ಹೊಗೆಮುಕ್ತ ಭಾರತ ಪ್ರಧಾನಿ ಮೋದಿ ಸಂಕಲ್ಪ: ಜೋಷಿ
Team Udayavani, Jan 26, 2019, 12:30 AM IST
ಮಂಗಳೂರು: ದೇಶದ ಪ್ರತೀ ಮನೆ ಮನೆಗೂ ಅಡುಗೆ ಅನಿಲ ಒದಗಿಸುವ ಮೂಲಕ ಕೆಲವೇ ದಿನಗಳಲ್ಲಿ ಹೊಗೆ ಮುಕ್ತ ಭಾರತ ನಿರ್ಮಾಣ ಮಾಡುವುದು ಪ್ರಧಾನಿ ನರೇಂದ್ರ ಮೋದಿ ಅವರ ಸಂಕಲ್ಪ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸ್ಥಾಯೀ ಸಮಿತಿ ಅಧ್ಯಕ್ಷ ಪ್ರಹ್ಲಾದ ಜೋಷಿ ಹೇಳಿದರು.ಬಿ.ಸಿ.ರೋಡ್‌ನ ನಾರಾಯಣ ಗುರು ವೃತ್ತದ ಬಳಿಯ ಮೈದಾನದಲ್ಲಿ ಶುಕ್ರವಾರ ನಡೆದ ಕೇಂದ್ರ ಸರಕಾರದ ಉಜ್ವಲ ಅಡುಗೆ ಅನಿಲ ವಿತರಣೆ ಹಾಗೂ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಸಾರ್ವತ್ರಿಕ ದಾಖಲೆ
ದೇಶದಲ್ಲಿ 1955ರಲ್ಲಿ ಸಿಲಿಂಡರ್ ಮೂಲಕ ಗ್ಯಾಸ್ ನೀಡಲು ಆರಂಭಿಸಲಾಗಿತ್ತು. ಅಲ್ಲಿಂದ 1998ರ ವರೆಗೆ 7 ಕೋಟಿ ಮಾತ್ರ ಎಲ್‌ಪಿಜಿ ವಿತರಿಸಲಾಗಿತ್ತು. ವಾಜಪೇಯಿ ಆಡಳಿತದಲ್ಲಿ ಎಲ್ಲರಿಗೂ ಎಲ್‌ಪಿಜಿ ಎಂಬ ಸಂಕಲ್ಪದೊಂದಿಗೆ ಸುಮಾರು 5ರಿಂದ 6 ಕೋಟಿವಿತರಿಸಲಾಯಿತು. ಬಳಿಕ ಯುಪಿಎ ಸರಕಾರದ ಸಮಯದಲ್ಲಿ 3 ಕೋಟಿ ವಿತರಿಸಲಾಗಿತ್ತು. ಒಟ್ಟು 14ರಿಂದ 15 ಕೋಟಿ
ಯಷ್ಟು ಎಲ್‌ಪಿಜಿ ವಿತರಿಸಲಾಗಿತ್ತು. ಆದರೆ ಮೋದಿ ಪ್ರಧಾನಿಯಾದ ಬಳಿಕ 6 ಕೋಟಿಗಳಷ್ಟು ಎಲ್‌ಪಿಜಿ ವಿತರಿಸುವ ಮೂಲಕ ಸಾರ್ವತ್ರಿಕ ದಾಖಲೆ ಬರೆಯಲಾಗಿದೆ ಎಂದರು.
