ತಲಪಾಡಿ ಟೋಲ್ ದರ ಏರಿಕೆ ಸಾಧ್ಯತೆ
Team Udayavani, Feb 7, 2020, 6:20 AM IST
ಸಾಂದರ್ಭಿಕ ಚಿತ್ರ
ಉಳ್ಳಾಲ/ಮಂಗಳೂರು: ಪಂಪ್‌ವೆಲ್ ಫ್ಲೈಓವರ್ ಕಾಮಗಾರಿ ಪೂರ್ಣಗೊಂಡಿರುವ ಕಾರಣ ತಲಪಾಡಿ ಟೋಲ್ ದರ ಕೊಂಚ ಏರಿಕೆಯಾಗುವ ಸಾಧ್ಯತೆಯಿದೆ.
ಪಿಪಿಪಿ ಮಾದರಿಯಲ್ಲಿ ನಿರ್ಮಿಸಿರುವ ಹೆದ್ದಾರಿಯ ಯಾವುದೇ ಕಾಮಗಾರಿ ಮುಗಿದ ಬಳಿಕ ಅದು ಟೋಲೆಬಲ್ ಲೆಂತ್‌ನಲ್ಲಿ ಬರಲಿದೆ. ಇಷ್ಟರ ತನಕ ಜನರಿಗೆ ಆಗದ ಕಾಮಗಾರಿ ಬಗ್ಗೆ ಟೋಲ್ ಕೊಡುವ ಅಗತ್ಯ ಇರಲಿಲ್ಲ. ಹಾಗಾಗಿ ಜನರು ಇದಕ್ಕೆ ಟೋಲ್ ಕಟ್ಟುತ್ತಿರಲಿಲ್ಲ. ಕಾಮಗಾರಿ ಮುಗಿದ ಬಳಿಕ ಟೋಲ್ ಮೊತ್ತ ಹೆಚ್ಚು ಆಗಲಿದೆ ಎಂಬುದು ರಾ.ಹೆ. ಪ್ರಾಧಿಕಾರದ ನಿಯಮವಾದ್ದರಿಂದ ಶೀಘ್ರದಲ್ಲಿ ಟೋಲ್ ದರ ಕೊಂಚ ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಟೋಲ್ ದರ ಯಾವಾಗದಿಂದ ಏರಿಕೆಯಾಗಬಹುದು ಎಂಬ ಬಗ್ಗೆ ರಾ.ಹೆ. ಪ್ರಾಧಿಕಾರ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಟೋಲ್ ಪ್ಲಾಜಾದ ಮುಖ್ಯಸ್ಥ ಶಿವಪ್ರಸಾದ್ ರೈ ತಿಳಿಸಿದ್ದಾರೆ.
ಗಡಿಯ ವಾಹನಗಳಿಗೆ ಟೋಲ್ ಕಡ್ಡಾಯ
ತಲಪಾಡಿ ಟೋಲ್‌ಪ್ಲಾಜಾದಲ್ಲಿ ಶೇ. 50ರಷ್ಟು ಫಾಸ್ಟಾಗ್ ಅಳವಡಿಸಿದ ವಾಹನಗಳು ಸಂಚರಿಸುತ್ತಿದ್ದು, ಫೆ. 10ರ ಸೋಮವಾರದಿಂದ ಗಡಿಭಾಗದ ಮಂಜೇಶ್ವರದ ವಾಹನಗಳಿಗೆ ಟೋಲ್ ಕಡ್ಡಾಯವಾಗಲಿದೆ. ತಲಪಾಡಿ ಗ್ರಾಮ ವ್ಯಾಪ್ತಿಯ ವಾಹನಗಳಿಗೆ ಟೋಲ್ ವಿನಾಯಿತಿ ಮುಂದುವರಿಯಲಿದೆ.
