ಪೂಮಣ್ಣು: ಮನೆಗೆಲಸಕ್ಕಿದ್ದ ಬಾಲಕಿ ಆತ್ಮಹತ್ಯೆ ಸ್ಥಿತಿಯಲ್ಲಿ ಪತ್ತೆ
Team Udayavani, Feb 14, 2019, 1:15 AM IST
ಉಳ್ಳಾಲ: ತಲಪಾಡಿ ಕೆ.ಸಿ.ರೋಡ್ ಪೂಮಣ್ಣುವಿನ ಮನೆಯೊಂದರಲ್ಲಿ ಕೆಲಸಕ್ಕಿದ್ದ ದಿಲ್ಲಿ ಮೂಲದ ಬಾಲಕಿಯೊಬ್ಬಳು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಸ್ಥಳೀಯರು ಕೊಲೆ ಶಂಕೆ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಪೊಲೀಸರು ಹಾಗೂ ತಜ್ಞ ವೈದ್ಯರು ಬಂದ ಬಳಿಕ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ ಘಟನೆ ಬುಧವಾರ ರಾತ್ರಿ ನಡೆದಿದೆ.
ದಿಲ್ಲಿ ನಿವಾಸಿ ಮಹಮ್ಮದ್ ಪರ್ವೀಝ್ ಅವರ ಪುತ್ರಿ ರೇಷ್ಮಾ(17) ಮೃತಪಟ್ಟವಳು. ಈಕೆ 9 ತಿಂಗಳಿನಿಂದ ಪೂಮಣ್ಣು ನಿವಾಸಿ ಮಹಮ್ಮದ್ ಅವರ ಮನೆಯಲ್ಲಿ ಕೆಲಸಕ್ಕಿದ್ದಳು. ಈ ಹಿಂದೆ ಈಬಾಲಕಿಯ ಸಹೋದರಿ ಇದೇ ಮನೆಯಲ್ಲಿ ಕೆಲಸಕ್ಕಿದ್ದು,ಮದುವೆಯ ಬಳಿಕ ತೆರಳಿದ್ದಳುಎನ್ನಲಾಗಿದೆ.
ಘಟನೆಯ ವಿವರ
ಮನೆಯ ಯಜಮಾನ ಮಹಮ್ಮದ್ ದುಬಾೖಯಲ್ಲಿ ನೆಲೆಸಿದ್ದು, ಇಲ್ಲಿ ಅವರ ಸಹೋದರ ಸಂಬಂಧಿ ಹಮೀದ್ ಅವರ ಕುಟುಂಬ ನೆಲೆಸಿದೆ. ಅವರು ಬೆಳಗ್ಗೆ 11 ಗಂಟೆಗೆ ಕುಟುಂಬ ಸಮೇತ ಸಂಬಂಧಿಕರ ಮನೆಗೆ ತೆರಳಿದ್ದು, ಈ ಸಂದರ್ಭ ಬಾಲಕಿ ಮನೆಯಲ್ಲೇ ಉಳಿದಿದ್ದಳು. ಸಂಜೆ ಆಗಮಿಸಿದಾಗ ಮನೆ ಬಾಗಿಲು ತೆರೆದಿದ್ದು, ಮನೆಯೊಳಗೆ ಮೊದಲ ಮಹಡಿಗೆ ಹತ್ತುವ ಸ್ಟೇರ್‌ಗೆàಸ್‌ನ ಸ್ಟೀಲ್ ರಾಡ್‌ಗೆ ಚೂಡಿದಾರ್ ಶಾಲ್ ಬಳಸಿ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಕಂಡು ಬಂದಿದ್ದಳು.
ಸುದ್ದಿ ತಿಳಿದು ಜಮಾಯಿಸಿದ ಸ್ಥಳೀಯರು ಇದು ಆತ್ಮಹತ್ಯೆ ಅಲ್ಲ ಎಂದು ಶಂಕಿಸಿದರು. ಪೊಲೀಸರು ಮತ್ತು ಮಾಧ್ಯಮದವರು ಬಂದ ಬಳಿಕ ತನಿಖೆ ಮಾಡಿ ಮೃತದೇಹ ತೆಗೆಯ ಬೇಕು ಎಂದು ಪಟ್ಟು ಹಿಡಿದರು.
ಸುಮಾರು ನಾಲ್ಕು ತಾಸು ಕಾಲ ಮನೆ ಮುಂದೆ ಜನ ಸೇರಿದ್ದರು. ಸ್ಥಳಕ್ಕೆ ಕ್ಷೇಮ ಫಾರೆನ್ಸಿಕ್‌ವಿಭಾಗದ ಮುಖ್ಯಸ್ಥ ಡಾ| ಮಹಾಬಲೇಶ್ ಆಗಮಿಸಿ ಮೃತದೇಹ ಪರಿಶೀಲನೆ ನಡೆಸಿದ ಬಳಿಕ ಮೃತದೇಹವನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ವೈದ್ಯರು ತಿಳಿಸಿದ್ದು, ಪೋಸ್ಟ್ ಮಾರ್ಟಂ ಬಳಿಕ ಹೆಚ್ಚಿನ ಮಾಹಿತಿ ತಿಳಿಯಬಹುದು ಎಂದು ತಿಳಿಸಿದರು.
ಉಳ್ಳಾಲ ಇನ್‌ಸ್ಪೆಕ್ಟರ್ ಗೋಪಿಕೃಷ್ಣ ಅವರ ಮಾರ್ಗದರ್ಶನದಲ್ಲಿ ತನಿಖೆ ನಡೆಸಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು
Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ
Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ
Road Mishap; ದ್ವಿಚಕ್ರ ವಾಹನ-ಲಾರಿ ನಡುವೆ ಅಪಘಾತ: ದಂಪತಿ ಸಾವು
ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.