ಕೇಂದ್ರ ಕುಡಿಯುವ ನೀರು ಹಾಗೂ ಶೌಚಾಲಯ ಅಭಿವೃದ್ಧಿ ಖಾತೆ ರಾಜ್ಯ ಸಚಿವ ರಮೇಶ್ ಜಿಗಜಿಣಗಿ ಮಾತನಾಡಿ, ಉಜ್ವಲ ಯೋಜನೆ ಕೋಟ್ಯಂತರ ಮನಸುಗಳನ್ನು ಗೆದ್ದಿದೆ. ನಳಿನ್ ಕುಮಾರ್ ತಮ್ಮ ಕ್ಷೇತ್ರದಲ್ಲಿ ಈ ಯೋಜನೆಯನ್ನು ಮನೆಮನೆಗೆ ಮುಟ್ಟಿಸಿರುವುದು ಶ್ಲಾಘನೀಯ ಎಂದರು.15,500 ಕೋ.ರೂ ಯೋಜನೆಸಂಸದ ನಳಿನ್ ಕುಮಾರ್ ಪ್ರಸ್ತಾವನೆಗೈದು, ಮೋದಿ ಸರಕಾರದಲ್ಲಿ ದ.ಕ.ಜಿಲ್ಲೆಗೆ 15,500 ಕೋ.ರೂ.ಗಳ ವಿವಿಧ ಯೋಜನೆಗಳು ಲಭಿಸಿವೆ. ಕುಲಶೇಖರ-ಕಾರ್ಕಳ ರಸ್ತೆ, ಮೂಲ್ಕಿ- ಕಟೀಲು-ಮಂಗಳೂರು ರಸ್ತೆ ಅಭಿವೃದ್ಧಿಗೆ ಶೀಘ್ರದಲ್ಲಿ ಶಿಲಾನ್ಯಾಸ ನೆರವೇರಲಿದೆ ಎಂದರು.
ಶಾಸಕ ರಾಜೇಶ್ ನಾೖಕ್ ಉಳಿಪಾಡಿ ಗುತ್ತು ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಶಾಸಕರಾದ ಸಿ.ಟಿ. ರವಿ, ಎಸ್.ಅಂಗಾರ, ಸಂಜೀವ ಮಠಂದೂರು, ಉಮಾನಾಥ ಕೋಟ್ಯಾನ್, ಹರೀಶ್ ಪೂಂಜ, ಡಿ. ವೇದವ್ಯಾಸ ಕಾಮತ್, ಡಾ| ವೈ. ಭರತ್ ಶೆಟ್ಟಿ, ವಿವಿಧ ತೈಲ ಕಂಪೆನಿಗಳ ಪ್ರಮುಖರಾದ ಅಂಬಾ ಭವಾನಿ, ಕೆ. ಶೈಲೇಂದ್ರ, ಪ್ರೇಮನಾಥ್, ಪ್ರದೀಪ್ ನಾಯರ್ ಉಪಸ್ಥಿತರಿದ್ದರು.ಬಿಪಿಸಿಎಲ್ ಪ್ರಾದೇಶಿಕ ಮ್ಯಾನೇ ಜರ್ ತಂಗವೇಲು ಸ್ವಾಗತಿಸಿದರು.
ಅಚ್ಛೇ ದಿನ್ ನಾಗರಿಕರಿಗೆ; ಕಾಂಗ್ರೆಸ್‌ಗಲ್ಲ !
ಪ್ರಹ್ಲಾದ ಜೋಷಿ ಮಾತನಾಡಿ, “ಅಚ್ಛೇ ದಿನ್ ದೇಶದ ಜನರಿಗೆ ಬಂದಿದೆಯೇ ವಿನಾ ಕಾಂಗ್ರೆಸಿಗಲ್ಲ. 2004ರಲ್ಲಿ 50 ಲಕ್ಷ ರೂ. ಆದಾಯದ ಪ್ರಿಯಾಂಕಾ ಪತಿ ರಾಬರ್ಟ್ ಈಗ 3.40 ಲಕ್ಷ ಕೋಟಿ ರೂ. ಒಡೆಯನಾಗಿದ್ದು ಹೇಗೆ ಎಂಬುದಕ್ಕೆ ಮೊದಲು ಉತ್ತರಿಸಲಿ ಎಂದು ಸವಾಲು ಹಾಕಿದರು.
“ಹೃದಯ ಭಾಷೆ’ ಬಲ್ಲ ನಳಿನ್!
