ಪೊಳಲಿ: ಶ್ರೀ ರಾಜರಾಜೇಶ್ವರಿ ದೇವಸ್ಥಾನ ಕೊಡಿಮರಕ್ಕೆ ತೈಲಾಧಿವಾಸ
Team Udayavani, Jun 19, 2018, 2:55 AM IST
ಬಂಟ್ವಾಳ: ಐತಿಹಾಸಿಕ ಮಹತ್ವದ ಜಿಲ್ಲೆಯ ಕಾರಣಿಕ ಕ್ಷೇತ್ರಗಳಲ್ಲಿ ಪ್ರಸಿದ್ಧವಾದ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಶ್ರೀದೇವಿಗೆ ಬಿಲ್ಲವ ಸಮಾಜವು ಸೇವಾ ರೂಪವಾಗಿ ಸಮರ್ಪಿಸಿದ ನೂತನ ಧ್ವಜಸ್ತಂಭದ ಕೊಡಿಮರವನ್ನು ಸುದೀರ್ಘ ಬಾಳಿಕೆಗಾಗಿ ತೈಲದಲ್ಲಿ ಅದ್ದಿಡುವ ತೈಲಾಧಿವಾಸ ಕಾರ್ಯಕ್ರಮ ಜೂ. 18ರಂದು ಶ್ರೀ ಕ್ಷೇತ್ರದಲ್ಲಿ ನಡೆಯಿತು. ಈ ಸಂದರ್ಭ ಪೊಳಲಿ ಸಾವಿರ ಸೀಮೆಗೊಳಪಟ್ಟ ಭಕ್ತರು ಅಪಾರ ಸಂಖ್ಯೆಯಲ್ಲಿ ಸೇರಿ ಧ್ವಜಸ್ತಂಭಕ್ಕೆ ಶುದ್ಧ ಎಳ್ಳೆಣ್ಣೆ ಸಮರ್ಪಿಸಿದರು.
ಎಳ್ಳೆಣ್ಣೆ ಹೊಯ್ಯುವುದು
ವಾಸ್ತುಶಿಲ್ಪಿ ಮಹೇಶ್ ಮುನಿಯಂಗಳ ಮಾರ್ಗದರ್ಶನದಲ್ಲಿ, ಕಾಷ್ಟ ಶಿಲ್ಪಿಗಳಾದ ಬಿ. ಬಾಲಕೃಷ್ಣ ಆಚಾರ್ಯ ಹರೇಕಳ ಅವರಿಂದ ಧ್ವಜಸ್ತಂಭದ ಮರದ ಕೆತ್ತನೆ ಕೆಲಸ ಈಗಾಗಲೇ ಪೂರ್ಣಗೊಂಡಿದ್ದು, ಕ್ಷೇತ್ರದ ಅಧಿದೇವತೆ ಶ್ರೀ ರಾಜರಾಜೇಶ್ವರಿಗೆ ಪೂಜೆ ಸಲ್ಲಿಸಿದ ಬಳಿಕ ಕೊಡಿಮರಕ್ಕೆ ಎಳ್ಳೆಣ್ಣೆ ಹೊಯ್ಯುವುದಕ್ಕೆ ಚಾಲನೆ ನೀಡಲಾಯಿತು. ಕ್ಷೇತ್ರದ ಆಡಳಿತ ಟ್ರಸ್ಟಿ ತಾರಾನಾಥ ಆಳ್ವ, ಬಂಟ್ವಾಳ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು, ಮಾಜಿ ಸಚಿವ ಬಿ. ರಮಾನಾಥ ರೈ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಪದ್ಮನಾಭ ಕೋಟ್ಯಾನ್, ಪ್ರಮುಖರಾದ ಕೆ. ಹರಿಕೃಷ್ಣ ಬಂಟ್ವಾಳ, ಕೃಷ್ಣಕುಮಾರ್ ಪೂಂಜ, ರಾಜ್ ಮಾರ್ಲ, ದೇವಸ್ಥಾನದ ಕಾರ್ಯ ನಿರ್ವಾಹಣಾಧಿಕಾರಿ ಪ್ರವೀಣ್, ಪ್ರಧಾನ ಪುರೋಹಿತ ಮಾಧವ ಭಟ್, ಅರ್ಚಕರಾದ ರಾಮ ಭಟ್, ನಾರಾಯಣ ಭಟ್, ಸುಬ್ರಹ್ಮಣ್ಯ ತಂತ್ರಿ, ಮಾಧವ ಮಯ್ಯ, ನೂತನ ಧ್ವಜಸ್ತಂಭ ನಿರ್ಮಾಣ ಸಮಿತಿಯ ಗೌರವಾಧ್ಯಕ್ಷ ರಾಮದಾಸ ಕೋಟ್ಯಾನ್, ಅಧ್ಯಕ್ಷ ಕೆ. ಸೇಸಪ್ಪ ಕೋಟ್ಯಾನ್, ಪ್ರ.ಕಾರ್ಯದರ್ಶಿ ಪುರುಷ ಎನ್. ಸಾಲ್ಯಾನ್ ನೆತ್ರೆಕೆರೆ, ಭುವನೇಶ್ ಪಚ್ಚಿನಡ್ಕ, ಯಶವಂತ ಪೊಳಲಿ, ಬಳ್ಳಿ ಚಂದ್ರಶೇಖರ್ ಕೈಕಂಬ, ನಾರಾಯಣ ಅಮ್ಮುಂಜೆ, ಉಮೇಶ್ ಪೂಜಾರಿ ಬಾರಿಂಜ, ಗೋಪಾಲಕೃಷ್ಣ ಕೈಕಂಬ, ಗಂಗಾಧರ ಪೂಜಾರಿ ಕೊಪ್ಪಳ, ರಾಜು ಕೋಟ್ಯಾನ್, ಸದಾಶಿವ ಕಾಜಿಲ, ರಾಮಪ್ಪ ಪೂಜಾರಿ ಬಡಕಬೈಲು, ಚರಣ್ ಬಡಕಬೈಲು, ದೀಪಕ್ ಕೋಟ್ಯಾನ್, ವೆಂಕಟೇಶ್ ನಾವಡ, ಸುಬ್ರಾಯ ಕಾರಂತ, ಸಂಪತ್ ಕುಮಾರ್ ಶೆಟ್ಟಿ, ಅಣ್ಣು ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.
ಮುಂದಿನ ಆರು ತಿಂಗಳವರಗೆ ಭಕ್ತರಿಗೆ ಧ್ವಜಸ್ತಂಭಕ್ಕೆ ಎಳ್ಳೆಣ್ಣೆ ಹೊಯ್ಯಲು ಅವಕಾಶವಿದೆ. ಕ್ಷೇತ್ರದಲ್ಲಿ ಲಭ್ಯವಿರುವ ಶುದ್ಧ ಎಳ್ಳೆಣ್ಣೆಯನ್ನು ಸೇವಾ ಕೌಂಟರಿನಲ್ಲಿ ರಶೀದಿ ಪಡೆದು ಬೆಳಗ್ಗೆ 8ರಿಂದ ಮಧ್ಯಾಹ್ನ 1 ಗಂಟೆಯವರೆಗೆ, ಸಂಜೆ ಗಂಟೆ 4ರಿಂದ 7 ಗಂಟೆಯವರೆಗೆ ಎಳ್ಳೆಣ್ಣೆ ಸಮರ್ಪಿಸಬಹುದಾಗಿದೆ ಎಂದು ದೇಗುಲದ ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.