ಮಂಗಳೂರಿನ ಪಾರ್ಕಿಂಗ್‌ ಸ್ಥಳಾವಕಾಶದ ಕೊರತೆಗೆ ಪರಿಹಾರ ಸಾಧ್ಯತೆಗಳು


Team Udayavani, Jan 17, 2021, 2:40 AM IST

ಮಂಗಳೂರಿನ ಪಾರ್ಕಿಂಗ್‌ ಸ್ಥಳಾವಕಾಶದ ಕೊರತೆಗೆ ಪರಿಹಾರ ಸಾಧ್ಯತೆಗಳು

ಮಹಾನಗರ: ಮಂಗಳೂರು ನಗರದ ವಿಸ್ತೀರ್ಣವು ಭೌಗೋಳಿಕವಾಗಿ ಬಹಳ ಕಡಿಮೆಯಾಗಿರುವ ಕಾರಣ ಪಾರ್ಕಿಂಗ್‌ಗೆ ವಿಶಾಲವಾದ ಜಾಗ ಹೊಂದಿಸಿಕೊಳ್ಳುವುದು ಬಹುದೊಡ್ಡ ಸವಾಲಾಗಿದೆ. ಹೀಗಾಗಿ ಲಭ್ಯವಿರುವ ಖಾಲಿ ಜಾಗ, ರಸ್ತೆ ಬದಿ, ಬಹು ಮಹಡಿ ಪಾರ್ಕಿಂಗ್‌ ಸಂಕೀರ್ಣಗಳನ್ನು ನಿರ್ಮಿಸುವ ಮೂಲಕವೇ ಪಾರ್ಕಿಂಗ್‌ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ.

ದೇಶದ ಇತರ ಮಹಾನಗರಗಳಲ್ಲಿ ಈಗಾಗಲೇ ಇರುವ ಬಹು ಅಂತಸ್ತು ವಾಹನ ಪಾರ್ಕಿಂಗ್‌ ವ್ಯವಸ್ಥೆಯನ್ನೇ ಇಲ್ಲಿಯೂ ಅಳವಡಿಸಿಕೊಳ್ಳಬಹುದು. ಕೆಲವು ಕಡೆ ಖಾಲಿ ಬಿದ್ದಿರುವ ಸರಕಾರಿ ಜಾಗವನ್ನು ಸದ್ಬಳಕೆ ಮಾಡಿಕೊಂಡು ಅಥವಾ ಖಾಸಗಿ ಜಾಗವನ್ನು ಪಡೆದುಕೊಂಡು ಸರಕಾರಿ-ಖಾಸಗಿ ಸಹಭಾಗಿತ್ವದೊಂದಿಗೆ ಸೂಕ್ತ ಪಾರ್ಕಿಂಗ್‌ ವ್ಯವಸ್ಥೆ ಮಾಡಬಹುದು.

ಮಂಗಳೂರು ನಗರದ ಹೃದಯ ಭಾಗದಲ್ಲಿಯೇ ಸದ್ಯದ ಪರಿಸ್ಥಿತಿಯಲ್ಲಿ ವಾಹನಗಳ ನಿಲುಗಡೆಗೆ ಸ್ಥಳಾವ ಕಾಶ ಒದಗಿಸುವ ತುರ್ತು ಅಗತ್ಯವಿದೆ. ನಗರದ ಶೇ. 90ರಷ್ಟು ವಾಣಿಜ್ಯ ಚಟುವಟಿಕೆಗಳು ಹಾಗೂ ಸರಕಾರಿ ಕಚೇರಿಗಳು ಜ್ಯೋತಿ, ಹಂಪನಕಟ್ಟೆ , ಸ್ಟೇಟ್‌ಬ್ಯಾಂಕ್‌ ಪರಿಸರದಲ್ಲೇ ಕೇಂದ್ರೀಕೃತವಾಗಿದೆ. ಜತೆಗೆ, ಕೆಎಸ್‌ಆರ್‌ಟಿಸಿ, ಖಾಸಗಿ ನಿಲ್ದಾಣಗಳು, ಸೆಂಟ್ರಲ್‌ ರೈಲು ನಿಲ್ದಾಣ, ಆಸ್ಪತ್ರೆ-ಶಿಕ್ಷಣ ಸಂಸ್ಥೆಗಳು, ಕೇಂದ್ರ ಮಾರುಕಟ್ಟೆ, ಮಾಲ್‌ಗ‌ಳು, ಚಿತ್ರಮಂದಿರ, ಕ್ರೀಡಾಂಗಣ ಕೂಡ ನಗರದ ಕೇಂದ್ರ ಭಾಗದಲ್ಲೇ ಇದ್ದು, ಇಲ್ಲಿನ ಜನರ ಓಡಾಟ, ಕಾರ್ಯಚಟುವಟಿಕೆಗಳಿಗೆ ಪೂರಕವಾಗಿ ಆಸುಪಾಸಿನಲ್ಲಿ ಸೂಕ್ತ ಪಾರ್ಕಿಂಗ್‌ ಕಲ್ಪಿಸುವ ಬಗ್ಗೆಯೂ ನಗರಾಡಳಿತವು ಗಮನಹರಿಸಬೇಕಿದೆ.

