ಖಾಸಗಿ ಬಸ್ ಮಾಲಕರಿಂದ ಉಳ್ತೂರಿನ ವಿದ್ಯಾರ್ಥಿಗಳಿಗೆ ಪರ್ಯಾಯ ವ್ಯವಸ್ಥೆ
Team Udayavani, Jul 25, 2018, 2:50 AM IST
ತೆಕ್ಕಟ್ಟೆ: ಗ್ರಾಮೀಣ ಭಾಗಗಳಾದ ಉಳ್ತೂರು, ಕೆದೂರು, ಚಾರು ಕೊಟ್ಟಿಗೆ, ಬೇಳೂರು, ಶಾನಾಡಿ, ಹೆಸ್ಕಾತ್ತೂರು ಭಾಗಗಳಿಗೆ ಸಮರ್ಪಕವಾದ ಬಸ್ ಸಂಪರ್ಕಗಳಿಲ್ಲದೆ ಗ್ರಾಮೀಣ ಭಾಗದ ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ನಿತ್ಯ ಪರದಾಡಬೇಕಾದ ಪರಿಸ್ಥಿತಿ ಇತ್ತು. ಈ ಹಿನ್ನೆಲೆಯಲ್ಲಿ ಉದಯವಾಣಿ ‘ಗಗನ ಕುಸುಮವಾದ ಸರಕಾರಿ ಬಸ್ ಸೌಲಭ್ಯ’ ಎನ್ನುವ ಶೀರ್ಷಿಕೆ ಅಡಿಯಲ್ಲಿ ಜು. 24ರಂದು ವರದಿ ಪ್ರಕಟವಾದ ಬೆನ್ನಲ್ಲೇ ಖಾಸಗಿ ಬಸ್ ಮಾಲಕರು ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆಯನ್ನು ಅರಿತು ಬಸ್ ಸಂಚಾರದ ಮಾರ್ಗ ಬದಲಿಸಿ ಸಮಸ್ಯೆಗೆ ಸ್ಪಂದಿಸಿದ್ದಾರೆ.
ಬಸ್ ವೇಳಾಪಟ್ಟಿ
ಶಾಲಾ ಕಾಲೇಜು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಉಳ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರಥಬೀದಿಯಿಂದ ಪ್ರತಿ ದಿನ ಬೆಳಗ್ಗೆ ಗಂಟೆ 8.45 ರಿಂದ ವಕ್ವಾಡಿ ಮಾರ್ಗವಾಗಿ ಕೋಟೇಶ್ವರ, ಕುಂದಾಪುರ ಬಸ್ ಸಂಚಾರ ನಡೆಸಲಿದೆ. ಮುಂದಿನ ದಿನಗಳಲ್ಲಿ ತೆಕ್ಕಟ್ಟೆ ಮಾರ್ಗವಾಗಿ ಕುಂದಾಪುರ ಸಂಪರ್ಕ ಕಲ್ಪಿಸುವ ಬಗ್ಗೆ ಖಾಸಗಿ ಬಸ್ ಮಾಲಕರು ಭರವಸೆಯನ್ನು ನೀಡಿದ್ದಾರೆ. ಈ ವರದಿಗೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
►ವಿಶೇಷ ವರದಿ►ಉಳ್ತೂರು: ಗಗನ ಕುಸುಮವಾದ ಸರಕಾರಿ ಬಸ್ ಸೌಲಭ್ಯ: https://bit.ly/2A254PB
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Trasi: ಕಾರು ಢಿಕ್ಕಿಯಾಗಿ ಗಾಯ; ಪ್ರಕರಣ ದಾಖಲು
Koteshwara: ಕೊಡಿಹಬ್ಬದ ಪೂರ್ವಭಾವಿಯಾಗಿ ಶ್ರೀ ಕೋಟಿಲಿಂಗೇಶ್ವರನಿಗೆ ಸಮುದ್ರ ಸ್ನಾನ
Gangolli: ಮಲ್ಯರಮಠ ಶ್ರೀ ವೆಂಕಟರಮಣ ದೇಗುಲ; ವಿಶ್ವರೂಪ ದರ್ಶನ ಸೇವೆ
Mullikatte-ಅರಾಟೆ: ಚತುಷ್ಪಥ ಹೆದ್ದಾರಿ ಕಾಮಗಾರಿಯಿಂದ ಸಮಸ್ಯೆಗಳ ಸರಮಾಲೆ
ನನಗೆ ಸಂಸ್ಕಾ ರ ಕೊಟ್ಟಿದ್ದೇ ಯಕ್ಷ ಗಾನ, ಅದೊಂದು ರಮ್ಯಾದ್ಭುತ ಲೋಕ: ನಟ ರಾಮಕೃಷ್ಣ
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.