ಮಂಗಳೂರು : ಪ್ರಧಾನಿಯ ನಿರೀಕ್ಷೆಯಲ್ಲಿ ಎಂಆರ್‌ಪಿಎಲ್‌, ಎನ್‌ಎಂಪಿಎ ಯೋಜನೆಗಳು

ಮೋದಿ ಕಾರ್ಯಕ್ರಮಕ್ಕೆ 2 ಸಾವಿರ ಬಸ್‌ಗಳು ಬುಕ್‌

Team Udayavani, Aug 28, 2022, 8:44 AM IST

\172.17.1.222finalserver$processedimage2708222708MLR24-PMFUNTION

ಮಂಗಳೂರು: ರಾಜ್ಯದಲ್ಲೇ ಮೊದಲ ಸಮುದ್ರ ನೀರು ಸಂಸ್ಕರಣ ಸ್ಥಾವರ, ಮಂಗಳೂರು ಬಂದರಿನಲ್ಲಿ 14ನೇ ಜೆಟ್ಟಿಯ ಯಾಂತ್ರೀಕರಣ ಸೇರಿದಂತೆ ಹಲವು ಪ್ರಮುಖ ಯೋಜನೆಗಳ ಲೋಕಾರ್ಪಣೆ ಮತ್ತು ಇತರ ಕೆಲವೊಂದು ಪ್ರಮುಖ ಯೋಜನೆಗಳಿಗೆ ಶಂಕುಸ್ಥಾಪನೆ ಈ ಬಾರಿ ಪ್ರಧಾನಿ ನರೇಂದ್ರ ಮೋದಿಯವರ ಮಂಗಳೂರು ಭೇಟಿಯ ವೇಳಾಪಟ್ಟಿಯಲ್ಲಿರಲಿವೆ.
ಇವು ಮುಖ್ಯವಾಗಿ ಎಂಆರ್‌ಪಿಎಲ್‌ ಹಾಗೂ ನವಮಂಗಳೂರು ಬಂದರು ಪ್ರಾಧಿಕಾರ (ಎನ್‌ಎಂಪಿಎ) ವ್ಯಾಪ್ತಿಯ ಯೋಜನೆಗಳು. ಸುಮಾರು 4 ಸಾವಿರ ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನು ಇದು ಒಳಗೊಂಡಿದೆ.

ರಾಜ್ಯದ ಮೊದಲ ಡಿಸಲೈನೇಶನ್‌ ಪ್ಲಾಂಟ್‌
ಎಂಆರ್‌ಪಿಎಲ್‌ 677 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಿರುವ ಈ ಬೃಹತ್‌ ಘಟಕದ ಮೂಲಕ ಎಂಆರ್‌ಪಿಎಲ್‌ಗೆ ಪ್ರತೀ ದಿನ 30 ಎಂಎಲ್‌ಡಿ (ಮಿಲಿಯ ಲೀಟರ್‌ ಪರ್‌ ಡೇ) ನೀರನ್ನು ಪೈಪ್‌ಲೈನ್‌ ಮೂಲಕ ಪೂರೈಸಲಾಗುತ್ತದೆ. ರಿವರ್ಸ್‌ ಓಸ್ಮೋಸಿಸ್‌ ತಂತ್ರಜ್ಞಾನದ 70 ಎಂಎಲ್‌ಡಿ ಸಾಮರ್ಥ್ಯದ ಈ ಘಟಕದಲ್ಲಿ ಸದ್ಯ 30 ಎಂಎಲ್‌ಡಿ ನೀರು ಪೂರೈಸುವ ಯಂತ್ರೋಪಕರಣ ಅಳವಡಿಸಲಾಗಿದೆ. ಮುಂದಿನ ಹಂತದಲ್ಲಿ ಪೂರ್ಣ ಸಾಮರ್ಥ್ಯಕ್ಕೆ ವಿಸ್ತರಣೆ ಮಾಡಲಾಗುವುದು.

