ಇಂದು ಮತದಾನ; ಮೂರು ಕ್ಷೇತ್ರಗಳಲ್ಲಿ ಮಸ್ಟರಿಂಗ್‌ ಪ್ರಕ್ರಿಯೆ ಪೂರ್ಣ

699 ಮತಗಟ್ಟೆಗಳಿಗೆ ಕರ್ತವ್ಯಕ್ಕೆ ತೆರಳಿದ ಸಿಬಂದಿ

Team Udayavani, Apr 18, 2019, 6:21 AM IST

1704MLR37-ELECTION

ಮಹಾನಗರ: ದ.ಕ.ಲೋಕ ಸಭಾ ಚುನಾವಣೆಯ ಮುನ್ನಾ ದಿನವಾದ ಬುಧವಾರ ಮತಗಟ್ಟೆಗೆ ಬೇಕಾದ ಸಿಬಂದಿ ಹಾಗೂ ಮತದಾನದ ಸಲಕರಣೆಗಳನ್ನು ಪೂರೈಸುವ ಮಸ್ಟರಿಂಗ್‌ ಪ್ರಕ್ರಿಯೆ ಮಂಗಳೂರಿನ ಮೂರು ಅಸೆಂಬ್ಲಿ ಕ್ಷೇತ್ರಗಳಲ್ಲಿ ನಡೆಯಿತು.

ಮಂಗಳೂರಿನ ರೊಸಾರಿಯೋ ಶಿಕ್ಷಣ ಸಂಸ್ಥೆಯಲ್ಲಿ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಮತಗಟ್ಟೆಗಳಿಗೆ, ಉರ್ವ ಕೆನರಾ ಪ್ರೌಢಶಾಲೆಯಲ್ಲಿ ಮಂಗಳೂರು ದಕ್ಷಿಣ ಹಾಗೂ ಬಂಟ್ಸ್‌ಹಾಸ್ಟೆಲ್‌ ರಾಮಕೃಷ್ಣ ಶಿಕ್ಷಣ ಸಂಸ್ಥೆಯಲ್ಲಿ ಮಂಗಳೂರು ವಿಧಾನಸಭಾ ಕ್ಷೇತ್ರದ ಮತಗಟ್ಟೆಗಳಿಗೆ ಬೇಕಾದ ಸಲಕರಣೆ ಪೂರೈಕೆ ಮಾಡುವ ಪ್ರಕ್ರಿಯೆ ನಡೆಯಿತು.

ಮಂಗಳೂರು ಮತ್ತು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರಗಳಿಗೆ ಸಹಾಯಕ ಆಯುಕ್ತ ರವಿಚಂದ್ರ ನಾಯಕ್‌ ಹಾಗೂ ತಹಶೀಲ್ದಾರ್‌ ಗುರುಪ್ರಸಾದ್‌, ಮಂಗಳೂರು ದಕ್ಷಿಣ ಕ್ಷೇತ್ರಕ್ಕೆ ಮಂಗಳೂರು ಮಹಾನಗರ ಪಾಲಿಕೆ ಉಪ ಆಯುಕ್ತೆ ಗಾಯತ್ರಿ ನಾಯಕ್‌ ಅವರ ಉಸ್ತುವಾರಿಯಲ್ಲಿ ಮಾಸ್ಟರಿಂಗ್‌ ಪ್ರಕ್ರಿಯೆ ನಡೆಯಿತು.

ಮೂರೂ ಕೇಂದ್ರಗಳಲ್ಲಿ ಬೆಳಗ್ಗೆ ಹತ್ತರಿಂದ ಸಿಬಂದಿಗೆ ತರಬೇತಿ, ಮತದಾನದಂದು ನಿರ್ವಹಿಸಬೇಕಾದ ಕೆಲಸ ಕಾರ್ಯಗಳ ಅಂತಿಮ ಸಿದ್ಧತೆಯ ಕುರಿತು ಮಾಹಿತಿ ವಿನಿ ಮಯ ಮಾಡಲಾಯಿತು. ಬುಧವಾರ ಮಧ್ಯಾಹ್ನದವರೆಗೆ ಸಿಬಂದಿ ಮತಯಂತ್ರ, ವಿವಿಪ್ಯಾಟ್‌ ಹಾಗೂ ಮತದಾರರ ಪಟ್ಟಿ ಯನ್ನು ಪರಿಶೀಲನೆ ನಡೆಸಿದರು. ಚುನಾವಣೆ ಕರ್ತವ್ಯಕ್ಕೆ ನೇಮಿಸಲಾದ ಹೆಚ್ಚುವರಿ ಸಿಬಂದಿಗೆ ಮತಗಟ್ಟೆಯನ್ನು ಹಂಚಿಕೆ ಮಾಡುವ ಕೆಲಸವೂ ಇದೇ ವೇಳೆ ನಡೆಯಿತು. ಅನಿವಾರ್ಯ ಕಾರಣಗಳಿಂದ ಗೈರಾದವರ ಬದಲಿಗೆ ಪರ್ಯಾಯ ಅಧಿಕಾರಿ, ಸಿಬಂದಿ ನೇಮಿಸಲಾಯಿತು. ಅನಾರೋಗ್ಯ ಕಾರಣ ನೀಡಿದವರನ್ನು ಸ್ಥಳ ದಲ್ಲೇ ತಪಾಸಣೆ ನಡೆಸಲು ವೈದ್ಯಕೀಯ ತಜ್ಞರನ್ನು ನೇಮಿಸಲಾಗಿತ್ತು. ಮಧ್ಯಾಹ್ನದ ಊಟದ ಅನಂತರ ಸಿಬಂದಿ ಮತಗಟ್ಟೆಗಳಿಗೆ ತೆರಳಿದರು.