ಕೇರಳ ಗಡಿ ಭಾಗವಾದ ತಲಪಾಡಿ ಯಲ್ಲಿ ಈವರೆಗೆ ಮಂಜೇಶ್ವರ, ತಲಪಾಡಿ ಮತ್ತು ಕೋಟೆಕಾರು, ಸೋಮೇಶ್ವರದ ಕೆಲವು ಪ್ರದೇಶದ ವಾಹನಗಳಿಗೆ ಟೋಲ್ ವಿನಾಯಿತಿ ಇತ್ತು. ಆದರೆ ಫೆ. 10ರಿಂದ ಟೋಲ್‌ವಿನಾಯಿತಿ ತಲಪಾಡಿ ಗ್ರಾ.ಪಂ. ವ್ಯಾಪ್ತಿಗೆ ಮಾತ್ರ ಸೀಮಿತವಾಗಲಿದೆ. ನಗದು ವಾಹನಗಳಿಗೆ ನಷ್ಟ ಮೊದಲು 24 ಗಂಟೆಯೊಳಗೆ ವಾಪಸಾದರೆ ಕಾರು ಸಹಿತ ಸಣ್ಣ ವಾಹನಗಳಿಗೆ 60 ರೂ. ಪಾವತಿಸುವ ಅವಕಾಶವಿತ್ತು. ಫಾಸ್ಟಾಗ್ ಕಡ್ಡಾಯದ ಬಳಿಕ ನಗದು ಸಂಚಾರದ ವಾಹನಗಳಿಗೆ ಒಂದು ಕಡೆ ಸಂಚಾರದ ಟೋಲ್ ಪಾವತಿಗೆ ಮಾತ್ರ ಅವಕಾಶವಿದ್ದು, 24 ಗಂಟೆಯೊಳಗೆ ಮರಳಿದರೂ ಟೋಲ್‌ನ ಪೂರ್ಣ ಮೊತ್ತವನ್ನು ಪಾವತಿಸಬೇಕಾಗಿದೆ. ಇದರಿಂದ ಎರಡೂ ಬದಿ ಸಂಚಾರಕ್ಕೆ 80 ರೂ. ಆಗಲಿದೆ. ಫಾಸ್ಟಾಗ್ ಅಳವಡಿಸಿರುವ ವಾಹನಗಳಿಗೆ 60 ರೂ. ಶುಲ್ಕ ವಿಧಿಸುತ್ತಿದ್ದು, 20 ರೂ. ವಿನಾಯಿತಿ ಇದೆ.
ವಾಹನಗಳ ಸಾಲು
ತಲಪಾಡಿ ಟೋಲ್‌ಪ್ಲಾಜಾದ ಒಟ್ಟು 10 ಲೇನ್‌ಗಳಲ್ಲಿ ಎರಡು ಲೇನ್‌ಗಳಲ್ಲಿ ಮಾತ್ರ ನಗದು ಸ್ವೀಕಾರಕ್ಕೆ ವ್ಯವಸ್ಥೆ ಮಾಡಿದೆ. ದಿನವೊಂದಕ್ಕೆ 10 ಸಾವಿರಕ್ಕೂ ಹೆಚ್ಚು ವಾಹನಗಳು ಸಂಚರಿಸುತ್ತಿದ್ದು ಶೇ. 90ರಷ್ಟು ಘನ ವಾಹನಗಳು ಫಾಸ್ಟಾಗ್ ಅಳವಡಿಸಿದ್ದರೆ, ಶೇ. 50 ಕಾರು ಮತ್ತು ಇತರ ವಾಹನಗಳು ಅಳವಡಿಸದೆ ನಗದು ಪಾವತಿಸುತ್ತಿರುವುದರಿಂದ ಬೆಳಗ್ಗೆ ಮತ್ತು ಸಂಜೆ ವೇಳೆಗೆ ನಗದು ಸ್ವೀಕಾರದ ಲೇನ್‌ಗಳಲ್ಲಿ ವಾಹನಗಳು ಸಾಲು ಮುಂದುವರಿದಿದೆ.
ಟೋಲ್‌ಗೇಟ್ ಲಾಸ್ಟ್ ಸ್ಟಾಪ್
ಮಂಗಳೂರಿನಿಂದ ತಲಪಾಡಿಗೆ ಸಂಚರಿಸುವ ಖಾಸಗಿ ಬಸ್‌ಗಳಿಗೆ ಈಗ ಟೋಲ್‌ಗೇಟ್ ಅನ್ನು ಲಾಸ್ಟ್ ಸ್ಟಾಪ್ ಮಾಡಿದ್ದರಿಂದ ಮೇಲಿನ ತಲಪಾಡಿ ಮತ್ತು ತೂಮಿನಾಡು, ದೇವಿಪುರ ಕಡೆ ಸಂಚರಿಸುವ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ.
