ಪ್ರಧಾನಿ ಮೋದಿಯ ಮೊದಲ ದ.ಕ. ಭೇಟಿ
Team Udayavani, Oct 29, 2017, 6:00 AM IST
ಮಂಗಳೂರು: ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಇದೇ ಮೊದಲ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡುತ್ತಿದ್ದಾರೆ.
ಅವರು ಉಜಿರೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳ ಸಮಾವೇಶದಲ್ಲಿ ಭಾಗಿಯಾಗಲಿದ್ದು, ಜಿಲ್ಲೆಯಲ್ಲಿ ಭಾಗಿಯಾಗುವ ಪ್ರಥಮ ಸಾರ್ವಜನಿಕ ಕಾರ್ಯಕ್ರಮವೂ ಹೌದು.
ಈ ಮೊದಲು ಮೋದಿ 2016ರಲ್ಲಿ ಜಿಲ್ಲೆಗೆ ಆಗಮಿಸಿದ್ದರು. ಕೊಚ್ಚಿಗೆ ತೆರಳುವ ಹಾದಿಯಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿದು ಕಾರ್ಯಕರ್ತರನ್ನು ಭೇಟಿಯಾಗಿ ಹೆಲಿಕಾಪ್ಟರ್‌ನಲ್ಲಿ ಪ್ರಯಾಣ ಮುಂದುವರಿಸಿದ್ದರು. ಆ ಬಳಿಕ ಜಿಲ್ಲೆಗೆ ಭೇಟಿ ನೀಡಿರಲಿಲ್ಲ.
ಅ. 29ರ ಕಾರ್ಯಕ್ರಮಕ್ಕೆ ಪ್ರಧಾನಿ ಹೊಸದಿಲ್ಲಿಯಿಂದ ವಿಶೇಷ ವಿಮಾನದಲ್ಲಿ ಬೆಳಗ್ಗೆ 10.30ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ ಅಲ್ಲಿಂದ ಹೆಲಿಕಾಪ್ಟರ್‌ನಲ್ಲಿ ಧರ್ಮಸ್ಥಳಕ್ಕೆ ತೆರಳುವರು. ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ರಸ್ತೆ ಮೂಲಕ 11.40ಕ್ಕೆ ಉಜಿರೆಗೆ ಬಂದು ಸಮಾವೇಶದಲ್ಲಿ ಭಾಗಿಯಾಗುವರು. 12.50ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದು 1.10ಕ್ಕೆ ಬೆಂಗಳೂರಿಗೆ ತೆರಳಲಿದ್ದಾರೆ.
ಪ್ರಧಾನಿಯಾಗುವ ಮುನ್ನ 3 ಬಾರಿ ಭೇಟಿ
ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಮೋದಿ 3 ಬಾರಿ ಜಿಲ್ಲೆಗೆ ಚುನಾವಣೆ ಸಂದರ್ಭ ಭೇಟಿ ನೀಡಿದ್ದರು. 2008ರಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ ಸಂದರ್ಭ ಪುತ್ತೂರಿಗೆ ಆಗಮಿಸಿ ಬಳಿಕ ಕಾರ್ಕಳಕ್ಕೆ, 2013ರ ವಿಧಾನಸಭಾ ಚುನಾವಣೆ ವೇಳೆ, 2014ರ ಲೋಕಸಭಾ ಚುನಾವಣೆ ವೇಳೆ ಮಂಗಳೂರಿನ ನೆಹರೂ ಮೈದಾನದಲ್ಲಿ ಭಾಷಣವನ್ನೂ ಮಾಡಿದ್ದರು.
2017ರ ಫೆಬ್ರವರಿಯಲ್ಲಿ ಉಡುಪಿ ರಾಜಾಂಗಣದಲ್ಲಿ ಶ್ರೀಕೃಷ್ಣಮಠದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದಿಲ್ಲಿಯಿಂದ ವೀಡಿಯೋ ಕಾನ್ಫರೆನ್ಸ್ ಭಾಷಣ ಮಾಡಿದ್ದರು.
ಆಹಾರ ಸ್ವೀಕಾರ
ಪ್ರಧಾನಿ ಮೋದಿ ಪ್ರವಾಸ ಸಂದರ್ಭ ಹೊರಗಿನ ಆಹಾರ ಸ್ವೀಕರಿಸುವುದಿಲ್ಲ. ವಿಮಾನದಲ್ಲೇ ಆಹಾರ ಸಿದ್ಧವಾಗಿ ಇರುತ್ತದೆ. ಹೊರಗೆಲ್ಲೂ ಭೋಜನ ಸೇವಿಸದೆ ವಿಮಾನದಲ್ಲೇ ಸ್ವೀಕರಿಸುತ್ತಾರೆ ಎನ್ನಲಾಗಿದೆ.
ಜಿಲ್ಲೆಗೆ ಬಂದ ಪ್ರಧಾನಿಗಳು ಯಾರ್ಯಾರು?
