ಅಪರಾಧ ಕೃತ್ಯಗಳ ತಡೆ, ಸುಗಮ ಸಂಚಾರಕ್ಕೆ ಮೊದಲ ಆದ್ಯತೆ
Team Udayavani, Oct 14, 2017, 1:07 PM IST
ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯ ಸಂಚಾರ ಮತ್ತು ಅಪರಾಧ ವಿಭಾಗದ ನೂತನ ಡಿಸಿಪಿ ಆಗಿ ಉಮಾ ಪ್ರಶಾಂತ್ ಅ. 3ರಂದು ಅಧಿಕಾರ ಸ್ವೀಕರಿಸಿದ್ದಾರೆ. ಮೂಲತಃ ಮೈಸೂರಿನವರಾದ ಉಮಾ, 2010ನೇ ಬ್ಯಾಚ್‌ನ ಕೆಎಸ್‌ಪಿಎಸ್ ಅಧಿಕಾರಿ. ಬೆಂಗಳೂರಿನಲ್ಲಿ ಭ್ರಷ್ಟಾಚಾರ ನಿಗ್ರಹ ದಳ, ಅನಂತರ ಕುಣಿಗಲ್ ಹಾಗೂ ಕಾರವಾರದಲ್ಲಿ ಡಿವೈಎಸ್‌ಪಿ ಆಗಿ ಸೇವೆ ಸಲ್ಲಿಸಿದ್ದಾರೆ. ಮಂಗಳೂರಿನಲ್ಲಿ ಡಿಸಿಪಿ ಆಗಿ ಅಧಿಕಾರ ವಹಿಸಿಕೊಂಡ ಮೊದಲ ಮಹಿಳಾ ಪೊಲೀಸ್ ಅಧಿಕಾರಿ ಎಂಬ ಹೆಗ್ಗಳಿಕೆ ಅವರದ್ದು. ಈ ಹಿನ್ನೆಲೆಯಲ್ಲಿ ಉದಯವಾಣಿ ಸುದಿನ ವಿಶೇಷ ಸಂದರ್ಶನ.
ಪ್ರಥಮ ಆದ್ಯತೆ ಏನು?
ಅಪರಾಧ ಕೃತ್ಯಗಳ ನಿಯಂತ್ರಣ ಮತ್ತು ಪತ್ತೆಗೆ ಕ್ರಮ ಹಾಗೂ ಸುಗಮ ಸಂಚಾರ ನಿರ್ವಹಣೆಗೆ ಪ್ರಥಮ ಆದ್ಯತೆ. ಇದಕ್ಕೆ ಜನರ ಸಹಕಾರ ಅಗತ್ಯ. ಅದು ಸಿಕ್ಕಾಗ ಯಾವುದೇ ಕೆಲಸವನ್ನು ಸಮರ್ಪಕವಾಗಿ ಹಾಗೂ ದಕ್ಷವಾಗಿ ನಿರ್ವಹಿಸುವುದು ಸಾಧ್ಯ.
ಮಂಗಳೂರು ಬಗ್ಗೆ ಏನನಿಸುತ್ತಿದೆ?
ಇಲ್ಲಿನ ಜನರು ಸುಶಿಕ್ಷಿತರು ಮತ್ತು ಒಳ್ಳೆಯವರು. ಇಲ್ಲಿ ಕೆಲಸ ಮಾಡಲು ಖುಷಿಯಾಗುತ್ತದೆ ಎಂಬ ಮಾತುಗಳನ್ನು ಸಾಕಷ್ಟು ಅಧಿಕಾರಿಗಳಿಂದ ಕೇಳಿ ತಿಳಿದಿದ್ದೇನೆ. ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಲು ಜನರು ಸಹಕರಿಸುತ್ತಾರೆ ಎಂಬ ನಿರೀಕ್ಷೆ ಇದೆ. ಮಂಗಳೂರು ನಗರವು ಶಿಕ್ಷಣ, ಆರೋಗ್ಯ, ಬ್ಯಾಂಕಿಂಗ್ ಕ್ಷೇತ್ರಗಳಿಗೆ ಹೆಸರಾದ ಪ್ರದೇಶ. ಆದರೆ ಇಲ್ಲಿ ಆಗಿಂದಾಗ್ಗೆ ಕೋಮು ಸಂಬಂಧಿತ ಸಂಘರ್ಷಗಳು ನಡೆಯು ತ್ತಿರುತ್ತವೆ ಎಂಬ ಅಪವಾದ ಕೂಡ ಇದ್ದು, ಇದು ನಿಜಕ್ಕೂ ತುಂಬಾ ವಿಷಾದದ ಸಂಗತಿ.
