ಸರಳ ವಿವಾಹಕ್ಕೆ ಆದ್ಯತೆ ನೀಡಿ: ವಿನೋದ್‌ ಆಳ್ವ


Team Udayavani, Mar 6, 2017, 12:33 PM IST

06-LOC-8.jpg

ಪುಂಜಾಲಕಟ್ಟೆ: ಬಡ ಹೆಣ್ಣುಮಕ್ಕಳ ಕಣ್ಣೀರು ಒರೆಸುವ ನಿಟ್ಟಿನಲ್ಲಿ ಉಚಿತ ಸಾಮೂಹಿಕ ವಿವಾಹ ಪೂರಕವಾಗಿದೆ. ಆಡಂಬರದ ವಿವಾಹಕ್ಕಿಂತ ಸರಳ ವಿವಾಹಕ್ಕೆ ಒತ್ತು ನೀಡುವ ಮೂಲಕ ತುಂಗಪ್ಪ ಬಂಗೇರರ ನೇತೃತ್ವದ ಸ್ವಸ್ತಿಕ್‌ ಫ್ರೆಂಡ್ಸ್‌ ಕ್ಲಬ್‌ ಮಾದರಿಯಾಗಿದೆ ಎಂದು ಚಲನಚಿತ್ರ ನಟ ವಿನೋದ್‌ ಆಳ್ವ ಹೇಳಿದರು.

ಅವರು ಪುಂಜಾಲಕಟ್ಟೆ ಸ್ವಸ್ತಿಕ್‌ ಫ್ರೆಂಡ್ಸ್‌ ಕ್ಲಬ್‌ನ 33ನೇ ಸಂಭ್ರಮಾಚರಣೆ ಪ್ರಯುಕ್ತ ಬಂಗ್ಲೆ ಮೈದಾನದಲ್ಲಿ ರವಿವಾರ ಜರಗಿದ 9ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಕೋಟಿ ಚೆನ್ನಯರ ಜನ್ಮಸ್ಥಳ ಪಡುಮಲೆ ಕ್ಷೇತ್ರಧಿವನ್ನು ಜೀರ್ಣೋದ್ಧಾರಗೊಳಿಸುವ ಕಾರ್ಯ ನಡೆಧಿಯುತ್ತಿದ್ದು, ಈ ಮಹತ್ಕಾರ್ಯದಲ್ಲಿ ಸರ್ವರೂ ಕೈ ಜೋಡಿಸುವಂತೆ ಅವರು ಕೋರಿದರು. 

ವಿಧಾನ ಪರಿಷತ್‌ ಸದಸ್ಯ ಕ್ಯಾ| ಗಣೇಶ್‌ ಕಾರ್ಣಿಕ್‌ ಸಭಾಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದಲ್ಲಿ ದ್ವೇಷ, ಅಸೂಯೆ ಹೆಚ್ಚಾಗುತ್ತಿದ್ದು, ಸಂಸ್ಕಾರ, ಪ್ರೀತಿ-ವಿಶ್ವಾಸ ದೂರವಾಗುತ್ತಿದೆ. ಈ ನಿಟ್ಟಿನಲ್ಲಿ ನಮ್ಮ ಮನೋಭಾವ ಬದಲಾಗಬೇಕಿದ್ದು, ಸಾಮರಸ್ಯದ ಸುಂದರ ಸಮಾಜ ಕಟ್ಟಬೇಕಾಗಿದೆ ಎಂದರು.