ಮಂಗಳೂರಿಗೆ ಭಾರತದ ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರು ಆಗಮಿಸಿ, ಕೇಂದ್ರ ಮೈದಾನದಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಿದ್ದರು. ಬಳಿಕ ಮೈದಾನಕ್ಕೆ ನೆಹರೂ ಮೈದಾನ ಎಂದು ನಾಮಕರಣ ಮಾಡಲಾಗಿತ್ತು.
ಲಾಲ್‌ಬಹಾದ್ದೂರ್ ಶಾಸಿŒಯವರು ಪ್ರಧಾನಿಯಾಗಿದ್ದಾಗ ನವಮಂಗಳೂರು ಬಂದರಿಗೆ ಶಿಲಾನ್ಯಾಸ ನೆರವೇರಿಸಿದ್ದರು.
1975ರಲ್ಲಿ ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದಾಗ ನವ ಮಂಗಳೂರು ಬಂದರನ್ನು ಲೋಕಾರ್ಪಣೆ ಮಾಡಿದ್ದರು. ಮೊರಾರ್ಜಿ ದೇಸಾಯಿ, ಚಂದ್ರಶೇಖರ್, ರಾಜೀವ್ ಗಾಂಧಿ, ಪಿ.ವಿ. ನರಸಿಂಹ ರಾವ್, ಅಟಲ್ ಬಿಹಾರಿ ವಾಜಪೇಯಿ, ಅವರೂ ಪ್ರಧಾನಿಯಾಗಿದ್ದಾಗ ವಿವಿಧ ಸಂದರ್ಭ ಜಿಲ್ಲೆಗೆ ಭೇಟಿ ನೀಡಿದ್ದರು.
2006 ಜೂ. 23ರಂದು ಪ್ರಧಾನಿ ಡಾ| ಮನಮೋಹನ್ ಸಿಂಗ್ ಅವರು ಎಂಆರ್‌ಪಿಎಲ್‌ನ ಪೆಟ್ರೋ ಕೆಮಿಕಲ್ ಸಂಕೀರ್ಣ ಉದ್ಘಾಟಿಸಲು ಮಂಗಳೂರಿಗೆ ಬರಬೇಕಿತ್ತು. ಆದರೆ ಹವಾಮಾನ ವೈಪರೀತ್ಯದಿಂದ ವಿಮಾನ ಇಳಿಯದೆ ಬೆಂಗಳೂರಿಗೆ ಹಿಂದಿರುಗಿದ್ದರು.
ವಾಹನ ಸಂಚಾರ ಮಾರ್ಪಾಡು
ಮಂಗಳೂರು, ಅ. 28: ಪ್ರಧಾನಿ ನರೇಂದ್ರ ಮೋದಿ ಅವರು ರವಿವಾರ ಧರ್ಮಸ್ಥಳ ಮತ್ತು ಉಜಿರೆಗೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಭದ್ರತೆಯ ದೃಷ್ಟಿಯಿಂದ ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 2 ಗಂಟೆಯ ವರೆಗೆ ವಾಹನಗಳ ಸಂಚಾರದಲ್ಲಿ ಬದಲಾವಣೆಯನ್ನು ಮಾಡಲಾಗಿದೆ.
ಮಂಗಳೂರಿನಿಂದ ಧರ್ಮಸ್ಥಳಕ್ಕೆ ಬರುವ ಎಲ್ಲ ವಾಹನಗಳು ಮಂಗಳೂರು -ಬಿ.ಸಿ.ರೋಡ್- ಉಪ್ಪಿನಂಗಡಿ- ನೆಲ್ಯಾಡಿ–ಕೊಕ್ಕಡ-ನಿಡ್ಲೆ ಮಾರ್ಗವಾಗಿ ಧರ್ಮಸ್ಥಳಕ್ಕೆ ಬರುವುದು. ಧರ್ಮಸ್ಥಳದಿಂದ ಮಂಗಳೂರು ಕಡೆಗೆ ಹೋಗುವ ಎಲ್ಲ ವಾಹನಗಳು ಧರ್ಮಸ್ಥಳ- ನಿಡ್ಲೆ-ಕೊಕ್ಕಡ- ನೆಲ್ಯಾಡಿ- ಉಪ್ಪಿನಂಗಡಿ ಮಾರ್ಗವಾಗಿ ಮಂಗಳೂರಿಗೆ ತೆರಳುವುದು.