2012, 2017 ಹಾಗೂ 2019ರಲ್ಲಿ ಮಂಗಳೂರಿನಲ್ಲಿ ತೀವ್ರ ನೀರಿನ ಅಭಾವ ಉಂಟಾಗಿತ್ತು. 2019ರಲ್ಲಂತೂ ಎಂಆರ್‌ಪಿಎಲ್‌ 45 ದಿನ ಕಾಲ ಉತ್ಪಾದನೆ ಚಟುವಟಿಕೆ ಸ್ಥಗಿತಗೊಳಿಸಬೇಕಾಗಿ ಬಂದಿದ್ದರಿಂದ ಅಪಾರ ನಷ್ಟ ಉಂಟಾಗಿತ್ತು. ಆಗಲೇ ಸಮುದ್ರದ ನೀರನ್ನು ಸಂಸ್ಕರಿಸಿ ಬಳಸಿಕೊಳ್ಳಲು ಕಂಪೆನಿ ತೀರ್ಮಾನಿಸಿತ್ತು. ಅದೇ ವರ್ಷ ಕಾಮಗಾರಿ ಆರಂಭಿಸಿದ್ದು 2021ರ ಡಿಸೆಂಬರ್‌ಗೆ ಯೋಜನೆಯ ಮೆಕ್ಯಾನಿಕಲ್‌ ಕೆಲಸಗಳು ಪೂರ್ಣಗೊಂಡವು. ಪ್ರಾಯೋಗಿಕವಾಗಿ ನೀರನ್ನು ಸಂಸ್ಕರಿಸುವ ಕೆಲಸ ಜನವರಿಯಲ್ಲೇ ಆರಂಭಗೊಂಡಿದೆ.

ಬಿಎಸ್‌ 6 ಇಂಧನ ಸ್ಥಾವರ
ರಾಷ್ಟ್ರ ಬಿಎಸ್‌6 ಗ್ರೇಡ್‌ನ‌ ಇಂಧನಕ್ಕೆ ಬದಲಾಗಿ ಎರಡು ವರ್ಷ ಕಳೆದಿದೆ, ಇದಕ್ಕಾಗಿ ಎಂಆರ್‌ಪಿಎಲ್‌ ಈ ಗ್ರೇಡ್‌ನ‌ ಇಂಧನ ಉತ್ಪಾದನೆಗೆ ಬೇಕಾದ ಘಟಕಗಳನ್ನು ಸಿದ್ಧಗೊಳಿಸಿದ್ದು, ಇದಕ್ಕೂ ಮೋದಿ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. 1829 ಕೋ.ರೂ. ಮೊತ್ತದಲ್ಲಿ ಈ ಘಟಕಗಳು ತಲೆಯೆತ್ತಿವೆ ಎಂದು ಮೂಲಗಳು ತಿಳಿಸಿವೆ. ಬಿಎಸ್‌6 ಇಂಧನದ ಪ್ರಮುಖ ಘಟಕವಾದ ಫ್ಲ್ಯೂಯಿಡೈಸ್ಡ್ ಕೆಟಲಿಕ್ಟಿಕ್‌ ಕ್ರಾಕಿಂಗ್‌ ಗೆಸೋಲಿನ್‌ ಟ್ರೀಟ್ಮೆಂಟ್ ಯುನಿಟ್‌(ಎಫ್‌ಜಿಟಿಯು) ಕೆಲವು ತಿಂಗಳ ಹಿಂದೆ ಪೂರ್ಣಗೊಂಡಿದೆ. ಇದು ವಾರ್ಷಿಕ 800 ಕಿಲೋಟನ್‌ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಸಲ್ಫರ್ ಅಂಶ 10 ಪಿಪಿಎಂ(ಪಾರ್ಟ್‌ ಪರ್‌ ಮಿಲಿಯನ್‌)ಗಿಂತ ಕಡಿಮೆ ಇರುವ ಬಿಎಸ್‌ 6 ಇಂಧನವು ಹೆಚ್ಚು ಪರಿಶುದ್ಧ ಹಾಗೂ ಪರಿಸರಸ್ನೇಹಿ ಎನಿಸಿಕೊಂಡಿದೆ. ಅಲ್ಲದೆ ಸಲ್ಫರ್ ರಿಕವರಿ ಯುನಿಟ್‌ ಮತ್ತು ನೈಟ್ರೋಜನ್‌ ಸ್ಥಾವರವನ್ನೂ ಸ್ಥಾಪಿಸಲಾಗಿದೆ.