ಸಂಸದ ನಳಿನ್‌ ಕುಮಾರ್‌ ಕಟೀಲು ಮತ್ತು ಶ್ರೀ ಕ್ಷೇ.ಧ.ಗ್ರಾ. ಯೋಜನೆ ಉಡುಪಿ, ಮಂಗಳೂರು ಪ್ರಾದೇಶಿಕ ನಿರ್ದೇಶಕ ಮಹಾವೀರ ಅಜ್ರಿ ಅವರು ಸ್ವಸ್ತಿಸಿರಿ ರಾಜ್ಯ ಪ್ರಶಸ್ತಿ ಪ್ರದಾನಗೈದರು. ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ ಶುಭಾಶಂಸನೆಧಿಗೈದರು. ಬೆಂಗಳೂರು ನ್ಯಾಯವಾದಿ ಸ್ವರ್ಣಲತಾ ಹೆಗ್ಡೆ ಮತ್ತು ವಸಂತ ಹೆಗ್ಡೆ ಅವರು ಮಂಗಳಸೂತ್ರ ವಿತರಿಸಿದರು. ಮಡಂತ್ಯಾರು ಸೇಕ್ರೆಡ್‌ ಹಾರ್ಟ್‌ ಕಾಲೇಜಿನ ಪ್ರಾಂಶುಪಾಲ ಅಲೆಕ್ಸ್‌ ಐವನ್‌ ಸಿಕ್ವೇರ, ಉದ್ಯಮಿಗಳಾದ ಜಿತೇಂದ್ರ ಎಸ್‌. ಕೊಟ್ಟಾರಿ, ಸುಂದರ್‌ರಾಜ್‌ ಹೆಗ್ಡೆ ಮುಂಬಯಿ, ಹುಕುಂ ರಾಂ ಪಠೇಲ್‌, ಬಿಜೆಪಿ ಜಿಲ್ಲಾ ವಕ್ತಾರ ಜಿತೇಂದ್ರ ಕೊಟ್ಟಾರಿ, ಬಿಲ್ಲವ ಮಹಾಮಂಡಲ ವಕ್ತಾರ ಹರಿಕೃಷ್ಣ ಬಂಟ್ವಾಳ, ಬೆಳ್ತಂಗಡಿ ಬಿಜೆಪಿ ಅಧ್ಯಕ್ಷ ರಂಜನ್‌ ಗೌಡ, ತುಳುನಾಡ ರಕ್ಷಣಾ ವೇದಿಕೆಯ ಕೇಂದ್ರೀಯ ಅಧ್ಯಕ್ಷ ಯೋಗೀಶ್‌ ಶೆಟ್ಟಿ ಜಪ್ಪು, ಪುಂಜಾಲಕಟ್ಟೆ ಸಿಂಡಿಕೇಟ್‌ ಬ್ಯಾಂಕ್‌ ಮ್ಯಾನೇಜರ್‌ ಹರೀಶ್‌ ಕುಮಾರ್‌, ತಾ.ಪಂ. ಸದಸ್ಯ ರಮೇಶ್‌ ಕುಡುಮೇರು, ದಂತ ವೈದ್ಯ ಡಾ| ಬಾಲಚಂದ್ರ ಶೆಟ್ಟಿ, ಹರೀಂದ್ರ ಪೈ, ರಶ್ಮಿ ಸುಂದರ ರಾಜ್‌ ಹೆಗ್ಡೆ, ಚೆನ್ನಕೇಶವ, ಸುಬ್ಬಣ್ಣ, ಕ್ಲಬ್‌ ಅಧ್ಯಕ್ಷ ಪ್ರಶಾಂತ್‌ ಪುಂಜಾಲಕಟ್ಟೆ, ಗೌರವಾಧ್ಯಕ್ಷ ಅಬ್ದುಲ ಪಿ., ಕಾರ್ಯದರ್ಶಿ ಜಯರಾಜ ಅತ್ತಾಜೆ, ಜೆಸಿಐ ಅಧ್ಯಕ್ಷ ರಾಜೇಶ್‌ ಪಿ., ನಾಟಕ ಸಮಿತಿ ಸಂಚಾಲಕ ಎಚ್ಕೆ ನಯನಾಡು ಉಪಸ್ಥಿತರಿದ್ದರು. ಕ್ಲಬ್‌ನ ಸ್ಥಾಪಕಾಧ್ಯಕ್ಷ ಎಂ. ತುಂಗಪ್ಪ ಬಂಗೇರ ಪ್ರಸ್ತಾವಿಸಿ ಮುಂದಿನ ವರ್ಷ ಸಾಮೂಹಿಕ ವಿವಾಹದ ದಶಮಾನೋತ್ಸವ ಆಚರಣೆ ನಡೆಯುಧಿತ್ತಿದ್ದು,  100 ಜೋಡಿ ವಧು-ವರರಿಗೆ ಉಚಿತ ವಿವಾಹ ನಡೆಸಲು ಸಂಕಲ್ಪಿಸಲಾಗಿದೆ ಎಂದರು.

