ಹರಿದಾಸ ಪರಂಪರೆಯಿಂದ ಸಂಸ್ಕೃತಿಯ ಸಂರಕ್ಷಣೆ: ಡಾ| ಡಿ. ವೀರೇಂದ್ರ ಹೆಗ್ಗಡೆ
Team Udayavani, Jun 5, 2019, 6:00 AM IST
ಬೆಳ್ತಂಗಡಿ: ಹರಿದಾಸ ಪರಂಪರೆಯು ಅಪಾರ ಜ್ಞಾನದ ಆಗರವಾಗಿದ್ದು, ಸಾರ್ಥಕ ಬದುಕಿಗೆ ಮಾರ್ಗದರ್ಶಿಯಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಧರ್ಮಸ್ಥಳ ವಸಂತಮಹಲ್‌ನಲ್ಲಿ ರವಿವಾರ ಕಾಸರಗೋಡಿನ ಹರಿದಾಸ ಜಯಾನಂದ ಕುಮಾರರ ಅರುವತ್ತು ಕ್ಷೇತ್ರಗಳಲ್ಲಿ ಹರಿಕಥಾ ಕೀರ್ತನೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಬಹುಭಾಷಾ ಪರಿಣತರಾದ ಜಯಾನಂದ ಕುಮಾರರ ಸೇವೆ-ಸಾಧ ನೆಯನ್ನು ಶ್ಲಾಘಿಸಿ ಅಭಿನಂದಿಸಿದರು. ಹರಿಕೀರ್ತನೆಯೊಂದಿಗೆ ಭಜನ ಸಂಸ್ಕೃತಿಯನ್ನೂ ಅವರು ಜನಪ್ರಿಯ ಗೊಳಿಸುತ್ತಿರುವುದು ಸ್ತುತ್ಯರ್ಹ ವಾಗಿದೆ ಎಂದು ಅವರು ಹೇಳಿದರು.
ಉತ್ತಮ ಸಂಸ್ಕಾರ
ಒಡಿಯೂರು ಗುರುದೇವಾನಂದ ಸ್ವಾಮೀಜಿ ಆಶೀರ್ವಚಿಸಿ, ಭಜನೆಗೆ ಹೊಸ ಆಯಾಮ ನೀಡಿದ ಕೀರ್ತಿ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರಿಗೆ ಸಲ್ಲುತ್ತದೆ. ಭಜನೆ ಸಾರ್ಥಕ ಬದುಕಿಗೆ ಪ್ರೇರಕವಾಗಿದೆ. ಇಹ-ಪರ ಹಾಗೂ ಜೀವ-ದೇವನ ನಡುವೆ ಸಂಪರ್ಕ ಕೊಂಡಿ ಭಜನೆ ಆಗಿದ್ದು, ಭಜನೆಯಿಂದ ಉತ್ತಮ ಸಂಸ್ಕಾರ ಮೂಡಿ ಬರುತ್ತದೆ ಎಂದು ಅಭಿಪ್ರಾಯಪಟ್ಟರು. ಮಾಣಿಲದ ಮೋಹನದಾಸ ಸ್ವಾಮೀಜಿ ಅವರು, ಭಾವನೆ ಮತ್ತು ಭಾವುಕತೆ ಮಾಯವಾಗುತ್ತಿರುವ ಇಂದಿನ ಕಾಲದಲ್ಲಿ ದಾಸ ಸಾಹಿತ್ಯವನ್ನು ಮನೆ ಮನೆಗೆ ತಲುಪಿಸಬೇಕಾದ ಅನಿವಾರ್ಯತೆ ಇದೆ ಎಂದರು.
ಬದಿಯಡ್ಕದ ಬಿ. ವಸಂತ ಪೈ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರಿನ ಎಂ.ಬಿ. ಪುರಾಣಿಕ್, ಕನ್ನಡ ಸಾಹಿತ್ಯ ಪರಿಷತ್ ಘಟಕದ ಜಿಲ್ಲಾಧ್ಯಕ್ಷ ಕೆ. ಪ್ರದೀಪ್ ಕುಮಾರ್ ಕಲ್ಕೂರ, ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಮಹಾಬಲ ಶೆಟ್ಟಿ ಶುಭಾಶಂಸನೆ ಮಾಡಿದರು. ರವಿ ಕಾಸರಗೋಡು ಸ್ವಾಗತಿಸಿದರು. ಮೀರಾ ಆಳ್ವ ನಿರೂಪಿಸಿ, ವಂದಿಸಿದರು.
ಜ್ಞಾನ ಸುಧೆಯ ಹರಿವು
ಹರಿದಾಸ ಪರಂಪರೆಯಲ್ಲಿ ಜ್ಞಾನ ಸುಧೆಯ ಹರಿವಿದೆ. ಎಲ್ಲ ಧರ್ಮ, ಶಾಸ್ತ್ರ, ಪುರಾಣಗಳ ಸಾರವಿದೆ. ಧರ್ಮ, ಸಂಸ್ಕೃತಿ ರಕ್ಷಣೆಯಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಕಳೆದ ಐವತ್ತು ವರ್ಷಗಳಲ್ಲಿ ಹರಿಕಥಾ ಕೀರ್ತನೆ ಮಹತ್ವವನ್ನು ಕಳೆದುಕೊಳ್ಳುತ್ತಿದೆ. ಆದುದರಿಂದ ಅದಕ್ಕೆ ಕಾಯಕಲ್ಪ ನೀಡಿ ಪರಂಪರೆಯನ್ನು ಮುಂದುವರಿಸಬೇಕು ಎಂದು ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಸಲಹೆ ನೀಡಿದರು.
ಅಭಿಯಾನ
ಯುವ ಜನತೆಗೆ ಹರಿದಾಸ ಸಾಹಿತ್ಯದ ಸಾರ ತಿಳಿಸಬೇಕು. ಬೆಳ್ತಂಗಡಿ ತಾಲೂಕಿನಲ್ಲಿ ಹರಿಕಥಾ ಕೀರ್ತನೆಯ ಅಭಿಯಾನ ಆಯೋಜಿಸಲಾಗುವುದು.
- ಹರೀಶ್ ಪೂಂಜ, ಶಾಸಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ
Bidar; ಗುತ್ತಿಗೆದಾರ ಸಚಿನ್ ಕೇಸ್; ತನಿಖೆ ಆರಂಭಿಸಿದ ಸಿಐಡಿ ತಂಡ
Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.