ಹೈನುಗಾರಿಕೆಗೆ ಪೂರಕವಾಗಿ ಸೌಕರ್ಯ ವಿಸ್ತರಣೆಗೆ ಆದ್ಯತೆ: ಸಚಿವ ಖಾದರ್
Team Udayavani, Nov 19, 2017, 11:19 AM IST
ಕೋಟೆಕಾರು: ಮಂಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ ಹೈನುಗಾರಿಕೆಗೆ ಪೂರಕವಾಗಿ ಪಶು ವೈದ್ಯಕೀಯ ಆಸ್ಪತ್ರೆಗಳ ಸ್ಥಾಪನೆಗೆ ಉತ್ತೇಜನ ನೀಡುತ್ತಿದ್ದು, ಪಾವೂರು, ಕೋಟೆಕಾರ್ ಬಳಿಕ ಅಂಬ್ಲಿಮೊಗರು ಮತ್ತು ತಲಪಾಡಿಯಲ್ಲಿ ಪಶುವೈದ್ಯಕೀಯ ಕೇಂದ್ರವನ್ನು ಸ್ಥಾಪಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ಅಭಿಪ್ರಾಯಪಟ್ಟರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಪಶುಪಾಲನೆ ಮತ್ತು ವೈದ್ಯಕೀಯ ಸೇವಾ ಇಲಾಖೆ ಮಂಗಳೂರು, ಕೋಟೆಕಾರು ಪಟ್ಟಣದಲ್ಲಿ ನಿರ್ಮಿಸಲಾದ ಪಶು ಆಸ್ಪತ್ರೆಯ ನೂತನ ಕಟ್ಟಡ ಉದ್ಘಾಟನೆ ಹಾಗೂ ಪಶುಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಸಹಾಯಧನ ವಿತರಿಸಿ ಅವರು ಮಾತನಾಡಿದರು. ಕೊಂಡಾಣ ರಸ್ತೆಗೆ ಸಂಪೂರ್ಣ ಕಾಂಕ್ರೀಟಿಕರಣಕ್ಕೆ ಐದು ಕೋಟಿ ರೂ. ಬಿಡುಗಡೆಯಾಗಿದ್ದು ಶೀಘ್ರವೇ ಕಾಮಗಾರಿ ಆರಂಭವಾಗಲಿದೆ ಎಂದರು. ಕೋಟೆಕಾರು ಪಟ್ಟಣ ಪಂಚಾಯತ್ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಸುಳ್ಳೇಂಜಿರು ಅಧ್ಯಕ್ಷತೆ ವಹಿಸಿದ್ದರು.
ತಾಲೂಕು ಪಂಚಾಯತ್ ಅಧ್ಯಕ್ಷ ಮಹಮ್ಮದ್ ಮೋನು, ಸದಸ್ಯರಾದ ರವಿಶಂಕರ್ ಸೋಮೇಶ್ವರ, ಸುರೇಖಾ ಚಂದ್ರಹಾಸ್, ಸಿದ್ಧಿಕ್ ಕೊಳಂಗರೆ ತಲಪಾಡಿ, ಜಬ್ಟಾರ್ ಬೋಳಿಯಾರ್, ಉಳ್ಳಾಲ ನಗರಸಭಾ ಅಧ್ಯಕ್ಷ ಹುಸೇನ್ ಕುಂಞಮೋನು, ಕೋಟೆಕಾರು ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಅನಿಲ್ ಬಗಂಬಿಲ, ಸದಸ್ಯರಾದ ಮಹಮ್ಮದ್, ಹಮೀದ್ ಹಸನ್ ಮಾಡೂರು, ವಿದ್ಯಾ, ದಿವ್ಯಾ, ಪಶು ಭಾಗ್ಯ ಯೋಜನೆಯ ಆಯ್ಕೆ ಸಮಿತಿಯ ಅಧ್ಯಕ್ಷ ಉಗ್ಗಪ್ಪ ಪೂಜಾರಿ, ಸದಸ್ಯರಾದ ಸದಾಶಿವ ಯು.ಬಿ., ವೀಣಾ ಶಾಂತಿ ಡಿ’ಸೋಜಾ, ಈಶ್ವರ ಮೂಲ್ಯ, ಕೆಆರ್‌ಡಿಐ ಅಭಿಯಂತರ ಕೆ.ಎಸ್ .ಪಾಟೀಲ್, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಕೃಷ್ಣ ಗಟ್ಟಿ , ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ| ರಘುರಾಮ್ ಭಟ್, ಡಾ| ಗುರುಮೂರ್ತಿ, ಡಾ| ಈಶ್ವರ್ ಭಟ್ ಹಾಗೂ ಡಾ| ರೇಖಾ ಉಪಸ್ಥಿತರಿದ್ದರು.
ಸಚಿವ ಯು.ಟಿ. ಖಾದರ್ ಹಾಗೂ ಗುತ್ತಿಗೆದಾರರಾದ ಪಿಯೂಷ್ ಮೊಂತೇರೋ ಹಾಗೂ ಗಣೇಶ್ ಶೆಟ್ಟಿ ರಕ್ಷಾ ಅವರನ್ನು ಸಮ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಸಹಾಯಧನವನ್ನು ವಿತರಿಸಲಾಯಿತು. ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ರಾಜಣ್ಣ ಸ್ವಾಗತಿಸಿದರು. ಡಾ| ಪ್ರಸನ್ನ ಹೆಬ್ಟಾರ್ ನಿರ್ವಹಿಸಿದರು. ಡಾ| ನಾಗರಾಜ್ ವಂದಿಸಿದರು.