ರಾಜಕೀಯ ಪಕ್ಷಗಳ ಶಕ್ತಿ ಪ್ರದರ್ಶನ; ವಾಹನಗಳ ಸಂಚಾರ ಅಸ್ತವ್ಯಸ್ತ
Team Udayavani, Apr 24, 2018, 10:09 AM IST
ಉಳ್ಳಾಲ: ವಿಧಾನ ಸಭಾ ಚುನಾವಣೆಗೆ ಪ್ರಮುಖ ಪಕ್ಷಗಳ ಇಬ್ಬರು ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಗೆ ಪೂರ್ವಭಾವಿಯಾಗಿ ಕಾರ್ಯಕರ್ತರ ಮೂಲಕ ಕಾಪಿಕಾಡ್ನಲ್ಲಿ ಶಕ್ತಿ ಪ್ರದರ್ಶನಕ್ಕೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡು 4 ಗಂಟೆಗಳ ಕಾಲ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.
ಸೋಮವಾರ ಬೆಳಗ್ಗಿನಿಂದಲೇ ಹೆದ್ದಾರಿ ಬದಿಯಲ್ಲಿರುವ ಕಾಪಿಕಾಡ್ ಅಂಬಿಕಾ ರಸ್ತೆಯಲ್ಲಿರುವ ಗಟ್ಟಿ ಸಮಾಜ ಭವನದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿದರೆ, ಅದರ ಪಕ್ಕದಲ್ಲಿರುವ ಸಾಯಿಗ್ರ್ಯಾಂಡ್ ವ್ಯೂವ್ನಲ್ಲಿ ಬಿಜೆಪಿ ಕಾರ್ಯಕರ್ತರು ಜಮಾಯಿಸಿದ್ದರು.
ಹೆದ್ದಾರಿ ಪಕ್ಕದಲ್ಲಿ ಕಾರ್ಯಕರ್ತರ ಮತ್ತು ಮುಖಂಡರ ವಾಹನಗಳು ಪಾರ್ಕಿಂಗ್ ಮಾಡಿದ್ದರಿಂದ ಹೆದ್ದಾರಿಯಲ್ಲಿ ಪೊಲೀಸರು ಪರದಾಡುವಂತಾಯಿತು. ಬಿಜೆಪಿ ಕಾರ್ಯಕರ್ತರ ಮೆರವಣಿಗೆ ಕಲ್ಲಾಪುವರೆಗೆ ನಡೆದ ಕಾರಣ ಕೇರಳ ಕಡೆಯಿಂದ ಮಂಗಳೂರು ಕಡೆಗೆ ಹೋಗುವ ವಾಹನಗಳ ಸಂಚಾರದಲ್ಲಿ ಅಸ್ತವ್ಯಸ್ತವಾಯಿತು. ಒಂದು ಗಂಟೆಯ ಬಳಿಕ ಕಾಂಗ್ರೆಸ್ ಕಾರ್ಯಕರ್ತರು ಹೆದ್ದಾರಿಯಲ್ಲಿ ಮೆರವಣಿಗೆ ನಡೆಸಿದಾಗ ಹೆದ್ದಾರಿ ಪೂರ್ತಿ ವಾಹನಗಳ ಸರತಿಸಾಲು ಕಂಡು ಬಂತು.
ತಪ್ಪಿ ಬಂದ ನಾಯಕರು
ಹೆದ್ದಾರಿ ಅಕ್ಕಪಕ್ಕದಲ್ಲೇ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಮೊದಲು ಕಾರ್ಯಕರ್ತರು ಸೇರಿದ್ದರಿಂದ ತೊಕ್ಕೊಟ್ಟು ಕಡೆಯಿಂದ ಬಂದ ಕಾಂಗ್ರೆಸ್ ಮುಖಂಡರೊಬ್ಬರು ಬಿಜೆಪಿ ಕಾರ್ಯಕರ್ತರಿದ್ದಲ್ಲಿ ಬಂದಾಗ ಬಿಜೆಪಿ ಧ್ವಜ ಕಂಡು ಹಿಂದೆ ಹೋದರು. ಇದೇ ರೀತಿ ಕಾರ್ಯಕರ್ತರು ಸ್ಥಳ ಬದಲಾವಣೆಯಾಗಿ ಬಿಜೆಪಿ ಕೇಂದ್ರಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಬಂದು ಹಿಂತಿರುಗಿದರೆ, ಕಾಂಗ್ರೆಸ್ ಕಾರ್ಯಕ್ರಮಕ್ಕೆ ಬಿಜೆಪಿ ಕಾರ್ಯಕರ್ತರು ತೆರಳಿ ವಾಪಸ್ಸಾದರು. ಕಾಪಿಕಾಡ್ ನಿಂದ ಕಲ್ಲಾಪುವರೆಗೆ ಬೆಳಗ್ಗೆ 10 ಗಂಟೆಯಿಂದ 2 ಗಂಟೆವರೆಗೆ ವಾಹನಗಳನ್ನು ನಿಯಂತ್ರಿಸಲು ಪೊಲೀಸರು ಪರದಾಡುವಂತಾಯಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.