ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನ ಜಾತ್ರೆ: ಚೆಂಡು ಉತ್ಸವ ಸಂಪನ್ನ
Team Udayavani, Apr 13, 2019, 6:00 AM IST
ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನದ ಜಾತ್ರೆಯ ಪ್ರಯುಕ್ತ ರಥೋತ್ಸವ ಜರಗಿತು.
ಪೊಳಲಿ: ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನದ ಜಾತ್ರೆಯ ಪ್ರಯುಕ್ತ ನಡೆದ ಐದು ದಿನಗಳ ಚೆಂಡು ಉತ್ಸವ ಸಂಪನ್ನಗೊಂಡಿದೆ. ದೇವಸ್ಥಾನದ ಸಮೀಪದ ವಿಶಾಲ ಗದ್ದೆಯಲ್ಲಿ ಐದು ದಿನಗಳವರೆಗೆ ಚೆಂಡು ಉತ್ಸವ ನಡೆದಿದ್ದು, ನೂರಾರು ಮಂದಿ ಉತ್ಸಾಹಿ ತರುಣರು ಪಾಲ್ಗೊಂಡಿದ್ದರು.
ಅಮ್ಮುಂಜೆ ಹಾಗೂ ಮಣೇಲ್(ಮಳಲಿ) ಊರುಗಳ ಮಧ್ಯೆ ಪರಂಪರಾಗತವಾಗಿ ಚೆಂಡಾಟ ನಡೆಯುತ್ತ ಬಂದಿದೆ. ಚೆಂಡಾಟ ನಡೆದ ಬಳಿಕ ಉತ್ಸವ ಬಲಿ ನಡೆಯುತ್ತಿದ್ದು, ಇದಾದ ಬಳಿಕ ಆಯಾ ದಿನಗಳ ಚೆಂಡಿನ ದಿವಸ ಆಯಾ ರಥೋತ್ಸವ ಜರಗಿತು. ಕಡೇ ಚೆಂಡಿನ ದಿನ ಆಳುಪಲ್ಲಕಿ ರಥ, ಬೆಳ್ಳಿರಥೋತ್ಸವ ಜರಗಿತು. ಸುಬ್ರಹ್ಮಣ್ಯ ದೇವರ ಉತ್ಸವ ಮೂರ್ತಿಯನ್ನು ವಸಂತ ಮಂಟಪದಲ್ಲಿರಿಸಿ ಪೂಜೆ ನಡೆಸಿ, ಬಳಿಕ ಪಲ್ಲಕಿಸೇವೆ, ಧಾರ್ಮಿಕ ಕಾರ್ಯಗಳು ಜರಗಿದವು.
ರಥೋತ್ಸವ
ಶ್ರೀ ರಾಜರಾಜೇಶ್ವರೀ ದೇವಸ್ಥಾನದ ವಾರ್ಷಿಕ ಜಾತ್ರೆಯ ಅಂಗವಾಗಿ ಗುರುವಾರ ಮಧ್ಯಾಹ್ನ ದೇವರ ಪೂಜೆ ನಡೆದ ಬಳಿಕ ರಥಕ್ಕೆ ಕಳಸಪೂಜೆ ನೆರವೇರಿತು. ದೇಗುಲದ ತಂತ್ರಿ ಸುಬ್ರಹ್ಮಣ್ಯ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳು ನೆರವೇರಿದ ಅನಂತರ ಸುಬ್ರಹ್ಮಣ್ಯ ದೇವರ ಬಲಿ ಉತ್ಸವ ನೆರವೇರಿತು. ಅನಂತರ ರಥೋತ್ಸವ ಜರಗಿತು.
ಅಲ್ಬಂ ಸಾಂಗ್ ಬಿಡುಗಡೆ
ಶ್ರೀ ರಾಜರಾಜೇಶ್ವರೀ ದೇವಸ್ಥಾನದ ವಾರ್ಷಿಕ ಜಾತ್ರೆಯ ನಿಮಿತ್ತ ಬುಧವಾರ “ಪುರಲ್ದಪ್ಪೆನ ಜಾತ್ರೆದ ಪೊರ್ಲು’ ಎಂಬ ಅಲ್ಬಂ ಸಾಂಗ್ ಅನ್ನು ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಬಿಡುಗಡೆಗೊಳಿಸಿದರು. ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಸ್ವಾಮೀಜಿ ದೀಪ ಬೆಳಗಿಸಿದರು.
ಸ್ವಾಮಿ ಪ್ರಣವಾನಂದ ಸರಸ್ವತಿ, ಆಡಳಿತ ಮೊಕ್ತೇಸರ ಡಾ| ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ತಾರಾನಾಥ ಆಳ್ವ ಉಳಿಪ್ಪಾಡಿಗುತ್ತು, ಪ್ರವೀಣ್, ಹರೀಶ್ಚಂದ್ರ, ಅರ್ಚಕ ರಾಮ್ ಭಟ್, ಪೊಳಲಿ ಗಿರೀಶ್ ತಂತ್ರಿ, ಲೀಲಾಕ್ಷ ಕರ್ಕೇರ, ಕದ್ರಿ ನವನೀತ್ ಶೆಟ್ಟಿ, ವೆಂಕಟೇಶ್ ನಾವಡ, ಭಾಸ್ಕರ ಭಟ್, ಕೃಷ್ಣಾನಂದ ಹೊಳ್ಳ, ರಿತೇಶ್, ಅಮ್ಮುಂಜೆ ಗುತ್ತು ದೇವ್‌ದಾಸ್ ಹೆಗ್ಡೆ, ರಂಗನಾಥ ಶೆಟ್ಟಿ, ಸುಬ್ರಾಯ ಕಾರಂತ್, ಪ್ರಶಾಂತ್ ಗುರುಪುರ, ಭರತ್ ಗುರುಪುರ ಹಾಗೂ ವಾಮನ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ದಿನೇಶ್ ರಾಯಿ ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aranthodu: ಉಡುಪಿಗೆ ಭತ್ತದ ಲೋಡ್ ಸಾಗಿಸುತ್ತಿದ್ದ ವೇಳೆ ಲಾರಿಗೆ ಆಕಸ್ಮಿಕ ಬೆಂಕಿ
Belthangady: ಶಾಲೆಯ ಮಕ್ಕಳು ನೆಟ್ಟಿದ್ದ ಹೂ ಗಿಡಗಳ ಕುಂಡಗಳನ್ನು ಪುಡಿಗೈದ ಕಿಡಿಗೇಡಿಗಳು
Bantwal: ಸಾಹಿತ್ಯವನ್ನು ಮಕ್ಕಳ ಮನ ಮುಟ್ಟುವಂತೆ ಬೋಧಿಸುವ ಶಿಕ್ಷಕರು ಬೇಕು
Bantwal ತಾಲೂಕು ಕಚೇರಿ: ಪಾಳು ಬಿದ್ದಿದೆ ಜನರೇಟರ್!
Uppinangady: ಕಾಟಾಚಾರದ ಕಾಮಗಾರಿಗೆ ಸ್ಥಳೀಯರ ತರಾಟೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.