ಅಶ್ವತ್ಥ ಮರದ ಗೆಲ್ಲು ಕಡಿದ ಪೊಲೀಸರು!

Team Udayavani, Jul 30, 2018, 11:30 AM IST

30-july-7.jpg

ಪುತ್ತೂರು: ನಗರದ ಐತಿಹಾಸಿಕ ಗಾಂಧಿಕಟ್ಟೆಯ ಬಳಿ ಇರುವ ಅಶ್ವತ್ಥ ಮರ ದಿಂದ ರಸ್ತೆಗೆ ಚಾಚಿಕೊಂಡಿರುವ ಗೆಲ್ಲುಗಳನ್ನು ಕಡಿಯುವ ಕಾರ್ಯವನ್ನು ರವಿವಾರ ಪೊಲೀಸ್‌ ಇಲಾಖೆ ನೇತೃತ್ವದಲ್ಲಿ ನಡೆಸಲಾಯಿತು. ಈ ಕಾರ್ಯಕ್ಕೆ ಪುತ್ತೂರು ಎಚ್ಚರ ಬಳಗ ತೀವ್ರ ವಿರೋಧ ವ್ಯಕ್ತಪಡಿಸಿದೆ.

ನಗರದ ವಿದ್ಯುತ್‌ ವ್ಯವಸ್ಥೆಯ ದುರಸ್ತಿವನ್ನು ಅಪರಾಹ್ನದ ಬಳಿಕ ನಡೆಸಲಾಗುತ್ತಿತ್ತು. ಅಶ್ವತ್ಥ ಮರದ ಕೆಳಗೆ ವಿದ್ಯುತ್‌ ತಂತಿಯೂ ಹಾದುಹೋಗಿರುವುದ ರಿಂದ ಸಾರ್ವಜನಿಕ ವ್ಯವಸ್ಥೆಗೆ ತೊಂದರೆಯಾಗುತ್ತಿರುವ ಕಾರಣದಿಂದ ಪೊಲೀಸ್‌ ಇಲಾಖೆಯು ಸರ್ಕಲ್‌ ಇನ್ಸ್‌ಪೆಕ್ಟರ್‌ ಮಹೇಶ್‌ ಪ್ರಸಾದ್‌ ನೇತೃತ್ವದಲ್ಲಿ ಅಶ್ವತ್ಥ ಮರದ ರಸ್ತೆಗೆ ಗೆಲ್ಲುಗಳನ್ನು ಕಡಿಯುವ ಕೆಲಸ ಆರಂಭಿಸಿತ್ತು. ಈ ಕುರಿತು ಮಾಹಿತಿ ಪಡೆದ ಅಶ್ವತ್ಥ ಮರದ ಸಂರಕ್ಷಣೆಗೆ ನಿರಂತರ ಹೋರಾಟ ನಡೆಸುತ್ತಾ ಬಂದಿರುವ ಪುತ್ತೂರು ಎಚ್ಚರ ಬಳಗದ ಪುರಂದರ ಭಟ್‌ ಅವರ ತಂಡ ಮರದ ಗೆಲ್ಲುಗಳನ್ನು ಕಡಿಯುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಕೆಲಸ ಸ್ಥಗಿತಗೊಳಿಸುವಂತೆ ಒತ್ತಾಯಿಸಿದರು. ಅವರ ಒತ್ತಾಯಕ್ಕೆ ಮಣಿದ ಪೊಲೀಸರು ಕಾರ್ಯಸ್ಥಗಿತಗೊಳಿಸಿದರು.

