ಚುನಾವಣಾ ಫಲಿತಾಂಶ: ರಾಜಕೀಯ ಪಕ್ಷಗಳಲ್ಲಿ ಮುಂದುವರಿದ ಲೆಕ್ಕಚಾರ
Team Udayavani, Apr 29, 2019, 2:14 PM IST
ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಲೋಕಸಭಾ ಕ್ಷೇತ್ರದಲ್ಲಿ ಮತದಾನ ಮುಗಿದ 12 ದಿನಗಳು ಕಳೆದಿವೆ. ಮತ ಎಣಿಕೆಗೆ ಇನ್ನೂ 25 ದಿನಗಳು ಬಾಕಿಯಳಿದಿದೆ. ಈ ನುಡವೆ ರಾಜಕೀಯ ಪಕ್ಷಗಳಲ್ಲಿ ವಿವಿಧ ಆಯಾಮ, ಸಾಧ್ಯತೆಗಳನ್ನು ಮುಂದಿಟ್ಟುಕೊಂಡು ನಿರಂತರ ಲೆಕ್ಕಾಚಾರ ಮುಂದುವರಿದರೆ ಮತದಾರರಲ್ಲಿ ಫಲಿತಾಂಶ ಕುತೂಹಲ ಸದ್ಯಕ್ಕೆ ತಣ್ಣಾಗಿತೊಡಗಿದೆ.
ದೇಶದಲ್ಲಿ ಎ. 29ರ ಮತದಾನ ದೊಂದಿಗೆ ಒಟ್ಟು ನಾಲ್ಕು ಹಂತದ ಚುನಾ ವಣೆ ಮುಗಿಯಲಿದ್ದು ಇನ್ನೂ ಮೂರು ಹಂತದ ಚುನಾವಣೆಗಳು ಬಾಕಿ ಇದೆ. ಮೇ 23 ರಂದು ಮತ ಎಣಿಕೆ ನಡೆಯಲಿದೆ. ದ.ಕ., ಉಡುಪಿ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಮತದಾನ ಮುಗಿದು 35 ದಿನಗಳ ಬಳಿಕ ಮತ ಎಣಿಕೆ ನಡೆಯುತ್ತಿದೆ.
2014ರ ಲೋಕಸಭಾ ಚುನಾವಣೆಯಲ್ಲಿ ಮತದಾನ ನಡೆದು ಬರೋಬ್ಬರಿ ಒಂದು ತಿಂಗಳ ಬಳಿಕ ಮತಎಣಿಕೆ ನಡೆದಿತ್ತು. ಎ. 17ರಂದು ಮತದಾನ ನಡೆದು ಮೇ 16ರಂದು ಮತ ಎಣಿಕೆ ನಡೆದಿತ್ತು. ಮೇ 23ರ ಫಲಿತಾಂಶ ಯಾವ ದಿಕ್ಕಿನತ್ತ ಹೊರಳಬಹುದು ಎಂಬ ಬಗ್ಗೆ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು, ರಾಜಕೀಯ ಮುಖಂಡರಲ್ಲಿ ಲೆಕ್ಕಾಚಾರಗಳು ಮುಂದುವರಿದಿದೆ.
ತಣ್ಣಗಾದ ಕುತೂಹಲ
ಮತ ಎಣಿಕೆಗೆ ಇನ್ನೂ ಬಹಳಷ್ಟು ದಿನಗಳು ಇರುವುದರಿಂದ ಚುನಾವಣಾ ಫಲಿತಾಂಶದ ಬಗ್ಗೆ ಮತದಾರರಲ್ಲಿ ಸದ್ಯ ಕುತೂಹಲ ತಣ್ಣಗಾಗತೊಡಗಿದೆ. ಚುನಾವಣಾ ಸಂದರ್ಭದಲ್ಲಿ ಸಾರ್ವಜನಿಕ ವಲಯದಲ್ಲಿ ಫಲಿತಾಂಶದ ಬಗ್ಗೆ ಕೇಳಿಬರುತ್ತಿದ್ದ ಚರ್ಚೆಗಳು ಕಮ್ಮಿಯಾಗಿದೆ. ಮಕ್ಕಳ ಶಿಕ್ಷಣ, ಶುಭ ಸಮಾರಂಭಗಳು, ನೀರಿನ ಸಮಸ್ಯೆ ನಿರ್ವಹಣೆಯಲ್ಲಿ ಮತದಾರರು ಹೆಚ್ಚು ಮಗ್ನರಾಗಿದ್ದಾರೆ.
ಪ್ರಥಮ ಚುನಾವಣೆ 4 ತಿಂಗಳು ನಡೆದಿತ್ತು
ದೇಶಕ್ಕೆ ಸ್ವಾತಂತ್ರ ಲಭಿಸಿದ ಬಳಿಕ 4 ವರ್ಷಗಳ ಬಳಿಕ ಪ್ರಥಮ ಸಾರ್ವತ್ರಿಕ ಚುನಾವಣೆ ನೆರವೇರಿತ್ತು . ಲೋಕಸಭೆ ಹಾಗೂ ವಿಧಾನಸಭೆಗಳಿಗೆ ಜತೆಯಾಗಿ ನಡೆದಿದ್ದ ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳಲು 4 ತಿಂಗಳ ತಗಲಿತ್ತು. 1951ರ ಅ.25 ರಂದು ಆರಂಭಗೊಂಡು 1952 ರ ಫೆ.21ರಂದು ಪೂರ್ಣಗೊಂಡಿತ್ತು. ಆಗ ಕಾಸರಗೋಡು ಹಾಗೂ ಅವಿಭಜಿತ ದ.ಕ. ಜಿಲ್ಲೆ ಮದ್ರಾಸ್ ಪ್ರಾಂತ್ಯಕ್ಕೆ ಸೇರ್ಪಡೆಯಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranga Chavadi: ಕಿಶೋರ್ ಡಿ ಶೆಟ್ಟಿ ಅವರಿಗೆ ರಂಗಚಾವಡಿ 2024 ಪ್ರಶಸ್ತಿ
Kateel: ತಾರಾನಾಥ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು… ಅಕ್ಕನಿಂದಲೇ ಕೊಲೆಯಾದ ತಮ್ಮ
ಮಮ್ತಾಜ್ ಅಲಿ ಆತ್ಮಹತ್ಯೆ ಪ್ರಕರಣ: ದಂಪತಿ ಸಹಿತ ಆರೋಪಿಗಳಿಗೆ ಮುಂದುವರಿದ ನ್ಯಾಯಾಂಗ ಬಂಧನ
Mangaluru: ಸಿಸಿಬಿ ಪೊಲೀಸರ ಕಾರ್ಯಾಚರಣೆ… ಅಪಾರ ಪ್ರಮಾಣದ ಮಾದಕ ವಸ್ತು ಸಹಿತ ಓರ್ವನ ಸೆರೆ
Mangaluru: ನೇತ್ರಾವತಿ ಸೇತುವೆ ಬಳಿ ಬೈಕ್ ಅಪಘಾತ… ಓರ್ವ ಮೃತ್ಯು, ಮತ್ತೋರ್ವ ಗಂಭೀರ
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.