ಸುರತ್ಕಲ್‌ ಠಾಣೆಯಲ್ಲಿ ಪೊಲೀಸ್‌ ಬೀಟ್‌ ಪದ್ಧತಿ ಜಾರಿ


Team Udayavani, May 2, 2017, 4:38 PM IST

police-night-beat.jpg

ಸುರತ್ಕಲ್‌: ಇಲ್ಲಿನ ಠಾಣೆಯಲ್ಲೂ ಪೊಲೀಸ್‌ ಬೀಟ್‌ ವ್ಯವಸ್ಥೆ ಅಸ್ತಿತ್ವಕ್ಕೆ ಬಂದಿದೆ. ಸಮುದಾಯದತ್ತ ಪೊಲೀಸ್‌ ಬೀಟ್‌ ಎನ್ನುವ ಈ ಯೋಜನೆಯಡಿ, ಏರಿಯಾಕ್ಕೊಬ್ಬ ಪೊಲೀಸರನ್ನು ನಿಯೋ ಜಿಸಲಾಗುತ್ತದೆ. ಅವರಿಗೆ ಮೂರ್‍ನಾಲ್ಕು ಬಡಾವಣೆಯ ಜವಾಬ್ದಾರಿ ನೀಡಲಾಗುತ್ತದೆ. ಆ ಪ್ರದೇಶಗಳ ಪ್ರತೀ ಜನರ,ಸಂಸ್ಥೆಗಳ,ಗಣ್ಯರ ಮಾಹಿತಿ ಕಲೆ ಹಾಕುವುದಲ್ಲದೇ, ಅವರೊಂದಿಗೆ ನಿತ್ಯವೂ ಸಂಪರ್ಕದಲ್ಲಿರಬೇಕಾದ ಹೊಣೆ ಗಾರಿಕೆ ಸಂಬಂಧಿತ ಪೊಲೀಸರದ್ದಾಗಿದೆ. 
ಇದರ ಜತೆಗೆ ಯಾವುದೇ ಅಪರಾಧ ಚಟುವಟಿಕೆಗಳು ಘಟಿಸದಂತೆ ಎಚ್ಚರ ವಹಿಸುವುದು ಹಾಗೂ ಸಮರ್ಥ ಮಾಹಿತಿ ಕಲೆ ಹಾಕಿ ಆರಂಭದಲ್ಲೇ ಪತ್ತೆ ಹಚ್ಚಿ ವಿಫಲಗೊಳಿಸಲು ಹೆಚ್ಚಿನ ನಿಗಾ ಇರಿಧಿಸಬೇಕು. ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲೂ ಗಮನಹರಿಸಬೇಕಾ ದದ್ದು ಈ ಬೀಟ್‌ ವ್ಯವಸ್ಥೆಯ ಉದ್ದೇಶ.

ಕುಳಾಯಿ ಬೈಕಂಪಾಡಿಯಿಂದ ಹಿಡಿದು, ಸಸಿಹಿತ್ಲು, ಸೂರಿಂಜೆ ವರೆಗೆ ಸುರತ್ಕಲ್‌ ಪೊಲೀಸ್‌ ವ್ಯಾಪ್ತಿಯ ಎಲ್ಲ ಗ್ರಾಮ ಮತ್ತು ಬಡಾವಣೆಗಳನ್ನು ಠಾಣೆಯ 47 ಮಂದಿ ಸಿಬಂದಿಗೆ ಹಂಚಿಕೆ ಮಾಡಲಾಗಿದೆ.

ಜನಸ್ನೇಹಿ ಉದ್ದೇಶ
ಪೊಲೀಸರು ಜನಸ್ನೇಹಿಯಾಗ ಬೇಕು. ಪೊಲೀಸ್‌ ವ್ಯವಸ್ಥೆ ಸಮುದಾಯದತ್ತ ಚಲಿಸಬೇಕು ಎಂಬುದು ಸರಕಾರದ ನೀತಿ. ಈ ನೀತಿಯನ್ನು ಜಾರಿಗೆ ತರಲು ಪೊಲೀಸರು ಹಾಗೂ ಮುಖ್ಯ ಪೇದೆಗಳನ್ನು ಜನಮುಖೀಗಳನ್ನಾಗಿಸುವ ದೃಷ್ಟಿಯಿಂದ ವ್ಯವಸ್ಥೆಯಲ್ಲಿ ಕೊಂಚ ಬದಲಾವಣೆ ತಂದು ಸರಕಾರ ಆದೇಶ ಹೊರಡಿಸಿದೆ.

