ತುಂಬೆ ಡ್ಯಾಂ ಹೂಳೆತ್ತಲು ಸಿದ್ಧತೆ ಪೂರ್ಣ
ಜಿಲ್ಲಾಧಿಕಾರಿ ಅನುಮತಿ ಬಳಿಕ ಕಾಮಗಾರಿ ಆರಂಭ
Team Udayavani, May 28, 2019, 6:02 AM IST
ಬಂಟ್ವಾಳ: ನೇತ್ರಾವತಿ ನದಿಯ ತುಂಬೆ ಡ್ಯಾಂ ಪರಿಸರದಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿದಿದ್ದು, ನದಿಯಲ್ಲಿ ಸೇರಿರುವ ಹೂಳೆತ್ತುವ ಕೆಲಸಕ್ಕೆ ಸಿದ್ಧತೆ ನಡೆಯುತ್ತಿದೆ.
ದಿಲ್ಲಿಯ ನೆಲ್ಕೊ ಕಂಪೆನಿ ಕಾಮಗಾರಿಯ ಗುತ್ತಿಗೆ ಪಡೆದಿದ್ದು, ಮಂಗಳೂರಿನ ಆಸಿಫ್ ನೇತೃತ್ವ ತಂಡ ಕೆಲಸ ನಿರ್ವಹಿಸಲಿದೆ. ಸೋಮವಾರ ಸಂಜೆ ಡ್ರೆಜ್ಜಿಂಗ್ ಯಂತ್ರವನ್ನು ನೀರಿಗಿಳಿಸಲಾಗಿದೆ.
ಹೂಳೆತ್ತುವುದಕ್ಕೆ ಈಗಾಗಲೇ ಪಂಟೂನ್ ತೇಲುವ ಗೋಲಗಳನ್ನು ನೀರಿನಲ್ಲಿ ಸ್ಥಾಪಿಸಲಾಗಿದೆ. ಡ್ರೆಜ್ಜಿಂಗ್ ಪಂಪನ್ನು ಅಳವಡಿಸಿ, ಪೈಪ್‌ಲೈನ್ ಮೂಲಕ ನದಿಯಲ್ಲಿ ತುಂಬಿರುವ ಮರಳು, ಮಣ್ಣು, ಕಸವನ್ನು ಮೇಲೆತ್ತುವುದಕ್ಕೆ ಸಿದ್ಧತೆ ಮಾಡಲಾಗಿದೆ.
ಅನುಮತಿ ಬಳಿಕ ಕೆಲಸ
ಮೊದಲಿಗೆ ಹೂಳೆತ್ತುವ ಡೆಮೋ ಚಿತ್ರೀಕರಿಸಿ ಜಿಲ್ಲಾಧಿಕಾರಿ ಮತ್ತು ಗಣಿ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಲಾಗುತ್ತದೆ. ಅವರು ವೀಕ್ಷಿಸಿ ಬಳಿಕ ಅನುಮತಿ ನೀಡಿದ ಅನಂತರ ಕೆಲಸ ಆರಂಭಿಸಲಾಗುತ್ತದೆ. ವಾರದ ಹಿಂದೆ ಗಣಿ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿದ್ದಾರೆ. ಇ -ಟೆಂಡರ್ ಮೂಲಕ ಕೆಲಸದ ಗುತ್ತಿಗೆಯನ್ನು ವಹಿಸಲಾಗಿದೆ.
ಡ್ರೆಜ್ಜಿಂಗ್ ಯಂತ್ರವು ಗಂಟೆಗೆ 100 ಎಂ.ಕ್ಯೂ. (ಕ್ಯುಬಿಕ್ ಮೀಟರ್) ಹೂಳನ್ನು ಮೇಲೆತ್ತಬಲ್ಲುದಾಗಿದೆ. ಹೂಳು ತೆಗೆಯುವ ಕೆಲಸ ನಿರ್ವಹಣೆ ತಂತ್ರಜ್ಞರು ವಿವಿಧ ಬಂದರುಗಳಲ್ಲಿ ಸಾಕಷ್ಟು ವರ್ಷಗಳಿಂದ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದು, ಒರಿಸ್ಸಾ ಮತ್ತು ಕೊಚ್ಚಿನ್‌ನಲ್ಲಿ ಕೆಲಸ ನಿರ್ವಹಿಸಿದ ಅನುಭವಿಗಳಾಗಿದ್ದಾರೆ.
ಸ್ಥಳೀಯವಾಗಿ ಇಲ್ಲಿನ ಕೆಲಸ ನಿರ್ವಹಣೆಗೆ ಬೇಕಾಗುವ ವ್ಯವಸ್ಥೆಗಳನ್ನು ಹೊಂದಿಸಿಕೊಡುವ, ಅವಶ್ಯ ಸಾಮಗ್ರಿಗಳನ್ನು ಒದಗಿಸುವ ಕೆಲಸವನ್ನು ನಾವು ಮಾಡುತ್ತಿದ್ದು, ಡಿಸಿ ಅಂತಿಮ ಸೂಚನೆ ಬಳಿಕ ಕೆಲಸ ನಡೆಯಲಿದೆ.
– ಶಂಸೀರ್ ಸ್ಥಳೀಯ ಗುತ್ತಿಗೆ ನಿರ್ವಾಹಕರು
ನೇತ್ರಾವತಿ ನದಿಯಲ್ಲಿ ಹೂಳೆತ್ತುವ ಕೆಲಸ ಸುಮಾರು 3 ತಿಂಗಳ ಕಾಲ ನಡೆಯುವ ಸಾಧ್ಯತೆ ಇದೆ. ಡಿಸಿ ಆದೇಶದಂತೆ ಡ್ಯಾಂ ವಠಾರದಲ್ಲಿ ಕೆಲಸ ನಿರ್ವಹಿಸಲಾಗುತ್ತದೆ. ನೆರೆ ಬಂದರೂ ಕೆಲಸ ಮುಂದುವರಿಸ ಲಾಗುತ್ತದೆ. ಪ್ರಾಥಮಿಕ ಹಂತದಲ್ಲಿ ಯಂತ್ರಗಳ ಜೋಡಣೆ ನಡೆದಿದೆ.
-ಧರ್ಮೆàಶ್, ತಾಂತ್ರಿಕ ವ್ಯವಸ್ಥೆ ನಿರ್ವಾಹಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.