ಪೊಳಲಿ: ರಾಷ್ಟ್ರೀಯ ಯುವ ದಿನಾಚರಣೆ
Team Udayavani, Jan 13, 2019, 6:11 AM IST
ಪೊಳಲಿ: ಸ್ವಾಮಿ ವಿವೇಕಾನಂದರ 157ನೇ ಜನ್ಮದಿನಾಚರಣೆ ಪ್ರಯುಕ್ತ ಶನಿವಾರ ಪೊಳಲಿ ರಾಮ ಕೃಷ್ಣ ತಪೋವನದ ವತಿಯಿಂದ ನಡೆದ ಜಾಥಾಕ್ಕೆ ಸ್ವಾಮಿ ವಿವೇಕಚೈತನ್ಯಾನಂದ ಅವರು ಚಾಲನೆ ನೀಡಿದರು.
ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ವಿದ್ಯಾ ರ್ಥಿಗಳ ಜಾಥಾವು ಘೋಷಣೆಗಳನ್ನು ಕೂಗುತ್ತಾ ಪೊಳಲಿ ದೇವಸ್ಥಾನದ ರಥಬೀದಿಯಾಗಿ ಸಾಗಿ ಅಡ್ಡೂರಿಗೆ ತಲುಪಿತು. ಅಲ್ಲಿಂದ ಶಾಲಾ- ಕಾಲೇಜು ವಿದ್ಯಾರ್ಥಿಗಳಿಂದ ಜತೆಯಾದ ಜಾಥಾವು ಅಡ್ಡೂರು ಜಂಕ್ಷನ್ ತಲುಪಿದಾಗ ಜಿ.ಪಂ. ಸದಸ್ಯ ಯು.ಪಿ. ಇಬ್ರಾಹಿಂ ನೇತೃತ್ವದ ಯುವಜನರು ಸ್ವಾಗತಿಸಿದರು.
ಬಳಿಕ ತಪೋವನಕ್ಕೆ ಮರಳಿದ ಜಾಥಾದಲ್ಲಿ ವಾಮಂಜೂರು ಶುಭೋದಯ, ಪೊಳಲಿ ಶ್ರೀ ರಾಜರಾಜೇಶ್ವರಿ ಪ್ರೌಢಶಾಲೆ, ಪೊಳಲಿ ವಿದ್ಯಾ ವಿಲಾಸ ಅನುದಾನಿತ ಶಾಲೆ, ಮಂಗಳೂರು ವಿವಿ ಕಾಲೇಜು, ಸುಂಕದಕಟ್ಟೆ ಶ್ರೀ ನಿರಂಜನ ಸ್ವಾಮಿ ಶಾಲಾ- ಕಾಲೇಜು, ದ.ಕ. ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ಪಳ್ಳಿಪಾಡಿ ವಿದ್ಯಾ ರ್ಥಿಗಳು, ಶಿಕ್ಷಕರು, ಶಿಕ್ಷಕೇತರ ಸಿಬಂದಿ ಹಾಗೂ ಸಾರ್ವಜನಿಕರು ಜಾಥಾದಲ್ಲಿ ಪಾಲ್ಗೊಂಡಿದ್ದರು.
ವಿವಿಧ ಸ್ಪರ್ಧೆಗಳು
ತಪೋವನದಲ್ಲಿ ವಿದ್ಯಾಥಿಗಳಿಗಾಗಿ ಆಶು ಭಾಷಣ, ಪ್ರಬಂಧ ಸರ್ಧೆ ಏರ್ಪಡಿಸಲಾಗಿದ್ದು, ವಿಜೇತರಿಗೆ ಸ್ವಾಮೀಜಿ ಬಹುಮಾನ ವಿತರಿಸಿದರು. ಸ್ವಾಮಿ ಪ್ರಣವಾನಂದಾಜಿ, ವೆಂಕಟೇಶ ನಾವಡ, ತಾ.ಪಂ. ಸದಸ್ಯ ಯಶವಂತ ಪೊಳಲಿ, ಲೋಕೇಶ್ ಭರಣಿ, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ ಪೊಳಲಿ ಶಾಖೆಯ ಯೋಗಬಂಧುಗಳು, ಆಶ್ರಮದ ವಿದ್ಯಾರ್ಥಿಗಳು ಹಾಗೂ ಇತರರು ಭಾಗವಹಿಸಿದ್ದರು.
ರೋಟರಿ ಕೇಂದ್ರೀಯ ಶಾಲೆ: ರಾಷ್ಟ್ರೀಯ ಯುವದಿನಾಚರಣೆ
ಮೂಡುಬಿದಿರೆ: ಸ್ವಾಮಿ ವಿವೇಕಾನಂದರ ಜನ್ಮ ದಿನದ ಅಂಗವಾಗಿ ರೋಟರಿ ಕೇಂದ್ರೀಯ ಶಾಲೆಯಲ್ಲಿ ರಾಷ್ಟ್ರೀಯ ಯುವದಿನವನ್ನು ಆಚರಿಸಲಾಯಿತು. ಶಾಲಾ ಮುಖ್ಯ ಶಿಕ್ಷಕಿ ಭಾರತಿ ನಾಯಕ್ ಅವರು ಅಧ್ಯಕ್ಷತೆ ವಹಿಸಿದ್ದರು. ಸ್ವಾಮಿ ವಿವೇಕಾನಂದರ ಚಿಂತನೆಗಳು ಮತ್ತು ಜೀವನದ ಆದರ್ಶಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರೇರಣೆ ನೀಡಲು ಈ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.
ವಿದ್ಯಾರ್ಥಿನಿ ಶರಣ್ಯ ಬೋರ್ಕರ್ ಮಾತನಾಡಿ, ಸ್ವಾಮಿ ವಿವೇಕಾನಂದರ ಕುರಿತು ಮಾಹಿತಿಯನ್ನು ನೀಡಿದರು. ಪುಟಾಣಿಗಳು ವಿವೇಕಾನಂದರ ಉಡುಗೆಯನ್ನು ತೊಟ್ಟು ಕಾರ್ಯಕ್ರಮಕ್ಕೆ ವಿಶೇಷವಾದ ಮೆರುಗನ್ನು ನೀಡಿದರು. ಶಕುಂತಲಾ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.