ಬೀಟ್‌ ಹೊಣೆಗಾರಿಕೆ
ಸುರತ್ಕಲ್‌ ಸಹಿತ ಪ್ರತಿ ಠಾಣೆ ಯಲ್ಲಿರುವ ಪೊಲೀಸ್‌ ಪೇದೆಗಳು ಮತ್ತು ಮುಖ್ಯ ಪೇದೆಗಳ ಒಟ್ಟು ಸಂಖ್ಯೆಗೆ ಅನುಗುಣವಾಗಿ ಠಾಣಾ ವ್ಯಾಪ್ತಿ ವಿಭಜಿಸಿ ಪ್ರತಿ ಪ್ರದೇಶವನ್ನು ಬೀಟ್‌ (ಗಸ್ತು) ಎಂದು ಪರಿಗಣಿಸಲಾಗಿದೆ.ಆಯಾ ಬೀಟ್‌ನ ಹೊಣೆಗಾರಿಕೆ ಸಂಪೂರ್ಣವಾಗಿ ಸಂಬಂಧಪಟ್ಟ ಸಿಬಂದಿಯದ್ದು.

ಇವರಿಗೆ ಮೇಲ್ವಿಚಾರಕರಾಗಿ ಎಎಸ್‌ಐ, ಎಸ್‌ಐ ಹಾಗೂ ವೃತ್ತ ನಿರೀಕ್ಷಕರಿರುತ್ತಾರೆ. ಈ ಯೋಜನೆ ಜಾರಿಯ ಜತೆಗೆ ತಳಹಂತದ ಪೊಲೀಸರ ಸಶಕ್ತೀ ಕರಣದ ಜತೆಗೆ ಪೊಲೀಸರು ಆಯಾ ಬೀಟ್‌ನಲ್ಲಿ ಬರುವ ಪ್ರದೇಶ ದಲ್ಲಿ ವಾಸಿಸುವ ಪುರುಷರು, ಮಹಿಳೆಯ ರನ್ನು ನಾಗರಿಕ ಸದಸ್ಯರನ್ನಾಗಿ ಸೇರಿಸಿ ಆಗು ಹೋಗುಗಳನ್ನು ಗಮನಿಸಧಿಬೇಧಿಕಿದೆ. ಸುರತ್ಕಲ್‌ ಠಾಣಾ ವ್ಯಾಪ್ತಿಯಲ್ಲಿ ಮೂರು ಆಥವಾ ನಾಲ್ಕು ಬಡಾವಣೆ, ಗ್ರಾಮಗಳಲ್ಲಿ ಒಂದೆರಡು ಊರು ಕಾಲನಿಗಳನ್ನು ಬೀಟ್‌ ಪೊಲೀಸರ ಸುಪರ್ದಿಗೆ ವಹಿಸಲಾಗುತ್ತದೆ.

ಕಾರ್ಯಭಾರ ಹೆಚ್ಚು
ಸುರತ್ಕಲ್‌ ಪೊಲೀಸ್‌ ಠಾಣೆಯಲ್ಲಿ ಒಟ್ಟು 47 ಸಿಬಂದಿಗಳಿದ್ದು, 6 ಎಎಸ್‌ಐಗಳು, 2 ಎಸ್‌ಐಗಳು ಹಾಗೂ ವೃತ್ತ ನಿರೀಕ್ಷಕರನ್ನು  ಹೊಂದಿದೆ. ಗ್ರಾಮಾಂತರ ಹಾಗೂ ಮಹಾನಗರ ಪಾಲಿಕೆ ಎರಡೂ ಆಡಳಿತದ ಕಾರ್ಯಭಾರವನ್ನು ಹೊಂದಿದೆ. ಸೂಕ್ಷ್ಮ ಪ್ರದೇಶಗಳೂ ಈ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿದ್ದು ಬೀಟ್‌ ವ್ಯವಸ್ಥೆಯನ್ನು ಬಿಗಿಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.