ಬರ್ತ್‌ ಯಾಂತ್ರೀಕರಣ
281 ಕೋ.ರೂ. ವೆಚ್ಚದಲ್ಲಿ 14ನೇ ಜೆಟ್ಟಿಯನ್ನು ಯಾಂತ್ರೀಕರಣ ಗೊಳಿಸಲಾಗಿದೆ. ಕಂಟೈನರ್‌ ಸರಕು ನಿರ್ವಹಣೆ ಇದರ ಮುಖ್ಯ ಉದ್ದೇಶ. ಇದರಿಂದ 200 ನೇರ ಹಾಗೂ 2 ಸಾವಿರ ಪರೋಕ್ಷ ಉದ್ಯೋಗ ನಿರೀಕ್ಷಿಸಲಾಗಿದೆ. ಬಿಟುಮಿನ್‌ (ಡಾಮರ್‌) ಸಂಗ್ರಹಣಾಗಾರವನ್ನು 100 ಕೋಟಿ ರೂ.ನಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಎಸ್‌ಎಸ್‌ಪಿಪಿ ಪೆಟ್ರೋ ಪ್ರಾಡಕ್ಟ್$Õ ಕಂಪೆನಿ ಇದನ್ನು ಕೈಗೊಳ್ಳುತ್ತಿದೆ. ಇದು ದೊಡ್ಡ ಪ್ರಮಾಣದಲ್ಲಿ ಪಿಎಂ ಗತಿಶಕ್ತಿ ಯೋಜನೆಗೆ ಮುಖ್ಯವಾಗಿ ರಾಜ್ಯದ ಹೆದ್ದಾರಿಗಳ ಅಭಿವೃದ್ಧಿಗೆ ನೆರವಾಗಲಿದೆ. 40 ಸಾವಿರ ಮೆಟ್ರಿಕ್‌ ಟನ್‌ ಬಿಟುಮಿನ್‌ ಸಂಗ್ರಹ ಸಾಮರ್ಥ್ಯ ಇರಲಿದೆ.

ನವಮಂಗಳೂರು ಬಂದರಿನ ವ್ಯಾಪ್ತಿಯಲ್ಲಿ ಸಂತೋಷಿ ಮಾತಾ ಕಂಪೆನಿಯಿಂದ 100 ಕೋಟಿ ರೂ. ವೆಚ್ಚದಲ್ಲಿ ಖಾದ್ಯತೈಲ ಸಂಗ್ರಹಣಾಗಾರ ನಿರ್ಮಿಸಲಾಗುವುದು. ವಾರ್ಷಿಕ 5 ಲಕ್ಷ ಟನ್‌ ಸರಕು ಹರಿದು ಬರುವ ನಿರೀಕ್ಷೆ ಇದೆ.

ಮೋದಿ ಕಾರ್ಯಕ್ರಮಕ್ಕೆ 2 ಸಾವಿರ ಬಸ್‌ಗಳು ಬುಕ್‌
ಗೋಲ್ಡ್‌ಫಿಂಚ್‌ ಮೈದಾನದಲ್ಲಿ ಸೆ. 2ರಂದು ಪ್ರಧಾನಿ ಮೋದಿ ಉಪಸ್ಥಿತಿಯಲ್ಲಿ ನಡೆಯಲಿರುವ ವಿವಿಧ ಯೋಜನೆಗಳ ಫಲಾನುಭವಿಗಳ ಸಮಾವೇಶಕ್ಕೆ ಇಲಾಖೆಗಳ ವತಿಯಿಂದ ಫಲಾನುಭವಿಗಳನ್ನು ಕರೆತರಲು 1 ಸಾವಿರ ಬಸ್‌ಗಳನ್ನು ಕಾದಿರಿಸಲಾಗಿದೆ. ಇದಲ್ಲದೆ ಬಿಜೆಪಿ ಕಾರ್ಯಕರ್ತರು ಕೂಡ 1 ಸಾವಿರಕ್ಕೂ ಅಧಿಕ ಬಸ್‌ಗಳನ್ನು ಕಾದಿರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಸ್‌ಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದ್ದು ಹೊರ ಜಿಲ್ಲೆಗಳಿಂದ ಬಸ್‌ಗಳನ್ನು ತರಿಸಲಾಗುತ್ತಿದೆ.

50,000 ಮಂದಿಗೆ ಪಲಾವ್‌ ವ್ಯವಸ್ಥೆ
ಸಮಾವೇಶಕ್ಕೆ ಆಗಮಿಸುವ ಫಲಾನುಭವಿಗಳಿಗೆ ಮಧ್ಯಾಹ್ನದ ಆಹಾರ ಒದಗಿಸುವ ನಿಟ್ಟಿನಲ್ಲಿ ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿವಿಧ ಕ್ಯಾಟರಿಂಗ್‌ ಸಂಸ್ಥೆಗಳ ಮುಖ್ಯಸ್ಥರ ಸಭೆ ನಡೆಸಲಾಗಿದೆ. 50ರಿಂದ 60 ಸಾವಿರ ಮಂದಿಗೆ ಮಧ್ಯಾಹ್ನ ಪಲಾವ್‌ ಪ್ಯಾಕೇಟು ನೀಡಲು ಸಿದ್ಧತೆ ಮಾಡಲಾಗುತ್ತಿದೆ.

