ಅಂಚೆ ಜಂಟಿ ಕ್ರಿಯಾ ಸಮಿತಿಯಿಂದ ಮುಷ್ಕರ 


Team Udayavani, Mar 17, 2017, 3:37 PM IST

1603rjh4.jpg

ಪುತ್ತೂರು : ಏಳನೇ ವೇತನ ಆಯೋಗದ ವರದಿಯಲ್ಲಿನ ತಾರತಮ್ಯ ವಿರೋಧಿಸಿ ಗುರುವಾರ‌ ಕೇಂದ್ರ ಸರಕಾರಿ ನೌಕರರ ಸಂಘಟನೆಗಳು ಒಂದು ದಿನದ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದು, ಇದಕ್ಕೆ ಬೆಂಬಲ ಸೂಚಿಸಿ ಅಂಚೆ ಜಂಟಿ ಕ್ರಿಯಾ ಸಮಿತಿ ಪುತ್ತೂರು ವಿಭಾಗವು ಪ್ರಧಾನ ಅಂಚೆ ಕಚೇರಿ ಬಳಿ ಮುಷ್ಕರ ನಡೆಸಿತು.

ಎನ್‌.ಎ.ಪಿ.ಇ.ಯು. ವಿಭಾಗ ಕಾರ್ಯದರ್ಶಿ ರಾಜೇಶ್‌ ಕುಮಾರ್‌ ಅವರು ಮಾತನಾಡಿ, 7ನೇ ವೇತನ ಆಯೋಗ ಸಲ್ಲಿಸಿದ ವರದಿಗೆ ಸಂಬಂಧಿಸಿದಂತೆ ಕೇಂದ್ರ ಸರಕಾರಿ ನೌಕರರ ಜಂಟಿ ಕ್ರಿಯಾ ಸಮಿತಿಯು ಕೆಲವು ತಿದ್ದುಪಡಿಗಳಿಗಾಗಿ ಮನವಿಯನ್ನು ಕ್ಯಾಬಿನೆಟ್‌ ಸೆಕ್ರೆಟರಿಯವರಿಗೆ 2015ರ ಡಿ. 10ರಂದು ಸಲ್ಲಿಸಿತ್ತು ಎಂದರು.

ಕೇಂದ್ರ ಸರಕಾರ ಕನಿಷ್ಠ ವೇತನ ಮತ್ತು ಭತ್ತೆಗಳ ವಿಷಯವನ್ನು ಪರಿಶೀಲಿಸಲು ಸಮಿತಿಯೊಂದನ್ನು ರಚಿಸಿ 4 ತಿಂಗಳಲ್ಲಿ ಇತ್ಯರ್ಥಗೊಳಿಸುವುದಾಗಿ ಭರವಸೆ ನೀಡಿದ್ದರೂ 8 ತಿಂಗಳು ಕಳೆದರೂ ಕ್ರಮ ಕೈಗೊಂಡಿಲ್ಲ  ಎಂದರು.

