ಕಳಪೆ ಕಾಮಗಾರಿ: ಸ್ವಪಕ್ಷೀಯರಿಂದಲೇ ಆಕ್ಷೇಪ
ಮೂಡುಬಿದಿರೆ ಪುರಸಭೆ ಸಾಮಾನ್ಯ ಸಭೆ
Team Udayavani, Jun 1, 2022, 12:48 PM IST
ಮೂಡುಬಿದಿರೆ: ಗಾಂಧಿನಗರದಲ್ಲಿ ಕಳಪೆ ಕಾಮಗಾರಿ ನಡೆದಿದೆ. ಮಳೆ ಬರುವಾಗ ಕಾಮಗಾರಿ ಮಾಡಬೇಡಿ ಎಂದರೂ ಗುತ್ತಿಗೆದಾರರು ಕೇಳಿಲ್ಲ, ತಮಗೆ ಇಷ್ಟ ಬಂದಹಾಗೆ ಮಾಡಿದ್ದಾರೆ. ಇಂಥ ಗುತ್ತಿಗೆದಾರರಿಗೆ ಏಕೆ ಮತ್ತೆ ಮತ್ತೆ ಅವಕಾಶ ಕೊಡುತ್ತೀರಿ? ಎಂದು ಪುರಸಭೆ ಸದಸ್ಯೆ ದಿವ್ಯಾ ಜಗದೀಶ್ ಅವರು ಆಡಳಿತ ಸೂತ್ರಹಿಡಿದಿರುವ ತಮ್ಮವರೇ ಆದ ಪುರಸಭೆ ಅಧ್ಯಕ್ಷರನ್ನು ಪ್ರಶ್ನಿಸಿದ ವಿದ್ಯಮಾನ ಮಂಗಳವಾರ ನಡೆದ ಪುರಸಭೆಯ ಮಾಸಿಕ ಅಧಿವೇಶನದಲ್ಲಿ ನಡೆದಿದೆ.
ಅಧ್ಯಕ್ಷತೆ ವಹಿಸಿದ್ದ ಅಧ್ಯಕ್ಷ ಪ್ರಸಾದ್ ಕುಮಾರ್ ಅವರು ಬೇರಾರೂ ಟೆಂಡರ್ ಸಲ್ಲಿಸದ ಕಾರಣ ಗುತ್ತಿಗೆಗೆ ಅವಕಾಶ ನೀಡಬೇಕಾಗಿ ಬಂದಿದೆ. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಪರಿಶೀಲಿಸಲಾಗು ವುದು ಎಂದರು. ಯಾರೂ ಮಾಡು ವುದಿಲ್ಲವೆಂದು ಇಂಥ ಕಳಪೆ ಕಾಮಗಾರಿ ನಡೆಸುವವರಿಗೆ ಕೊಡುವುದೇ ಎಂದು ಸುರೇಶ್ ಪ್ರಭು ಪ್ರಶ್ನಿಸಿದರು. ಎಂಜಿನಿ ಯರ್ ಪದ್ಮನಾಭ ಅವರು ಥರ್ಡ್ ಪಾರ್ಟಿ ಎಂಜಿನಿಯರ್ ಮೂಲಕ ವರದಿ ಪಡೆದು ಕ್ರಮ ಜರಗಿಸುವುದಾಗಿ ತಿಳಿಸಿದರು.
ಮೈದಾನಕ್ಕೆ ಜಾಗ ಕೊಡಿ
ಸ್ವರಾಜ್ಯ ಮೈದಾನದಲ್ಲಿ ಮಾರುಕಟ್ಟೆ ನೆಲೆಯಾಗಿದೆ, ಇನ್ನೊಂದೆಡೆ ಇರುವ ಮೈದಾ ನವೂ ಕ್ರೀಡಾಚಟುವಟಿಕೆಗಳಿಗೆ ಬಳಕೆಯಾಗಲು ಬಹಳ ತೊಡಕುಗಳಿವೆ. ಕ್ರೀಡಾಪಟುವೂ ಆಗಿರುವ ಅಧ್ಯಕ್ಷರೇ, ಎಲ್ಲರೂ ಮೈದಾನಕ್ಕಾಗಿ ಜಾಗ ಮಾಡಿ ಕೊಡಿ ಎಂದು ಒತ್ತಾಯಿಸಿದರು. ಸದಸ್ಯರು ತೋರಿಸಿಕೊಟ್ಟರೆ ಪರಿಶೀಲಿಸೋಣ ಎಂದು ಅಧ್ಯಕ್ಷರು ನಗುತ್ತ ಉತ್ತರ ನೀಡಿದರು.
ಮೆಸ್ಕಾಂ ಮಾನ್ಸೂನ್ ಗ್ಯಾಂಗ್
ಮಾನ್ಸೂನ್ ಗ್ಯಾಂಗ್ ಬರುವುದೇ ತಡವಾಗಿ, ಹಾಗಾಗಿ ಮಳೆ ಗಾಲದ ಮುನ್ನ ನಡೆಸಬೇಕಾದ ಕೆಲಸ ಮಾಡಿಸಲಾಗುತ್ತಿಲ್ಲ ಎಂದು ಅಧ್ಯಕ್ಷರು ಹೇಳಿದಾಗ ಪಿ.ಕೆ. ಥಾಮಸ್ 15 ವರ್ಷ ಗಳಿಂದಲೂ ಹೀಗಾಗುತ್ತಿದೆ ಎಂದರು.
