ದೇಶದ ಒಳಿತಿಗಾಗಿ ಪ್ರಾರ್ಥಿಸಿ: ಸಚಿವ ಖಾದರ್
ಬಜಪೆ: ಹಜ್ ಯಾತ್ರೆ - 2019ಕ್ಕೆ ಚಾಲನೆ
Team Udayavani, Jul 18, 2019, 5:29 AM IST
ಬಜಪೆ: ಪವಿತ್ರ ಹಜ್ ಯಾತ್ರೆಮಾಡಬೇಕೆಂಬುದು ಪ್ರತಿಯೊಬ್ಬ ಮುಸ್ಲಿಮನ ಕನಸಾಗಿರುತ್ತದೆ. ಆದರೆಎಲ್ಲರಿಂದ ಇದು ಸಾಧ್ಯವಿಲ್ಲ. ಅದಕ್ಕೆಅಲ್ಲಾಹನ ಕೃಪೆ ಬೇಕು. ಹಜ್ ಯಾತ್ರೆಮಾಡುವ ನೀವು ಅದೃಷ್ಟಶಾಲಿಗಳಾಗಿದ್ದು, ಸಮಸ್ತ ನಾಡಿನ ಪ್ರತಿನಿಧಿಗಳಾಗಿ ದೇಶದ ಒಳಿತಿಗಾಗಿ ಪ್ರಾರ್ಥನೆ (ದುವಾ)ಮಾಡಿ ಎಂದು ದ. ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹೇಳಿದರು.
ಅವರು ಕರ್ನಾಟಕ ರಾಜ್ಯ ಹಜ್ ಸಮಿತಿ ಅಶ್ರಯದಲ್ಲಿ ಹಜ್ ಕ್ಯಾಂಪ್ ನಿರ್ವಹಣಾ ಸಮಿತಿ ಮಂಗಳೂರಿನ ಸಹಯೋಗದೊಂದಿಗೆ ಬಜಪೆ ಅನ್ಸಾರ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ನಡೆದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತೆರಳುವ ಹಜ್ ವಿಮಾನ ಯಾತ್ರೆ-2019ನ್ನು ಉದ್ಘಾಟಿಸಿ ಮಾತನಾಡಿದರು.
ಶೀಘ್ರದಲ್ಲೇ ಹಜ್ ಘರ್
ಮಂಗಳೂರಿನಲ್ಲಿ ಹಜ್ ಘರ್ ನಿರ್ಮಾಣಕ್ಕೆ ಈಗಾಗಲೇ 70 ಸೆಂಟ್ಸು ಜಾಗ ನಿಗದಿಯಾಗಿದೆ. ರಾಜ್ಯ ಹಾಗೂ ಕೇಂದ್ರ ಸರಕಾರಗಳು ಅನುದಾನ ನೀಡಲು ಮುಂದೆ ಬಂದಿದ್ದು ಸದ್ಯದಲ್ಲೇಶಿಲಾನ್ಯಾಸ ನಡೆಯಲಿದೆ ಎಂದರು.
ಸಚಿವ ಜಮೀರ್ ಆಹ್ಮದ್ ಖಾನ್‌ಅವರು ಜಿಲ್ಲೆಯಿಂದ 11 ಉಲೇಮಾಗಳಿಗೆ ಹಾಗೂ ರಾಜ್ಯದಿಂದ 100ಕ್ಕಿಂತ ಹೆಚ್ಚು ಉಲೇಮಾಗಳಿಗೆ ಪವಿತ್ರ ಹಜ್‌ಯಾತ್ರೆ ಕೈಗೊಳ್ಳಲು ಸಹಾಯ ಮಾಡಲಿದ್ದಾರೆ ಎಂದು ಖಾದರ್ ತಿಳಿಸಿದರು.