ಹೋರಾಡದೆ ವಿಧಿಯಿಲ್ಲ
ಸಮಿತಿ ರಚನೆ ಮಾಡದೇ ಇರುವುದು ಸರಕಾರ ನಮಗೆ ಮಾಡಿದ ಮೋಸ. ಈ ನಿಟ್ಟಿನಲ್ಲಿ ರಾಷ್ಟ್ರವ್ಯಾಪಿ ಈ ಮುಷ್ಕರ ನಡೆಯುತ್ತಿದ್ದು ಪುತ್ತೂರಿ ನಲ್ಲೂ ನಾವು ನಡೆಸಿದ್ದೇವೆ. ಹೋರಾಟ  ಮಾಡದೆ ವಿಧಿಯಿಲ್ಲ. ನಮ್ಮ ತಾಳ್ಮೆಗೂ ಒಂದು ಮಿತಿ ಇದೆ. ಸರಕಾರ ಇನ್ನಾದರೂ ಕಣ್ಣು ತೆರೆದು ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ಎನ್‌.ಎ.ಪಿ.ಇ. ಸಂಘದ ವಿಭಾಗ ಕಾರ್ಯದರ್ಶಿ ಚಿದಾನಂದ, ಬಿ.ಪಿ.ಇ. ಯು.ನ ಸೂರ್ಯನಾರಾಯಣ, ಗ್ರೂಪ್‌ ಡಿ. ಪೋಸ್ಟ್‌ಮೆನ್‌ಗಳಾದ ಆನಂದ ಚೆನ್ನಕಜೆ, ಬಾಬು ನಾಯ್ಕ, ಗ್ರಾಮೀಣ ಅಂಚೆ ನೌಕರರ ಸಂಘದ ಶೋಭಾ, ಉಮೇಶ್‌ ಬಂಡಾಜೆ ಹಾಗೂ ಇತರ ನೌಕರರು ಪಾಲ್ಗೊಂಡರು. 
ಪ್ರಧಾನ ಅಂಚೆ ಕಚೇರಿ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಿ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಲಾಯಿತು. ಅಂಚೆ ಕಚೇರಿಯನ್ನು ಬಂದ್‌ ಮಾಡಲಾಗಿತ್ತು.

ಸುಳ್ಯದಲ್ಲಿ  ಮುಷ್ಕರ
ಸುಳ್ಯ ನಗರದ ಅಂಚೆ ಕಚೇರಿಯ ನೌಕರರು ಕರ್ತವ್ಯಕ್ಕೆ ಹಾಜರಾಗದೆ ಮುಷ್ಕರ ನಡೆಸಿದರು. ತಮ್ಮ ಬೇಡಿಕೆ ಯನ್ನು ಶೀಘ್ರವೇ ಈಡೇರಿಸುವಂತೆ ಆಗ್ರಹಿಸಿದರು.

ಬೇಡಿಕೆಗಳ ಒತ್ತಾಯ
ಕ್ರಿಯಾ ಸಮಿತಿಯ ಬೇಡಿಕೆಗಳಾದ ಕನಿಷ್ಠ  ವೇತನ ಮಿತಿ ಹೆಚ್ಚಿಸುವುದು, ಮನೆ ಬಾಡಿಗೆ ಭತ್ಯೆ, ಇತರ ಭತ್ಯೆಗಳನ್ನು ಮುಂದುವರಿಸುವುದು, ಜಿ.ಡಿ.ಎಸ್‌. ನೌಕರರನ್ನು ಸರಕಾರಿ ನೌಕರರೆಂದು ಪರಿಗಣಿಸಬೇಕು, ನಿವೃತ್ತಿ ವೇತನ ಮತ್ತು ಇತರ ಭತ್ಯೆಗಳನ್ನು ನೀಡಬೇಕು,  ಜಿ.ಡಿ.ಎಸ್‌. ನೌಕರರ ವೇತನ ಆಯೋಗದ ವರದಿಯನ್ನು ತತ್‌ಕ್ಷಣ ಜಾರಿಗೊಳಿಸಬೇಕು, ಖಾಲಿಯಿರುವ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು ಹೊಸ ಪಿಂಚಣಿ ಯೋಜನೆ ಹಿಂದೆಗೆದುಕೊಂಡು ಕಡ್ಡಾಯ ಪಿಂಚಣಿ ನೀಡಬೇಕು, ನೌಕ ರರ ಯೂನಿಯನ್‌ಗಳಲ್ಲಿ ತೊಡ ಗಿಸಿಕೊಂಡವರನ್ನು ಪೀಡಿಸುವ ಪ್ರವೃತ್ತಿ ಕೊನೆಗಾಣಿಸಬೇಕು ಮತ್ತು ಖಾಸಗೀಕರಣ, ಇಲಾಖಾ ನೌಕರರ ಸಂಖ್ಯೆಯಲ್ಲಿ ಕಡಿತ, ಹೊರಗುತ್ತಿಗೆ ಮೊದಲಾದ ಕಾರ್ಮಿಕ ವಿರೋಧಿ ನೀತಿ ಗಳನ್ನು ಕೂಡಲೇ ಕೈಬಿಡಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ಟಾಪ್ ನ್ಯೂಸ್

