ವಕೀಲನಾಗಬೇಕಿದ್ದ ಪ್ರವೀಣ್ ಈಗ ವೀರ ಸಿಪಾಯಿ
Team Udayavani, Feb 4, 2018, 10:01 AM IST
ಕೆಲವೊಮ್ಮೆ ಅಂದುಕೊಂಡಿದ್ದೆಲ್ಲ ಈಡೇರುವುದಿಲ್ಲ. ಅವರ ವಿಚಾರದಲ್ಲಿ ಅದೃಷ್ಟವೂ ಬೇರೆಯೇ ಇತ್ತು. ವಕೀಲನಾಗಬೇಕು ಎಂದಿದ್ದವರು ಸೇನೆಯ ನೇಮಕಾತಿ ಜಾಹೀರಾತು ನೋಡಿ ಅರ್ಜಿ ಹಾಕಿದ್ದರು. ಪರಿಣಾಮ ಮನೆಯವರು, ಊರವರು, ದೇಶವೇ ಹೆಮ್ಮೆ ಪಡುವಂತೆ ಸೈನಿಕರಾದರು.
ಪುತ್ತೂರು: ಮಗ ಉಪನ್ಯಾಸಕ ಅಥವಾ ವಕೀಲನಾಗಬೇಕು ಎನ್ನುವುದು ಹೆತ್ತವರ ಬಯಕೆ. ಇದಕ್ಕಾಗಿ ಪ್ರಯತ್ನಪಟ್ಟಿದ್ದರು
ಕೂಡ. ಆದರೆ ಪ್ರವೀಣ್ ಅವರ ಅದೃಷ್ಟ ಹಾಗಿರಲಿಲ್ಲ. ಅಚಾನಕ್ ಆಗಿ ಸೇನೆಯ ಕೆಲಸ ಅವರನ್ನು ಆಕರ್ಷಿಸಿದ್ದು ಸಿಪಾಯಿಯಾದರು.
ಸೇನಾ ಕ್ಯಾಂಪ್‌ನಲ್ಲಿ ಸಹವರ್ತಿಗಳೊಂದಿಗೆ.
ಸುಳ್ಯ ಸಮೀಪದ ಪೆರಾಜೆಯ ಬಾಳೆಕಜೆ ನಿವಾಸಿ ನಾಯಕ್ ಪ್ರವೀಣ್ ಬಿ.ಬಿ. ಸೇನೆಗೆ ಸೇರುವ ಬಗ್ಗೆ ಅಷ್ಟಾಗಿ ಧ್ಯಾನಿಸಿದವರಲ್ಲ. ಆದರೆ ಈಗ ದೇಶಸೇವೆಯಲ್ಲಿ ಅವರ ಜವಾಬ್ದಾರಿ, ಅವರಿಗಷ್ಟೇ ಅಲ್ಲ, ಮನೆಯವರಿಗೂ ಹೆಮ್ಮೆ ತರಿಸಿದೆ.
ಕ್ರೀಡಾಳು ಸೇನೆಗೆ
ಬಾಲ್ಯದ ದಿನಗಳಲ್ಲಿ ಕ್ರೀಡಾ ಚಟುವಟಿಕೆಯಲ್ಲಿ ಪ್ರವೀಣ್ ಸಕ್ರಿಯವಾಗಿದ್ದರು. ಪೆರಾಜೆಯ ಅಮೆಚೂರು ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಅರಂತೋಡು ನೆಹರೂ ಸ್ಮಾರಕ ವಿದ್ಯಾಸಂಸ್ಥೆಯಲ್ಲಿ ಪ್ರೌಢಶಿಕ್ಷಣ ಪಡೆದರು. ಪದವಿ ವಿದ್ಯಾಭ್ಯಾಸವನ್ನು ಮಡಿಕೇರಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನಲ್ಲಿ ಪೂರ್ಣಗೊಳಿಸಿದರು. ಆಗಲೇ ಕಬಡ್ಡಿ ಮತ್ತು ಹ್ಯಾಮರ್ ತ್ರೋ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಪದವಿ ಮುಗಿಯುತ್ತಿದ್ದಂತೆ ಸೇನೆಯ ಜಾಹೀರಾತು ನೋಡಿ ಅದಕ್ಕೆ ಅರ್ಜಿ ಹಾಕಿದ್ದು ಆಯ್ಕೆ ಲೀಲಾಜಾಲವಾಗಿತ್ತು.
