ಬಿಂಬಶುದ್ಧಿ, ಶಾಂತಿ ಹೋಮ, ಹೊರೆಕಾಣಿಕೆ ಸಮರ್ಪಣೆ

Team Udayavani, Mar 6, 2019, 6:05 AM IST

6-march-5.jpg

ಪೊಳಲಿ: ಇತಿಹಾಸ ಪ್ರಸಿದ್ಧ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಮಾ. 5ರಂದು ಹಲವು ವೈದಿಕ ಪೂಜಾ ವಿಧಿವಿಧಾನಗಳು ಜರಗಿದವು.

ಬೆಳಗ್ಗೆ 6ರಿಂದ ಪುಣ್ಯಾಹ ನಡೆಸಲಾಯಿತು. ಅಥರ್ವಶೀರ್ಷ ಗಣಯಾಗ, ಶ್ರೀ ದುರ್ಗಾ ಪರಮೇಶ್ವರಿ ಮತ್ತು ಸಹಪರಿವಾರ ರಾಜ ರಾಜೇಶ್ವರಿ ದೇವರುಗಳಿಗೆ ಬಿಂಬಶುದ್ಧಿ, ಶಾಂತಿ ಹೋಮಗಳು, ಪ್ರಾಯಶ್ಚಿತ ಹೋಮಗಳು, ಹೋಮ ಕಲಶಾಭಿಷೇಕ ನಡೆಸಿ ಮಧ್ಯಾಹ್ನ ಮಹಾ ಪೂಜೆ ನಡೆಸಲಾಯಿತು. ಸಂಜೆ 5ರಿಂದ ಅಂಕುರಾರೋಹಣ, ಭದ್ರಕಾಳಿಗೆ ಮಂಡಲಪೂಜೆ, ಮಹಾಪೂಜೆ ಹಾಗೂ ಕುಂಡ ಶುದ್ಧಾದಿ ಪ್ರಕ್ರಿಯೆಗಳನ್ನು ನಡೆಸಲಾಯಿತು.

ಬೆಳಗ್ಗೆ ಉಮಾನಾಥ್‌ ಸಂಪಿಗೆ ಮತ್ತು ಬಳಗ ದವರಿಂದ ನಾದಸ್ವರ ವಾದನ ನಡೆಯಿತು. ಶ್ರೀದುರ್ಗಾ ಭಜನ ಮಂಡಳಿ ತೆಂಕುಳಿ ಪಾಡಿಯವರಿಂದ ಭಜನೆ, ಶ್ರೀ ಸೀತಾರಾಮ ಭಜನಮಂಡಳಿ ನಾರಳ ತಂಡದವರಿಂದ ಕುಣಿತ ಭಜನೆ, ಮಧುಸೂದನ್‌ ಭಟ್‌ ಮತ್ತು ಬಳಗ ಗುರುಪುರ ತಂಡದಿಂದ ಭಜನೆ ಜರಗಿತು.

ಶ್ರೀರಾಜರಾಜೇಶ್ವರಿ ವೇದಿಕೆಯಲ್ಲಿ ಬೆಳಗ್ಗೆ ಶೀಲದಿವಾಕರ್‌ ಮಂಗಳೂರು ಅವರಿಂದ ಸುಗಮ ಸಂಗೀತ, ತೋನ್ಸೆ ಪುಷ್ಕಲ್‌ ಕುಮಾರ್‌ ಅವರಿಂದ ಹರಿಕಥೆ, ಮಧ್ಯಾಹ್ನ ಸ್ವರಾಂಜಲಿ ಕಿನ್ನಿಗೋಳಿ ಯವರಿಂದ ಭಕ್ತಿ ಸಂಗೀತ, ಶೇಷಗಿರಿದಾಸ್‌ ರಾಯಚೂರು ಅವರಿಂದ ದಾಸ ಪದಗಳು, ಸಂಜೆ ಶಾಲಿನಿ ಆತ್ಮಭೂಷಣ್‌ ಅವರಿಂದ ಭರತನಾಟ್ಯ, ರಾತ್ರಿ 7ರಿಂದ 10ರ ವರೆಗೆ ರಮೇಶ್ಚಂದ್ರ ಬೆಂಗಳೂರು ಸಂಯೋಜನೆಯಿಂದ ಸಂಗೀತ ಸಂಭ್ರಮ ಸಹಿತ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.

ಪುತ್ತಿಗೆ ದೇವಸ್ಥಾನ, ಚೌಟರಸರ ಅರಮನೆಯಿಂದ ಹೊರೆಕಾಣಿಕೆ
ಶ್ರೀ ಕ್ಷೇತ್ರ ಪೊಳಲಿಗೆ ಪುತ್ತಿಗೆ ಸೋಮನಾಥೇಶ್ವರ ದೇವಸ್ಥಾನ ಹಾಗೂ ಮೂಡಬಿದಿರೆಯ ಚೌಟರಸರ ಅರಮನೆಯಿಂದ ಹೊರೆಕಾಣಿಕೆ ಆಗಮಿಸಿದ್ದು, ದೇವಸ್ಥಾನದ ವತಿಯಿಂದ ಅದ್ದೂರಿಯಾಗಿ ಸ್ವಾಗತಿಸಲಾಯಿತು.

ಪುತ್ತಿಗೆ ಜೋತಿಷಿ, ಪುತ್ತಿಗೆ ಸೋಮನಾಥೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರು ಮೆರವಣಿಗೆಯಲ್ಲಿ ಆಗಮಿಸಿದ್ದು ಅವರನ್ನು ಪೊಳಲಿಯ ಅರ್ಚಕ ವೃಂದದವರು ಸ್ವಾಗತಿಸಿದರು.