ಕ್ಲಬ್‌ ಮಾಜಿ ಅಧ್ಯಕ್ಷ ಪ್ರಭಾಕರ ಪಿ.ಎಂ. ಸ್ವಾಗಧಿತಿಸಿದರು. ಶಿಕ್ಷಕ ರಾಮಚಂದ್ರ ರಾವ್‌ ಕಾರ್ಯಕ್ರಮ ನಿರೂಪಿಸಿದರು. ಬೆಳಗ್ಗೆ ಬಸವನಗುಡಿ ದೇವಸ್ಥಾನದಿಂದ ವಧು-ವರರ ಮೆರವಣಿಗೆ ನಡೆಯಿತು. ವೇ| ಮೂ| ಕೃಷ್ಣಭಟ್‌ ಪೌರೋಹಿತ್ಯದಲ್ಲಿ 13 ಜೋಡಿ ವಧು-ವರರು ಹಸೆಮಣೆಗೇರಿದರು.

ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ
ಡಾ| ರಾಜಶೇಖರ್‌ ಕೋಟ್ಯಾನ್‌, ಸಂಜಯ್‌ ಕುಮಾರ್‌ ಶೆಟ್ಟಿ ಗೋಣಿಬೀಡು, ವಿನಾಯಕ ರಾವ್‌, ರಮೇಶ್‌ ಬಾಯಾರು, ರಮೇಶ್‌ ಕಲ್ಲಡ್ಕ ಅವರಿಗೆ ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸ್ವಸ್ತಿಕ್‌ ಸಂಭ್ರಮ ಪುರಸ್ಕಾರ ಕಿಶೋರ್‌ ಪೆರಾಜೆ, ಸಂಜೀವ ಶೆಟ್ಟಿ ಮುಗೆರೋಡಿ, ಶೇಖರ ನಾರಾವಿ, ಕೆ. ಧರ್ಮಪಾಲ, ಶ್ರುತಿ ದಾಸ್‌ ಹಾಗೂ ಶ್ರೀ ಶಾರದಾಂಬಾ ಭಜನ ಮಂಡಳಿ ಕುಕ್ಕೇಡಿ, ಬುಳೆಕ್ಕರ ಅವರಿಗೆ ಸ್ವಸ್ತಿಕ್‌ ಸಂಭ್ರಮ ಪುರಸ್ಕಾರ ಪ್ರಶಸ್ತಿ ಹಾಗೂ ರಾಜ್ಯಶಾಸ್ತ್ರ ಎಂ.ಎ.ಯಲ್ಲಿ ಪ್ರಥಮ ರ್‍ಯಾಂಕ್‌ ಗಳಿಸಿದ ಶಕಿತಾ ಅವರಿಗೆ ವಿಶೇಷ ಪುರಸ್ಕಾರ ಪ್ರದಾನ ಮಾಡಲಾಯಿತು.