ಮೂಡುಬಿದಿರೆ ಮೆಸ್ಕಾಂನ್ನು ಸೆಕ್ಷನ್ 2 ಅಥವಾ 3ಗೆ ಏರಿಸಲು ಈಗಾಗಲೇ ಪ್ರಸ್ತಾವನೆ ಹೋಗಿದ್ದರೂ ಕಾರಣಾಂತರದಿಂದ ಎಲ್ಲೋ ಮಿಸ್ ಆಗಿದೆ. ಈ ಬಗ್ಗೆ ತಾನು ಮೆಸ್ಕಾಂ ಎಂಡಿಯವರ ಗಮನ ಸೆಳೆದಿರುವುದಾಗಿ ಅಧ್ಯಕ್ಷರು ತಿಳಿಸಿದರು. ಚರಂಡಿ ಹೂಳೆತ್ತುವುದನ್ನು ತುರ್ತಾಗಿ ನಡೆಸಿ, ವಿದ್ಯಾಗಿರಿಯ ಸ್ವಾಗತ ಫಲಕ ಸರಿಪಡಿಸಿ ಎಂದು ಶ್ವೇತಾ ಪ್ರವೀಣ್ ಒತ್ತಾಯಿಸಿದರು.
ಕಾರ್ಮಿಕರಿಗೆ ಬಟ್ಟೆ
ಧಾರ್ಮಿಕ ಸಂಘಟನೆಯವರು ಪುರಸಭೆ ಕಾರ್ಮಿಕರಿಗೆ ಪುರಸಭೆ ಮೀಟಿಂಗ್ ಹಾಲ್‌ನಲ್ಲಿ ಬಟ್ಟೆ ವಿತರಿಸಿದ ಕಾರ್ಯಕ್ರಮ ಎಷ್ಟು ಸರಿ, ಈ ಸಭಾಂಗಣವನ್ನು ಹೀಗೆ ಅನ್ಯ ಸಂಘಟನೆಗಳಿಗೆ ನೀಡಬಹುದೇ ಎಂದು ಖಾರವಾಗಿ ಪ್ರಶ್ನಿಸಿದ ಕೊರಗಪ್ಪ ಅವರು ಹೀಗೆ ವಿತರಿಸಿದ ಬಟ್ಟೆಯೂ ಕಳಪೆಯಾಗಿದೆ, ಪರಿಶಿಷ್ಟ ಜಾತಿ ಪಂಗಡದವರನ್ನು ಅಪಮಾನ ಮಾಡಿದಂತಾಗಿದೆ ಎಂದು ಆರೋಪಿಸಿ, ಪುರಸಭೆಯವರು ನೋಡಿಕೊಳ್ಳಬೇಕಿತ್ತು ಎಂದಾಗ ಅಧಿಕಾರಿಗಳು, ಪುರಪಿತೃಗಳಿಗೆ ತುಸು ಮುಜುಗರ ಉಂಟುಮಾಡಿದಂತಾಯಿತು. ಎಲ್ಲರನ್ನೂ ಕರೆಯಬೇಕಿತ್ತು ಎಂದು ಸುರೇಶ್ ಪ್ರಭು ಹಾಗೂ ಸ್ವಪಕ್ಷದವರೇ ಆದ ದಿನೇಶ್ ಕುಮಾರ್ ತಾಕೀತು ಮಾಡಿದರು. ಒಂದು ಹಂತದಲ್ಲಿ ಉಪಾಧ್ಯಕ್ಷೆ ಸುಜಾತಾ ಶಶಿಧರ ಮತ್ತು ಕೊರಗಪ್ಪ ನಡುವೆ ತೀವ್ರ ವಾಗ್ಯುದ್ಧವೇ ನಡೆದು ಕೊನೆಗೆ ಪಿ.ಕೆ. ಥಾಮಸ್ ಆಗಿದ್ದು ಆಗಿದೆ, ಹೀಗಾಗದಂತೆ ನೋಡಿಕೊಳ್ಳಿ ಎಂದರು, ಅಧ್ಯಕ್ಷರೂ ಹೀಗಾಗದಂತೆ ನೋಡಿಕೊಳ್ಳುವುದಾಗಿ ತಿಳಿಸಿದರು.ಫೆಬ್ರವರಿಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಮಳೆಗಾಲ ಬರುವುದಕ್ಕಿಂತ ಮುನ್ನ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಯ ಕ್ರಮಗಳನ್ನು ಇನ್ನೂ ಜಾರಿಗೆ ತಂದಿಲ್ಲವೇಕೆ ಎಂದು ಸುರೇಶ್ ಪ್ರಭು ತಮ್ಮ ಕಾಳಜಿ ವ್ಯಕ್ತಪಡಿಸಿದರು. ಸ್ಥಾಯಿ ಸಮಿತಿಗೆ ಸದಸ್ಯರನ್ನು ಆರಿಸಲಾಯಿತು.
ಚರ್ಚೆಗಳಲ್ಲಿ ನಾಗರಾಜ ಪೂಜಾರಿ,ರೂಪಾ ಶೆಟ್ಟಿ ,ಶಕುಂತಳಾ ದೇವಾಡಿಗ, ನವೀನ್ ಶೆಟ್ಟಿ ಮೊದಲಾದ ಸದಸ್ಯರು ಪಾಲ್ಗೊಂಡಿದ್ದು ಮುಖ್ಯಾಧಿಕಾರಿ ಇಂದು ಎಂ., ಪ್ರಬಂಧಕ ಗೋಪಾಲ ನಾೖಕ್ ಮತ್ತು ಇತರ ಸಿಬಂದಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.