ನಗರದಲ್ಲಿ ಅನಧಿಕೃತ ಕ್ಲಬ್‌ಗಳು ಕಾರ್ಯಾಚರಿಸುತ್ತಿವೆ ಎಂಬ ಆರೋಪವಿದೆ. ಅದನ್ನು ಹೇಗೆ ನಿಭಾಯಿಸುವಿರಿ?
ನಗರದಲ್ಲಿ ಸ್ಕಿಲ್ ಗೇಮ್, ಇಸ್ಪೀಟ್ ಕ್ಲಬ್, ಮಸಾಜ್ ಪಾರ್ಲರ್ ಮತ್ತಿತರ ಕಡೆಗಳಲ್ಲಿ ಅನಧಿಕೃತ ವ್ಯವಹಾರಗಳು ನಡೆಯುತ್ತಿವೆ ಎಂಬ ವಿಚಾರ ನನ್ನ ಗಮನಕ್ಕೂ ಬಂದಿವೆ. ಅವುಗಳನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳು ಎಲ್ಲಿಯೇ ನಡೆದರೂ ಅವುಗಳನ್ನು ಮಟ್ಟ ಹಾಕಲು ಹೆಚ್ಚಿನ ಗಮನಹರಿಸಲಾಗುವುದು.
ಇಲ್ಲಿನ ಸಂಚಾರ ಸಮಸ್ಯೆ ವಿಚಾರಗಳು ನಿಮ್ಮ ಗಮನಕ್ಕೆ ಬಂದಿವೆಯೇ?
ಇಲ್ಲಿ ಖಾಸಗಿ ಬಸ್ಸುಗಳು ಜಾಸ್ತಿ ಇವೆ ಎನ್ನುವುದನ್ನು ತಿಳಿದುಕೊಂಡಿದ್ದೇನೆ. ಅವುಗಳ ಕಾರ್ಯ ನಿರ್ವಹಣೆ ಬಗ್ಗೆ ಅಥವಾ ಸಾರ್ವಜನಿಕರಿಗೆ ಸಮಸ್ಯೆಗಳೇನಾದರೂ ಆಗುತ್ತಿವೆಯೇ ಎನ್ನುವುದನ್ನು ಅರ್ಥ ಮಾಡಿಕೊಂಡು ಆ ದಿಕ್ಕಿನಲ್ಲಿ ಸ್ಪಂದಿಸುವ ಪ್ರಯತ್ನ ಮಾಡುತ್ತೇನೆ.
ಎಂ ಟ್ರ್ಯಾಕ್ ಯೋಜನೆ
ಸಂಚಾರ ವ್ಯವಸ್ಥೆ ಸುಧಾರಣೆ ಸಂಬಂಧಿಸಿ ‘ಎಂ ಟ್ರ್ಯಾಕ್ ‘ ಮೊದಲ ಹಂತದ ಯೋಜನೆಯ ಕಾಮಗಾರಿಗಳು ಈಗಾಗಲೇ ಬಹುತೇಕ ಪೂರ್ತಿಗೊಂಡಿವೆ. ಈಗ ಎರಡನೇ ಹಂತದ ‘ಎಂ- ಟ್ರ್ಯಾಕ್ ‘ ಯೋಜನೆಯಡಿ 50 ಲಕ್ಷ ರೂ. ಮಂಜೂರಾಗಿದೆ. ಅದರಲ್ಲಿ ಪ್ರಮುಖ ಜಂಕ್ಷನ್‌ಗಳ ಸುಧಾರಣೆ, ಸುಗಮ ಸಂಚಾರ ಸಂಬಂಧಿತ ಪರಿಕರಗಳ ವ್ಯವಸ್ಥೆ, ಶಿಕ್ಷಣ ಮತ್ತು ತರಬೇತಿ ಇತ್ಯಾದಿ ವಿಷಯಗಳಿವೆ. ಶೀಘ್ರ ಇದರ ಅನುಷ್ಠಾನವಾಗಲಿದೆ.
ಹಿಲರಿ ಕ್ರಾಸಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.