ನಾಳೆ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಗೆ ಅಧ್ಯಕ್ಷರ ಆಯ್ಕೆ; ರೇಸ್‌ನಲ್ಲಿ ಇಬ್ಬರು
Team Udayavani, Jan 11, 2020, 5:59 AM IST
ಮಂಗಳೂರು: ಲಭ್ಯ ಮಾಹಿತಿ ಪ್ರಕಾರ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಗೆ ನೂತನ ಸಾರಥಿ ಆಯ್ಕೆ ಜ.12ರಂದು ನಡೆಯಲಿದೆ.
ಆಯ್ಕೆ ಪ್ರಕ್ರಿಯೆಯನ್ನು ಜ.12ರೊಳಗೆ ಪೂರ್ಣ ಗೊಳಿಸುವಂತೆ ರಾಜ್ಯ ಬಿಜೆಪಿ ಘಟಕದಿಂದ ಈಗಾಗಲೇ ಸೂಚನೆ ಬಂದಿದೆ. ರಾಜ್ಯ ಬಿಜೆಪಿ ಉಪಾಧ್ಯಕ್ಷ ನಿರ್ಮಲ ಕುಮಾರ್ ಸುರಾನಾ ಈ ಸಂಬಂಧ ವೀಕ್ಷಕರಾಗಿ ಆಗಮಿಸಲಿದ್ದಾರೆ. ಅಂದು ಬೆಳಗ್ಗೆ ಬಿಜೆಪಿ ಕಚೇರಿಯಲ್ಲಿ ಅಧ್ಯಕ್ಷಾಕಾಂಕ್ಷಿಗಳಿಂದ ನಾಮಪತ್ರ ಸ್ವೀಕರಿಸಿ, ಅಭಿಪ್ರಾಯ ಆಲಿಸಿದ ಬಳಿಕ ನೂತನ ಅಧ್ಯಕ್ಷರನ್ನು ಘೋಷಿಸಲಿದ್ದಾರೆ. ಪಕ್ಷದ ನಿಯಮದ ಪ್ರಕಾರ ಹಾಲಿ ಅಧ್ಯಕ್ಷ ಸಂಜೀವ ಮಠಂದೂರು ಅವರ ಅಧಿಕಾರಾವಧಿ ಸೆಪ್ಟಂಬರ್‌ನಲ್ಲಿ ಪೂರ್ಣಗೊಂಡಿದೆ.
ವಯೋಮಿತಿ 55 ವರ್ಷ
ಬಿಜೆಪಿಯಲ್ಲಿ ಈ ಬಾರಿ ಮಂಡಲ ಮತ್ತು ಜಿಲ್ಲಾ ಅಧ್ಯಕ್ಷತೆಗೆ ವಯೋಮಿತಿ ನಿಗದಿ ಪಡಿಸಲಾಗಿದೆ. ಮಂಡಲ ಸಮಿತಿ ಅಧ್ಯಕ್ಷತೆಗೆ 50 ವರ್ಷ ಮತ್ತು ಜಿಲ್ಲಾಧ್ಯಕ್ಷತೆಗೆ 55 ವರ್ಷದ ಒಳಗಿನವರು ಅರ್ಹರಾಗುತ್ತಾರೆ. ಪಕ್ಷದಲ್ಲಿ ಯುವಶಕ್ತಿಯನ್ನು ಮುಂಚೂಣಿಗೆ ತರಲು ಈ ನಿಯಮ.
ಪಕ್ಷದ ಜಿಲ್ಲಾಧ್ಯಕ್ಷತೆಗೆ ಪ್ರಸ್ತುತ ಜಿಲ್ಲಾ ಪ್ರ. ಕಾರ್ಯದರ್ಶಿಗಳಾಗಿರುವ ಸುದರ್ಶನ ಎಂ. ಮತ್ತು ಕ್ಯಾ| ಬೃಜೇಶ್ ಚೌಟ ಅವರ ಹೆಸರು ಮುನ್ನೆಲೆಯಲ್ಲಿ ಕೇಳಿಬರುತ್ತಿವೆ.
ಸಂಜೀವ ಮಠಂದೂರು 2016ರಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿದ್ದರು. ಅಧ್ಯಕ್ಷರಾಗಿ ಆಯ್ಕೆಯಾದಾಗ ಅವರಿಗೆ 52 ವರ್ಷವಾಗಿದ್ದು, ಪ್ರಸ್ತುತ ಇರುವ ವಯೋಮಿತಿ ಮಾನದಂಡ ಅವರ ವಿಚಾರದಲ್ಲಿ ಅಂದೇ ಪಾಲನೆಯಾಗಿತ್ತು. ಅವರ ಅಧ್ಯಕ್ಷತೆಯಲ್ಲಿ ಬಿಜೆಪಿ ವಿಧಾನಸಭೆ, ಲೋಕಸಭೆ ಮತ್ತು ಮನಪಾ ಚುನಾವಣೆಯಲ್ಲಿ ಅಭೂತಪೂರ್ವ ಸಾಧನೆ ದಾಖಲಿಸಿದೆ.
ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷರ ಆಯ್ಕೆ ಒಂದೆರಡು ದಿನಗಳಲ್ಲಿ ನಡೆಯುವ ಸಾಧ್ಯತೆಗಳಿವೆ. ಈಗಾಗಲೇ ಎರಡು ಮಂಡಲಗಳನ್ನು ಹೊರತುಪಡಿಸಿ ಉಳಿದ ಮಂಡಲಗಳ ಆಧ್ಯಕ್ಷರ ಆಯ್ಕೆ ನಡೆದಿದೆ. ಜಿಲ್ಲಾ ಅಧ್ಯಕ್ಷ ಆಯ್ಕೆಗಾಗಿ ವೀಕ್ಷಕರು ಆಗಮಿಸಲಿದ್ದಾರೆ.
-ಉದಯ ಕುಮಾರ್ ಶೆಟ್ಟಿ ,
ಬಿಜೆಪಿ ವಿಭಾಗ ಪ್ರಭಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಹೊಸ ವರ್ಷ: ಕರಾವಳಿಯ ದೇವಸ್ಥಾನಗಳಲ್ಲಿ ಭಕ್ತಸಂದಣಿ
Kasaragod: ವೈದ್ಯಕೀಯ ಕಾಲೇಜು ಆಗಿ ಭಡ್ತಿಗೊಳ್ಳಲಿರುವ ಕಾಸರಗೋಡು ಜಿಲ್ಲಾ ಜನರಲ್ ಆಸ್ಪತ್ರೆ
Ullala; ನರಿಂಗಾನ ದುರಂತ: ಗಾಯಾಳುಗಳಿಗೆ ನಿರಂತರ ಧೈರ್ಯ ತುಂಬುತ್ತಿದ್ದ ಶಿಕ್ಷಕ
ಅರಣ್ಯದಲ್ಲಿ ಹೊಸ ವರ್ಷ ಆಚರಣೆಗೆ ಸಿದ್ಧತೆ: 30 ಮಂದಿ ವಶ, ಮುಚ್ಚಳಿಕೆ ಪಡೆದು ಬಿಡುಗಡೆ
ESI ಆಸ್ಪತ್ರೆಯಲ್ಲಿ ಡಯಾಲಿಸಿಸ್ ಸಂಕಷ್ಟ:ಸಂಸದ ಬ್ರಿಜೇಶ್ ಚೌಟ ಭೇಟಿ;ಅಧಿಕಾರಿಗಳಿಗೆ ತಾಕೀತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.