ಟಾಪ್ ನ್ಯೂಸ್

1-tt

1984 Anti Sikh Roits; ದೆಹಲಿ ಹೈಕೋರ್ಟ್ ಮೊರೆ ಹೋದ ಜಗದೀಶ್ ಟೈಟ್ಲರ್

1-isrelis

Sanskrit ಅಭ್ಯಾಸಕ್ಕೆ ಕಾಫಿನಾಡಿಗೆ ಆಗಮಿಸಿರುವ ಇಸ್ರೇಲ್‌ ವಿದ್ಯಾರ್ಥಿಗಳು

Maharashatra-Cm

Maharashtra: ದೇಸಿ ಹಸುಗಳು ʼರಾಜ್ಯಮಾತಾ ಗೋಮಾತೆʼ ಎಂದು ಘೋಷಿಸಿದ ರಾಜ್ಯ ಸರಕಾರ

Gadag; ಜನ್ಮದಿನದ ಸಂಭ್ರಮದಲ್ಲಿ ಇರಬೇಕಿದ್ದ ಬಾಲಕ ಶವವಾಗಿ ಪತ್ತೆ

Gadag; ಜನ್ಮದಿನದ ಸಂಭ್ರಮದಲ್ಲಿ ಇರಬೇಕಿದ್ದ ಬಾಲಕ ಶವವಾಗಿ ಪತ್ತೆ

1-sadsd

VK Singh ವಿರುದ್ಧ ಮಾನಹಾನಿಕರ ಪೋಸ್ಟ್ : ಯೂಟ್ಯೂಬರ್ ಬಂಧನ

anjura-roll

Recipe: ಈ ಬಾರಿಯ ಹಬ್ಬಕ್ಕೆ ಸಕ್ಕರೆ-ಬೆಲ್ಲ ಬಳಸದೇ ಈ ಸಿಹಿ ಖಾದ್ಯ ತಯಾರಿಸಿ

Bulldozer Action:ಬುಲ್ಡೋಜರ್‌ ಕಾರ್ಯಾಚರಣೆ-ಅಸ್ಸಾಂ ಸರ್ಕಾರಕ್ಕೆ ನ್ಯಾಯಾಂಗ ನಿಂದನೆ ನೋಟಿಸ್

Bulldozer Action:ಬುಲ್ಡೋಜರ್‌ ಕಾರ್ಯಾಚರಣೆ-ಅಸ್ಸಾಂ ಸರ್ಕಾರಕ್ಕೆ ನ್ಯಾಯಾಂಗ ನಿಂದನೆ ನೋಟಿಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ಮುಳುಗು ತಜ್ಞ ಈಶ್ವರ್‌ ಮಲ್ಪೆ ತಂಡಕ್ಕೆ ಸಮ್ಮಾನ

Mangaluru: ಮುಳುಗು ತಜ್ಞ ಈಶ್ವರ್‌ ಮಲ್ಪೆ ತಂಡಕ್ಕೆ ಸಮ್ಮಾನ

7

Bunts Hostel ವೃತ್ತ: ಫುಟ್‌ಪಾತ್‌ ಇಲ್ಲದೆ ಅಪಾಯ

6(1)

Mangaluru: ನಗರದ ಮಾರುಕಟ್ಟೆಗಳಿಗೆ ಇನ್ನೂ ಬಿಡದ ಗ್ರಹಣ!

Clown Festival: ಮಂಗಳೂರಿನಲ್ಲಿ ಅಕ್ಟೋಬರ್ 4 ರಿಂದ ಅಂತರಾಷ್ಟ್ರೀಯ ವಿದೂಷಕ ಉತ್ಸವ

Clown Festival: ಮಂಗಳೂರಿನಲ್ಲಿ ಅಕ್ಟೋಬರ್ 4ರಿಂದ ಅಂತರಾಷ್ಟ್ರೀಯ ವಿದೂಷಕ ಉತ್ಸವ

3

Bajpe -ಕಟೀಲು ರಾಜ್ಯ ಹೆದ್ದಾರಿಯಲ್ಲಿ ಹೊಂಡ-ಗುಂಡಿ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

1-tt

1984 Anti Sikh Roits; ದೆಹಲಿ ಹೈಕೋರ್ಟ್ ಮೊರೆ ಹೋದ ಜಗದೀಶ್ ಟೈಟ್ಲರ್

1-isrelis

Sanskrit ಅಭ್ಯಾಸಕ್ಕೆ ಕಾಫಿನಾಡಿಗೆ ಆಗಮಿಸಿರುವ ಇಸ್ರೇಲ್‌ ವಿದ್ಯಾರ್ಥಿಗಳು

Maharashatra-Cm

Maharashtra: ದೇಸಿ ಹಸುಗಳು ʼರಾಜ್ಯಮಾತಾ ಗೋಮಾತೆʼ ಎಂದು ಘೋಷಿಸಿದ ರಾಜ್ಯ ಸರಕಾರ

Gadag; ಜನ್ಮದಿನದ ಸಂಭ್ರಮದಲ್ಲಿ ಇರಬೇಕಿದ್ದ ಬಾಲಕ ಶವವಾಗಿ ಪತ್ತೆ

Gadag; ಜನ್ಮದಿನದ ಸಂಭ್ರಮದಲ್ಲಿ ಇರಬೇಕಿದ್ದ ಬಾಲಕ ಶವವಾಗಿ ಪತ್ತೆ

1-sadsd

VK Singh ವಿರುದ್ಧ ಮಾನಹಾನಿಕರ ಪೋಸ್ಟ್ : ಯೂಟ್ಯೂಬರ್ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.