ದೇಶದಿಂದ 2 ಲಕ್ಷ ಮಂದಿ
ಸಂಸದ ಮೊಹಮ್ಮದ್ ಇರ್ಫಾನ್ ಅಹ್ಮದ್ ಮಾತನಾಡಿ, ಈ ಬಾರಿ ದೇಶ ದಿಂದ 2 ಲಕ್ಷ ಮಂದಿ ಹಜ್ ಯಾತ್ರೆ ಕೈಗೊಳ್ಳಲಿದ್ದಾರೆ. 1,75,000 ಮಂದಿಗೆ ಮಾತ್ರ ಈ ವರೆಗೆ ಅವಕಾಶವಿತ್ತು. 4 ತಿಂಗಳ ಮೊದಲು ಪ್ರಧಾನಿ ಮೋದಿ ಅವರು ಸೌದಿ ಅರೇಬಿಯಾ ರಾಜ ಮಹಮದ್ ಸಲ್ಮಾನ್ ಭಾರತಕ್ಕೆ ಬಂದಾಗಈ ಬಗ್ಗೆ ಅವರಲ್ಲಿ ಪ್ರಸ್ತಾವಿಸಿದ್ದರಿಂದಾಗಿ ಹೆಚ್ಚುವರಿ 25 ಸಾವಿರ ಮಂದಿಗೆ ಅವಕಾಶ ಲಭಿಸಿದೆ ಎಂದರು.
ಮಾಜಿ ಶಾಸಕರಾದ ಬಿ.ಎ. ಮೊದಿನ್‌ಬಾವಾ, ಕೆ.ಎಸ್. ಮಹಮ್ಮದ್ ಮಸೂದ್, ಮುಖಂಡರಾದ ಮಹಮ್ಮದ್ ಮೋನು, ಜಿಲ್ಲಾ ವಕ್ಫ್ ಯು.ಕೆ. ಮೋನು ಕಣಚೂರು, ಬಿ.ಎಂ. ಝಕರಿಯಾ, ವೈ. ಮಹಮ್ಮದ್ ಕುಂಞಿ, ಬಿ.ಎಂ. ಮುಮ್ತಾಝ್ ಅಲಿ, ಎಸ್.ಎಂ. ರಶೀದ್ ಹಾಜಿ, ಹನೀಫ್ ಹಾಜಿ ಕೊಳತ್ತಮಜಲು, ಎಂ.ಎಸ್. ಕರೀಂ, ಕೆ.ಕೆ. ಸಾಹುಲ್ ಹಮೀದ್, ಹೈದರ್ ಪರ್ತಿಪಾಡಿ, ಅಬ್ದುಲ್ ರಶೀದ್, ಅಶ್ರಫ್, ಬಶೀರ್, ಮಹಮ್ಮದ್ ಕುಂಜತ್ತಬೆೈಲು, ಬಶೀರ್ ಬೆೈಕಂಪಾಡಿ, ಸಿರಾಜ್, ಮಹಮದ್ ಶರೀಫ್, ಹನೀಫ್ ಮಹಮದ್ ಉಪಸ್ಥಿತರಿದ್ದರು.
ದ.ಕ. ಖಾಝಿ ಆಲ್ ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ದುವಾ ನೆರವೇರಿಸಿದರು. ಉಳ್ಳಾಲ ಖಾಝಿ ಆಸ್ಸಯ್ಯಿದ್ ಫಝಲ್ ಕೋಯಮ್ಮ ತಂšಳ್ ಅಲ್ಬುಖಾರಿ ಶುಭಾಶಂಸನೆಗೈದರು. ರಾಜ್ಯ ಹಜ್ ಸಮಿತಿ ಕಾರ್ಯ ನಿರ್ವಾಹಣಾಧಿಕಾರಿ ಸಫ್ರ್ರಾಝ್ ಖಾನ್ ಸರ್ದಾರ್ ಸ್ವಾಗತಿಸಿದರು. ರಶೀದ್ ವಿಟ್ಲ ಕಾರ್ಯಕ್ರಮ ನಿರೂಪಿ ಸಿದರು. ಬಿ.ಎಂ. ಮುಮ್ತಾಝ್ ಅಲಿ ಕೃಷ್ಣಾಪುರ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.