ಕಡಲ್ಕೊರೆತ ತಡೆಗೆ ಸರ್ವ ಸಿದ್ಧತೆ: ಖಾದರ್
Team Udayavani, May 27, 2018, 6:00 AM IST
ಮಂಗಳೂರು: ಕಡಲು ಕೊರೆತಕ್ಕೆ ಸಂಬಂಧಪಟ್ಟಂತೆ ಕೈಕೋ, ಹಿಲೆರಿನಗರ, ಸುಭಾಷ್‌ನಗರ ಬಳಿಯಲ್ಲಿ ಮಿನಿ ಬ್ರೇಕ್‌ವಾಟರ್ ನಿರ್ಮಾಣಕ್ಕೆ ಈಗಾಗಲೇ ಸರಕಾರ ದಿಂದ ಒಪ್ಪಿಗೆ ಸಿಕ್ಕಿದ್ದು, ಸದ್ಯವೇ ಟೆಂಡರ್ ಕರೆಯಲಾಗುತ್ತದೆ ಎಂದು ಶಾಸಕ ಖಾದರ್ ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕೋಟೆಪುರ, ಕೋಡಿ ಮೊಗವೀರಪಟ್ಣ ಮೊದಲಾದೆಡೆ ಈಗಾಗಲೇ ಬ್ರೇಕ್‌ವಾಟರ್ ನಿರ್ಮಾಣಗೊಂಡಿದ್ದು, ಸ್ವಲ್ಪ ಪ್ರಮಾಣದಲ್ಲಿ ಕಡಲ್ಕೊರೆತ ತಡೆಯಲು ಸಫಲರಾಗಿದ್ದೇವೆ. ಆದರೆ ಹಿಲೆರಿನಗರ, ಕೈಕೋ, ಸುಭಾಷ್ ನಗರ ಸುತ್ತಮುತ್ತಲಲ್ಲಿ ಈಗಲೂ ಸಮಸ್ಯೆ ಇದೆ, ಈ ನಿಟ್ಟಿನಲ್ಲಿ ಸುಮಾರು 14 ಕೋ. ರೂ. ವೆಚ್ಚದಲ್ಲಿ ಮಿನಿ ಬ್ರೇಕ್‌ವಾಟರ್ ನಿರ್ಮಾಣ ಯೋಜನೆಗೆ ಸರಕಾರವೂ ಒಪ್ಪಿಗೆ ನೀಡಿದೆ. ಸೋಮೇಶ್ವರ ಹಾಗೂ ತಲಪಾಡಿ ಮಧ್ಯೆ ಕಡಲ್ಕೊರೆತ ಉಂಟಾಗದಂತೆ ತಡೆಯಲು 900 ಮೀ. ಉದ್ದದ ತಾತ್ಕಾಲಿಕ ತಡೆಗೋಡೆ ನಿರ್ಮಾಣ ಪ್ರಾರಂಭವಾಗಿದೆ. ಕಡಲ್ಕೊರೆತ, ಮಳೆ ಅನಾಹುತ ದಂತಹ ತೊಂದರೆ ಉಂಟಾ ದಾಗ ಆಯಾ ಪಂಚಾಯತ್, ಸ್ಥಳೀಯ ಸಂಸ್ಥೆಗಳು ವಿವರ ಪಡೆದು ತಾಲೂಕು ಕೇಂದ್ರಕ್ಕೆ ಕಳುಹಿಸುವ ವ್ಯವಸ್ಥೆ ಮಾಡಿ ಸಂತ್ರಸ್ತರು ಪರಿಹಾರ ಪಡೆಯಲು ಸಹಕರಿಸಬೇಕು ಎಂದರು.
