಿಗೆ 2953, ದಾಲ್ಚಿನ್ನಿ 549, ಹೊಳೆ ದಾಸವಾಳ 1,189, ರಾಮಫಲ 160, ಕಲ್ ಗರಿಗೆ 130, ಅಶ್ವತ್ಥ 10, ರಾಮಪತ್ರೆ 38, ಬೇಂಗ 3,933, ಹೊನ್ನೆ 315, ಹಲಸು 3,783, ಶ್ರೀಗಂಧ 703, ಸಾಗುವಾನಿ 10,048, ಗಾಳಿ 26,580, ಔಷದೀಯ ಸಸ್ಯಗಳು 2,098, ಹೊಂಗೆ 1,062, ಬನ್ನಿ 400, ಅಕೇಶಿಯಾ 1,470, ಬೀಟೆ 256, ಸೀಮರೂಬ 72, ಹೊಲೆಮತ್ತಿ 64 ಹಾಗೂ ಇತರ ಸಸಿಗಳು 151 ಹೀಗೆ ಒಟ್ಟು 76,338 ಸಸಿಗಳನ್ನು ಬೆಳೆಸಲಾಗಿದೆ.
ಸಸ್ಯನಾಟಿಗೂ ಪ್ರೋತ್ಸಾಹ
ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಸಸ್ಯನಾಟಿಗೆ ಅವಕಾಶವಿದೆ. ಇದರಲ್ಲಿ 6×9 ಅಳತೆಯ ಪಾಲಿಥಿನ್ ಚೀಲದ ಗಿಡ ನಾಟಿಗೆ ಗಿಡವೊಂದಕ್ಕೆ 60 ರೂ. ಹಾಗೂ 8×12 ಅಳತೆಯ ಪಾಲಿಥಿನ್ ಚೀಲದ ಗಿಡಕ್ಕೆ 100 ರೂ.ಗಳನ್ನು ಪಾವತಿಸಲಾಗುತ್ತದೆ. ಮುಂದಿನ ವರ್ಷದ ಪೋಷಣೆಗಾಗಿ ಕೈಗೊಂಡ ಕೆಲಸಗಳಿಗೂ ಉದ್ಯೋಗ ಖಾತರಿ ಯೋಜನೆಯ ಮೂಲಕ ಕೂಲಿ ಪಾವತಿಗೆ ಅವಕಾಶವಿದೆ. ಸ್ಮಾಪ್ ಯೋಜನೆಯಲ್ಲಿ ಗಿಡವೊಂದಕ್ಕೆ 6 ಮತ್ತು 7 ರೂ. ಸಹಾಯಧನವಿದೆ. ಈ ಯೋಜನೆಗಾಗಿ ಫಲಾನುಭವಿಯೇ ತಮ್ಮ ಜಾಗದಲ್ಲಿ ಸಸ್ಯ ನಾಟಿ ಮಾಡಬೇಕು. ಇಲಾಖೆಯ ನಿಯಮಾವಳಿ ಹಾಗೂ ಪರಿಶೀಲನೆಯ ಬಳಿಕ ಈ ಸಹಾಯಧನ ಒದಗಿಸಲಾಗುತ್ತದೆ. ಸಾರ್ವಜನಿಕರಿಗೆ 1 ರೂ.ನಿಂದ 3 ರೂ. ಬೆಲೆಯಲ್ಲಿ ಗಿಡ ವಿತರಿಸಲಾಗುತ್ತಿದೆ.