ಟಾಪ್ ನ್ಯೂಸ್

047

Gulveer Singh: ನೂತನ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ ಗುಲ್ವೀರ್

04257

T20I series: ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿ: ಸೂರ್ಯಕುಮಾರ್‌ ಯಾದವ್‌ ನಾಯಕ

1-stalin

Tamil Nadu; ಪುತ್ರ ಉದಯನಿಧಿಗೆ ಬಡ್ತಿ ನೀಡಿದ ಸ್ಟಾಲಿನ್: ನಾಳೆ ಪ್ರಮಾಣವಚನ

Car-Auto

Kaup: ರಿಕ್ಷಾ, ಕಾರು ಮುಖಾಮುಖಿ ಢಿಕ್ಕಿ: ಇಬ್ಬರಿಗೆ ಗಾಯ

BBK-11: ಬಿಗ್‌ ಬಾಸ್‌ ಮನೆಗೆ 4ನೇ ಸ್ಪರ್ಧಿ ಎಂಟ್ರಿ.. ಯಾರು ಈ ʼಗೋಲ್ಡ್‌ ಮ್ಯಾನ್‌ʼ?

BBK-11: ಬಿಗ್‌ ಬಾಸ್‌ ಮನೆಗೆ 4ನೇ ಸ್ಪರ್ಧಿ ಎಂಟ್ರಿ.. ಯಾರು ಈ ʼಗೋಲ್ಡ್‌ ಮ್ಯಾನ್‌ʼ?

1-PT

IOC ಗೆ ಪತ್ರ; ಪಿ.ಟಿ.ಉಷಾ ವಿರುದ್ಧ ಡಜನ್ ಗೂ ಹೆಚ್ಚು ಎಕ್ಸಿಕ್ಯೂಟಿವ್ ಕೌನ್ಸಿಲ್ ಸದಸ್ಯರು!

Ramalinga-Raeddy

Transport: ವಾಯವ್ಯ ಸಾರಿಗೆ ನಿಗಮಕ್ಕೆ 400 ಬಸ್‌ ಖರೀದಿಗೆ ಕ್ರಮ: ಸಚಿವ ರಾಮಲಿಂಗಾರೆಡ್ಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

0888

Leopard: ಮೂಲ್ಕಿ ಕೊಯ್ಯಾರಿನಲ್ಲಿ ಚಿರತೆ?

1-aaa

Ullal;ಜನಪ್ರತಿನಿಧಿಗಳು ಸೇರಿ ಹಲವರಿಂದ ಅರ್ಜುನ್ ಅಂತಿಮ ದರ್ಶನ

Mangaluru: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ… ಅಪಾಯದಿಂದ ಪಾರಾದ ಪ್ರಯಾಣಿಕರು

Mangaluru: ರಾಷ್ಟ್ರೀಯ ಹೆದ್ದಾರಿಯಲ್ಲೇ ಹೊತ್ತಿ ಉರಿದ BMW ಕಾರು… ಪ್ರಯಾಣಿಕರು ಪಾರು

ಮುಕ್ತಿ ಕಾಣದ “ಬ್ಲ್ಯಾಕ್‌ಸ್ಪಾಟ್‌’ಗಳು: ಮತ್ತಷ್ಟು ಹೆಚ್ಚುತ್ತಿರುವ ಅಪಘಾತಗಳು

Mangaluru: ಮುಕ್ತಿ ಕಾಣದ “ಬ್ಲ್ಯಾಕ್‌ಸ್ಪಾಟ್‌’ಗಳು: ಮತ್ತಷ್ಟು ಹೆಚ್ಚುತ್ತಿರುವ ಅಪಘಾತಗಳು

Airport: ಭದ್ರತೆಯಿಂದ ಜೂಲಿ ನಿವೃತ್ತಿ: 8 ವರ್ಷಗಳಿಂದ ಸೇವೆಯಲ್ಲಿದ್ದ ಶ್ವಾನ

Airport: ಭದ್ರತೆಯಿಂದ ಜೂಲಿ ನಿವೃತ್ತಿ: 8 ವರ್ಷಗಳಿಂದ ಸೇವೆಯಲ್ಲಿದ್ದ ಶ್ವಾನ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

1242

SAFF U-17 Championship: ಭಾರತ-ಬಾಂಗ್ಲಾ ಫೈನಲ್‌

047

Gulveer Singh: ನೂತನ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ ಗುಲ್ವೀರ್

025587

ICC Women’s T20 World Cup: ವನಿತಾ ಟಿ20 ವಿಶ್ವಕಪ್‌; ಅಂಪಾಯರ್ಸ್ ಆಯ್ಕೆ

04257

T20I series: ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿ: ಸೂರ್ಯಕುಮಾರ್‌ ಯಾದವ್‌ ನಾಯಕ

0888

Leopard: ಮೂಲ್ಕಿ ಕೊಯ್ಯಾರಿನಲ್ಲಿ ಚಿರತೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.