ಈ ಪ್ರದೇಶಗಳಲ್ಲಿ ಹಳೆ ಬಸ್‌ ನಿಲ್ದಾಣದ ಉದ್ದೇಶಿತ ಬಹುಅಂತಸ್ತು ಮಾದರಿಯಲ್ಲಿ ನಗರದ ಪ್ರಮುಖ ಸ್ಥಳಗಳಲ್ಲಿ ಪಾರ್ಕಿಂಗ್‌ ತಾಣಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಕಾರ್ಯಯೋಜನೆ ರೂಪುಗೊಳ್ಳಬೇಕಾಗಿದೆ.

ನಗರದ ಪ್ರಮುಖ ಸ್ಥಳಗಳಲ್ಲಿ  ಪಾಲಿಕೆ ಅಧೀನ ದಲ್ಲಿರುವ ಸರಕಾರಿ ಜಾಗಗಳಲ್ಲಿ ಒಂದಷ್ಟು ಪ್ರದೇಶವನ್ನು ಪಾರ್ಕಿಂಗ್‌ ವ್ಯವಸ್ಥೆಗೆ ಮೀಸಲಿರಿಸುವುದು ಅವಶ್ಯ. ಖಾಸಗಿ ಸಹಭಾಗಿತ್ವವನ್ನು ಪಡೆದುಕೊಂಡು ಇಲ್ಲಿ ಬಹು ಅಂತಸ್ತು ಪಾರ್ಕಿಂಗ್‌ ವ್ಯವಸ್ಥೆ ರೂಪಿಸುವ ನಿಟ್ಟಿನಲ್ಲಿ ಚಿಂತನೆ ನಡೆಸುವುದು ಪಾರ್ಕಿಂಗ್‌ ಸಮಸ್ಯೆಗೆ ಪರಿಹಾರವಾಗಬಹುದು.

ಸಾಧ್ಯತೆಯ ಪ್ರದೇಶಗಳು :

ನಗರದಲ್ಲಿ ಕೆಲವು ವಾಣಿಜ್ಯ, ಜನದಟ್ಟ ನೆಯ ಪ್ರದೇಶಗಳನ್ನು ಪರಿಗಣಿಸಿ ಅಲ್ಲಿಗೆ ಹೊಂದಿಕೊಂಡಂತೆ ಲಭ್ಯ ಸರಕಾರಿ ಜಾಗಗಳನ್ನು ಗುರುತಿಸಿ ಬಹುಅಂತಸ್ತು, ವಾವತಿ ಪಾರ್ಕಿಂಗ್‌ ವ್ಯವಸ್ಥೆ ನಿರ್ಮಿಸುವ ಬಗ್ಗೆ ಚಿಂತನೆ ನಡೆಸಬಹುದಾಗಿದೆ.

