ಸಾನ್ನಿಧ್ಯ ರಕ್ಷಣೆ ನಮ್ಮೆಲ್ಲರ ಹೊಣೆ: ಡಾ| ಹೆಗ್ಗಡೆ
Team Udayavani, May 8, 2019, 6:11 AM IST
ಮಂಗಳೂರು: ನೋವು, ಭಯ, ಸಂಶಯ ಪರಿಹರಿಸಿ ಅಭಯ ನೀಡುವ ಶಕ್ತಿಯನ್ನು ಹೊಂದಿರುವ ಸಾನ್ನಿಧ್ಯಗಳನ್ನು ರಕ್ಷಿಸುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಕದ್ರಿ ಶ್ರೀ ಮಂಜುನಾಥ ದೇವ ಸ್ಥಾನದಲ್ಲಿ ಅಷ್ಟೋತ್ತರ ಸಹಸ್ರ ಬ್ರಹ್ಮ ಕಲಶಾಭಿಷೇಕ ಮತ್ತು ಮಹಾದಂಡ ರುದ್ರಾಭಿಷೇಕದ ಅಂಗವಾಗಿ ಮಂಗಳ ವಾರ ಜರಗಿದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯ ಬಹುತೇಕ ಕ್ಷೇತ್ರಗಳು ತಮ್ಮದೇ ಆದ ವೈಶಿಷ್ಟéಗಳಿಂದ ಜಗತ್ತಿನಾದ್ಯಂತ ಹೆಸರು ಪಡೆದಿವೆ. ಆಶೀರ್ವಾದ ಮಾಡುವ ಹಾಗೂ ದೋಷವನ್ನು ಸ್ವೀಕರಿಸುವ ಶಕ್ತಿ ಕ್ಷೇತ್ರಗಳಲ್ಲಿ ಇರಬೇಕು. ಕ್ಷೇತ್ರದ ಪ್ರಸಾದ ಸ್ವೀಕರಿಸಿದಾಗ ಸಿಗುವ ತೃಪ್ತಿ, ಧನ್ಯತಾ ಭಾವ ದುಬಾರಿ ಹೊಟೇಲ್‌ಗಳಲ್ಲಿ ತಿಂದಾಗ ಸಿಗುವುದಿಲ್ಲ ಎಂದರು.
ಮೂಡುಬಿದಿರೆಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಿದರು. ಡಾ| ಮಂಜಯ್ಯ ಶೆಟ್ಟಿ, ಮನೋಹರ್ ಶೆಟ್ಟಿ ಬಪ್ಪನಾಡು, ಬಿ.ಆರ್. ಸೋಮಯಾಜಿ, ಎ.ಜೆ. ಶೆಟ್ಟಿ, ಹರಿನಾಥ್, ನಿಂಗಯ್ಯ, ಪ್ರದೀಪ್ ಕುಮಾರ್ ಕಲ್ಕೂರ, ದಿನೇಶ್ ದೇವಾಡಿಗ ಉಪಸ್ಥಿತರಿದ್ದರು.
ಸಮ್ಮಾನ
ಭಜನ ಸಂತ ಪೈ. ಕೆ. ಕೊಗ್ಗಪ್ಪ, ಶಿಲ್ಪಿ ಪುಷ್ಪರಾಜ್ ಕಾಸರ ಗೋಡು, ಯಕ್ಷಗಾನ ಕಲಾವಿದ ಡಿ.ಕೆ. ಮನೋಹರ್, ಸಾಹಿತಿ ನಿತ್ಯಾನಂದ ಕಾರಂತ ಪೊಳಲಿ,
ನಿವೃತ್ತ ತಹಶೀಲ್ದಾರ ಎ.ಆರ್. ಪ್ರಭಾಕರ್ ಅವರನ್ನು ಸಮ್ಮಾನಿಸಲಾಯಿತು.
ಕದ್ರಿ ನವನೀತ ಶೆಟ್ಟಿ ನಿರ್ವಹಿಸಿದರು.
ನಾಳೆ ಬ್ರಹ್ಮಕಲಶ, ರಥೋತ್ಸವ
ಮೇ 9ರಂದು ಬೆಳಗ್ಗೆ 9.30ಕ್ಕೆ ಬ್ರಹ್ಮಕಲಶಾಭಿಷೇಕ, ಪ್ರಾಚೀನ ಮೂರ್ತಿಗಳಿಗೆ ವಿಶೇಷ ಕಲಶಾಭಿಷೇಕ, ಅವಸ್ರುತ ಬಲಿ, ಮಹಾ ಪೂಜೆ ನಡೆಯಲಿದೆ.
ಅಪರಾಹ್ನ 2ರಿಂದ ರಥಾರೋಹಣವಾಗಿ, ಮನ್ಮಹಾರಥೋತ್ಸವ, ಮಹಾದಂಡ ಜೋಡಣೆ, ಉತ್ಸವ ಬಲಿ, ಭೂತ ಬಲಿ ನಡೆಯಲಿದೆ. 10ರಂದು ಬೆಳಗ್ಗೆ 5.30ರಿಂದ ಪುಣ್ಯಾಹ, ಕವಾಟೋದ್ಘಾಟನೆ, ಅಮೃತೇಶ್ವರಿ ಪೂಜೆ, ಮಹಾದಂಡ ರುದ್ರಾಭಿಷೇಕ ಆರಂಭ, ಮಹಾರುದ್ರಯಾಗ, ಪೂರ್ಣಾಹುತಿ, ಮಹಾಪೂಜೆ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.