ಆರಂಭದಲ್ಲಿ ಸೇನೆ ಎಂದರೆ ಭಯ ಹೊಂದಿದ್ದ ಪ್ರವೀಣ್ ಅವರಿಗೆ ಅಲ್ಲಿ ಸಿಕ್ಕಿದ ಕೌಟುಂಬಿಕ ಸ್ನೇಹದ ವಾತಾವರಣ ಈ ಭಯವನ್ನು ಮರೆಸಿತ್ತು. ಸೇನೆಗೆ ಸೇರಿ 10 ವರ್ಷ ಅಮೂಲ್ಯ ಅನುಭವವನ್ನು ಪಡೆದಿದ್ದಾರೆ. 2014ರಲ್ಲಿ ಲ್ಯಾನ್ಸ್ ನಾಯಕ್ ಆಗಿದ್ದು, 2017ರಲ್ಲಿ ನಾಯಕ್ ಆಗಿ ಈಗ ಪಾಕ್ ಗಡಿಯಿಂದ 100 ಕಿ.ಮೀ. ದೂರದ ಜಾಲಂಧರ್‌ನಲ್ಲಿ 339 ಮೀಡಿಯಂ ರೆಜಿಮೆಂಟ್ ಆರ್ಟಿಲರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಲ್ಲಿನ ಕ್ರೀಡಾ ವಿಭಾಗದ ಹೊಣೆಯೂ ಪ್ರವೀಣ್ ಅವರ ಮೇಲಿದೆ.
ಕಟುವಾ ಶಿಬಿರದ ಮೇಲೆ ಉಗ್ರ ದಾಳಿ
2012ರಲ್ಲಿ ಕಾಶ್ಮೀರದ ಕಟುವಾ ಸೇನಾ ಶಿಬಿರದ ಮೇಲೆ ಪಾಕಿಸ್ಥಾನ ಉಗ್ರರ ದಾಳಿಯಾಗಿದ್ದು, ಅದನ್ನು ಸಮರ್ಥವಾಗಿ ಎದುರಿಸಿದ್ದನ್ನು ಪ್ರವೀಣ್ ಬಿಚ್ಚಿಡುತ್ತಾರೆ. ಗಡಿಯಲ್ಲಿನ ದೊಡ್ಡ ತೊರೆಯೊಂದನ್ನು ಹಾದು ಈ ಭಾಗದಲ್ಲಿ ಉಗ್ರರು ಒಳನುಸುಳುವುದು ಸಾಮಾನ್ಯ. ಉಗ್ರರು ಅಂದೂ ಹಾಗೆಯೇ ಒಳನುಸುಳಿ ಯೂನಿಟ್‌ಗೆ ದಾಳಿ ಮಾಡಿದ್ದರು. ಒಟ್ಟಿಗೇ ಇದ್ದ ಸಹೋದ್ಯೋಗಿಗಳು ನೋಡನೋಡುತ್ತಲೇ ಕೊನೆಯುಸಿರೆಳೆದಿದ್ದರು. ಆದರೆ ಇದನ್ನು ನೋಡಿಕೊಂಡು ಕಂಬನಿ ಮಿಡಿಯಲು ಸಮಯವಿರಲಿಲ್ಲ. ಎದುರಾಳಿ ಜತೆ ಕಾದಾಟ ಅನಿವಾರ್ಯವಾಗಿತ್ತು. ಇಲ್ಲದಿದ್ದರೆ ಮತ್ತಷ್ಟು ಮಂದಿಗೆ ಅಪಾಯವಾಗುವ ಸಾಧ್ಯತೆ ಇತ್ತು. ನಾವಿದ್ದ ಟೆಂಟ್ ಒಳಗೂ ಗುಂಡುಗಳು ತೂರಿಬಂದವು. ಮರುಕ್ಷಣವೇ ಮರುದಾಳಿ ನಡೆಸಿ ಪಾಕಿ ಉಗ್ರರನ್ನು ಸದೆಬಡಿಯಲಾಯಿತು. ಮೂವರು ಉಗ್ರರನ್ನು ಜೀವಂತ ಸೆರೆಹಿಡಿದು ಕಮಾಂಡೋಗಳಿಗೆ ಹಸ್ತಾಂತರಿಸಲಾಯಿತು.
ದೇಶ ರಕ್ಷಣೆ ಜೀವನದ ಭಾಗ
ಸೇನೆಯಿಂದ ತುಂಬಾ ಅನುಭವ ಸಿಕ್ಕಿದೆ. ಇಲ್ಲಿನ ಶಿಸ್ತು ಜೀವನ ರೂಪಿಸಿಕೊಳ್ಳುವುದನ್ನು ಹೇಳುತ್ತದೆ. ದೇಶ ರಕ್ಷಣೆ ಎನ್ನುವುದು ಕೆಲಸವಲ್ಲ; ನಮ್ಮ ಜೀವನದ ಒಂದು ಭಾಗ. ಇಂತಹ ಮಹತ್ತರ ಕಾರ್ಯದಲ್ಲಿ ಪ್ರತಿ ಯುವಕರು ಪಾಲ್ಗೊಳ್ಳಬೇಕು. ಹೆಚ್ಚಿನ ಯುವಕರು ಸೇನೆಗೆ ಸೇರಿಕೊಳ್ಳಬೇಕು.