  • ಮಂಗಳೂರು ಹಂಪನಕಟ್ಟೆ ಪ್ರದೇಶಕ್ಕೆ ಸಂಬಂಧಪಟ್ಟು ಹಳೆ ಬಸ್‌ ನಿಲ್ದಾಣದಲ್ಲಿ ಬಹು ಅಂತಸ್ತು ಪಾರ್ಕಿಂಗ್‌ ಸಂಕೀರ್ಣ ನಿರ್ಮಾಣ ಯೋಜನೆಗೆ ಚಾಲನೆ.
  • ಸ್ಟೇಟ್‌ಬ್ಯಾಂಕ್‌, ಕೇಂದ್ರ ಮಾರುಕಟ್ಟೆ ಪ್ರದೇಶಕ್ಕೆ ಸಂಬಂಧಪಟ್ಟಂತೆ ನೆಹರೂ ಮೈದಾನ ಬಳಿಯ ಉದ್ಯಾನದ ಪಕ್ಕದಲ್ಲಿರುವ, ಪ್ರಸ್ತುತ ಬೀದಿಬದಿ ವ್ಯಾಪಾರಕ್ಕೆಂದು ಮೀಸಲು ಇಟ್ಟಿರುವ ಜಾಗ.
  • ಲಾಲ್‌ಬಾಗ್‌, ಕೆಎಸ್‌ಆರ್‌ಟಿಸಿ ಪ್ರದೇಶಕ್ಕೆ ಸಂಬಂಧಟ್ಟಂತೆ ಕೆಎಸ್‌ಆರ್‌ಟಿಸಿ ಬಳಿ ಖಾಲಿಯಿರುವ ಸರಕಾರಿ ಜಾಗ ಇದೆ.
  • ನಗರದ ಪಿವಿಎಸ್‌, ಕರಂಗಲ್ಪಾಡಿ, ಕೊಡಿಯಾಲಬೈಲ್‌ ಪ್ರದೇಶಕ್ಕೆ ಸಂಬಂಧಪಟ್ಟ ಜೈಲ್‌ ರೋಡ್‌ನ‌ಲ್ಲಿರುವ ಸರಕಾರಿ ಜಾಗದ ಪೈಕಿ ಒಂದಷ್ಟು ಜಾಗ ಪಾರ್ಕಿಂಗ್‌ಗೆ ಬಳಸಬಹುದು (ಕೇಂದ್ರ ಕಾರಾಗೃಹ ಮುಡಿಪು ಪ್ರದೇಶಕ್ಕೆ ಸ್ಥಳಾಂತರಿಸುವ ಯೋಜನೆಯಿದೆ).
  • ಕದ್ರಿ ಪಾರ್ಕ್‌, ಕೆಪಿಟಿ, ಪಾದುವಾ ಪ್ರದೇಶಗಳಿಗೆ ಸಂಬಂಧಪಟ್ಟು ಕದ್ರಿ ಪಾರ್ಕ್‌ ಬಳಿ ಸ್ಕೇಟಿಂಗ್‌ ಜಾಗದ ಬಳಿಯ ಪ್ರದೇಶ.
  • ಬಂಗ್ರ ಕೂಳೂರು, ಕೊಟ್ಟಾರ ಚೌಕಿ ಪ್ರದೇಶಕ್ಕೆ ಸಂಬಂಧಪಟ್ಟು ಬಂಗ್ರ ಕುಳೂರು ಬಳಿ ಅರಣ್ಯ ನಿಗಮಕ್ಕೆ ನೀಡಲು ಉದ್ದೇಶಿಸಿರುವ ಜಾಗ.
  • ಮಲ್ಲಿಕಟ್ಟೆ , ಕದ್ರಿ, ಸಿಟಿ ಆಸ್ಪತ್ರೆ ಪ್ರದೇಶಕ್ಕೆ ಸಂಬಂಧಪಟ್ಟು ಆ ಪ್ರದೇಶದಲ್ಲಿರುವ ಇರುವ ಸರಕಾರಿ ಜಾಗದ ಪ್ರದೇಶಗಳನ್ನು ಪರಿಶೀಲಿಸಿ ಹೊಂದಿಸಿಕೊಳ್ಳುವುದು.
