ಹರೇಕಳ ಹಾಜಬ್ಬರ ಶಾಲೆಗೆ ದತ್ತಿನಿಧಿ ಪ್ರದಾನ
Team Udayavani, May 3, 2018, 10:11 AM IST
ಮಹಾನಗರ: ‘ಹಾಜಬ್ಬರಶಾಲೆ’ ಎಂದೇ ಹೆಸರಾಗಿರುವ ಹರೇಕಳ ನ್ಯೂ ಪಡ್ಪು ಜಿಲ್ಲಾ ಪಂಚಾಯತ್ ಸಂಯುಕ್ತ ಪ್ರೌಢಶಾಲೆಗೆ ಕೊಟ್ಟಾಯಂ ಜಿಲ್ಲೆಯ ಪಾಲ ಸೈಂಟ್ ತೋಮಸ್ ಹೈಯರ್ ಸೆಕಂಡರಿ ಶಾಲೆ ರೂ.15,000 ಮೊತ್ತದ ದತ್ತಿನಿಧಿಯನ್ನು ಒದಗಿಸಲಿದೆ.
ನ್ಯೂ ಪಡ್ಪು ಶಾಲೆಯಲ್ಲಿ ಬುಧವಾರ ಜರಗಿದ ಎರಡು ದಿನಗಳ ಸಾಂಸೃತಿಕ ವಿನಿಮಯ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಸೈಂಟ್ ತೋಮಸ್ ಹೈಯರ್ ಸೆಕಂಡರಿ ಶಾಲೆಯ ಪ್ರಾಂಶುಪಾಲ ಮ್ಯಾಥ್ಯೂ ಎಂ.ಕುರಿಯೊಕೋಸ್ ದತ್ತಿ ನಿಧಿಯನ್ನು ಪ್ರಕಟಿಸಿದರು.
ಎಸೆಸೆಲ್ಸಿಯ ಅಂತಿಮ ಪರೀಕ್ಷೆ ಯಲ್ಲಿ ಆಂಗ್ಲ ಭಾಷೆಯಲ್ಲಿ ಅತ್ಯಧಿಕ ಅಂಕ ಗಳಿಸುವ ವಿದ್ಯಾರ್ಥಿಗೆ ದತ್ತಿನಿಧಿಯ ಬಡ್ಡಿ ಮೊತ್ತವನ್ನು ಪ್ರೋತ್ಸಾಹ ಧನವಾಗಿ ನೀಡಬೇಕು ಎಂದು ಅವರು ವಿನಂತಿಸಿದರು. ಹಾಜಬ್ಬರ ಶಿಕ್ಷಣ ಪ್ರೇಮದಿಂದ ಪ್ರೇರಿತರಾಗಿ ನ್ಯೂ ಪಡ್ಪು ಶಾಲೆಗೆ ರಾಷ್ಟ್ರೀಯ ಸೇವಾ ಯೋಜನೆಯ 25 ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ಸಾಂಸ್ಕೃತಿಕ ವಿನಿಯಮಕ್ಕೆ ಆಗಮಿಸಿರುವುದಾಗಿ ಪ್ರಾಂಶುಪಾಲರು ಹೇಳಿದರು.
ಸೈಂಟ್ ತೋಮಸ್ ಹೈಯರ್ ಸೆಕೆಂಡರಿ ಶಾಲೆಯ ವತಿಯಿಂದ ಹರೇಕಳ ಹಾಜಬ್ಬ ಅವರನ್ನು ಸಮ್ಮಾನಿಸಲಾಯಿತು. ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ಮಾಜಿ ಕುಲಪತಿ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ ಡಾ| ಕೆ. ಚಿನ್ನಪ್ಪ ಗೌಡ ಮತ್ತು ಪತ್ರಕರ್ತ ಡಾ| ರೊನಾಲ್ಡ್ ಅನಿಲ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.
ಹರೇಕಳ ಹಾಜಬ್ಬ ಮಾತನಾಡಿ, ಮಾಧ್ಯಮಗಳು ತನ್ನ ಶಿಕ್ಷಣ ಸೇವೆಗೆ ಬೆಂಬಲ ನೀಡಿವೆ. ಶಿಕ್ಷಣ ಎಂಬುದು ಒಂದು ರೀತಿಯ ಬೆಳಕು. ಅದು ಮಕ್ಕಳ ಪಾಲಿಗೆ ದಾರಿದೀಪವಾಗಬೇಕು ಎಂದು ಹೇಳಿದರು. ನ್ಯೂ ಪಡ್ಪು ಶಾಲೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯರಾದ ಯೂಸುಫ್, ಶಾಂತಾ, ಶಿಕ್ಷಕಿ ಸುಶೀಮಾ, ಸೈಂಟ್ ತೋಮಸ್ ಶಾಲೆಯ ಉಪನ್ಯಾಸಕ ಡಾ| ನಿಜಾಯ್ ಜೋಸ್ ಉಪಸ್ಥಿತರಿದ್ದರು. ನ್ಯೂ ಪಡ್ಪು ಸಂಯುಕ್ತ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ರೂಪಾ ಸ್ವಾಗತಿಸಿದರು. ಸೈಂಟ್ ತೋಮಸ್ ಹೈಯರ್ ಸೆಕಂಡರಿ ಶಾಲೆಯ ಎನ್ನೆಸ್ಸೆಸ್ ಅಧಿಕಾರಿ ಸಾಬು ತೋಮಸ್ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
IPL Auction 2025: ಸೇಲ್ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..
Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್ ಸೊರೇನ್ ನ.28ಕ್ಕೆ ಪದಗ್ರಹಣ
Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.