ಶುಲ್ಕ ಪರಿಷ್ಕರಣೆಯಾಗಿಲ್ಲ
ರಾ. ಹೆ. 66ರ ತಲಪಾಡಿ ಟೋಲ್ ಅತ್ಯಂತ ಮಹತ್ವದ್ದಾಗಿದ್ದು, ಹೆದ್ದಾರಿಯೊಂದಿಗೆ ಪಂಪ್‌ವೆಲ್, ತೊಕ್ಕೊಟ್ಟು ಮೇಲ್ಸೇತುವೆ, ನೇತ್ರಾವತಿ ಬ್ರಿಡ್ಜ್ ಹೊಂದಿರುವ ಏಕೈಕ ಟೋಲ್ ಆಗಿದೆ. ಈಗ ಟೋಲ್ ಪ್ಲಾಝಾದಲ್ಲಿ ಕೇವಲ ನೇತ್ರಾವತಿ ಬ್ರಿಡ್ಜ್ ಮಾತ್ರ ಸೇರಿಸಲಾಗಿದ್ದು, ತೊಕ್ಕೊಟ್ಟು ಮತ್ತು ಪಂಪ್‌ವೆಲ್ ಮೇಲ್ಸೇತುವೆ ಟೋಲ್ ಆರಂಭವಾದ ಸಂದರ್ಭದಲ್ಲಿ ಕಾಮಗಾರಿ ಪೂರ್ಣವಾಗದ ಹಿನ್ನೆಲೆಯಲ್ಲಿ ಸೇರಿಸಿರಲಿಲ್ಲ. ಆದರೆ ನವಯುಗ್ ತೊಕ್ಕೊಟ್ಟು ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡು ತಿಂಗಳುಗಳು ಕಳೆದಿದ್ದು, ಪಂಪ್‌ವೆಲ್ ಮೇಲ್ಸೇತುವೆ ಜ.31ರಿಂದ ಮುಕ್ತವಾಗಿರುವುದರಿಂದ ಮುಂದಿನ ದಿನಗಳಲ್ಲಿ ಟೋಲ್ ಪರಿಷ್ಕರಣೆಯಾದಲ್ಲಿ ಟೋಲ್ ಶುಲ್ಕ ಹೆಚ್ಚುವ ಸಾಧ್ಯತೆ ಇದೆ.
ತಲಪಾಡಿ ಗ್ರಾ. ಪಂ. ಗೆ ಸೀಮಿತ
ಫಾಸ್ಟಾಗ್ ಕಡ್ಡಾಯದ ಬಳಿಕ ಟೋಲ್‌ಗೇಟ್‌ನಲ್ಲಿ ಟ್ಯಾಗ್ ಅಳವಡಿಕೆಗೆ ವಾಹನ ಚಾಲಕರು ಮುಂದಾಗುತ್ತಿದ್ದಾರೆ. ಆರಂಭದಲ್ಲಿ ಶೇ.30 ಫಾಸ್ಟಾಗ್ ಅಳವಡಿಕೆಯಿದ್ದು ಕಳೆದ 20 ದಿನಗಳಲ್ಲಿ ಆ ಪ್ರಮಾಣ ಶೇ. 50ಕ್ಕೇರಿದೆ. ಸೋಮವಾರದಿಂದ ಟೋಲ್ ವಿನಾಯಿತಿ ತಲಪಾಡಿ ಗ್ರಾ. ಪಂ. ಗೆ ಸೀಮಿತವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ullal: ಎಂಡಿಎಂಎ ಸಾಗಾಟ: ಮೂವರ ಬಂಧನ
Congress: ದ.ಕ ಗ್ರಾಮ ಪಂಚಾಯತ್; 24ರಲ್ಲಿ 19 ಸ್ಥಾನ ಕಾಂಗ್ರೆಸ್ ಬೆಂಬಲಿತರಿಗೆ ಗೆಲುವು
Moodabidri: ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ.ನೇಮಿರಾಜ ಹೆಗ್ಡೆ ನಿಧನ
ಅಡಿಕೆ ಬೆಳೆಗಾರರ ಜೀವನಕ್ಕೆ ಆಘಾತವಿಕ್ಕಿದ ಡಬ್ಲ್ಯೂಎಚ್‌ಒ ವಿರುದ್ಧ ಕ್ರಮಕ್ಕೆ ಒತ್ತಾಯ
Mangaluru: ಭಾರತ ಬಲಿಷ್ಠವಾಗಲು ಕೌಶಲಯುತ ಶಿಕ್ಷಣ ಅಗತ್ಯ: ಡಾ| ನಿರ್ಮಲಾನಂದನಾಥ ಸ್ವಾಮೀಜಿ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.