ತ್ಯಾಜ್ಯ ಎಸೆಯುವವರ ಪತ್ತೆಗೆ ಸಿಸಿ ಕೆಮರಾ ಅಳವಡಿಸಲು ಸಿದ್ಧತೆ
Team Udayavani, Sep 8, 2019, 5:30 AM IST
ಬಂಟ್ವಾಳ : ಇಲ್ಲಿನ ಪುರಸಭಾ ವ್ಯಾಪ್ತಿಯ ಗಡಿ ಪ್ರದೇಶದಲ್ಲಿ ತ್ಯಾಜ್ಯ ರಾಶಿಯ ಸಮಸ್ಯೆ ಉಲ್ಬಣಿಸು ತ್ತಿದ್ದು, ತ್ಯಾಜ್ಯ ಎಸೆಯುವ ಕಿಡಿಗೇಡಿಗಳನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಬಂಟ್ವಾಳ ಪುರಸಭೆ 5 ಕಡೆಗಳಲ್ಲಿ ಸಿಸಿ ಕೆಮರಾಗಳ ಅಳವಡಿಕೆಗೆ ಸಿದ್ಧತೆ ನಡೆಸಿದೆ. 15 ದಿನಗಳೊಳಗೆ ಸಿಸಿ ಕೆಮರಾಗಳು ಅಳವಡಿಕೆ ಯಾಗಲಿದ್ದು, ಸ್ಥಳಗಳನ್ನು ಇನ್ನೂ ಬಹಿರಂಗಪಡಿಸಿಲ್ಲ.
ಪಾಣೆಮಂಗಳೂರು ಸೇತುವೆಯ ಬಳಿ, ಅಮಾrಡಿ, ತಲಪಾಡಿ, ಲೊರೆಟ್ಟೋ ಪ್ರದೇಶಗಳಲ್ಲಿ ತ್ಯಾಜ್ಯ ರಾಶಿ ಕಂಡುಬರುತ್ತಿದ್ದು, ಈ ಎಲ್ಲ್ಲ ಪ್ರದೇಶಗಳು ಗ್ರಾ.ಪಂ.ವ್ಯಾಪ್ತಿಗೆ ಬರುತ್ತಿವೆ ಎಂದು ಪುರಸಭಾ ಅಧಿಕಾರಿಗಳು ಹೇಳುತ್ತಾರೆ. ಅದು ತನ್ನ ಗಡಿಪ್ರದೇಶದಲ್ಲಿ ಇರುವ ಕಾರಣ ಪುರಸಭೆಯು ಈಗಾಗಲೇ ಆ ಭಾಗದ ಸಂಬಂಧಪಟ್ಟ ಗ್ರಾ.ಪಂ.ಗಳಿಗೆ ನೋಟಿಸ್ ನೀಡಿದ್ದರೂ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ.
ಪುರಸಭೆಯಿಂದ ಆ ಪ್ರದೇಶದಲ್ಲಿ ತ್ಯಾಜ್ಯ ತೆರವು ಗೊಳಿಸಿದರೂ ಕಿಡಿಗೇಡಿಗಳು ಮತ್ತೆ ಮತ್ತೆ ತ್ಯಾಜ್ಯ ತಂದು ಹಾಕುತ್ತಿರುವುದಿಂದ ಸಾರ್ವಜನಿಕರಿಗೆ ತೊಂದರೆ ಯಾಗುತ್ತಿದೆ. ಹೀಗಾಗಿ ಕಿಡಿಗೇಡಿಗಳನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ಪುರಸಭೆ ಸಿಸಿ ಕೆಮರಾಗಳ ಅಳವಡಿಕೆಗೆ ಚಿಂತನೆ ನಡೆಸಿ, ಅನುದಾನ ಮೀಸಲಿಟ್ಟಿತ್ತು.
ಸ್ಥಳ ಬಹಿರಂಗವಿಲ್ಲ
ಬಂಟ್ವಾಳ ಪುರಸಭೆಯ ಅನುದಾನ ದಿಂದ ಸಿಸಿ ಕೆಮರಾ ಅಳವಡಿಕೆಯಾಗಲಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣ ಗೊಂಡಿದೆ. ಹೀಗಾಗಿ ಮುಂದಿನ 2 ವಾರ ಗಳೊಳಗೆ 5 ಕಡೆಗಳಲ್ಲಿ ಸಿಸಿ ಕೆಮರಾ ಅಳವಡಿಕೆಯಾಗಲಿದೆ.
ಆದರೆ ಅಳವಡಿಕೆ ಪ್ರದೇಶ ಗಳನ್ನು ಪುರಸಭೆ ಗೌಪ್ಯವಾಗಿರಿಸಿದೆ. ಸಿಸಿ ಕೆಮರಾ ಅಳವಡಿಕೆಯಾಗಿದೆ ಎಂದಾಗ ಕಿಡಿಗೇಡಿಗಳು ಬೇರೆ ಸ್ಥಳ ಹುಡುಕ ಬಹುದೆಂಬ ಕಾರಣಕ್ಕೆ ಸಿಸಿ ಕೆಮರಾ ಅಳವಡಿಕೆ ಸ್ಥಳ ಬಹಿರಂಗಗೊಳಿಸಿಲ್ಲ
ಪುರಸಭೆಯ ವ್ಯಾಪ್ತಿಯಲ್ಲಿ ತ್ಯಾಜ್ಯ ಸಂಗ್ರಹದ ಕುರಿತು ಗೊಂದಲಗಳಿದ್ದರೆ ಪುರಸಭೆಗೆ ತಿಳಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಸಮಸ್ಯೆಯಿದ್ದರೆ ಪುರಸಭೆಯ ಗಮನಕ್ಕೆ ಬಂದಾಗ ಅದನ್ನು ಸರಿಪಡಿಸಬಹುದು. ಅದರ ಬದಲು ರಸ್ತೆ ಬದಿಗೆ ತಂದು ಎಸೆದರೆ ಮತ್ತೂಂದು ಸಮಸ್ಯೆ ಉದ್ಭವಿಸುತ್ತದೆ. ಹೀಗಾಗಿ ದೂರವಾಣಿ ಮೂಲಕ ತಿಳಿಸುವಂತೆ ಪುರಸಭೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.
– ಕಿರಣ್ ಸರಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.