ತಾಸೆ ಪೆಟ್ಟಿಗೆ ಕುಣಿಯಲಿವೆ ಹುಲಿ, ಕರಡಿಗಳು!
Team Udayavani, Oct 7, 2018, 10:52 AM IST
ಆಲಂಕಾರು: ತಾಸೆ ಪೆಟ್ಟಿಗೆ ಡೋಲ್‌ನ ಸಾಥ್‌ನೊಂದಿಗೆ ನಾಡಿನ ಹುಲಿಗಳು ಪೇಟೆಗೆ ಧಾವಿಸುವ ಸಮಯ ಬಂದೇ ಬಿಟ್ಟಿದೆ. ನವರಾತ್ರಿಯ ಈ ಪರ್ವ ಕಾಲದಲ್ಲಿ ಹತ್ತು ಹಲವು ವೇಷಗಳು ಜನತೆಯನ್ನು ರಂಜಿಸುವ ಮೂಲಕ ದಸರಾ ಹಬ್ಬಕ್ಕೆ ವಿಶೇಷ ಮೆರುಗು ನೀಡಲಿವೆ. ನವರಾತ್ರಿ ಮಹೋತ್ಸವದ ಹತ್ತು ದಿನಗಳಲ್ಲಿ ಹುಲಿ, ಕರಡಿ, ಸಿಂಹ ಸಹಿತ ವಿವಿಧ ವೇಷಗಳ ಜತೆಗೆ ನಾಡ ಹಬ್ಬದ ಸಂಭ್ರಮ ಇಮ್ಮಡಿಸಲಿದೆ.
ವಿನಾಶದ ಅಂಚಿನಲ್ಲಿರುವ ಕಾಡು ಪ್ರಾಣಿಗಳನ್ನು ವೇಷಗಳ ಮೂಲಕ ನಾಡಿನ ಜನತೆಗೆ ಪರಿಚಯಿಸುವ ಜತೆಗೆ ಯಕ್ಷಗಾನ, ಯಮ, ನಾರದ, ಋಷಿ, ನಪ್ಪು ಬಾಲೆ ಇತ್ಯಾದಿ ವೇಷಗಳ ಮೂಲಕ ಕಲಾವಿದರು ಜನರಿಗೆ ಮನೋರಂಜನೆಯನ್ನೂ ನೀಡುತ್ತಾರೆ.
ಗ್ರಾಮೀಣ ಕಲಾವಿದರ ರಂಗಪ್ರವೇಶ
ಗ್ರಾಮೀಣ ಭಾಗದ ಕಲಾವಿದರಿಗೆ ನವರಾತ್ರಿಯ ವೇಷ ಒಂದು ಉತ್ತಮ ಅವಕಾಶವನ್ನೂ ಕಲ್ಪಿಸಿಕೊಟ್ಟಿದೆ. ಕೆಲವರು ಇದನ್ನು ಧಾರ್ಮಿಕ ಕಟ್ಟುಪಾಡಿನ ಆಚರಣೆಯಾಗಿ ಬಳಸಿಕೊಂಡರೆ, ಮತ್ತೆ ಕೆಲವರು ಹರಕೆಯ ರೂಪದಲ್ಲಿ ಕೈಗೊಂಡು, ಧಾರ್ಮಿಕ ಸೇವೆ ಮಾಡುತ್ತಾರೆ. ಒಂದಿಷ್ಟು ಸಂಪಾದನೆಯ ಆಸೆಯಿಂದ ವೇಷ ಹಾಕುವವರೂ ಇದ್ದಾರೆ. ದಸರಾ ರಜೆಯಲ್ಲಿ ಮಕ್ಕಳೂ ವೇಷ ಹಾಕಿ ತಾಸೆ ಪೆಟ್ಟಿಗೆ ಹೆಜ್ಜೆ ಹಾಕುತ್ತಾರೆ.
ಪ್ರಮುಖ ವೇಷಗಳು
ಹುಲಿ, ಕರಡಿ, ಸಿಂಹ ಪ್ರಮುಖ ಗುಂಪು ವೇಷಗಳಾದರೆ, ಬೇಟೆಗಾರ, ಪೈಂಟರ್, ಬೇಲಿ ಹಾಕುವವರು, ಗಾರೆ ಕೆಲಸಗಾರರು, ನಪ್ಪು ಬಾಲೆ, ಯಕ್ಷಗಾನ, ಯಮ, ನಾರದ, ಋಷಿ – ಹೀಗೆ ಒಂಟಿ ವೇಷಗಳನ್ನು ಧರಿಸಿ, ದುರ್ಗೆಯ ಆರಾಧನೆ ಮಾಡುವುದು ವಾಡಿಕೆ.