ಮಂಗಳೂರು ಕ್ಷೇತ್ರದಲ್ಲಿ 210 ಮತ ಗಟ್ಟೆಗಳಿದ್ದು, ರಾಮಕೃಷ್ಣ ಕಾಲೇಜಿನ 20 ಕೊಠಡಿಗಳಲ್ಲಿ ಮತದಾನ ಸಲಕರ ಣೆಗಳನ್ನು ಜೋಡಿಸಲಾಯಿತು. ಮಂ. ಉತ್ತರ ಕ್ಷೇತ್ರದಲ್ಲಿರುವ 245 ಹಾಗೂ ಮಂ.ದಕ್ಷಿಣದಲ್ಲಿರುವ 244 ಮತಗಟ್ಟೆಗಳಿಗೆ ಸಿಬಂದಿಯನ್ನು ಕಳುಹಿಸಲಾಯಿತು.

ಸಿಬಂದಿ ನಿಯೋಜನೆ
ಎಲ್ಲ ಮತಗಟ್ಟೆಗಳಿಗೆ 5ರಿಂದ 9 ಸಿಬಂದಿ ಯನ್ನು ನೇಮಿಸಲಾಗಿದ್ದು, ಸಾವಿರಾರು ಸಿಬಂದಿ ಚುನಾ ವಣೆ ಕರ್ತವ್ಯಕ್ಕೆ ತೆರಳಿದ್ದಾರೆ. ಸೂಕ್ಷ್ಮ ಮತಗಟ್ಟೆ ಗಳಲ್ಲಿ ಸಿಆರ್‌ಪಿಎಫ್‌ ಸಿಬಂದಿಯನ್ನು ನಿಯೋಜಿಸಲಾಗಿದೆ.

ಮೊದಲ ಬಾರಿಗೆ ವಾಹನಕ್ಕೆ ಜಿಪಿಎಸ್‌
ವಿಶೇಷವೆಂದರೆ, ಇದೇ ಮೊದಲ ಬಾರಿಗೆ ವಾಹನಗಳಿಗೆ ಜಿಪಿಎಸ್‌ ಸಿಸ್ಟಮ್‌ ಅಳವಡಿಸಿ ಇವಿಎಂ ಯಂತ್ರವನ್ನು ಕೊಂಡೊಯ್ಯಲಾಗಿದೆ. ಇದ ರಿಂದ ಆ ವಾಹನ ಯಾವ ದಾರಿಯಾಗಿ ಸಾಗುತ್ತದೆ ಎಂಬ ಮಾಹಿತಿ ಮಸ್ಟರಿಂಗ್‌ ಕೇಂದ್ರದ ಅಧಿಕಾರಿಗಳಿಗೆ ದೊರೆ ಯುವುದರಿಂದ ಚುನಾವಣೆ ಹೆಚ್ಚು ಪಾರದರ್ಶಕವಾಗಿರುವಂತೆ ನೋಡಿಕೊಳ್ಳಲಾಗುತ್ತದೆ.