  • ಕಂಕನಾಡಿ, ಬೆಂದೂರುವೆಲ್‌ ಪ್ರದೇಶಕ್ಕೆ ಸಂಬಂಧಪಟ್ಟು ಪ್ರಸ್ತುತ ನಿರ್ಮಾಣವಾಗುತ್ತಿರುವ ಕಂಕನಾಡಿ ಮಾರುಕಟ್ಟೆ ಬಳಿ ಜಾಗ ಹೊಂದಿಸಿಕೊಳ್ಳುವುದು.
  • ವೆಲೆನ್ಸಿಯಾ ಪ್ರದೇಶಗಳಿಗೆ ಹೊಂದಿಕೊಂಡು, ವೆಲೆನ್ಸಿಯಾ, ನಂದಿಗುಡ್ಡೆ ಪ್ರದೇಶದಲ್ಲಿರುವ ಜಾಗವನ್ನು ಹೊಂದಿಸಿಕೊಳ್ಳುವುದು.
  • ಬಿಕರ್ನಕಟ್ಟೆ-ಕೈಕಂಬ ಪ್ರದೇಶದಲ್ಲಿ ಪ್ರಸ್ತುತ ಶನಿವಾರ ಸಂತೆ ನಡೆಯವ ಜಾಗದಲ್ಲಿ ಕೆಳಗಿನ ಪ್ರದೇಶವನ್ನು ಈಗಿನಂತೆ ಸಂತೆಗೆ ಮೀಸಲಿಟ್ಟು ಬಹುಅಂತಸ್ತು ಪಾರ್ಕಿಂಗ್‌ ವ್ಯವಸ್ಥೆಗೆ ಹೊಂದಿಸಿಕೊಳ್ಳುವುದು.
  • ಮಂಗಳಾದೇವಿ ಪ್ರದೇಶಕ್ಕೆ ಸಂಬಂಧಪಟ್ಟಂತೆ ಪ್ರಸ್ತುತ ಮಹಾನಗರಪಾಲಿಕೆ ನಿರ್ಮಿಸಲು ಉದ್ದೇಶಿಸಿರುವ ನೂತನ ಸಂಕೀಣದಲ್ಲಿ ಬಹು ಅಂತಸ್ತು ಪಾರ್ಕಿಂಗ್‌ ಜೋಡಿಸಿಕೊಳ್ಳುವುದು
  • ಕಾರ್‌ಸ್ಟ್ರೀಟ್‌ ಪ್ರದೇಶದಲ್ಲಿ ಹೊಸದಾಗಿ ನಿರ್ಮಿಸಲು ಉದ್ದೇಶಿಸಿರುವ ಸೆಂಟ್ರಲ್‌ ಮಾರುಕಟ್ಟೆ ಸಂಕೀìಣದಲ್ಲಿ ಬಹು ಅಂತಸ್ತು ಪಾರ್ಕಿಂಗ್‌ ವ್ಯವಸ್ಥೆ ಜೋಡಿಸಿಕೊಳ್ಳುವುದು
  • ಜ್ಯೋತಿ, ಬಂಟ್ಸ್‌ ಹಾಸ್ಟೆಲ್‌ ಪ್ರದೇಶಗಳಿಗೆ ಸಂಬಂಧಪಟ್ಟು ಪಿಪಿಪಿ ಮಾದರಿಯಲ್ಲಿ ಜಾಗ ಹೊಂದಿಸಿಕೊಳ್ಳುವುದು
  • ಫಳ್ನೀರು ಪ್ರದೇಶಕ್ಕೆ ಸಂಬಂಧಪಟ್ಟು ಪಿಪಿಪಿ ಮಾದರಿಯಲ್ಲಿ ಜಾಗ ಹೊಂದಿಸಿಕೊಳ್ಳುವುದು
  • ಬಂದರು ಪ್ರದೇಶದಲ್ಲಿ ಇರುವ ಸರಕಾರಿ ಜಾಗಗಳಲ್ಲಿ ಯಾವುದಾದರೂ ಒಂದು ಜಾಗವನ್ನು ಬಹುಅಂತಸ್ತು ಪಾರ್ಕಿಂಗ್‌ ನಿರ್ಮಾಣಕ್ಕೆ ಹೊಂದಿಸಿಕೊಳ್ಳುವುದು.

