ಪ್ರತಿಷ್ಠಿತ ಪಕ್ಷಗಳು ಕಣದಲ್ಲಿ: ಇಂದಿನಿಂದ ನಾಮಪತ್ರ ಸಲ್ಲಿಕೆ
Team Udayavani, Aug 10, 2018, 9:57 AM IST
ಉಳ್ಳಾಲ: ಕಾಂಗ್ರೆಸ್ ಭದ್ರ ಕೋಟೆಯಾಗಿರುವ ಉಳ್ಳಾಲದಲ್ಲಿ ಚುನಾವಣಾ ಕಣ ರಂಗೇರಿದ್ದು, ಆ. 29ರಂದು ನಡೆಯಲಿರುವ ಚುನಾವಣೆಗೆ ಇಂದಿನಿಂದ ನಾಮಪತ್ರ ಸಲ್ಲಿಕೆಯಾಗಲಿದ್ದು ಪ್ರತಿಷ್ಠಿತ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ, ಜಾತ್ಯತೀತ ಜನತಾ ದಳ ಮತ್ತು ಸಿಪಿಐಎಂ ಪಕ್ಷಗಳು ಕಣಕ್ಕಿಳಿಯಲಿವೆ.
ಪುರಸಭೆಯಿಂದ ನಗರಸಭೆಗೆ ಮೇಲ್ದರ್ಜೆಗೇರಿರುವ ಉಳ್ಳಾಲ ನಗರಸಭೆಯ ಪ್ರಥಮ ಚುನಾವಣೆ ಇದಾಗಲಿದ್ದು, 31 ಸ್ಥಾನಗಳಲ್ಲಿ 15 ಪುರುಷರಿಗೆ ಮತ್ತು 16 ಮಹಿಳಾ ಸದಸ್ಯರಿಗೆ ಅವಕಾಶ ಇದ್ದು, 10 ಸಾಮಾನ್ಯ, 9 ಸಾಮಾನ್ಯ ಮಹಿಳೆ 1ಹಿಂದುಳಿದ ವರ್ಗ (ಬಿ,) ಮಹಿಳೆ, 1 ಹಿಂದುಳಿ¨ವರ್ಗ(ಬಿ,), 4 ಹಿಂದುಳಿದ ವರ್ಗ (ಎ.), 4 ಹಿಂದುಳಿದ ವರ್ಗ (ಎ.)ಮಹಿಳೆ , 1 ಪರಿಶಿಷ್ಟ ಪಂಗಡ, 1 ಪರಿಶಿಷ್ಟ ಜಾತಿಗೆ ಮೀಸಲಾತಿ ನೀಡಲಾಗಿದೆ.
ಈ ಹಿಂದಿನ ಉಳ್ಳಾಲ ಪುರಸಭೆಯಲ್ಲಿದ್ದ 27 ಕ್ಷೇತ್ರಗಳಲ್ಲಿ 17 ಕಾಂಗ್ರೆಸ್ 7 ಬಿಜೆಪಿ, 1 ಎಸ್‌ಡಿಪಿಐ ಮತ್ತು ಇಬ್ಬರು ಪಕ್ಷೇತರ ಸದಸ್ಯರಿದ್ದರು. ಈಗ 31 ಸ್ಥಾನಗಳಿಗೆ ನಡೆ ಯಲಿರುವ ಚುನಾವಣೆಗೆ ಆ. 10ರಂದು ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಆ. 17 ನಾಮಪತ್ರ ಸಲ್ಲಿಕೆ ಕೊನೆಯ ದಿನಾಂಕವಾಗಲಿದೆ. ಆ. 18ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಆ. 20ರಂದು ನಾಮಪತ್ರ ಹಿಂತೆಗೆದು ಕೊಳ್ಳಲು ಅವಕಾಶವಿದೆ. ಆ. 29ರಂದು ಚುನಾವಣೆ ಮತ್ತು ಆ. 1ರಂದು ಮತ ಎಣಿಕೆ ನಡೆಯಲಿದೆ.
ಅಲ್ಪಸಂಖ್ಯಾಕ ಪ್ರಾಬಲ್ಯ ಕ್ಷೇತ್ರ
ಉಳ್ಳಾಲ ನಗರಸಭೆಯಲ್ಲಿ ಅಲ್ಪ ಸಂಖ್ಯಾಕ ಪ್ರಾಬಲ್ಯವಿದ್ದು, ಒಟ್ಟು 44,273 ಮತದಾರರಲ್ಲಿ 16,079 ಹಿಂದೂ ಮತದಾರರಿದ್ದು, 28, 194 ಅಲ್ಪಸಂಖ್ಯಾಕ ಮತದಾರರಿದ್ದಾರೆ. 31 ಕ್ಷೇತ್ರಗಳಲ್ಲಿ 22 ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾಕ ಮತದಾರರು ಪ್ರಾಬಲ್ಯ ಹೊಂದಿದ್ದರೆ, 9 ಕ್ಷೇತ್ರಗಳಲ್ಲಿ ಹಿಂದೂ ಮತದಾರರ ಪ್ರಾಬಲ್ಯ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belthangady: ಬೈಕ್ ಸವಾರ ಸಾವು ಪ್ರಕರಣ; ಸರಕಾರಿ ಬಸ್ ಚಾಲಕನಿಗೆ ಶಿಕ್ಷೆ;ದಂಡ
Egg Thrown: ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ: ಬಿಜೆಪಿ ನಾಯಕರು ಗರಂ
New Products KMF: ಮಾರುಕಟ್ಟೆಗೆ ಬಂತು “ನಂದಿನಿ’ ಇಡ್ಲಿ, ದೋಸೆ ಹಿಟ್ಟು
GST: ಖರೀದಿ, ಮಾರಾಟ ದರದ ವ್ಯತ್ಯಾಸಕ್ಕಷ್ಟೇ 18% ಜಿಎಸ್‌ಟಿ
Pro Kabaddi League-11: ಇಂದು ಎಲಿಮಿನೇಟರ್ ಸ್ಪರ್ಧೆ ಸೋತವರು ಮನೆಗೆ, ಗೆದ್ದವರು ಸೆಮಿಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.