ಕಾಲೇಜಿಗೆ ಪೊಲೀಸರ ದಾಳಿ: ಮೊಬೈಲ್‌ ವಶಕ್ಕೆ

Team Udayavani, Jul 9, 2019, 10:51 AM IST

PG-POLICE

ಉಪ್ಪಿನಂಗಡಿ : ಪುತ್ತೂರು ಖಾಸಗಿ ಕಾಲೇಜಿನ ವಿದ್ಯಾರ್ಥಿಗಳ ಮೊಬೈಲ್‌ ದುರ್ಬಳಕೆಯ ಅವಾಂತರದ ಹಿನ್ನೆಲೆಯಲ್ಲಿ ಕಲಿಕಾ ಅವಧಿಯಲ್ಲಿ ವಿದ್ಯಾರ್ಥಿ ಸಮೂಹ ಮೊಬೈಲ್‌ ಬಳಸಬಾರದೆಂಬ ನಿಯಮಾವಳಿಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಿಸಲು ಸೂಚಿಸಲಾಗಿದೆ. ಅದರಂತೆ ಉಪ್ಪಿನಂಗಡಿ ಪೊಲೀಸರು ಸೋಮವಾರ ಸ್ಥಳೀಯ ಕಾಲೇಜು ಗಳಿಗೆ ದಾಳಿ ನಡೆಸಿ 24 ಮೊಬೈಲ್‌ಗ‌ಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಉಪ್ಪಿನಂಗಡಿ ಎಸ್‌ಐ ನಂದ ಕುಮಾರ್‌ ನೇತೃತ್ವದ ಪೊಲೀಸ್‌ ತಂಡ ಉಪ್ಪಿನಂಗಡಿಯ ಪ್ರಥಮ ದರ್ಜೆ ಕಾಲೇಜು ಹಾಗೂ ಪದವಿಪೂರ್ವ ಕಾಲೇಜಿಗೆ ದಾಳಿ ನಡೆಸಿ ಪರಿಶೀಲನೆ ನಡೆಸಿತು.

ಈ ಸಂದರ್ಭ ವಿದ್ಯಾರ್ಥಿ ಗಳು ಅಕ್ರಮವಾಗಿ ತಂದಿರಿಸಿದ್ದ 24 ಮೊಬೈಲ್‌ಗ‌ಳು ಪತ್ತೆಯಾದವು. ವಿದ್ಯಾರ್ಥಿಗಳು ಕಾಲೇಜಿಗೆ ಹೋಗುವ ಮುನ್ನ ಅಂಗಡಿಗಳಲ್ಲಿ ಮೊಬೈಲ್‌ ಇರಿಸುವ ಸುಳಿವು ಪಡೆದುಕೊಂಡ ಪೊಲೀಸರು ಶಂಕಿತ ಅಂಗಡಿಗಳಿಗೂ ದಾಳಿ ನಡೆಸಿ ತಪಾಸಣೆ ನಡೆಸಿದರು.

ಚೆಲ್ಲಾಟವಾಡದಿರಿ
ದಾಳಿಯ ಬಳಿಕ ವಿದ್ಯಾರ್ಥಿ ಸಮೂಹಕ್ಕೆ ಅರಿವು ಮೂಡಿಸಿದ ಎಸ್‌ಐ ಅವರು, ಸಂಭಾವ್ಯ ಅಪಾಯದ ಅರಿವಿಲ್ಲದೆ ಮನಸ್ಸಿಗೆ ತೋಚಿದಂತೆ ಮೊಬೈಲ್‌ ಬಳಕೆ, ಗಾಂಜಾದಂತಹ ಅಮಲು ಪದಾರ್ಥಗಳ ಬಳಕೆಯಿಂದ ವಿದ್ಯಾರ್ಥಿಗಳನ್ನು ಸೆಳೆಯುವ ತಂಡದಿಂದ ಸಂಭವಿಸಬಹುದಾದ ಅಪಾಯ, ಅಶ್ಲೀಲ ದೃಶ್ಯಾವಳಿಗಳ ಪ್ರಸಾರದ ದುಷ್ಪರಿಣಾಮ ಮೊದಲಾ ದವುಗಳನ್ನು ವಿವರಿಸಿ ಸುಂದರ ಭವಿಷ್ಯವನ್ನು ಹಾಳುಗೆಡವುವ ಯಾವುದೇ ತಪ್ಪು ಕಾರ್ಯಗಳನ್ನು ಮಾಡದಿರಿ ಎಂದು ವಿನಂತಿಸಿದರು.