Dinesh-Gundurao

Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್‌

Priyank-Kharghe

Inquiry Report: ಬಿಜೆಪಿಗೆ ’40 ಪರ್ಸೆಂಟ್‌’ ಕ್ಲೀನ್‌ಚಿಟ್‌ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್‌

nelamangala

Leopard Attack: ನೆಲಮಂಗಲ ಸಮೀಪ ಚಿರತೆ ದಾಳಿಗೆ ರೈತ ಮಹಿಳೆ ಬಲಿ

World Cup; ಖೋ ಖೋ ಪಂದ್ಯಾವಳಿಗೆ ಐಒಎ ಬೆಂಬಲ

World Cup; ಖೋ ಖೋ ಪಂದ್ಯಾವಳಿಗೆ ಐಒಎ ಬೆಂಬಲ

ATP Finals : ಜಾನಿಕ್‌ ಸಿನ್ನರ್‌ಗೆ ಮೊದಲ ಪ್ರಶಸ್ತಿ

ATP Finals : ಜಾನಿಕ್‌ ಸಿನ್ನರ್‌ಗೆ ಮೊದಲ ಪ್ರಶಸ್ತಿ

Women’s Asian Hockey Semi-Finals: ಜಪಾನ್‌ ವಿರುದ್ಧ ಭಾರತ ಫೇವರಿಟ್‌

Women’s Asian Hockey Semi-Finals: ಜಪಾನ್‌ ವಿರುದ್ಧ ಭಾರತ ಫೇವರಿಟ್‌

China Master Badminton: ಸಾತ್ವಿಕ್‌-ಚಿರಾಗ್‌ ಜೋಡಿ ಮರಳಿ ಕಣಕ್ಕೆ

China Master Badminton: ಸಾತ್ವಿಕ್‌-ಚಿರಾಗ್‌ ಜೋಡಿ ಮರಳಿ ಕಣಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belthangady: ಅಡಿಕೆ ವ್ಯಾಪಾರಿಯ ಬ್ಯಾಗಿನಲ್ಲಿದ್ದ 2 ಲಕ್ಷ ರೂ. ಕಳವು

Snake

Vitla: ಹಾವು ಕಡಿದು ಪೆರುವಾಯಿ ಯುವಕ ಮೃತ್ಯು

Putturu-Police

Putturu: ಠಾಣೆ ಮುಂಭಾಗದಲ್ಲಿ ಜನರ ಆಕ್ರೋಶ; ಶಾಸಕ ಅಶೋಕ್‌ ಕುಮಾರ್‌ ರೈ ಭೇಟಿ

1

Puttur: ಕಲ್ಪವೃಕ್ಷಕ್ಕೆ ಮರುಜೀವವಿತ್ತ ಎಂಜಿನಿಯರ್‌

courts

Puttur: ಮಹಿಳೆಯ ಮಾನಭಂಗಕ್ಕೆ ಯತ್ನ; ಆರೋಪಿಗೆ ಜೈಲು ಶಿಕ್ಷೆ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

udupi

udupi: ಮಗನ ಅರಸುತ್ತಾ ಬಂದ ತಾಯಿ: ಇಬ್ಬರು ಮಕ್ಕಳ ಸಹಿತ ವೃದ್ಧೆಯ ರಕ್ಷಣೆ

Dinesh-Gundurao

Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್‌

CN-Manjunath

Mysuru: ಕೋವಿಡ್‌ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್‌.ಮಂಜುನಾಥ್‌

Priyank-Kharghe

Inquiry Report: ಬಿಜೆಪಿಗೆ ’40 ಪರ್ಸೆಂಟ್‌’ ಕ್ಲೀನ್‌ಚಿಟ್‌ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್‌

4

Udupi: ಚಿನ್ನ, ವಜ್ರಾಭರಣ ಕದ್ದು ಹೋಂ ನರ್ಸ್‌ ಪರಾರಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.