ಸಮಸ್ಯೆ, ಸಲಹೆಗಳು ತಿಳಿಸಿ :

ನಗರದಲ್ಲಿ ಪಾರ್ಕಿಂಗ್‌ ಸಮಸ್ಯೆ, ಟೋಯಿಂಗ್‌ ಅವಾಂತರಗಳ ಕುರಿತಂತೆ ಉದಯವಾಣಿ ಸುದಿನ ಈಗಾಗಲೇ “ಪಾರ್ಕಿಂಗ್‌ ಪರದಾಟ’ ಅಭಿಯಾನದ ಮೂಲಕ ಆಡಳಿತ ವ್ಯವಸ್ಥೆಯ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದೆ. ಅಭಿಯಾನದ ಭಾಗವಾಗಿ ಸಾರ್ವಜನಿಕರು ಪಾರ್ಕಿಂಗ್‌ ಕೊರತೆಯಿಂದ ಅನುಭವಿಸುತ್ತಿರುವ ಸಮಸ್ಯೆ, ಪ್ರಸ್ತುತ ಜಾರಿಯಲ್ಲಿರುವ ಟೋಯಿಂಗ್‌ ವ್ಯವಸ್ಥೆ, ಅದು ಸೃಷ್ಟಿಸಿರುವ ಸಮಸ್ಯೆಗಳು, ಪರಿಹಾರದ ನಿಟ್ಟಿನಲ್ಲಿ ಅಭಿಪ್ರಾಯ, ಸಲಹೆಗಳಿದ್ದಲ್ಲಿ ಉದಯವಾಣಿ ಸುದಿನ ವಾಟ್ಸ್‌ ಆ್ಯಪ್‌ಗೆ ಕಳುಹಿಸಿಕೊಡಬಹುದು. ಇದನ್ನು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕೆ ಒಂದು ವೇದಿಕೆಯಾಗುವ ಕಾರ್ಯವನ್ನು  ಉದಯವಾಣಿ ಸುದಿನ ಮಾಡಲಿದೆ. ವಾಟ್ಸ್‌ ಆ್ಯಪ್‌  ನಂ. 9900567000

ಟಾಪ್ ನ್ಯೂಸ್

New Year Guidelines: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಹೈದರಾಬಾದ್ ಪೊಲೀಸರು

New Year Guidelines: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಹೈದರಾಬಾದ್ ಪೊಲೀಸರು

Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ

Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ

Krantiveer Brigade launched by worshipping the feet of 1008 saints: KS Eshwarappa

Politicss; 1008 ಸಾಧುಸಂತರ ಪಾದಪೂಜೆ‌ ಮೂಲಕ‌ ಕ್ರಾಂತಿವೀರ ಬ್ರಿಗೇಡ್‌ ಗೆ ಚಾಲನೆ: ಈಶ್ವರಪ್ಪ

INDvAUS: Is captain Rohit Sharma standing against to Shami?; Aussie tour difficult for pacer!

INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?;‌ ವೇಗಿಗೆ ಆಸೀಸ್‌ ಪ್ರವಾಸ ಕಷ್ಟ!

Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ

Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ

2-bntwl

Bantwala: ಚಾಲಕನ‌ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್

The owner of the betting app promoted by Bollywood actresses is Pakistani!

Betting App; ಬಾಲಿವುಡ್‌ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್‌‌ ಮಾಲಕ ಪಾಕಿಸ್ತಾನಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangalore_Airport-NewTerminal

Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ

Frud

Mangaluru: ಆನ್‌ಲೈನ್‌ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ

MCC-BankArrest

Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್‌ ಅಧ್ಯಕ್ಷನ ಬಂಧನ

Surthkal-Spota

Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ

Traffic-UPI

Mangaluru: ಇನ್ನು ಯುಪಿಐ ಮೂಲಕವೂ ಟ್ರಾಫಿಕ್‌ ದಂಡ ಪಾವತಿ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

New Year Guidelines: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಹೈದರಾಬಾದ್ ಪೊಲೀಸರು

New Year Guidelines: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಹೈದರಾಬಾದ್ ಪೊಲೀಸರು

Lok Adalat: ಲೋಕ್‌ ಅದಾಲತ್‌ನಲ್ಲಿ 38.8 ಲಕ್ಷ  ವ್ಯಾಜ್ಯ ಇತ್ಯರ್ಥ

Lok Adalat: ಲೋಕ್‌ ಅದಾಲತ್‌ನಲ್ಲಿ 38.8 ಲಕ್ಷ  ವ್ಯಾಜ್ಯ ಇತ್ಯರ್ಥ

5

Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ

Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ

Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ

Krantiveer Brigade launched by worshipping the feet of 1008 saints: KS Eshwarappa

Politicss; 1008 ಸಾಧುಸಂತರ ಪಾದಪೂಜೆ‌ ಮೂಲಕ‌ ಕ್ರಾಂತಿವೀರ ಬ್ರಿಗೇಡ್‌ ಗೆ ಚಾಲನೆ: ಈಶ್ವರಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.