ವೆಬ್‌ ಕೆಮರಾ ಅಳವಡಿಕೆ
ಸುಸೂತ್ರ ಹಾಗೂ ಪಾರದರ್ಶಕ ಚುನಾವಣೆ ನಡೆಸಲು ಮತಗಟ್ಟೆಗಳಿಗೆ ಮೈಕ್ರೋ ಅಬ್ಸರ್ವರ್‌ಗಳನ್ನು ನಿಯೋಜಿಸಲಾಗಿದೆ. ಇವರು ತಮಗೆ ವಹಿಸಿರುವ ಮತಗಟ್ಟೆಗಳಿಗೆ ತೆರಳಿ ಪಾರದರ್ಶಕತೆಯನ್ನು ಪರಿಶೀಲಿಸುತ್ತಾರೆ. ಅಲ್ಲದೆ, ವೆಬ್‌ ಕೆಮರಾ, ವೀಡಿಯೋ ಕೆಮರಾಗಳನ್ನೂ ಸಾಕಷ್ಟು ಸಂಖ್ಯೆಯಲ್ಲಿ ಮತಗಟ್ಟೆಗಳಲ್ಲಿ ಅಳವಡಿಸಲಾಗಿದೆ.

163 ವಾಹನ
ಮೂರೂ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿರುವ ಮತಗಟ್ಟೆಗಳಿಗೆ ಬಸ್‌, ಮಿನಿ ಬಸ್‌ ಸಹಿತ ಒಟ್ಟು 163ಕ್ಕೂ ಹೆಚ್ಚು ವಾಹನಗಳು ಅವಶ್ಯ ಸಲಕರಣೆ ಹಾಗೂ ಸಿಬಂದಿಯನ್ನು ಕೊಂಡೊಯ್ದವು. ಪ್ರತಿ ಮತಗಟ್ಟೆಗೆ ಮತಗಟ್ಟೆಯ ಸಂಖ್ಯೆಗನುಗುಣವಾಗಿ ಇವಿಎಂ ಯಂತ್ರ ಮತ್ತು ಸೆಕ್ಟರ್‌ಗಳಿಗೆ ಹೆಚ್ಚುವರಿ ಯಂತ್ರವನ್ನು ಕೊಂಡೊಯ್ಯಲಾಯಿತು. ಇವಿಎಂ ಯಂತ್ರ ಕೆಲಸ ನಿರ್ವಹಿಸದಿದ್ದಲ್ಲಿ ಬದಲಿ ವ್ಯವಸ್ಥೆಯಾಗಿ ಹೆಚ್ಚುವರಿ ಯಂತ್ರವನ್ನು ಕಳುಹಿಸಿಕೊಡಲಾಯಿತು. ವಿಕಲಚೇತನ ಮತದಾರರು, ವೃದ್ಧರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಎಲ್ಲ ಮತಗಟ್ಟೆಗಳಿಗೊಂದರಂತೆ ವೀಲ್‌ಚೇರ್‌ಗಳನ್ನು ಕೊಂಡೊಯ್ಯಲಾಯಿತು.

ಅಲ್ಲದೆ, ಮಸ್ಟರಿಂಗ್‌ ನಡೆದ ಸಂಸ್ಥೆ ಗಳಲ್ಲಿ ಹೆಚ್ಚುವರಿ ಸಿಬಂದಿಯನ್ನು ಇರಿಸಿ ಕೊ ಳ್ಳಲಾಗಿದ್ದು, ಅಗತ್ಯ ಬಿದ್ದಲ್ಲಿ ಅವ ರನ್ನೂ ಮತಗಟ್ಟೆಗಳಿಗೆ ಗುರುವಾರ ಕಳುಹಿ ಸಲಾಗುತ್ತದೆ. ಪ್ರತಿ ವರ್ಷ ಸಿಬಂದಿ ಬೆಳಗ್ಗೆಯೇ ಮಸ್ಟರಿಂಗ್‌ ಕೇಂದ್ರ ದಿಂದ ನಿಯೋಜಿಸಿದ ಮತಗ ಟ್ಟೆಗಳಿಗೆ ತೆರಳಬೇಕಿತ್ತು. ಇದರಿಂದ ಮತ ಯಂತ್ರ ದೋಷ ಅಥವಾ ಇತರ ಸಮಸ್ಯೆ ಗಳಿದ್ದಲ್ಲಿ ಅದನ್ನು ಸರಿಪಡಿಸಲು ಸಮಯ ತಗಲುತ್ತಿತ್ತು. ಆದರೆ ಈ ಬಾರಿ ಮಧ್ಯಾಹ್ನದವರೆಗೂ ಸಿಬಂದಿ ಮಸ್ಟ ರಿಂಗ್‌ ಕೇಂದ್ರದಲ್ಲಿದ್ದು, ಮತದಾನಕ್ಕೆ ಸಂಬಂಧಿ ಸಿದ ಎಲ್ಲವನ್ನು ಪರಿಶೀಲಿಸಿದ ಬಳಿಕವಷ್ಟೇ ಮತಗಟ್ಟೆಗಳಿಗೆ ತೆರಳಲು ಅವಕಾಶ ಕಲ್ಪಿಸಲಾಗಿತ್ತು.

