ಕುದ್ಮಾರು : ಸುಸಜ್ಜಿತ ಕ್ರೀಡಾಂಗಣ ನಿರ್ಮಾಣಕ್ಕೆ ಚಾಲನೆ
Team Udayavani, Mar 14, 2017, 4:55 PM IST
ಸವಣೂರು: ಬೆಳಂದೂರು ಗ್ರಾ.ಪಂ.ವ್ಯಾಪ್ತಿಯ ಕುದ್ಮಾರಿನ ಬರೆಪ್ಪಾಡಿ ಶಾಂತಿಮೊಗರು ಬಳಿ ಕ್ರೀಡಾಂಗಣ ನಿರ್ಮಿಸುವ ಕುರಿತು ಚಿಂತನೆ ನಡೆದಿದೆ.
ದರ್ಬೆ-ಸುಬ್ರಹ್ಮಣ್ಯ ಮುಖ್ಯರಸ್ತೆಗೆ ಹೊಂದಿ ಕೊಂಡ ಕುದ್ಮಾರು ಎಂಬಲ್ಲಿ ಸುಮಾರು 4.74 ಎಕ್ರೆ ವಿಶಾಲವಾದ ಸರಕಾರಿ ಜಾಗವಿದ್ದು, ಅಲ್ಲೊಂದು ಸುಂದರ, ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಿಕೊಡುವಂತೆ ಸ್ಥಳೀಯ ಯುವಕ ಮಂಡಲ ಹಾಗೂ ಗ್ರಾಮಸ್ಥರು 2016ರ ಆಗಸ್ಟ್ 30 ರಂದು ಪುತ್ತೂರಲ್ಲಿ ಆಗಿನ ಸಹಾಯಕ ಆಯುಕ್ತ ಡಾ| ಕೆ.ವಿ. ರಾಜೇಂದ್ರರವರಿಗೆ ಮನವಿ ಸಲ್ಲಿಸಿದ್ದರು. ಗ್ರಾಮದಲ್ಲಿ ನಡೆಯುವ ಸಭೆ- ಸಮಾರಂಭ, ವಾರ್ಷಿಕೋತ್ಸವ ಮೊದಲಾದ ಕಾರ್ಯಕ್ರಮಗಳಿಗೆ ಇದರಿಂದ ಅನುಕೂಲ ವಾಗಲಿದ್ದು, ಗ್ರಾಮೀಣ ಕ್ರೀಡಾಳುಗಳಿಗೂ ಪ್ರಯೋಜನವಾಗಲಿದೆ ಎಂದು ವಿವರಿಸಲಾಗಿತ್ತು.
ಆ ಮನವಿಗೆ ಸ್ಪಂದಿಸಿದ ಅಂದಿನ ಎಸಿ ಕಡಬ ತಹಸೀಲ್ದಾರ್‌ರವರಿಗೆ ಗಡಿ ಗುರುತು ಮಾಡಿ, ಬೇಲಿ ನಿರ್ಮಿಸಲು ಅನುದಾನ ಬಿಡುಗಡೆಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಆರ್‌ಐ ನೇತƒತ್ವದಲ್ಲಿ ಕಂದಾಯ ಇಲಾಖಾಧಿಕಾರಿಗಳು ಗಡಿ ಗುರುತು ಮಾಡಿ, ವರದಿ ತಯಾರಿಸಿದ್ದರು. ಎಸಿಯವರು ಬೇಲಿ ನಿರ್ಮಾಣಕ್ಕೆ ಅಂದಾಜು ಪಟ್ಟಿ ತಯಾರಿಸುವಂತೆ ಪಿಡಬುÉŒÂಡಿ ಇಲಾಖೆಗೆ ಆದೇಶಿಸಿದರು. ಇಲಾಖೆಯು 2.35 ಲಕ್ಷ ರೂ.ಅಂದಾಜು ಪಟ್ಟಿ ಸಿದ್ಧಪಡಿಸಿ ತಹಸೀಲ್ದಾರರಿಗೆ ನೀಡಿತ್ತು. ಈ ಸಂದರ್ಭದಲ್ಲಿ ಎಸಿ ವರ್ಗಾವಣೆಗೊಂಡಿದ್ದರು.
ಇದೀಗ ಖಾಲಿಯಿರುವ ಸರಕಾರಿ ಜಾಗವನ್ನು ಆರ್‌ಟಿಸಿಯಲ್ಲಿ ಕ್ರೀಡಾ ಇಲಾಖಾ ಹೆಸರಲ್ಲಿ ನಮೂ
ದಿಸಿ, ಅನುದಾನ ಬಿಡುಗಡೆಜಛಿ ಪ್ರಯತ್ನ ಆರಂಭ ವಾಗಿದೆ ಎಂದು ಮೂಲಗಳು ಖಚಿತಪಡಿಸಿವೆ.
ಸರ್ವೇ ನಂಬರ್ 170/1ರ ಒಟ್ಟು 4.74 ಎಕ್ರೆ ಜಾಗದಲ್ಲಿ 1.25 ಎಕ್ರೆ ಕೂರ ಯೂಸುಫ್ ಹಾಜಿಯವರ ಸ್ವಾಧೀನದಲ್ಲಿದೆ. ಅದರಲ್ಲಿ ಸುಮಾರು 20 ವರ್ಷದ ಅಡಿಕೆ ಮರಗಳಿವೆ. ಉಳಿದ ಜಾಗ 3.45 ಖಾಲಿಯಿದ್ದು ಈ ಜಾಗ ಕ್ರೀಡಾಂಗಣಕ್ಕೆ ದೊರೆಯುವ ಸಾಧ್ಯತೆಯಿದೆ.