ಇಲಾಖೆ ಪ್ರೋತ್ಸಾಹ
ಸಾಮಾಜಿಕ ಅರಣ್ಯ ಇಲಾಖೆಯ ಮೂಲಕ ಹಸುರೀಕರಣಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ. ಕಳೆದ ಬಾರಿ ವಿವಿಧ ಸಂಘಟನೆಗಳ ಸಹಕಾರದಲ್ಲಿ ಸವಣೂರು, ಕಾಣಿಯೂರು, ನರಿಮೊಗರು ಸುತ್ತಮುತ್ತಲ ಪ್ರದೇಶಗಳಲ್ಲಿ ಗೋಗ್ರೀನ್ ಅಭಿಯಾನದಲ್ಲಿ 3,000ಕ್ಕೂ ಮಿಕ್ಕಿ ಸಸ್ಯ ಬೆಳೆಸಲಾಗಿದೆ. ಇಲಾಖೆ ಕ್ಲಪ್ತ ಸಮಯಕ್ಕೆ ಸಸ್ಯಗಳ ಪೂರೈಕೆ ಮಾಡಿತ್ತು. ಈ ಬಾರಿಯೂ ವಿವಿಧ ಹಣ್ಣುಗಳ ಹಾಗೂ ದೀರ್ಘ ಬಾಳಿಕೆಯ ಸುಮಾರು 2,000 ಗಿಡಗಳನ್ನು ಗ್ರಾಮ ವಿಕಾಸ ಸಮಿತಿಯ ಮೂಲಕ ಪೂರೈಕೆ ಮಾಡಲಿದ್ದೇವೆ. ಇಲಾಖೆಯಿಂದ ಸಸ್ಯ ಪೂರೈಸುವ ಭರವಸೆ ಸಿಕ್ಕಿದೆ.
– ಉದಯ ಬಿ.ಆರ್. ಸಂಯೋಜಕ, ಗ್ರಾಮ ವಿಕಾಸ ಸಮಿತಿ, ಪಾಲ್ತಾಡಿ
ಸಾರ್ವಜನಿಕ ಸಹಭಾಗಿತ್ವ
ನಮ್ಮ ಇಲಾಖೆ ಮಾತ್ರವಲ್ಲ ಸಾರ್ವಜನಿಕರು ಕೂಡ ಗಿಡಗಳನ್ನು ನೆಟ್ಟು ಅರಣ್ಯೀಕರಣಕ್ಕೆ ಒತ್ತು ನೀಡಬೇಕು.ಈ ಭಾಗದಲ್ಲಿ ಸಾರ್ವಜನಿಕ ಸಂಘಟನೆಯವರು ಗಿಡ ನೆಡುವ ಕಾರ್ಯಗಳಿಗೆ ಸಹಕಾರ ನೀಡುತ್ತಿದ್ದಾರೆ. ಉದ್ಯೋಗ ಖಾತರಿ ಯೋಜನೆಯ ಮೂಲಕ ಗಿಡ ನೆಡಬಹುದು. ಇಲಾಖೆಯ ಕಾರ್ಯಗಳು ಯಶಸ್ವಿಯಾಗಬೇಕಾದರೆ ಸಮುದಾಯದ ಪಾಲ್ಗೊಳ್ಳುವಿಕೆ ಮುಖ್ಯ.ಈಗಾಗಲೇ ಸಸಿ ವಿತರಣೆ ನಡೆಯುತ್ತಿದೆ.
– ವಿದ್ಯಾರಾಣಿ, ವಲಯ ಅರಣ್ಯಾಧಿಕಾರಿ ಪುತ್ತೂರು (ಸಾಮಾಜಿಕ ಅರಣ್ಯ)
— ಪ್ರವೀಣ್ ಚೆನ್ನಾವರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Alankaru ಅಸೌಖ್ಯದಿಂದ ಎರಡು ತಿಂಗಳ ಬಾಣಂತಿ ಸಾವು
Bantwal: ಬೋಳಂತೂರಿನ ದರೋಡೆ ಪ್ರಕರಣ: ವಾರ ಕಳೆದರೂ ಸಿಗದ ಮಹತ್ವದ ಸುಳಿವು
National Highway ಕಾಮಗಾರಿ ಪರಿಶೀಲನೆ: ಮಾರ್ಚ್ ಅಂತ್ಯಕ್ಕೆ ಶೇ. 95 ಕಾಮಗಾರಿ ಪೂರ್ಣ: ಡಿಸಿ
Theft Case ಜುವೆಲರಿಯಿಂದ ಕಳವು: ಆರೋಪಿಗಳಿಗೆ ಜೈಲು
Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.