ಪೂಜಾರಿ ಆತ್ಮಕಥೆ ಸುಳ್ಳಿನ ಕಂತೆ: ಮಧು
Team Udayavani, Feb 10, 2018, 6:05 AM IST
ಮಂಗಳೂರು: ಇಂದಿರಾ ಗಾಂಧಿ ಸೋತ ಸಂದರ್ಭದಲ್ಲಿ ಅವರಿಗೆ ಶಕ್ತಿ ತುಂಬುವಲ್ಲಿ ವಿಶೇಷ ಪಾತ್ರ ವಹಿಸಿದ್ದ ಬಂಗಾರಪ್ಪ ಅವರ ಬಗ್ಗೆ ಜನಾರ್ದನ ಪೂಜಾರಿ ಅವರು ಆತ್ಮಕಥೆಯಲ್ಲಿ ಕಪೋಲಕಲ್ಪಿತ ವಿಚಾರಗಳನ್ನು ತುರುಕಿಸುವ ಮೂಲಕ ಬಂಗಾರಪ್ಪ ಅವರ ಅಭಿಮಾನಿಗಳಿಗೆ ನೋವುಂಟು ಮಾಡಿದ್ದಾರೆ. ಪೂಜಾರಿಯವರ ಆತ್ಮಕಥೆ ಸುಳ್ಳಿನ ಕಂತೆಯಾಗಿದೆ ಎಂದು ಬಂಗಾರಪ್ಪ ಅವರ ಪುತ್ರ ರಾಜ್ಯ ಜೆಡಿಎಸ್ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಆರೋಪಿಸಿದ್ದಾರೆ.
ಇತ್ತೀಚೆಗೆ ಬಿಡುಗಡೆಗೊಂಡ ಜನಾರ್ದನ ಪೂಜಾರಿ ಆತ್ಮಕಥೆ “ಸಾಲ ಮೇಳ ಸಂಗ್ರಾಮ’ದಲ್ಲಿ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಬಗ್ಗೆ “ಬಂಗಾರಪ್ಪ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರಿಗೆ ಹೊಡೆಯಲು ಹೋಗಿದ್ದರು” ಎಂಬುದಾಗಿ ಹೇಳಿರುವುದನ್ನು ಖಂಡಿಸಿ ಮಂಗಳೂರಿನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಧು ಬಂಗಾರಪ್ಪ ಪ್ರತಿಕ್ರಿಯಿಸಿದರು.
ಬಂಗಾರಪ್ಪ ನೇರ ಮತ್ತು ದಿಟ್ಟ ವ್ಯಕ್ತಿತ್ವದ ಹಾಗೂ ಶುದ್ಧ ಹಸ್ತದ ರಾಜಕಾರಣಿ ಯಾಗಿದ್ದರು. ಇಂದಿರಾ ಗಾಂಧಿ ಜತೆ ಬಹಳಷ್ಟು ವರ್ಷ ರಾಜಕಾರಣ ಮಾಡಿದವರು. ಅವರು ಪ್ರತಿಯೋರ್ವರನ್ನು ಬಹಳ ಗೌರವದಿಂದ ಕಾಣುವ ಅವರು ಇಂದಿರಾಗೆ ಹೊಡೆಯಲು ಹೋಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ವಯಸ್ಸಿನ ಪ್ರಭಾವ: ಆತ್ಮಕಥೆಯನ್ನು ಅವಲೋಕಿಸಿದಾಗ ಪೂಜಾರಿ ಅವರ ಮೇಲೆ ವಯೋಪ್ರಭಾವ ಉಂಟಾಗಿರುವುದು ಕಂಡುಬರುತ್ತಿದೆ. ಅವರಿಗೆ ರಾಜಕೀಯದಲ್ಲಿ ಬೇರೆಯವರನ್ನು ಬೆಳೆಸಿ ಗೊತ್ತಿಲ್ಲ. ಬಿಲ್ಲವ ಸಮುದಾಯಕ್ಕೆ ಮಾರ್ಗದರ್ಶನ ನೀಡುವ ಕಾರ್ಯವನ್ನು ಅವರು ಮಾಡುತ್ತಿಲ್ಲ ಎಂದ ಮಧು, ಪೂಜಾರಿಯವರ ಜತೆಗೆ ಕಲ್ಲಡ್ಕ ಪ್ರಭಾಕರ್ ಭಟ್ ಉಪಸ್ಥಿತಿ ಪೂಜಾರಿಯವರು ಆರ್‌ಎಸ್‌ಎಸ್ ಬಗ್ಗೆ ಹೊಂದಿರುವ ಒಲವನ್ನು ತೋರ್ಪಡಿಸುತ್ತದೆ ಎಂದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಮಹಮ್ಮದ್ ಕುಂಞಿ, ಮಂಗಳೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ವಸಂತ ಪೂಜಾರಿ, ಯುವಜನತಾದಳ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ, ಜೆಡಿಎಸ್ ಪದವೀಧರರ ಕ್ಷೇತ್ರ ಅಭ್ಯರ್ಥಿ ಅಶ್ವಿನ್ ಪಿರೇರಾ ಉಪಸ್ಥಿತರಿದ್ದರು.
ನ್ಯಾಯಾಂಗ ನಿಂದನೆ
ಜನಾರ್ದನ ಪೂಜಾರಿ ಅವರು ಆತ್ಮಕಥೆಯಲ್ಲಿ ಬಂಗಾರಪ್ಪ ಅವರನ್ನು ಭ್ರಷ್ಟ ಎಂದು ಕರೆದಿದ್ದಾರೆ. ಎಲ್ಲ ಪ್ರಕರಣಗಳಲ್ಲೂ ನ್ಯಾಯಾಲಯ ಅವರನ್ನು ದೋಷಮುಕ್ತಗೊಳಿಸಿದೆ. ಅವರನ್ನು ಭ್ರಷ್ಟ ಎಂದು ಕರೆದಿರುವುದು ನ್ಯಾಯಾಂಗ ನಿಂದನೆಯಾಗುತ್ತದೆ ಎಂದ ಮಧು, ಪೂಜಾರಿ ಅವರ ವಿರುದ್ಧ ನ್ಯಾಯಾಲಯಕ್ಕೆ ಹೋಗುವುದಿಲ್ಲ. ಹೋಗಲು ನನಗೂ ಸಮಯವೂ ಇಲ್ಲ. ಆದರೆ ಬಂಗಾರಪ್ಪ ಅವರ ಅಭಿಮಾನಿ ಬಳಗದವರು ಏನೂ ಮಾಡುತ್ತಾರೋ ಗೊತ್ತಿಲ್ಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.