ಹೆಚ್ಚಿನ ತಂಡಗಳು ವಿರಮಿಸಿವೆ
ಹಲವು ವರ್ಷಗಳ ಹಿಂದೆ ನವರಾತ್ರಿ ವೇಷಗಳಿಗೆ ವಿಶೇಷವಾದ ಗೌರವವಿತ್ತು. ಆದರೆ ಇಂದಿನ ಕಾಲಘಟ್ಟದಲ್ಲಿ ಇದರ ಮಹತ್ವ ಬಹಳಷ್ಟು ಕಡಿಮೆಯಾಗಿದೆ. ಟಿ.ವಿ., ಮೊಬೈಲ್‌ಗಳ ಪ್ರಭಾವದಿಂದಾಗಿ ಜನ ಆಕರ್ಷಣೆ ಕಳೆದುಕೊಂಡಿದ್ದಾರೆ. ಇದಕ್ಕೆ ಪೂರಕವೆಂಬಂತೆ ವೇಷಧಾರಿಗಳ ಸಂಖ್ಯೆಯೂ ಕಡಿಮೆಯಾಗಿದೆ. ವೇಷಧಾರಿಗಳು ನಿತ್ಯ 2,000 ರೂ. ಆದಾಯ ನಿರೀಕ್ಷಿಸುತ್ತಿದ್ದಾರೆ.
ವೆಚ್ಚ ನಿಭಾಯಿಸುವುದು ಕಷ್ಟ
ಒಂದು ಹುಲಿ ಅಥವಾ ಕರಡಿ ವೇಷದ ಏಳು ಜನರ ತಂಡಕ್ಕೆ 14 ಸಾವಿರ ರೂ. ಸಂಬಳ ಭರಿಸಿ, ಪ್ರಯಾಣ, ಊಟ-ತಿಂಡಿ ಖರ್ಚು, ಇತರ ವೆಚ್ಚಗಳನ್ನು ನಿಭಾಯಿಸುವುದು ಕಷ್ಟವಾಗುತ್ತಿದೆ. ಹೀಗಾಗಿ ಇತ್ತೀಚಿನ ದಿನಗಳಲ್ಲಿ ಹಲವು ವೇಷದ ತಂಡಗಳು ನೇಪಥ್ಯಕ್ಕೆ ಸರಿದಿವೆ.
ದೇವರ ಹೆಸರಲ್ಲಿ ಹರಕೆ
ತಮ್ಮ ಕೃಷಿಗೆ ಕಾಡು ಪ್ರಾಣಿಗಳ ವಿಪರೀತ ಉಪಟಳ, ಆರೋಗ್ಯದ ಸಮಸ್ಯೆ, ದೈನಂದಿನ ವ್ಯವಹಾರಗಳಲ್ಲಿ ಸಮಸ್ಯೆಯಿದ್ದರೆ ತುಳುನಾಡಿನ ಜನ ದೇವರ ಮೊರೆ ಹೋಗುತ್ತಾರೆ. ನವರಾತ್ರಿಯ ಸಮಯದಲ್ಲಿ ವಿಶೇಷ ವೇಷ ಧರಿಸುವ ಮೂಲಕ ತಮ್ಮ ಸಮಸ್ಯೆಗಳನ್ನು ನಿವಾರಿಸಿದ ದುರ್ಗೆಗೆ ಹರಕೆಯನ್ನು ಸಂದಾಯ ಮಾಡುತ್ತಾರೆ. ವೇಷಧಾರಿಗಳು ಮೊದಲ ದಿವಸ ಬಣ್ಣ ಬಳಿದ ಬಳಿಕ ಕೊನೆಯ ದಿನ ದೇವಾಸ್ಥಾನದಲ್ಲಿ ಸೇವೆ ನಡೆದ ಬಳಿಕವೇ ಬಣ್ಣವನ್ನು ತೆಗೆಯುವ ಪದ್ಧತಿ ಇಟ್ಟುಕೊಂಡಿದ್ದಾರೆ. ಭಕ್ತಿಯಿಂದ ಸೇವೆ ಸಲ್ಲಿಸುತ್ತಾರೆ. ರಾತ್ರಿ ವೇಳೆ ತೆಂಗಿನ ಗರಿಗಳಿಂದ ಮಾಡಿದ ಚಾಪೆ ಮೇಲೆ ನಿದ್ರಿಸುತ್ತಾರೆ. ಮಾಂಸಾಹಾರ ಸಂಪೂರ್ಣ ವರ್ಜ್ಯ.ಸಸ್ಯಾಹಾರ ಹಾಗೂ ಶುಚಿತ್ವಕ್ಕೆ ಮಹತ್ವ ನೀಡುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ICC; ಚಾಂಪಿಯನ್ಸ್ ಟ್ರೋಫಿ ಸುತ್ತಲಿನ ಬಿಕ್ಕಟ್ಟು: ಶುಕ್ರವಾರ ಮಹತ್ವದ ತೀರ್ಮಾನ?
Jasprit Bumrah ನಾಯಕತ್ವದ ಜವಾಬ್ದಾರಿಯನ್ನು ಆನಂದಿಸುತ್ತಾರೆ: ರವಿಶಾಸ್ತ್ರಿ
Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ
Bengaluru; ಪಾರ್ಕ್ ಗಳಲ್ಲಿ ನಾಯಿ ಮಲ ವಿಸರ್ಜಿಸಿದ್ರೆ ಮಾಲಿಕರಿಗೆ ದಂಡ: ಹೈಕೋರ್ಟ್
BJP Internal Dispute: ಶಾಸಕ ಬಸನಗೌಡ ಯತ್ನಾಳ್ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.