ಸೂಕ್ತವಾದ ಸ್ಥಳ
ಶಾಂತಿಮೊಗರು ಸೇತುವೆ ನಿರ್ಮಾಣದ ಬಳಿಕ ಆಲಂಕಾರು ಭಾಗದವರೂ ಈ ಕ್ರೀಡಾಂಗಣವನ್ನು ಬಳಸಬಹುದು. ಕ್ರೀಡಾಂಗಣ ಮುಖ್ಯರಸ್ತೆಗೆ ಹೊಂದಿಕೊಂಡಿರುವುದೂ ಕ್ರೀಡಾಪಟುಗಳಿಗೆ ಹಾಗೂ ಪ್ರೇಕ್ಷಕ ವರ್ಗಕ್ಕೆ ಅನುಕೂಲವಾಗಲಿದೆ. ಸಾರ್ವಜನಿಕರ ನ್ಯಾಯಯುತ ಬೇಡಿಕೆಗೆ ಪೂರಕವಾಗಿ ಆದಷ್ಟು ಬೇಗ ಸ್ಪಂದಿಸಬೇಕು ಎನ್ನುತ್ತಾರೆ ರೆಡ್ ಬಾಯ್ಸ ಹಾಗೂ ಸ್ನೇಹಿತರ ಬಳಗ ಸಂಘಟನೆಯವರ ಆಗ್ರಹ.
ಗ್ರಾ.ಪಂ.ಗೆ ಬದ್ಧತೆ ಬೇಕು
ಕ್ರೀಡಾ ಚಟುವಟಿಕೆಗಳಿಗೆ ಪೊÅàತ್ಸಾಹ ನೀಡಲು ಪ್ರತೀ ಗ್ರಾಮದಲ್ಲೂ ಕ್ರೀಡಾಂಗಣಕ್ಕಾಗಿ ಸರಕಾರಿ ಜಾಗವನ್ನು ಕಾದಿರಿಸುವಲ್ಲಿ ಗ್ರಾ.ಪಂ.ಗಳು ಬದ್ಧತೆ ತೋರಿಸಬೇಕು. ಸಹಾಯಕ ಆಯುಕ್ತ ಹಾಗೂ ಜಿಲ್ಲಾಧಿಕಾರಿಯವರಿಗೆ ಕಡತಗಳನ್ನು ರವಾನಿಸಿ ಕ್ರೀಡಾಂಗಣಕ್ಕೆ ಜಾಗ ಕಾದಿರಿಸುವಂತೆ ಮಾಡುತ್ತೇನೆ.
– ಎಸ್. ಅಂಗಾರ ಶಾಸಕ, ಸುಳ್ಯ
ಹೋರಾಟ ಮಾಡಲಿದ್ದೇವೆ
ಸಾರ್ವಜನಿಕ ಹಿತದೃಷ್ಟಿಯಿಂದ ನಾವು ಸಲ್ಲಿಸಿರುವ ಮನವಿಗೆ ಸಕಾರಾತ್ಮಕ ಬೆಂಬಲ ಸಿಗುತ್ತಿದೆ. ಕ್ರೀಡಾಂಗಣ ಹೊರತುಪಡಿಸಿ ಇನ್ಯಾವುದೇ ಉದ್ದೇಶಕ್ಕೆ ಇದು ಬಳಕೆಯಾದರೆ ಉಗ್ರ ಹೋರಾಟ ಮಾಡುತ್ತೇವೆ.
-ದೇವರಾಜ್ ನೂಜಿ,
ಅಧ್ಯಕ್ಷ, ಸ್ಕಂದಶ್ರೀ ಯುವಕ ಮಂಡಲ, ಕುದ್ಮಾರು
ಪ್ರತಿಭೆಗಳಿಗೆ ವೇದಿಕೆ
ಕ್ರೀಡಾಂಗಣವಾದಲ್ಲಿ ಗ್ರಾಮೀಣ ಕ್ರೀಡಾ ಪ್ರತಿಭೆಗಳಿಗೆ ಉಪಯುಕ್ತ ವೇದಿಕೆಯಾಗಲಿದೆ. ಸರಕಾರ ಅನುದಾನ ಬಿಡುಗಡೆ ಮಾಡಿ, ಕ್ರೀಡಾಪಟುಗಳಿಗೆ ಬೇಕಾದ ಸೌಲಭ್ಯ ಒದಗಿಸಿಕೊಟ್ಟಲ್ಲಿ ನಮ್ಮೂರಿನ ಆಟಗಾರರೂ ರಾಷ್ಟ್ರಮಟ್ಟದಲ್ಲಿ ಮಿಂಚಬಲ್ಲರು.
-ನವ್ಯಶ್ರೀ ಖಂಡಿಗ ರಾಷ್ಟ್ರೀಯ ಕಬಡ್ಡಿ ಆಟಗಾರ್ತಿ
– ಪ್ರವೀಣ್ ಚೆನ್ನಾವರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Alankaru ಅಸೌಖ್ಯದಿಂದ ಎರಡು ತಿಂಗಳ ಬಾಣಂತಿ ಸಾವು
Bantwal: ಬೋಳಂತೂರಿನ ದರೋಡೆ ಪ್ರಕರಣ: ವಾರ ಕಳೆದರೂ ಸಿಗದ ಮಹತ್ವದ ಸುಳಿವು
National Highway ಕಾಮಗಾರಿ ಪರಿಶೀಲನೆ: ಮಾರ್ಚ್ ಅಂತ್ಯಕ್ಕೆ ಶೇ. 95 ಕಾಮಗಾರಿ ಪೂರ್ಣ: ಡಿಸಿ
Theft Case ಜುವೆಲರಿಯಿಂದ ಕಳವು: ಆರೋಪಿಗಳಿಗೆ ಜೈಲು
Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.