ಬಂದ್ ಕರೆ ರಾಜಕೀಯ ಗಿಮಿಕ್
ಸಾಲ ಮನ್ನಾ ವಿಚಾರದಲ್ಲಿ ಬಿ.ಎಸ್. ಯಡಿಯೂರಪ್ಪ ಸೋಮವಾರ ಬಂದ್‌ಗೆ ಕರೆ ನೀಡಿರುವ ವಿಚಾರ ವಾಗಿ, ಇದು ರಾಜಕೀಯ ಗಿಮಿಕ್. ಪೂರ್ಣ ಪ್ರಮಾಣದ ಸಂಪುಟ ರಚನೆಯಾಗದೆ ಯಾವುದೇ ನಿರ್ಧಾರ ತೆಗೆದುಕೊಳ್ಳುವುದು ಅಸಾಧ್ಯವಾದರೂ ಸಾಲ ಮನ್ನಾ ವಿಚಾರದಲ್ಲಿ ಕೊಟ್ಟ ಮಾತನ್ನು ಉಳಿಸಿ ಕೊಳ್ಳುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ಅಲ್ಲಿಯ ವರೆಗೆ ತಾಳ್ಮೆಯಿಂದ ಕಾಯುವುದನ್ನು ಬಿಟ್ಟು ಪ್ರತಿಯೊಂದನ್ನೂ ರಾಜಕೀಯ ಗೊಳಿಸುವುದು ಸರಿಯಲ್ಲ ಎಂದರು.
ಇವಿಎಂ ದೋಷದ ಬಗ್ಗೆ ಕೇಳಲಾದ ಪ್ರಶ್ನೆಗೆ, ಈ ಬಗ್ಗೆ ಎಲ್ಲೆಡೆಯೂ ಸಂಶಯ ಇದೆ. ನಿವಾರಣೆಗಾಗಿ ಬೂತ್ ಮಟ್ಟದಲ್ಲೇ ಪರಿಶೀಲನೆಯ ಅಗತ್ಯವಿದೆ. ಹಾಗಿದ್ದರೂ ಜನಾದೇಶಕ್ಕೆ ಗೌರವ ಕೊಡುತ್ತೇವೆ ಎಂದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮುಖಂಡರಾದ ಎನ್.ಎಸ್. ಕರೀಂ, ಸದಾಶಿವ ಉಳ್ಳಾಲ್, ಪ್ರಶಾಂತ್ ಕಾಜವ, ಸಂತೋಷ್ ಶೆಟ್ಟಿ ಅಸೈಗೋಳಿ, ಮೊಹಮ್ಮದ್ ಮೋನು, ಮಮತಾ ಗಟ್ಟಿ ಉಪಸ್ಥಿತರಿದ್ದರು.
ಸಚಿವ ಸ್ಥಾನ: ಹೈಕಮಾಂಡ್‌ಗೆ ಬಿಟ್ಟ ವಿಚಾರ
ನೂತನ ಸಚಿವ ಸಂಪುಟದಲ್ಲಿ ಸ್ಥಾನ ಸಿಗುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಖಾದರ್, ಸಚಿವ ಸ್ಥಾನ ನೀಡಬೇಕೇ- ಬೇಡವೇ ಎಂದು ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ. ಪಕ್ಷದ ನಿರ್ಧಾರಕ್ಕೆ ಬದ್ಧ. ಜೆಡಿಎಸ್‌ನ ಮುಖಂಡ ಬಿ.ಎಂ. ಫಾರೂಕ್‌ಗೆ ಸಚಿವ ಸ್ಥಾನ ನೀಡಲಾಗು ತ್ತದೆ ಎನ್ನಲಾಗುತ್ತಿದೆಯಾದರೂ ಈ ಬಗ್ಗೆ ತನ್ನ ಆಕ್ಷೇಪಗಳಿಲ್ಲ, ನಾವಿಬ್ಬರೂ ಆತ್ಮೀಯರಾಗಿಯೇ ಇದ್ದೇವೆ. ಸಚಿವ ಸ್ಥಾನ ನೀಡಿಕೆಯ ಬಗ್ಗೆ ಎರಡೂ ಪಕ್ಷಗಳ ಮುಖಂಡರು ಕಲೆತು ನಿರ್ಧಾರ ಕೈಗೊಳ್ಳುತ್ತಾರೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.