ಯಾಮಾರಿಸುವ ಯತ್ನ
ವಶಪಡಿಸಿಕೊಂಡಿರುವ ಮೊಬೈಲ್‌ಗ‌ಳನ್ನು ಹಿಂದಿರುಗಿಸಬೇಕಾದರೆ ಪೋಷಕರೊಂದಿಗೆ ಠಾಣೆಗೆ ಬನ್ನಿ ಎಂದು ವಿದ್ಯಾರ್ಥಿಗಳಿಗೆ ಪೊಲೀಸರು ಸೂಚಿಸಿದ್ದರು ಕೆಲವೊಂದು ವಿದ್ಯಾರ್ಥಿ ಗಳು ಪೋಷಕರನ್ನು ಕರೆದುಕೊಂಡು ಬಂದರೆ ಮತ್ತೆ ಕೆಲವರು ಇದರಿಂದ ಮತ್ತಷ್ಟು ಸಮಸ್ಯೆ ಎದುರಾದೀತೆಂದು ಭಾವಿಸಿ ದಾರಿಯಲ್ಲಿ ಸಿಕ್ಕ ಪರಿಚಿತರನ್ನೇ ಪೋಷಕರೆಂದು ಬಿಂಬಿಸಿ ಠಾಣೆಗೆ ಕರೆದುಕೊಂಡು ಬಂದಿದ್ದರು. ವಿದ್ಯಾರ್ಥಿಗಳ ಈ ತಂತ್ರವನ್ನು ಮೊದಲೇ ಅರಿತಿದ್ದ ಪೊಲೀಸರು ತಂದೆ ಅಥವಾ ತಾಯಿ ಎಂದು ದೃಢೀಕರಿಸುವ ದಾಖಲೆಯೊಂದಿಗೆ ಹೆತ್ತವರು ಬಾರದೇ ಹೋದರೆ ಯಾವ ಕಾರಣಕ್ಕೂ ಮೊಬೈಲ್‌ ಹಿಂದಿರುಗಿ ಸುವುದಿಲ್ಲ ಎಂದರು. ಇದರಿಂದ ಪೊಲೀಸರನ್ನು ಯಾಮಾರಿ ಸಲು ಬಂದ ವಿದ್ಯಾರ್ಥಿಗಳು ಮರಳಿ ಹೋಗಿ ಹೆತ್ತವರನ್ನು ಕರೆದುಕೊಂಡು ಬರಬೇಕಾಯಿತು.

ಸಹಾಯಕ ಆಯುಕ್ತರ ಸೂಚನೆ
ಮಕ್ಕಳ ಮೊಬೈಲ್‌ ಇಡಲು ಶಾಲಾ ಕಾಲೇಜುಗಳಲ್ಲಿ ವ್ಯವಸ್ಥೆ ಮಾಡಬೇಕು. ವಿದ್ಯಾರ್ಥಿ-ವಿದ್ಯಾರ್ಥಿನಿಯರು ವಿದ್ಯಾಸಂಸ್ಥೆಗಳ ಸಮೀಪದಲ್ಲಿರುವ ಅಂಗಡಿಗಳಲ್ಲಿ ಮೊಬೈಲ್‌ಗ‌ಳನ್ನು ಇಟ್ಟರೆ ಅದನ್ನು ವಶಕ್ಕೆ ಪಡೆದು ಅಂಗಡಿ ಮಾಲಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪುತ್ತೂರು ಸಹಾಯಕ ಆಯುಕ್ತ ಎಚ್‌.ಕೆ. ಕೃಷ್ಣಮೂರ್ತಿ ಅವರು ಇತ್ತೀಚೆಗೆ ಪೊಲೀಸರಿಗೆ ಸೂಚಿಸಿದ್ದರು.

ಟಾಪ್ ನ್ಯೂಸ್

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

ಅಪರಿಚಿತ ವಾಹನ ಡಿಕ್ಕಿ : ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-venur

Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ

3-kadaba

Kadaba: ಕರ್ತವ್ಯದ ಬಿಡುವಿನಲ್ಲಿ ಮೊಬೈಲ್‌ನಲ್ಲೇ ಓದಿ ಎಸ್‌ಐ ಆದ ಪೊಲೀಸ್‌ ಚಾಲಕ!

1

Puttur: ನಳಿನ್‌ಗೆ ನಿಂದನೆ; ದೂರು ದಾಖಲು

1-asdaaasdasd

Kadaba; ಪ್ರೀತಿಸುವ ನಾಟಕವಾಡಿ ಬಾಲಕಿಯ ಮೇಲೆ ಅತ್ಯಾಚಾರ:ಯುವಕ ಸೆರೆ

1aaaane

Sullia: ತೋಟದಲ್ಲಿ ಮೂರು ಕಾಡಾನೆ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

ಅಪರಿಚಿತ ವಾಹನ ಡಿಕ್ಕಿ : ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.