M. C. Sudhakar “ಪ್ರತ್ಯೇಕ ಕ್ರೀಡಾ ವಿ.ವಿ. ಸ್ಥಾಪನೆಗೆ ಆದ್ಯತೆ’
Team Udayavani, Dec 16, 2023, 11:07 PM IST
ಉಳ್ಳಾಲ: ರಾಜ್ಯದಲ್ಲಿ ಕ್ರೀಡೆಗೆ ಹೆಚ್ಚಿನ ಆದ್ಯತೆಯೊಂದಿಗೆ ಕ್ರೀಡಾ ಸಾಧಕರಿಗೆ ಅವಕಾಶ ಮತ್ತು ಭದ್ರತೆ ಯನ್ನು ನೀಡುವ ನಿಟ್ಟಿನಲ್ಲಿ ಸರಕಾರ ಕ್ರಮ ಕೈಗೊಳ್ಳುತ್ತಿದೆ. ಕ್ರೀಡೆಗೆ ಉನ್ನತ ಮಟ್ಟದ ಸೌಲಭ್ಯಗಳು ಒದಗಿಸಬೇಕಾದರೆ ಪ್ರತ್ಯೇಕ ಕ್ರೀಡಾ ವಿಶ್ವವಿದ್ಯಾನಿಲಯ ಸ್ಥಾಪನೆ ಅಗತ್ಯ. ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ ಎಂದು ಉನ್ನತ ಶಿಕ್ಷಣ ಸಚಿವ ಡಾ| ಎಂ.ಸಿ. ಸುಧಾಕರ್ ಹೇಳಿದರು.
ಮಂಗಳೂರು ವಿ.ವಿ.ಗೆ ಶನಿವಾರ ಭೇಟಿ ನೀಡಿದ ಅವರು ಮಂಗಳಾ ಸಭಾಂಗಣದಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಇತ್ತೀಚೆಗೆ ಅಂತರ್ ವಿ.ವಿ. ಕಬಡ್ಡಿ ಪ್ರಶಸ್ತಿ ಗೆದ್ದುಕೊಂಡ ಮಂಗಳೂರು ವಿ.ವಿ. ತಂಡದ ಸದಸ್ಯರನ್ನು ಸಮ್ಮಾನಿಸಿ ಮಾತನಾಡಿದರು.
ವಿಶ್ವವಿದ್ಯಾನಿಲಯಗಳು ಇಂದು ಹಲವು ಸಮಸ್ಯೆಗಳನ್ನು ಎದುರಿಸುತ್ತಿವೆಯಾದರೂ ಇದರ ನಡುವೆ ಕ್ರೀಡಾ ಸ್ಫೂರ್ತಿಯನ್ನು ಬೆಳೆಸುವ ಕಾರ್ಯ ನಡೆಯುತ್ತಿದೆ. ಪ್ರತ್ಯೇಕ ಕ್ರೀಡಾ ವಿ.ವಿ. ಸ್ಥಾಪನೆಯಾಗಬೇಕೆಂಬುದು ಹಲವು ವರ್ಷಗಳ ಆಗ್ರಹ ಆಗಿದ್ದು, ಈ ನಿಟ್ಟಿನಲ್ಲಿ ಪ್ರಯತ್ನಗಳು ಮುಂದುವರಿದಿದೆ ಎಂದರು.
ಇಂದು ಎಲ್ಲರಿಗೂ ಪದವಿಗಳನ್ನು ನೀಡುತ್ತಿದ್ದೇವೆ. ಆದರೆ ಅವರಿಗೆ ಉದ್ಯೋಗಾವಕಾಶಗಳನ್ನು ಒದಗಿ ಸು ವಲ್ಲಿ ಎಲ್ಲಿ ಎಡವುತ್ತಿದ್ದೇವೆ ಎಂಬುದನ್ನು ಗಮನಿಸುವ ಅಗತ್ಯವಿದೆ. ಜಾಗತಿಕ, ಸ್ಪರ್ಧಾತ್ಮಕ ಯುಗದಲ್ಲಿ ಕೌಶಲಾ ಧಾರಿತ, ಹೊಸ ಹೊಸ ಶೈಕ್ಷಣಿಕ ವ್ಯವಸ್ಥೆ ಯನ್ನು ಅಳವಡಿಸಿಕೊಂಡು ಮುನ್ನಡೆ ಯಬೇಕಾದ ಅಗತ್ಯ ಇದೆ ಎಂದರು.
ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದ ವೃತ್ತಿ. ಉತ್ತಮ ಶಿಕ್ಷಣ ಕೊಟ್ಟು ಮೌಲ್ಯಾಧಾರಿತ ವ್ಯಕ್ತಿಯನ್ನು ರೂಪಿಸುವ ಜವಾಬ್ದಾರಿ ಅವರ ಮೇಲಿದೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಪ್ರೊಫೆಸರ್, ಡೀನ್ ಯಾವಾಗ ಆಗುವುದು ಎನ್ನುವ ಕನಸು ಹೆಚ್ಚಾಗುತ್ತಿದೆ ಆದರೆ, ತಾನು ಶಿಕ್ಷಣ ಕ್ಷೇತ್ರಕ್ಕೆ ನೀಡಬೇಕಾದ ಕೊಡುಗೆಗಳ ಬಗ್ಗೆ ಚಿಂತನೆ ಕಡಿಮೆಯಾಗುತ್ತಿದೆ ಎಂದರು.
ವಿ.ವಿ.ಯ ಕುಲಪತಿ ಪ್ರೊ| ಜಯರಾಜ್ ಅಮೀನ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿಧಾನಪರಿಷತ್ ಸದಸ್ಯರಾದ ಡಾ| ಮಂಜುನಾಥ ಭಂಡಾರಿ, ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ| ರಾಜು ಚಲ್ಲನ್ನನವರ್, ದೈಹಿಕ ಶಿಕ್ಷಣ ವಿಭಾಗದ ಡಾ| ಜೆರಾಲ್ಡ್ ಸಂತೋಷ್ ಡಿ’ಸೋಜಾ ಉಪಸ್ಥಿತರಿದ್ದರು.
ಹಣಕಾಸು ಅಧಿಕಾರಿ ಪ್ರೊ| ವೈ. ಸಂಗಪ್ಪ ವಂದಿಸಿದರು. ಸಹಾಯಕ ಪ್ರಾಧ್ಯಾಪಕ ಡಾ| ಧನಂಜಯ ಕುಂಬ್ಳೆ ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Commonwealth ಸಂಸದೀಯ ಸಭೆ; ಸ್ಪೀಕರ್ ಯು.ಟಿ. ಖಾದರ್ ಭಾಗಿ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ
Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ
Mangaluru: ಪಿಲಿಕುಳ ಮೃಗಾಲಯಕ್ಕೆ “ಏಷ್ಯಾಟಿಕ್ ಗಂಡು ಸಿಂಹ’ ಆಗಮನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.