ಅಣುಕು ಮತದಾನ
ಚುನಾವಣೆ ದಿನವಾದ ಗುರುವಾರ ಎಲ್ಲ ಮತಗಟ್ಟೆಗಳಲ್ಲಿ ಬೆಳಗ್ಗೆ 6 ಗಂಟೆಗೆ ಅಣುಕು ಮತದಾನ ನಡೆಯಲಿದೆ. ಇವಿಎಂ ಯಂತ್ರ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ಪರಿಶೀಲಿಸುವ ಸಲುವಾಗಿ ಈ ಅಣುಕು ಮತದಾನ ನಡೆಯಲಿದ್ದು, 6.45ರ ವೇಳೆಗೆ ಇವಿಎಂ ಯಂತ್ರವನ್ನು ಕ್ಲಿಯರ್‌ ಮಾಡಲಾಗುತ್ತದೆ. 7ರಿಂದ ಮತದಾನ ಆರಂಭವಾಗಲಿದೆ.

ಪ್ರಜಾಪ್ರಭುತ್ವದ ಹಬ್ಬ ಎಂದೇ ಕರೆಸಿಕೊಳ್ಳುವ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಲು ವಿವಿಧ ಭಾಗಗಳಿಂದ ಆಗಮಿಸಿದ ಸಿಬಂದಿ, ಪೊಲೀಸರು, ಸಿಆರ್‌ಪಿಎಫ್‌ ಸಿಬಂದಿ ಮಸ್ಟರಿಂಗ್‌ ಕೇಂದ್ರದಲ್ಲಿ ಒಂದೆಡೆ ಕುಳಿತು ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಿದ್ದರು.

ಟಾಪ್ ನ್ಯೂಸ್

Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…

Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…

T20: ತಿಲಕ್‌ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219

T20: ತಿಲಕ್‌ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219

Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ

Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

2-vitla

Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್

Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್‌ ಗೆದ್ದ ವಿಜ್ಞಾನಿ!

Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್‌ ಗೆದ್ದ ವಿಜ್ಞಾನಿ!

Vivek Ramaswamy: ವಿವೇಕ್‌ಗೆ ಟ್ರಂಪ್‌ ಸರಕಾರದ ಕಾರ್ಯಕ್ಷಮತೆ ಇಲಾಖೆ ಹೊಣೆ

Vivek Ramaswamy: ವಿವೇಕ್‌ಗೆ ಟ್ರಂಪ್‌ ಸರಕಾರದ ಕಾರ್ಯಕ್ಷಮತೆ ಇಲಾಖೆ ಹೊಣೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Pakshikere Case: ಚಿನ್ನಾಭರಣ ಕಳೆದುಕೊಂಡವರಿಂದ ಪೊಲೀಸರಿಗೆ ದೂರು

Pakshikere Case: ಚಿನ್ನಾಭರಣ ಕಳೆದುಕೊಂಡವರಿಂದ ಪೊಲೀಸರಿಗೆ ದೂರು

Mangaluru: ಕಾಲೇಜಿನಲ್ಲಿ ಕುಸಿದು ಬಿದ್ದಿದ್ದ ಉಪನ್ಯಾಸಕಿ ಸಾ*ವು

Mangaluru: ಕಾಲೇಜಿನಲ್ಲಿ ಕುಸಿದು ಬಿದ್ದಿದ್ದ ಉಪನ್ಯಾಸಕಿ ಸಾ*ವು

Mangaluru: ಯಾವುದೇ ರಾಜ್ಯಕ್ಕೂ ಕೇಂದ್ರ ಮಲತಾಯಿ ಧೋರಣೆ ಮಾಡಿಲ್ಲ: ನಿರ್ಮಲಾ ಸೀತಾರಾಮನ್‌

Mangaluru: ಯಾವುದೇ ರಾಜ್ಯಕ್ಕೂ ಕೇಂದ್ರ ಮಲತಾಯಿ ಧೋರಣೆ ಮಾಡಿಲ್ಲ: ನಿರ್ಮಲಾ ಸೀತಾರಾಮನ್‌

7(1

Padil ಹೆದ್ದಾರಿಗೆ ಡಾಮರು, ಜಂಕ್ಷನ್‌ಗೆ ಇಲ್ಲ !

6

Mangaluru: ಬಾವುಟಗುಡ್ಡೆ ತಂಗುದಾಣ ಬಸ್‌ ಬೇ ಬಳಕೆಗೆ ಅನುವು

MUST WATCH

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

ಹೊಸ ಸೇರ್ಪಡೆ

Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…

Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…

T20: ತಿಲಕ್‌ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219

T20: ತಿಲಕ್‌ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219

Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ

Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

2-vitla

Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.