ಪುಂಜಾಲಕಟ್ಟೆ : ಬ್ರಹ್ಮಕಲಶ ಸಿದ್ಧತೆಯಲ್ಲಿ ಕಾರಿಂಜೇಶ್ವರ ಕ್ಷೇತ್ರ
Team Udayavani, Mar 18, 2018, 12:24 PM IST
ಪುಂಜಾಲಕಟ್ಟೆ: ಭೂ ಕೈಲಾಸ ಪ್ರತೀತಿಯ ಮಹತೋಭಾರ ಬಂಟ್ವಾಳ ತಾ| ಕಾವಳಮೂಡೂರು ಗ್ರಾಮದ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಮಾ. 21ರಿಂದ ನಡೆಯಲಿರುವ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಭರದ ಸಿದ್ಧತೆ ನಡೆಯುತ್ತಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ, ಸಚಿವ ಬಿ. ರಮಾನಾಥ ರೈ ಅವರ ಗೌರವಾಧ್ಯಕ್ಷತೆಯಲ್ಲಿ ಬ್ರಹ್ಮಶ್ರೀ ವರ್ಕಾಡಿ ಗಣೇಶ ತಂತ್ರಿ ಮತ್ತು ಪ್ರ. ಅರ್ಚಕ ವೇ| ಮೂ| ನಟರಾಜ ಉಪಾಧ್ಯಾಯ ಅವರ ಸಹಕಾರದಲ್ಲಿ ಬ್ರಹ್ಮಕಲಶೋತ್ಸವ ನಡೆಯಲಿದೆ. 16 ವರ್ಷಗಳ ಹಿಂದೆ ಶ್ರೀಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ನಡೆದಿತ್ತು. ಇದೀಗ ನಾಲ್ಕು ವರ್ಷ ಹೆಚ್ಚಳವಾದರೂ ನವೀಕರಣದೊಂದಿಗೆ ಬ್ರಹ್ಮಕಲಶೋತ್ಸವ ಜರಗಲಿದೆ.
ಕ್ಷೇತ್ರ ವೈಶಿಷ್ಟ್ಯ
ಕೃತಯುಗದಲ್ಲಿ ರೌದ್ರ ಗಿರಿರ್ನಾಮವೆಂದು, ತ್ರೇತಾಯುಗದಲ್ಲಿ ಗಜರಾಡ್ಗಿರಿಯೆಂತಲೂ ದ್ವಾಪರಯುಗದಲ್ಲಿ ಭೀಮ ಶೈಲಶ್ಚವೆಂದು ಪ್ರಸ್ತುತ ಕಲಿಯುಗದಲ್ಲಿ ಕಾರಿಂಜ ಎಂಬ ಹೆಸರಿನಿಂದ ಕ್ಷೇತ್ರವು ಪ್ರಸಿದ್ಧಿ ಪಡೆದಿದೆ.
ರಾಜ್ಯದ ಅತ್ಯಂತ ಪ್ರಾಚೀನ ಶಿವಾಲಯವಾಗಿರುವ ಈ ಕ್ಷೇತ್ರ ಸಮುದ್ರಮಟ್ಟದಿಂದ ಸಾವಿರದ ಇನ್ನೂರು ಅಡಿ ಎತ್ತರವಿದ್ದು, ಎಂಟುನೂರು ಅಡಿಗಳ ಎತ್ತರದಲ್ಲಿ ಏಕೈಕ ಶಿಲೆಯ ಮೇಲೆ ದೇಗುಲವಿದೆ. ಶ್ರೀ ಕ್ಷೇತ್ರದ ಪ್ರಧಾನ ದೇವರು ಶ್ರೀ ಪಾರ್ವತಿ ಪರಮೇಶ್ವರ, ಶ್ರೀ ಮಹಾಗಣಪತಿ. ರಾಜನ್ ದೈವ ಕೊಡಮಣಿತ್ತಾಯ ಮತ್ತು ಪಿಲಿ ಚಾಮುಂಡಿ, ಉಳ್ಳಾಲ್ತಿ ಅಮ್ಮನವರ ಸಾನ್ನಿಧ್ಯ ಇಲ್ಲಿದೆ. ಕಾವಳಮೂಡೂರು, ಕಾವಳ ಪಡೂರು, ದೇವಸ್ಯಮೂಡೂರು, ದೇವಸ್ಯಪಡೂರು ಗ್ರಾಮಗಳು ಕ್ಷೇತ್ರದ ವಿಸ್ತಾರವನ್ನು ಹೊಂದಿದೆ.
ಹಸುರು ಹೊರೆಕಾಣಿಕೆ ವ್ಯರ್ಥವಾಗದಿರಲು ಪ್ರತಿ ಗ್ರಾಮಗಳಿಗೆ ಬ್ರಹ್ಮಕಲಶೋತ್ಸವದ ದಿನ ಪ್ರಕಾರ ಹೊರೆಕಾಣಿಕೆ ಸಮರ್ಪಣೆ ನಡೆಯಲಿದೆ. ಪಿ. ಜಿನರಾಜ ಆರಿಗ ಪಚ್ಚಾಜೆ ಗುತ್ತು ಅಧ್ಯಕ್ಷರಾಗಿರುವ ವ್ಯವಸ್ಥಾಪನ ಸಮಿತಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿ, ಕ್ಷೇತ್ರದ ಪ್ರಧಾನ ಅರ್ಚಕ ನಟರಾಜ ಉಪಾಧ್ಯಾಯ ಅವರು ಬ್ರಹ್ಮಕಲಶೋತ್ಸವದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ.
ಅಭಿವೃದ್ಧಿ ಕಾರ್ಯ
ಪ್ರಕೃತ ಶ್ರೀ ಪಾರ್ವತಿ ದೇವಸ್ಥಾನದಲ್ಲಿ 96 ಲಕ್ಷ ರೂ. ವೆಚ್ಚದಲ್ಲಿ ಸಂಪೂರ್ಣ ಶಿಲಾಮಯ ಸುತ್ತುಗೋಪುರ ನಿರ್ಮಾಣ ಸಹಿತ ವಿವಿಧ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಹೊರಾಂಗಣ ಪೌಳಿ ನವೀಕರಣ, ಉಕ್ಕುಡದಿಂದ ಈಶ್ವರ ಸನ್ನಿಧಿಗೆ ಮೆಟ್ಟಿಲುಗಳ ರಚನೆ, ಅತಿಥಿಗೃಹ, ಅನ್ನಛತ್ರದ ಅಡುಗೆ ಕೊಠಡಿ, ಕಾರ್ಯಾಲಯಕ್ಕೆ 2 ಕೊಠಡಿಗಳು, ಪಾರ್ವತಿ ಸನ್ನಿಧಿ ರಸ್ತೆಗೆ ಡಾಮರು, ಹೊರಾಂಗಣಕ್ಕೆ ಗ್ರಾನೈಟ್ ಹಾಸುವಿಕೆ ಮೊದಲಾದ ಕಾಮಗಾರಿಗಳು ನಡೆದಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.