ಸಂಸದ ನಳಿನ್ ಮಾತನಾಡಿ, ಕೆಲವರು ನನಗೆ ಇಂಗ್ಲಿಷ್, ಹಿಂದಿ ಗೊತ್ತಿಲ್ಲ ಅನ್ನುತ್ತಾರೆ. ಆದರೆ ಕ್ಷೇತ್ರಕ್ಕೆ ಅನುದಾನ ತರುವ ಜಾಣ್ಮೆ ನನ್ನಲ್ಲಿದೆ. ಭಾಷಾ ಸಮಸ್ಯೆಗೆ ಲೋಕಸಭೆಯಲ್ಲಿ ಪ್ರಹ್ಲಾದ್ ಜೋಷಿ ನೆರವಾಗುತ್ತಿದ್ದಾರೆ ಎಂದರು. “ದ.ಕ. ಜಿಲ್ಲೆಗೆ ರಾಜ್ಯದಲ್ಲೇ ಅತಿಹೆಚ್ಚು ಅನುದಾನ ತರುವ ಮೂಲಕ ನಳಿನ್ ಅಭಿವೃದ್ಧಿಗೆ ಸಾಕ್ಷಿಯಾಗಿದ್ದಾರೆ. ಅವರು ಕ್ಷೇತ್ರದ ಜನರ ಹೃದಯದ ಭಾಷೆಯನ್ನು ಚೆನ್ನಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಜೋಷಿ ತಿಳಿಸಿದರು.
ಕಿಕ್ಕಿರಿದ ಸಭಾಂಗಣ
ಬೃಹತ್ ಸಭಾಂಗಣದಲ್ಲಿ 15,000 ಕುರ್ಚಿ ಭರ್ತಿಯಾಗಿ ಸಭಾಂಗಣದ ಇಕ್ಕೆಲಗಳಲ್ಲಿ ಜನರು ನಿಂತು ಕಾರ್ಯಕ್ರಮ ವೀಕ್ಷಿಸಿದರು. ಉಪಾಹಾರ, ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ಭದ್ರತೆಗಾಗಿ ಸಿಸಿಟಿವಿ ಅಳವಡಿಸಲಾಗಿತ್ತು. 42 ಫಲಾನುಭವಿಗಳಿಗೆ ಗ್ಯಾಸ್ ಸಂಪರ್ಕ ವಿತರಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Niveus Mangalore Marathon 2024: ನ.10: ನೀವಿಯಸ್ ಮಂಗಳೂರು ಮ್ಯಾರಥಾನ್
Mangaluru: ಡಿ. 7: ಮುಂಬಯಿಯಲ್ಲಿ ವಿಶ್ವ ಬಂಟರ ಸಮಾಗಮ
Mangaluru: ಮಕ್ಕಳ ಮಾರಾಟ, ಖರೀದಿಗೆ 5 ವರ್ಷ ಜೈಲು ಶಿಕ್ಷೆ
Mangaluru: ಎಲೆ ಚುಕ್ಕಿ ರೋಗ ಬಾಧಿತ ಅಡಿಕೆ ಕೃಷಿಕರಿಗೆ ನೆರವು: ಕೇಂದ್ರಕ್ಕೆ ಮನವಿ
ಪಿಂಚಣಿದಾರರ ಡಿಜಿಟಲ್ ಲೈಫ್ ಸರ್ಟಿಫಿಕೆಟ್: ಅಂಚೆ ಕಚೇರಿಯಿಂದ ಮನೆ ಬಾಗಿಲಲ್ಲೇ ಸೇವೆ
MUST WATCH
ಹೊಸ ಸೇರ್ಪಡೆ
Vitla: ನಾಲ್ಕೂ ದಿಕ್ಕಿನಿಂದ ಬರುವ ರಸ್ತೆಗಳಲ್ಲಿ ಗುಂಡಿಯೋ ಗುಂಡಿ
Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….
Bellary; ವಕ್ಫ್ ಹೆಸರಲ್ಲಿ ದೇವಸ್ಥಾನ, ಮಠಗಳನ್ನು ಕಬಳಿಸಲು ಸರ್ಕಾರ ಮುಂದಾಗಿದೆ: ಜೋಶಿ
Kushtagi: ದ್ಯಾಮವ್ವ ದೇವಿ ಗುಡಿಗೆ ಭಕ್ತರಂತೆ ಹೋಗಿ ದರ್ಶನ ಪಡೆದ ವಾನರ
Thirthahalli: ಹಣಗೆರೆಕಟ್ಟೆ ದೇವಸ್ಥಾನದ ಹಣ ಏರು ಪೇರು ಆಗಿದ್ದು ನಿಜವೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.