ಸುದಿನ Follow up : ಪೊಟ್ಟುಕೆರೆ ಪಹಣಿಪತ್ರ ಸರಿಪಡಿಸಲು ಕ್ರಮ


Team Udayavani, Jul 5, 2018, 2:25 AM IST

pottukere-4-7.jpg

ಕಡಬ: ಕುಟ್ರಾಪ್ಪಾಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕಡಬ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಪಕ್ಕದಲ್ಲಿರುವ ಹಳೆ ಸ್ಟೇಶನ್‌ ನ ಪೊಟ್ಟುಕೆರೆಯ ಪರಂಬೋಕು ಪ್ರದೇಶವನ್ನು ಪಹಣಿ ಪತ್ರಿಕೆಯಲ್ಲಿ ತಿದ್ದುಪಡಿ ಮಾಡಿ ಸರಕಾರಿ ಜಮೀನು ಎಂದು ನಮೂದಿಸಿ ಅತಿಕ್ರಮಣ ಮಾಡಲು ಹುನ್ನಾರ ನಡೆಯುತ್ತಿದೆ ಎಂದು ಕುಟ್ರಾಪ್ಪಾಡಿ ಗ್ರಾ.ಪಂ. ವತಿಯಿಂದ ಕಂದಾಯ ಇಲಾಖೆಗೆ ಸಲ್ಲಿಸಿದ ದೂರಿಗೆ ಸ್ಪಂದಿಸಿರುವ ಕಂದಾಯ ಅಧಿಕಾರಿಗಳು ಕೊನೆಗೂ ಪಹಣಿ ಪತ್ರ ಸರಿಪಡಿಸಲು ಕ್ರಮ ಕೈಗೊಂಡಿದ್ದಾರೆ.

4 ತಿಂಗಳ ಬಳಿಕ ಕ್ರಮ
ಕುಟ್ರಾಪ್ಪಾಡಿ ಗ್ರಾಮದ ಸರ್ವೆ ನಂ. 40ರಲ್ಲಿ ಇರುವ ಹಳೆ ಸ್ಟೇಶನ್‌ನ ಪೊಟ್ಟುಕೆರೆಯನ್ನು ಉದ್ಯೋಗ ಖಾತರಿ ಯೋಜನೆಯಡಿ ಹೂಳೆತ್ತಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಮಾಹಿತಿ ಪಡೆದಾಗ ಈ ಹಿಂದೆ ಕೈಬರಹದ ಪಹಣಿ ಪತ್ರದಲ್ಲಿ ಕೆರೆ ಪರಂಬೋಕು ಎಂದು ಇರುವ ಜಾಗವನ್ನು ಇದೀಗ ಸರಕಾರಿ ಜಾಗ ಎಂದು ದಾಖಲಿಸಲಾಗಿರುವ ವಿಚಾರ ಬೆಳಕಿಗೆ ಬಂದಿತ್ತು. ಈ ಅಕ್ರಮ ತಿದ್ದುಪಡಿಯ ಹಿಂದೆ ಕೆರೆಯನ್ನು ಆತಿಕ್ರಮಣಗೊಳಿಸುವ ಹುನ್ನಾರ ಇರುವುದನ್ನು ಮನಗಂಡು ಅಕ್ರಮ ತಿದ್ದುಪಡಿಯನ್ನು ಸರಿಪಡಿಸಿ ಸದ್ರಿ ಪ್ರದೇಶವನ್ನು ಮತ್ತೆ ಕೆರೆ ಪರಂಬೋಕು ಎಂದು ಪಹಣಿಯಲ್ಲಿ ದಾಖಲಿಸಬೇಕು ಎಂದು ಪಂ. ವತಿಯಿಂದ ಜಿಲ್ಲಾಧಿಕಾರಿ, ಸಹಾಯಕ ಕಮೀಷನರ್‌ ಹಾಗೂ ಕಡಬ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಗಿತ್ತು. ನಾಲ್ಕು ತಿಂಗಳ ಬಳಿಕ ಪಹಣಿ ಪತ್ರದಲ್ಲಿನ ತಪ್ಪನ್ನು ಸರಿಪಡಿಸಲು ಕಂದಾಯ ಇಲಾಖೆ ಮುಂದಾಗಿದೆ.

ಕೆರೆ ಕಬಳಿಸುವ ಸಂಚು
ಹಳೆಯ ಕಡತಗಳಲ್ಲಿ ಹಾಗೂ ಪಹಣಿಪತ್ರಗಳಲ್ಲಿ ಕೆರೆ ಪರಂಬೋಕು ಎಂದೇ ದಾಖಲಾಗಿದ್ದ ಈ ಭೂಮಿಯನ್ನು ಕೆಲವು ವರ್ಷಗಳ ಹಿಂದೆ ಏಕಾಏಕಿ ಸರಕಾರಿ ಜಮೀನು ಎಂದು ಪಹಣಿಯಲ್ಲಿ ದಾಖಲಿಸಿರುವುದರ ಹಿಂದೆ ಕೆರೆಯನ್ನು ಕಬಳಿಸುವ ಉದ್ದೇಶ ಇದೆ ಎಂದು ಸ್ಥಳೀಯರು ಆರೋಪಿಸಿದ್ದರು. ಯಾರಿಗೋ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಕೆರೆಯ ಜಮೀನನ್ನು ಸರಕಾರಿ ಎಂದು ನಮೂದಿಸಲಾಗಿದೆ. ಒಂದು ಭಾಗದಲ್ಲಿ ಕಲ್ಲು, ಮಣ್ಣು ತುಂಬಿರುವುದರಿಂದ ಕೆರೆಯ ಗಾತ್ರ ಸಾಕಷ್ಟು ಕಿರಿದಾಗಿದೆ. ಕೆರೆಗಳನ್ನು ಉಳಿಸಿ ಅಭಿವೃದ್ಧಿಪಡಿಸಬೇಕೆಂದು ಆದೇಶ ಹೊರಡಿಸಿರುವ ಸರಕಾರ ಸದ್ರಿ ಕೆರೆಯ ಅತಿಕ್ರಮಣದ ಸಂಚನ್ನು ವಿಫಲಗೊಳಿಸಿ ಕೆರೆಯನ್ನು ಉಳಿಸಿಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದರು. ಉದಯವಾಣಿ ‘ಸುದಿನ’ ಈ ಕುರಿತು ಎರಡು ಸಚಿತ್ರ ವರದಿಗಳನ್ನು ಪ್ರಕಟಿಸಿ ಸಂಬಂಧಪಟ್ಟ ಇಲಾಖೆಯನ್ನು ಎಚ್ಚರಿಸಿತ್ತು.