ಮಾಹಿತಿಯಿದ್ದರೆ ತಿಳಿಸಿ
ಗ್ರಾಮ ಹಾಗೂ ಬಡಾವಣೆಯಲ್ಲಿ  ಖಾಸಗಿ ಹೊರತು ಪಡಿಸಿ ಸಾಮಾಜಿಕ ಅಭಿವೃದ್ಧಿ ಹಾಗೂ ಯಾವುದೇ ಅಹಿತಕರ ಘಟನೆಗಳ ಲಕ್ಷಣ ಕಂಡು ಬಂದರೆ ಭಯಪಡದೇ ನಿಮ್ಮ ಬೀಟ್‌ ಪೊಲೀಸರಿಗೆ ಮಾಹಿತಿ ನೀಡಿ. ಅವರ ಮೊಬೈಲ್‌ ಸಂಖ್ಯೆಗಳನ್ನು ನೀಡಲು  ಕ್ರಮ ಕೈಗೊಳ್ಳಲಾಗಿದೆ. ಮಾಹಿತಿ ನೀಡುವವರ ಹೆಸರನ್ನಾಗಲೀ, ವಿವರವನ್ನಾಗಲೀ ಪೊಲೀಸರು ಬಹಿರಂಗಪಡಿಸುವುದಿಲ್ಲ. ಸಮಾಜಕ್ಕೆ ಭಂಗ ತರುವ ಚಟು ವಟಿಕೆ ಮಟ್ಟಹಾಕುವುದರ ಜತೆಗೆ ಸಾರ್ವ ಜನಿಕರ ಆಸ್ತಿ, ಪ್ರಾಣ ಹಾನಿ ತಪ್ಪಿಸುವ ಉದ್ದೇಶದಿಂದಲೇ ಈ ಹೊಸ ಪದ್ಧತಿ ಬೀಟ್‌ ವ್ಯವಸ್ಥೆ ಬಂದಿದೆ.

ಮುನ್ನೆಚ್ಚರಿಕೆ ಕ್ರಮ 
ಬೀಟ್‌ನ ಪ್ರಮುಖ ಉದ್ದೇಶ ಇಲಾಖೆಯನ್ನು ಜನಸ್ನೇಹಿಯಾಗಿ ಸುವುದರ ಜತೆಗೆ ಗಣ್ಯರು, ಸಾಹಿತಿಗಳು, ಕಲಾವಿದರು ಮತ್ತಿತರರ ಕಾಳಜಿಯ ಜತೆಗೆ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾದವರ ಮೇಲೆ ನಿಗಾ, ಯಾವುದೇ ಅಪರಾಧ ಆಗುವುದನ್ನು ತಡೆಯಲು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವುದಾಗಿದೆ. ಈ ಹೊಸ ವ್ಯವಸ್ಥೆಗೆ ಪೊಲೀಸರ ಜತೆ ಕೈಜೋಡಿಸಿ ಶಾಂತಿ ಸುವ್ಯವಸ್ಥೆ ಕಾಪಾಡಲು ನೆರವಾಗಬೇಕು.
– ಚೆಲುವರಾಜ್‌,
ವೃತ್ತ ನಿರೀಕ್ಷಕರು,ಸುರತ್ಕಲ್‌ ಪೊಲೀಸ್‌ ಠಾಣೆ

ಟಾಪ್ ನ್ಯೂಸ್

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

ಬೈಡೆನ್‌ “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Ullala–Encroch

Ullala: ದೇರಳಕಟ್ಟೆ: ರಸ್ತೆಯನ್ನು ಅತಿಕ್ರಮಿಸಿದ್ದ ಕಟ್ಟಡಗಳ ತೆರವು

1-wqweeqw

Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ

10-

Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ

9-someshwara

Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Suside-Boy

Punjalakatte: ಕೊಯಿಲದ ವ್ಯಕ್ತಿ ಹಾಸನದಲ್ಲಿ ನಿಗೂಢ ಸಾವು

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

BPL card ಕೇಂದ್ರ ಸರಕಾರವೇ ರದ್ದು ಮಾಡಿದೆ: ಸಿಎಂ ಸಿದ್ದರಾಮಯ್ಯ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.