ಧರ್ಮಸ್ಥಳದಿಂದ ಉಜಿರೆ-ಚಾರ್ಮಾಡಿ- ಚಿಕ್ಕಮಗಳೂರು ಕಡೆಗೆ ಹೋಗುವ ವಾಹನಗಳು ಧರ್ಮಸ್ಥಳ-ಪುದುವೆಟ್ಟು ಕ್ರಾಸ್- ಕಕ್ಕಿಂಜೆ- ಚಾರ್ಮಾಡಿ ಮಾರ್ಗವಾಗಿ ತೆರಳುವುದು. ಚಿಕ್ಕಮಗಳೂರು ಕಡೆಯಿಂದ ಧರ್ಮಸ್ಥಳಕ್ಕೆ ಬರುವ ವಾಹನಗಳು ಮೂಡಿಗೆರೆ- ಚಾರ್ಮಾಡಿ-ಕಕ್ಕಿಂಜೆ- ಪುದುವೆಟ್ಟು ಕ್ರಾಸ್ ಮಾರ್ಗವಾಗಿ ಧರ್ಮಸ್ಥಳಕ್ಕೆ ಬರುವುದು.
ಧರ್ಮಸ್ಥಳದಿಂದ ಉಜಿರೆಗೆ ಹೋಗುವ ಎಲ್ಲ ವಾಹನಗಳು ಧರ್ಮಸ್ಥಳ – ಪುದುವೆಟ್ಟು ಕ್ರಾಸ್- ಕಕ್ಕಿಂಜೆ ಮಾರ್ಗವಾಗಿ ಉಜಿರೆಗೆ ತೆರಳುವುದು.
ಕಾರ್ಕಳ, ಮೂಡಬಿದಿರೆ, ವೇಣೂರು ಕಡೆಗಳಿಂದ ಧರ್ಮಸ್ಥಳಕ್ಕೆ ಬರುವ ವಾಹನಗಳು ಗುರುವಾಯನಕೆರೆ-ಉಪ್ಪಿನಂಗಡಿ-ನೆಲ್ಯಾಡಿ- ಕೊಕ್ಕಡ ಮಾರ್ಗವಾಗಿ ಧರ್ಮಸ್ಥಳಕ್ಕೆ ಬರುವುದು.
ವಾಹನ ನಿಲುಗಡೆ ನಿಷೇಧ
ಧರ್ಮಸœಳ, ಉಜಿರೆ ಪರಿಸರದಲ್ಲಿ ಮತ್ತು ಧರ್ಮಸœಳ – ಉಜಿರೆ ರಸ್ತೆಯಲ್ಲಿ ಅ. 29 ರಂದು ಬೆಳಗ್ಗಿನಿಂದ ರಸ್ತೆಯ ಎರಡೂಬದಿಗಳಲ್ಲಿ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ. ಯಾವುದಾದರೂ ವಾಹನ ರಸ್ತೆ ಬದಿಯಲ್ಲಿ ನಿಲುಗಡೆ ಮಾಡಿರುವುದು ಕಂಡಲ್ಲಿ ಈ ವಾಹನಗಳನ್ನು ಟೋಯಿಂಗ್ ವಾಹನದ ಮೂಲಕ ಬೇರೆ ಸ್ಥಳಕ್ಕೆ ಸœಳಾಂತರಿಸಲಾಗುವುದು.
ವಾಹನ ನಿಲುಗಡೆಗೆ ವ್ಯವಸ್ಥೆ: ಸಾರ್ವಜನಿಕರಿಗೆ ವಾಹನ ಪಾರ್ಕಿಂಗ್ ವ್ಯವಸೆœಯನ್ನು ಉಜಿರೆಯ ಜನಾರ್ದನ ಸ್ವಾಮಿ ದೇವಸಾœನದ ಬಳಿ ಮತ್ತು ವಿಐಪಿ ಪಾಸ್ ಹೊಂದಿರುವ ವಾಹನಗಳಿಗೆ ಬೆಳಾಲು ಕ್ರಾಸ್ ಬಳಿ ವ್ಯವಸೆœಯನ್ನು ಕಲ್ಪಿಸಲಾಗಿದೆ ಎಂದು ಪೊಲೀಸ್ ಅಧೀಕ್ಷಕರ ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Mangaluru: ಪಂಪ್‌ವೆಲ್-ಪಡೀಲ್ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ
MUST WATCH
ಹೊಸ ಸೇರ್ಪಡೆ
Karkala: ಬಾವಿಗೆ ಬಿದ್ದು ವ್ಯಕ್ತಿ ಸಾವು; ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ ಪಡೆ
KLE Technological University: ಮುರುಗೇಶ್ ನಿರಾಣಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ
Bengaluru: ಇನ್ಮುಂದೆ ಜೇನುಗೂಡು ಕಟ್ಟಬೇಕಿಲ್ಲ; 3ಡಿ ಗೂಡು ಆವಿಷ್ಕಾರ!
Bengaluru: ಮಾಂಸದ ನಾಟಿ ಕೋಳಿಗೆ ಭರ್ಜರಿ ಡಿಮ್ಯಾಂಡ್!
Kiran Raj: ಸೂಪರ್ ಹೀರೋ ಆಗಲಿದ್ದಾರೆ ಕಿರಣ್ ರಾಜ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.