ಪ್ರಸ್ತಾವನೆಗೆ ಸೂಚನೆ
ಸುದಿನ ವರದಿಗಳು ಹಾಗೂ ಪಂಚಾಯತ್‌ ದೂರಿನ ಹಿನ್ನೆಲೆಯಲ್ಲಿ ಪುತ್ತೂರು ಸಹಾಯಕ ಆಯುಕ್ತರು ಕಡಬ ವಿಶೇಷ ತಹಶೀಲ್ದಾರರಿಗೆ ಪತ್ರ ಬರೆದು ಅಕ್ರಮ ತಿದ್ದುಪಡಿಯ ಬಗ್ಗೆ ಪರಿಶೀಲನೆ ನಡೆಸಿ ವಿವರವಾದ ವರದಿಯೊಂದಿಗೆ ಪಹಣಿ ತಿದ್ದುಪಡಿ ಬಗ್ಗೆ ಆರ್‌.ಆರ್‌.ಟಿ. ಶಾಖೆಯಿಂದ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದ್ದಾರೆ.

ನಮ್ಮ ದೂರಿಗೆ ಸ್ಪಂದನೆ
ಹಳೆಯ ಕೈಬರಹದ ಪಹಣಿಪತ್ರ ಅಕ್ರಮವಾಗಿ ತಿದ್ದಿ ಸರಕಾರಿ ಜಮೀನು ಎಂದು ತಿದ್ದುಪಡಿಗೊಳಿಸಿರುವುದು ನಮ್ಮ ಗಮನಕ್ಕೆ ಬಂದ ಕೂಡಲೇ ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿ ಹಾಗೂ ಕಡಬ ತಹಶೀಲ್ದಾರರಿಗೆ ಪತ್ರ ಬರೆದು ತಪ್ಪನ್ನು ಸರಿಪಡಿಸುವಂತೆ ಒತ್ತಾಯಿಸಿದ್ದೆವು. ಗ್ರಾಮದ ವ್ಯಾಪ್ತಿಯ ಕೆರೆಗಳ ಹೂಳೆತ್ತಿ ಅಭಿವೃದ್ಧಿಪಡಿಸಿ ಅಂತರ್ಜಲಮಟ್ಟ ಏರಿಕೆಯಾಗಲು ಪ್ರಯತ್ನಿಸಬೇಕೆನ್ನುವ ಸೂಚನೆ ಸರಕಾರದಿಂದ ಇದೆ. ನಮ್ಮ ದೂರಿಗೆ ಸ್ಪಂದಿಸಿರುವ ಕಂದಾಯ ಇಲಾಖೆ ಇದೀಗ ತಪ್ಪನ್ನು ಸರಿಪಡಿಸಲು ಕ್ರಮ ಕೈಗೊಂಡಿದೆ.
-ವಿ ಲ್ಫ್ರೆಡ್‌ ಲಾರೆನ್ಸ್‌ ರೋಡ್ರಿಗಸ್‌, ಕುಟ್ರಾಪ್ಪಾಡಿ ಪಿಡಿಒ

— ನಾಗರಾಜ್‌ ಎನ್‌.ಕೆ.

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-bantwala-1

Bantwala: ನವ ದಂಪತಿ ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತ; ಪತ್ನಿ ಮೃತ್ಯು, ಪತಿ ಗಂಭೀರ

Belthangady ಅಂಗಮಾರಿ ರೋಗ ಲಕ್ಷಣ: ಪರಿಶೀಲನೆ

Belthangady ಅಂಗಮಾರಿ ರೋಗ ಲಕ್ಷಣ: ಪರಿಶೀಲನೆ

Untitled-1

Uppinangady ವಿವಾಹಿತೆ ನಾಪತ್ತೆ: ದೂರು ದಾಖಲು

Suresh ಬಲ್ನಾಡು ಅವರಿಗೆ ಸಾಂಬಾರ ಕೃಷಿಕ ಪ್ರಶಸ್ತಿ ಪ್ರದಾನ

Suresh ಬಲ್ನಾಡು ಅವರಿಗೆ ಸಾಂಬಾರ ಕೃಷಿಕ ಪ್ರಶಸ್ತಿ ಪ್ರದಾನ

Engineer Bantwal ಜಯಂತ್‌ ಬಾಳಿಗ ಅವರಿಗೆ ಪ್ರತಿಷ್ಠಿತ ಮಿಲೇನಿಯಂ ಟೆಕ್ನಾಲಿಜಿ ಪ್ರಶಸ್ತಿ

Engineer Bantwal ಜಯಂತ್‌ ಬಾಳಿಗ ಅವರಿಗೆ ಪ್ರತಿಷ್ಠಿತ ಮಿಲೇನಿಯಂ ಟೆಕ್ನಾಲಿಜಿ ಪ್ರಶಸ್ತಿ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.