ಸೇನೆಯಲ್ಲಿ ಸಕಲ ಸೌಕರ್ಯ
ಹತ್ತು ವರ್ಷಗಳ ಹಿಂದೆ ಸೇನೆಗೆ ಸೇರುವುದೇ ಕಷ್ಟ ಎನ್ನುವ ಸ್ಥಿತಿ ಇತ್ತು. ಆದರೆ ಇತ್ತೀಚೆಗೆ ಸೇನೆ ಪರಿಸ್ಥಿತಿ ಸುಧಾರಿಸಿದೆ. ಸೌಲಭ್ಯಗಳು ಹೆಚ್ಚಿವೆ. ಪ್ರತಿ ಕೆಲಸಕ್ಕೂ ವೃಥಾ ಪ್ರಯಾಸಪಡುವ ಸನ್ನಿವೇಶ ಇಲ್ಲ. ಮೊದಲು ಸೇನೆಗೆ ಸೇರುವ ಎಲ್ಲರ ಮನೆಯಲ್ಲೂ ಆರ್ಥಿಕ ಸಮಸ್ಯೆ ಇತ್ತು. ಆದರೆ ಈಗ ಹಾಗಿಲ್ಲ. ಪ್ರತಿಯೊಬ್ಬರು ಆರ್ಥಿಕವಾಗಿ ಸದೃಢ ಆಗುತ್ತಿದ್ದಾರೆ. ಇದು ಪರೋಕ್ಷವಾಗಿ ಸೇನೆಯ ಮೇಲೂ ಪರಿಣಾಮ ಬೀರುತ್ತಿದೆ. ಸೇನಾ ಕ್ಯಾಂಪ್‌ನೊಳಗಡೆ ಪರಸ್ಪರ ಸಹಕಾರ, ಹೊಂದಾಣಿಕೆ ಮಾಡಿಕೊಳ್ಳುತ್ತಾರೆ. ಎದುರಾದ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಲು ಇದರಿಂದ ತುಂಬಾ ಅನುಕೂಲವಾಗುತ್ತದೆ ಎನ್ನುತ್ತಾರೆ ನಾಯಕ್ ಪ್ರವೀಣ್ ಬಿ.ಬಿ.
ಕೌಟುಂಬಿಕ ಹಿನ್ನೆಲೆ
ಬಾಲಕೃಷ್ಣ, ಕನಕಮಣಿ ದಂಪತಿ ಮಕ್ಕಳಲ್ಲಿ ಮೂರನೆಯವರು ಪ್ರವೀಣ್. ಅಕ್ಕ ವಿದ್ಯಾಶ್ರೀ, ಅಣ್ಣ ಪ್ರದೀಪ್ ಬಳಿಕ ಪ್ರವೀಣ್ ಅವರನ್ನು ಉಪನ್ಯಾಸಕ/ ವಕೀಲರನ್ನಾಗಿಸಬೇಕೆನ್ನುವುದು ಹೆತ್ತವರ ಬಯಕೆಯಾಗಿತ್ತು. ಆದರೆ ದೇಶಸೇವೆಗೆ ಹೊರಟು ನಿಂತ ಮಗನನ್ನು ತುಂಬಿದ ಮನಸ್ಸಿನಿಂದ ಕಳಿಸಿಕೊಟ್ಟಿದ್ದರು.
ಕ್ರೀಡೆ ಮಾತ್ರವಲ್ಲ ಕಲಿಕೆಯಲ್ಲೂ ಪ್ರವೀಣ್ ಮುಂದಿದ್ದ. ಆದ್ದರಿಂದ ವಕೀಲ ಅಥವಾ ಉಪನ್ಯಾಸಕನನ್ನಾಗಿ ಮಾಡಬೇಕು ಎಂಬ ಕನಸಿತ್ತು. ಆದರೆ ಕಾಲೇಜು ಮುಗಿಸುತ್ತಲೇ ಸೇನೆಗೆ ಆಯ್ಕೆಯಾದ. ಅಲ್ಲಿನ ಕೆಲಸ, ಊಟ-ನಿದ್ದೆಯಿಲ್ಲದ ದಿನಗಳು, ಉಗ್ರರ ದಾಳಿ ಇತ್ಯಾದಿಗಳನ್ನು ಕೇಳಿದಾಗ ಆತಂಕವಾಗುತ್ತದೆ. ಆದರೆ ಉತ್ತಮವಾಗಿ ದೇಶಸೇವೆ ಮಾಡಿ ಕ್ಷೇಮವಾಗಿ ಹಿಂದಿರುಗಲಿ ಎಂಬುದೇ ನಮ್ಮ ಹಾರೈಕೆ. ಮಗ ಸೇನೆಗೆ ಸೇರಿರುವುದು ನಮಗೆ, ಊರಿಗೆ, ದೇಶಕ್ಕೂ ಹೆಮ್ಮೆಯ ಸಂಗತಿ.
-ಕನಕಮಣಿ
(ನಾ. ಪ್ರವೀಣ್ ಬಿ.ಬಿ. ಅವರ ತಾಯಿ)
ಗಣೇಶ್ ಕಲ್ಲರ್ಪೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.