ಪೊಲೀಸರ ಕೆಲಸ ಅಲ್ಲ
ಎಚ್ಚರ ಬಳಗದ ಪುರಂದರ ಭಟ್‌ ಮಾತನಾಡಿ, ರಾಷ್ಟ್ರಪಿತ ಮಹಾತ್ಮಾ ಗಾಂಧಿ ಪುತ್ತೂರಿಗೆ ಬಂದ ಸಂದರ್ಭ ಅಶ್ವತ್ಥ ಮರದಡಿಯಲ್ಲಿ ವಿಶ್ರಾಂತಿ ಪಡೆದಿದ್ದರು. ಇಂತಹ ಐತಿಹಾಸಿಕ ಮನ್ನಣೆ ಗಳಿಸಿರುವ ಅಶ್ವತ್ಥ ಮರದ ಗೆಲ್ಲುಗಳನ್ನು ಪೊಲೀಸರು ಬಂದು ಏಕಾಏಕಿ ತೆರವುಗೊಳಿಸಿರುವುದು ಸರಿಯಲ್ಲ. ಅರಣ್ಯ ಇಲಾಖೆ, ನಗರಸಭೆಗೂ ಮಾಹಿತಿ ಇಲ್ಲದೆ ತತ್‌ಕ್ಷಣಕ್ಕೆ ಐತಿಹಾಸಿಕ ಅಶ್ವತ್ಥ ಮರದ ಗೆಲ್ಲುಗಳನ್ನು ಕಡಿಯುವ ಅಗತ್ಯವಿಲ್ಲ. ಇದು ಪೊಲೀಸ್‌ ಇಲಾಖೆಗೆ ಸಂಬಂಧಪಟ್ಟ ಕೆಲಸವೂ ಅಲ್ಲ. ಇದಕ್ಕೆ ನಮ್ಮ ವಿರೋಧವಿದೆ ಎಂದರು.

ಇನ್ಸ್ಪೆಕ್ಟರ್‌ ಮಹೇಶ್‌ ಪ್ರಸಾದ್‌ ಮಾತನಾಡಿ, ಮರದ ಗೆಲ್ಲುಗಳು ರಸ್ತೆಯಿಂದ ಮುಂದಕ್ಕೆ ಚಾಚಿ ಕಟ್ಟಡದ ಮೇಲ್ಬಾಗಕ್ಕೂ ಹರಡುತ್ತಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಮರದ ಗೆಲ್ಲುಗಳನ್ನು ಕಡಿ ಯುವುದು ಅನಿವಾರ್ಯ. ಈ ಕುರಿತು ಸಾರ್ವಜನಿಕರಿಂದಲೂ ದೂರು ಬಂದಿದೆ. ಯಾರ ಆತ್ಮಸಾಕ್ಷಿಗೂ ನೋವುಂಟು ಮಾಡುವ ಉದ್ದೇಶ ನಮಗಿಲ್ಲ. ಸಾರ್ವಜನಿಕ ಸಮಸ್ಯೆಯ ವಿಚಾರವಾಗಿರುವುದರಿಂದ ಮತ್ತು ಪೊಲೀಸ್‌ ಇಲಾಖೆಗೂ ಸಂಬಂಧಪಟ್ಟಿರುವುದರಿಂದ ರಸ್ತೆಗೆ ಚಾಚಿರುವ ಅಪಾಯಕಾರಿ ಗೆಲ್ಲುಗಳನ್ನು ಕಡಿಯಲು ವ್ಯವಸ್ಥೆ ಮಾಡಲಾಗಿದೆ ಎಂದರು.

ಇಂದು ಮುಂದುವರಿಕೆ?
ಎಚ್ಚರ ಬಳಗದ ಮುಖಂಡರ ಜತೆ ಇನ್‌ಸ್ಪೆಕ್ಟರ್‌ ಚರ್ಚೆ ನಡೆಸಿದರು. ಸೋಮವಾರ ಬೆಳಗ್ಗೆ 10 ಗಂಟೆಗೆ ಎಚ್ಚರ ಬಳಗದ ಉಪಸ್ಥಿತಿಯೊಂದಿಗೆ ಮರದ ಗೆಲ್ಲುಗಳನ್ನು ಕಡಿಯಲು ವ್ಯವಸ್ಥೆ ಮಾಡುವಂತೆ ಸಂಚಾರ ಪೊಲೀಸರಿಗೆ ಪಿಐ ಮಹೇಶ್‌ ಪ್ರಸಾದ್‌ ಸೂಚಿಸಿದರು.

ಟಾಪ್ ನ್ಯೂಸ್

Bantwala-Crime

Bantwala: ತುಂಬೆ ದೇವಸ್ಥಾನ ಕಳ್ಳತನ ಪ್ರಕರಣ: ಮೂವರು ಖದೀಮರ ಸೆರೆ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

1-rcb

RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್‌

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Ullala-Auto-Accident

Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು

1-maha

Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Bantwala-Crime

Bantwala: ತುಂಬೆ ದೇವಸ್ಥಾನ ಕಳ್ಳತನ ಪ್ರಕರಣ: ಮೂವರು ಖದೀಮರ ಸೆರೆ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

1-rcb

RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್‌

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.