ಆಳ್ವಾಸ್‌ನಿಂದ ಸಾಂಸ್ಕೃತಿಕ ಕಾರ್ಯಕ್ರಮ
ಶ್ರೀ ರಾಜರಾಜೇಶ್ವರಿ ವೇದಿಕೆ ಹಾಗೂ ಶ್ರೀ ದುರ್ಗಾಪರಮೇಶ್ವರಿ ವೇದಿಕೆಯಲ್ಲಿ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗುತ್ತಿದ್ದು ಜನಮನಸೂರೆಗೊಂಡವು. ಮಾ. 4ರ ಸಂಜೆ 7ರಿಂದ ಆಳ್ವಾಸ್‌ ಪ್ರತಿಷ್ಠಾನದ 350 ವಿದ್ಯಾರ್ಥಿ ಗಳಿಂದ ಆಳ್ವಾಸ್‌ ಸಾಂಸ್ಕೃತಿಕ ವೈಭವ ವಿಶೇಷ ಆಕರ್ಷಣೆ ಒದಗಿಸಿದ್ದವು. ದೇಶ-ವಿದೇಶಗಳ ವಿದ್ಯಾರ್ಥಿಗಳು ಭಾಗವಹಿಸಿ ಕಲೆಯನ್ನು ಪ್ರದರ್ಶಿಸಿದರು. ವಿದ್ಯಾರ್ಥಿಗಳು ನಡೆಸಿಕೊಟ್ಟ ಮಲ್ಲಕಂಬ ಕಸರತ್ತು ಮೈನವಿರೇಳಿಸಿತ್ತು. ಇದರೊಂದಿಗೆ ಹಗ್ಗದೊಂದಿಗೆ ನಾನಾ ಕಸರತ್ತುಗಳನ್ನು ನಡೆಸಿಕೊಟ್ಟರು. ಡೋಲು ಕುಣಿತ, ಮಣಿಪುರ ಶೈಲಿ-ಪಂಜಾಬಿ ಶೈಲಿಯ ನೃತ್ಯಗಳು ವಿಶೇಷ ಆಕರ್ಷಣೆ ಒದಗಿಸಿದ್ದವು. ರಾತ್ರಿ 11 ಗಂಟೆ ಯವರೆಗೆ ಆಳ್ವಾಸ್‌ ಸಾಂಸ್ಕೃತಿಕ ವೈಭವ ಜರಗಿದವು. ಇದರ ಜತೆಗೆ ನಾನಾ ತಂಡಗಳಿಂದ ಚೆಂಡೆವಾದನವೂ ನಡೆಯಿತು.

ಹೊರೆಕಾಣಿಕೆ ಸಮರ್ಪಣೆ 
ಬ್ರಹ್ಮಕಲಶೋತ್ಸವಕ್ಕೆ ರಾಜ್ಯದ ನಾನಾ ಭಾಗಗಳಿಂದ ಹೊರೆಕಾಣಿಕೆ ಆಗಮಿಸುತ್ತಿದ್ದು, ಉಗ್ರಾಣ ಬಹುತೇಕ ಭರ್ತಿಯಾಗಿದೆ. ಮೊನ್ನೆಯಿಂದ ದಿನಂಪ್ರತಿ ಹೊರೆಕಾಣಿಕೆ ಆಗಮಿಸುತ್ತಲೇ ಇರುವುದು ಹೊಸ ದಾಖಲೆ ಎನಿಸಿದೆ. ಸ್ವಯಂಸೇವಕರ ತಂಡದವರು ಹೊರೆಕಾಣಿಕೆಗಳನ್ನು ವಾಹನಗಳಿಂದ ಇಳಿಸಿ ಉಗ್ರಾಣದಲ್ಲಿ ತುಂಬಿಸುತ್ತಿದ್ದಾರೆ. ಹಲಸು, ಸೌತೆ, ಕುಂಬಳಕಾಯಿ. ಚೀನಿಕಾಯಿ, ಅಡಿಕೆ, ಸೀಯಾಳ, ಅಕ್ಕಿ, ಬಾಳೆ ಎಲೆ, ಪಾತ್ರೆಗಳಿಂದ ಉಗ್ರಾಣ ತುಂಬಿತುಳುಕುತ್ತಿದೆ. ಹೊರೆಕಾಣಿಗೆ ಅರ್ಪಿಸುವ ಭಕ್ತರಿಗೆ ಪ್ರಸಾದ ವಿತರಿಸಿ, ಕೃತಜ್ಞತೆ ಪತ್ರ ನೀಡಲಾಗುತ್ತಿದೆ. ಮೊನ್ನೆ ಒಟ್ಟು ಸುಮಾರು 8,000 ಪ್ರಸಾದ ವಿತರಿಸಲಾಗಿದ್ದು, ನಿನ್ನೆ ಸುಮಾರು 10,500 ರಷ್ಟು ಪ್ರಸಾದ ವಿತರಿಸಲಾಗಿದೆ. 

ಟಾಪ್ ನ್ಯೂಸ್

K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

Shiva Rajkumar: ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!

Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Earthquake…! ರೋಡ್‌ ರೋಲರ್‌ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು

Earthquake…! ರೋಡ್‌ ರೋಲರ್‌ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು

WTC 25; India’s Test Championship finals road gets tough; Here’s the calculation

WTC 25; ಕಠಿಣವಾಯ್ತು ಭಾರತದ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಹಾದಿ; ಹೀಗಿದೆ ಲೆಕ್ಕಾಚಾರ

Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ

Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Battery theft at Dharwad District Collector’s Office

Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ

K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

Shiva Rajkumar: ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!

Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.