ಪ್ರಧಾನಿ ಮೋದಿ ಮೆಚ್ಚುಗೆ ಪಡೆದ ದಕ್ಷಿಣ ಕನ್ನಡದ ಬಾಕಾಹು: ಏನಿದು ಬಾಕಾಹು?
Team Udayavani, Jul 26, 2021, 9:53 AM IST
ಪುತ್ತೂರು: ರಾಜ್ಯ ಹಾಗೂ ನೆರೆಯ ಕಾಸರಗೋಡು ಜಿಲ್ಲೆಯಲ್ಲಿ ಹೊಸ ಹವಾ ಸೃಷ್ಟಿಸಿರುವ ಬಾಕಾಹು ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರು ರವಿವಾರ ನಡೆದ ಮನ್ ಕೀ ಬಾತ್‌ನಲ್ಲಿ ಪ್ರಸ್ತಾವಿಸುವ ಮೂಲಕ ಬಾಳೆಕಾಯಿ ಹುಡಿ (ಬಾಕಾಹು) ಕ್ರಾಂತಿಯ ಕಂಪು ದೇಶಾದ್ಯಂತ ಪಸರಿಸಿದೆ.
ಆಕಾಶವಾಣಿಯ ಮನ್ ಕೀ ಬಾತ್ ಸರಣಿಯಲ್ಲಿ ಪ್ರಧಾನಿ ಮಾತನಾಡಿ,ಕೊರೊನಾ ಕಾಲಘಟ್ಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಹಿಳೆಯರು ಬಾಕಾಹುವಿನಿಂದಾಗಿ ಆದಾಯ ಹೆಚ್ಚಿಸಿಕೊಂಡು ಸ್ವಾವಲಂಬಿ ಜೀವನಕ್ಕೆ ಹೊಸ ದಾರಿ ಕಂಡುಕೊಂಡಿರುವ ಬಗ್ಗೆ ಮೆಚ್ಚುಗೆ ಸೂಚಿಸಿದರು.
ಇದನ್ನೂ ಓದಿ:ಒಲಿಂಪಿಕ್ಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಫೆನ್ಸಿಂಗ್ ಪಂದ್ಯದಲ್ಲಿ ಭಾರತಕ್ಕೆ ಗೆಲುವು
ಬಾಕಾಹುವಿನಿಂದ ದೋಸೆ, ಗುಲಾಬ್ ಜಾಮೂನ್ ಸೇರಿದಂತೆ ದೋಸೆ, ಸಿಹಿ ತಿಂಡಿ ತಯಾರಿಸಿ ಸಾಮಾಜಿಕ ಜಾಲತಾಣದಲ್ಲಿ ಅದರ ಫೋಟೋ ಹಂಚಿಕೊಂಡಿದ್ದು ಇದರಿಂದ ಬೇಡಿಕೆ ಏರಿಕೆಯಾಗಿದೆ. ಈ ಹೊಸ ಆವಿಷ್ಕಾರವನ್ನು ಮಹಿಳೆಯರೇ ಆಸಕ್ತಿ ವಹಿಸಿ ಮಾಡುತ್ತಿರುವುದು ಇತರರಿಗೆ ಪ್ರೇರಣೆ ನೀಡಲಿದೆ ಎಂದು ಮೋದಿ ಉಲ್ಲೇಖೀಸಿದರು.
ಏನಿದು ಬಾಕಾಹು?
“ಬಾಕಾಹು’ ಎಂದರೆ ಬಾಳೆಕಾಯಿ ಹುಡಿ ಎಂದರ್ಥ. ಈ ಹುಡಿ ವಿವಿಧ ಖಾದ್ಯ ರೂಪದಲ್ಲಿ ಅಡುಗೆ ಮನೆ ಪ್ರವೇಶಿಸಿದ್ದು, ಆರೋಗ್ಯ ಮತ್ತು ಆದಾಯದ ದೃಷ್ಟಿಯಿಂದ ಜನಮನ್ನಣೆ ಪಡೆಯುತಿದ್ದು ಕಿರು ಉದ್ಯಮ ಸ್ವರೂಪವನ್ನು ಪಡೆಯುತ್ತಿದೆ. ಗೋಧಿ, ಮೈದಾಕ್ಕೆ ಪರ್ಯಾಯ ಹಲವು ವಿಟಮಿನ್, ಮೆಗ್ನಿಶಿಯಂ, ಪೊಟಾಶಿಯಂನಂತಹ ಸತ್ವಭರಿತ ಪೋಷಕಾಂಶಗಳಿಂದ ಕೂಡಿದ ಬಾಕಾಹುವನ್ನು ಗೋಧಿ ಪುಡಿ ಮತ್ತು ಮೈದಾ ಹಿಟ್ಟಿಗೆ ಪರ್ಯಾಯವಾಗಿ ಬಳಸಬಹುದಾಗಿದೆ.
ತಯಾರಿ ಹೇಗೆ?
ಬಾಕಾಹು ತಯಾರಿ ಸುಲಭ. ಬಲಿತ ಬಾಳೆಕಾಯಿಯನ್ನು ಸಿಪ್ಪೆ ತೆಗೆದು ಸಣ್ಣದಾಗಿ ಹೆಚ್ಚಿ ಬಿಸಿಲಲ್ಲಿ ಅಥವಾ ಡ್ರೈಯರ್‌ನಲ್ಲಿ ಒಣಗಿಸಬೇಕು. ಸಿಪ್ಪೆ ತೆಗೆದ ಕೂಡಲೇ ಆಕ್ಸಿಡೈಸ್ ಆಗಿ ಕಪ್ಪಾಗುವುದನ್ನು ತಡೆಯಲು ಒಂದು ಲೀಟರ್ ನೀರಿಗೆ ಗಂಜಿ ತೆಳಿ ಮತ್ತು ಉಪ್ಪು ಮಿಶ್ರ ಮಾಡಿ ಅದಕ್ಕೆ ಸುಲಿದ ಬಾಳೆಕಾಯಿ ಹಾಕಬೇಕು. ಒಣಗಿದ ಬಳಿಕ ಪುಡಿ ಮಾಡಿ ಖಾದ್ಯಗಳ ತಯಾರಿಗೆ ಬಳಸಬಹುದು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kokkada: ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ
Puttur: ಸ್ಕೂಲ್ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್
Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು
Shishila:ಮಕ್ಕಳನ್ನು ಶಾಲೆಗೆ ಕಳುಹಿಸುವ ವೇಳೆ ಕಾಡಾನೆ ದಾಳಿ;ಸೊಂಡಿಲಿನಿಂದ ಬೈಕ್ ಕೆಡವಿದ ಆನೆ
Vitla: ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ; 2 ದಿನಗಳ ಹಿಂದೆ ಮೃತಪಟ್ಟಿರುವುದಾಗಿ ಶಂಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.